ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೈ ಭೀಮ ಜರೆಸುತನ್ವೈರಿ ಜೈ ಭೀಮ ಜಯ ಜಯ ಜಯ ಮುಖ್ಯಪ್ರಾಣ ಸೋಮ ಕುಲದೊಳುದ್ಭವಿಸಿ ಗೀರ್ವಾಣ ಬಲು ಬಲುಮೆಯಿಂದಲಿ ದುರ್ವಾದಿಗಳನ್ನೆ ಮೂತಿಂದ್ವೊತ್ತಿ ಸಲಹೆನ್ನ ಶ್ರೀಮ- ದಾನಂದತೀರ್ಥಮುನಿ ಪ ರೋಮ ರೋಮಕೆ ಕೋಟಿಲಿಂಗ ಜಗತ್ಪ್ರಾಣಿಗಳಿಗೆ ಅಂತರಂಗ ಲಂಕೆನಾಳ್ವೋ ಭೂಪತಿಗತಿ ಭಂಗಬಡಿಸಿ ಕ್ಷೋಣಿಸುತೆಗೆ ಉಂಗುರಿಟ್ಟು ರಾಮರಲ್ಲೆ ಪ್ರೇಮ- ವಾರ್ತೆಯ ತಂದ ಪ್ರಾ- ಣೇಶ ದಯವಾಗೊ 1 ಮಧುವೈರಿ ಮಾತುಳನಾಗೆ ಬಂದು ಮಗಧ ಮುತ್ತಿಗೆ ಹಾಕೆ ಬ್ಯಾಗ ವೃಕೋದರ ಛಲವ್ಹಿಡಿದು ತಾ ಹೋಗೆ ಅಲ್ಲೆ ದ್ವಿಜನ್ವೇಷಧರಿಸ್ವಾಸುದೇವ ವಾಸವಿ ಕೂಡಿ ಮಗಧರಾಜನ ಮ- ರ್ಮಗಳಿಂದ ಸೀಳಿದ್ಯೊ 2 ಹಾಟಕಾಂಬರನಲ್ಲಿ ಭಕ್ತರೆಂದು ಅರಿಯದೆ ಅಂತಕನ ಪುತ್ರ(ನ) ಜೂಜಿನಾಟ(ದಿ) ಸೋಲಿಸಿ ಸೆಳೆಯೆ ವಸ್ತ್ರ ಕೃಷ್ಣೆ ನೋಟದಿ ಭಸ್ಮ ವಿಚಿತ್ರ ಸವ್ಯಸಾಚಿ ಸಹಿತವಾಗ್ವಿರಾಟ- ವರ್ಗದಿ ಸತಿಗೆ ಕಾಟ ಕಳೆದ್ಯಮ- ಪುರಿಗೆ ದಾಟಿಸ್ದ್ಯೋ ಕೀಚಕನ 3 ಕಳೆದÀು ಅಲ್ಲಜ್ಞಾತವಾಸ ಬಂದು ಖಳರೊಳಗಧಿಕ ದುಶ್ಶಾಸ(ನ) ಅವನ ಕರುಳ ಬಗೆಯಲತಿ ರೋಷ ಕಾಲಕ್ಕೊದಗಲು ನರಹರಿ ಆ- ವೇಶ ಕಂಡು ಸುರರಸುರರ ಸೈನ್ಯ ಜರಿದು ಹಿಂದಕೆ ನಿಲ್ಲೆ ರಣಧೀರ- ಗೆಣೆಯಿಲ್ಲ ಪರಮ ಪರಾಕ್ರಮ 4 ಸಕಲ ಜೀವರಿಗಾಧಾರಕನೊ ಭಾರತಿ ಪ್ರಾರಂಭಕ್ವೊಂದಿತನೊ ಮಧ್ವಮತ ಶಾಸ್ತ್ರಗಳ ಉದ್ಧಾರಕÀನೊ ತ್ರಿಗುಣ ಜೀವನು ಸಾರಪ್ರೇರಕನು ವಾಯು ಸಕಲ ಸುರರೊಡೆಯ ಭೀಮೇಶ ಕೃಷ್ಣನಲ್ಲಿ ಭಕುತಿ ಜ್ಞಾನವ ದಿವ್ಯ ಮುಕುತಿ ಮಾರ್ಗವ ತೋರಿದಿ 5
--------------
ಹರಪನಹಳ್ಳಿಭೀಮವ್ವ
ಈಡುಗಾಣೆನಯ್ಯ ಜಗದೊಳಗೆ ಪ. ಬೇಡಿದಭೀಷ್ಟಗಳ ಕೊಡುವ ಹನುಮ ಭೀಮ ಮಧ್ವರಾಯ ಅ.