ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಜಮುಖ ಗಣಪನಂಬುಜಪಾದಕ್ಕೆರಗುವೆ ನಿಜವಾದ ವರವ ನಾ ಬೇಡಿಕೊಂಬೆ ಅಜನರಸಿಗೆ ಅತಿ ಭಕ್ತಿಂದೆ ಭಜಿಸುವೆ ತ್ರಿಜಗವಂದಿತನ ಕತೆಯ ಪೇಳ್ವೆನು 1 ಗೋಕುಲದೊಳಗೆಲ್ಲ ಗೋಪಾಂಗನೇರು ಕೂಡಿ ಏಕವಾಗಿ ಮಾತನಾಡಿಕೊಂಡು ತಾವು ಅ- ನೇಕ ಸಂಭ್ರಮದಿಂದ ಆಡಿ ನೀರಾಟವ ಬೇಕಾದೂಟವನುಂಡು ಬರುವೋಣೆಂದು 2 ಘೃತ ಪರಮಾನ್ನವು ಚಕ್ಕುಲಿ ಗಿಲುಗಂಜಿ ಗುಳ್ಳೋರಿಗೆ ಬುಂದ್ಯ ಭಕ್ಷ್ಯ ಮಂಡಿಗೆ ಫೇಣಿ ಬುತ್ತಿ ಚಿತ್ರಾನ್ನ ಹಪ್ಪಳ ಸಂಡಿಗಂಬೋಡುಪ್ಪಿನಕಾಯಿಗಳು 3 ಕೇಸರಿ ಕುಂಕುಮರಿಷಿಣ ಅಚ್ಚಮಲ್ಲಿಗೆ ಶಾವಂತಿಗೆ ಸರವು ದಿವ್ಯ ಕರ್ಪೂರದಡಿಕೆ ಯಾಲಕ್ಕಿ ಎಲೆಯ ಸುಣ್ಣ ಪತ್ರೆ ಲವಂಗ ತಬಕಿಲೆ ತಂದರು 4 ಹೆರಳು ಬಂಗಾರ ರಾಗಟೆ ಗೊಂಡ್ಯ ಕ್ಯಾದಿಗೆ ಅರಳು ಮಲ್ಲಿಗೆ ಸಂಪಿಗೆ ಮುಡಿದು ದಿವ್ಯ ಕೊರಳ ಕಟ್ಟಾಣಿ ಸರಿಗೆ ಚಂದ್ರಹಾರ ಪು- ತ್ಥಳಿ ಪಚ್ಚಪದಕಗಳ್ಹೊಳೆಯುತಲಿ 5 ಕಡಗ ಕಂಕಣ ದ್ವಾರ್ಯ ನಾಗಮುರಿಗೆ ವಂಕಿ ಬಿಡಿಮುತ್ತಿನ ಗೊಂಡ್ಯ ಬಾಜುಬಂದು ದೊಡ್ಡ ವಾಲೆ ಸರಪಳಿ ಮುತ್ತು ಬು- ಗುಡಿ ಚಂದರ ಬಾಳ್ಯ ಹೊಳೆಯುತಲಿ 6 ಮುದ್ದು ಮೋರೆಗೆ ತಕ್ಕ ಮುಕುರ್ಯ ಬುಲಾಕನಿಟ್ಟ ವ- ಜ್ರದ್ಹರಳು ಬಲಮೂಗಿನಲಿ ದಿವ್ಯ ತಿದ್ದಿ ಮುಂಗುರುಳು ಮುತ್ತಿನ ಬೊಟ್ಟು ಕುಂಕುಮ ಪದ್ಮದ್ಹೂವಿನ ಕುಬುಸಗಳ ತೊಟ್ಟು 7 ಹರದಿಯರೆಲ್ಲರು ಪರಮ ಸುಭ್ರಮದಿಂದ ಜರದ ಪೀತಾಂಬರ್ವಜ್ಜರದ ಪಟ್ಟಿನಿಟ್ಟು ಪರಿ ಬಣ್ಣ ಸೀರೆಗಳುಟ್ಟು ಕಾಲ- ಲಿ ರುಳಿ ಕಾಲುಂಗರ ಗೆಜ್ಜೆ ಪೈಜಣವು 8 ಚೆಲ್ವೆಯರೆಲ್ಲರು ಉಲ್ಲಾಸದಿಂದಲಿ ಘುಲ್ಲು ಘಲ್ಲೆಂದು ಹೆಜ್ಜನಿಡುತ ತಾವು ಮಲ್ಲೆ ಮಲ್ಲಿಗೆ ಪುನ್ನಾಗ ಸಂಪಿಗೆ ತೋಟ ಅಲ್ಲಲ್ಲೆ ನಿಂತು ನೋಡುತ ಬಂದರು 9 ಕುಂದ ಮಂದಾರ ಸುಗಂಧಿಕ ದವನವು ಬಂಗಾರದಂಥ ಕ್ಯಾದಿಗೆಯಮಲ ಚೊಕ್ಕ ದುಂಡುಮಲ್ಲಿಗೆ ಪಾರಿಜಾತ ತಾವರೆಮೊಗ್ಗು ಚೆಂದ ಚೆಂದದ ಶಾವಂತಿಗೆ ವನವು 10 ಹತ್ತಿ ಆಲದ ಮರ ಅಡಕೆ ತೆಂಗಿನ ಮರ ಅ- ಶ್ವತ್ಥ ಕಪಿತ್ಥ ಕಿತ್ತಳೆ ಹಲಸು ನೋಡು- ತ್ತತ್ತಿ ದ್ರಾಕ್ಷಿ ನೀರಲ ನಿಂಬೆ ದಾಳಿಂಬ್ರ ಪಕ್ವಾದ ಜಂಬು ಸೀತಾಫಲವು 11 ಎಲೆದೋಟದೊಳಗೆ ಯಾಲಕ್ಕಿಗೊನೆಯು ನೋಡೆ ಕಳಿತ ಮಾವಿನ ಹಣ್ಣು ಕದಳೀ ಫಲ ಬೋರೆ ಶ್ರೀತುಳಸಿ ವನಗಳಲ್ಲೆ ಅರಿಷಿಣಂಜೂರಿ ಔದುಂಬ್ರ ಫಲ 12 ಚಕೋರ ಚಾತಕ ಗಿಳಿ ಚಕ್ರವಾಕ ಪಕ್ಷಿ ಗಿಳಿಹಿಂಡು ಗಂಡೆರಳೆ ಗರುಡ ಹಂಸವು ನೋಡೆ ಹರಿ ಬ್ರಹ್ಮ ತಂದೆ ಮಕ್ಕಳು ಏರೋವಾಹನವು 13 ಕಸ್ತೂರಿಮೃಗ ಪುನುಗಿನ ಬೆಕ್ಕು ಪಾರ್ವಾಳ ಜಕ್ವಕ್ಕಿ ಕೊಳಲ್ಹಕ್ಕಿ ಸಾರಂಗವು ಚಾರಿ ಕುಕ್ಕುಟ ಭೈರುಂಡ