ಪ. ಅಷ್ಟದಿಕ್ಕಲಿ ಭೂಪರಾಳಿದ ದುಷ್ಟರಾವಣನ್ನ ಪುರವ ದೃಷ್ಟಿಸಿ ನೋಡಿ ಸಮರದಲಿ ಪ್ರಹಾರವನೆ ಕೊಡಲು ಕಷ್ಟದಿ ಮೂಛ್ರ್ಯಕೃತನಾಗಿಯೆದೆ ಹಿಟ್ಟಾಗಿಸನಂತಕಂದಿಸಿಯೆ ಕಂಗೆಟ್ಟು ಹತ್ತು ದಿಸೆಗೆ ಓಡಿಸಿದ್ಯೊ ದಿಟ್ಟನಾಗಿ ನಿರಂತರದಿ ಹನುಮಾ 1 ನಾರದ ಅಯೋಧ್ಯದಿ ಪೇಳಲು ಶ್ರೀ ರಾವಣ ಸೈನ್ಯಗಳ ಓಡಿಸಿ ವಾರಿಧಿಗಳ ದಾಟಿ ಬೇಗ ನೂರುತಲೆ ಅಸುರನ ಪಟ್ಟಣದ ದ್ವಾರ ಬಂಧಿಸಿ ಸಕಲದ್ವೀಪದಲ್ಲಿದ್ದ ಕ್ರೂರ ಅಸುರನ್ನ ಕಾಲಲೊದ್ದು ವರ ವಿಭೀಷಣ ಸುಗ್ರೀವರ ಪುಚ್ಛದಲಿ ತರುಬಿದಿಯೊ ಸಮರ್ಥ ಹನುಮಾ 2 ರುದ್ರ ಬ್ರಹ್ಮರ ವರದಲವಧ್ಯನಾದ ಜರಾಸಂಧನಾ ಖಳರ ಸೀಳಿದ್ಯೊ ನೃಪರ ನಿಂದೆ ಯುದ್ಧದಲಿ ದುರ್ಯೋಧನನ ಕೊಂದ ಪ್ರಸಿದ್ಧ ಭೀಮರಾಯ ನಿಮಗೆ3 ವಾದಿಗಜಕೆ ಮೃಗೇಂದ್ರ ವಾದಿವಾರುಧಿ ಬಡಿವ ಮಾಯಾ ವಜ್ರ ಭೇದ ಮತಾಂಬುಧಿಗೆ ಚಂದ್ರ ಮೋದತೀರ್ಥಾನಂದಗೆ ಕೃಷ್ಣಾ ಅಷ್ಟವಾಳುಕ ಮುಷ್ಟಿ ತಂದೆ ಸಾಧುಜನರಿಗೆ ತತ್ವಬೋಧಿಸಿದೆ ಮೇದಿನಿಯೊಳು ಮಧ್ವರಾಯ ನಿಮಗೆ 4 ಇಂದುಮುಖಿ ಸೀತೆಗೆ ಮುದ್ರಿಕೆಯನಿತ್ತು ವಂದಿಸಿ ರಾಮಕಥೆಯ ಪೇಳಿದೆ ಅಂದು ರೋಮಕೋಟಿ ಶಿವರಮಾಡಿ ಪುರುಷಮೃಗವನೆ ತಂದೆ ಚಂದದಿಂ ಮಣಿಮಂತನ ಕೊಂದು ಸೌಗಂಧಿಕವ ತಂದೆ ನಂದತೀರ್ಥರಾದ ಅಚಲಾನಂದ ವಿಠಲನ ದಾಸ ನಿಮಗೆ5
--------------
ಅಚಲಾನಂದದಾಸ
ಕರುಣಸಾಗರನಹುದೊ ಶರಣ ಜನರ ಪ್ರಿಯ ಧ್ರುವ ಕರಿರಾಜ ಮೊರೆ ಇಡಲು ಭರದಿಂದೊದಗಿ ಬಂದ್ಯೊ ದುರಿತ ಬಂದಡರಿದಾವಸರದೊಳು ನೀ ಪರಿಹರಿಸಿದ್ಯೊ ಶ್ರಮ ಪರಮ ದಯಾಳು 1 ದುರಿತ ನಿರ್ಮಿಸಿದವನ ಬೆರಳಲಿ ಸೀಳಿದ್ಯೊ ಪೂರ್ಣ ಹರಿಯಂದಾ ಮಾತಿಗೆ ಕರುಣದಿಂದೊದಗಿ ನೀ ಪರಪರಗಾಯಿದ್ಯೊ ತರಳ ಪ್ರಹ್ಲಾದನ 2 ಧರ್ಮಪತ್ನಿಯ ಸೆರಗೆ ಭರದಿಂದೆಳೆಯುವ ಸಮಯ ಸ್ಮರಣಿ ಒದಗಿ ಬಂದೊ ಪರಿಪರಿ ವಸ್ತುವ ಪೂರಿಸಿದ್ಯೊ ಶ್ರೀ ಹರಿ ಕೃಷ್ಣ ಕೃಪಾಳು 3 ಅರಗಿನ ಮನೆಯೊಳು ಮರೆ ಮೋಸ ಮಾಡಿರಲು ಶರಣಾಗತವತ್ಸಲ ಪಾಂಡವಪ್ರಿಯ 4 ಹಲವು ಪರಿಯಲೆನ್ನ ಸಲಹುವ ಸದ್ಗುರುಪೂರ್ಣ ಬಾಲಕ ಮಹಿಪತಿಯ ಪಾಲಕ ನೀನಹುದೊ ಮೂಲೋಕದೊಡೆಯ ಶ್ರೀ ಹರಿ ದಯಾಳ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು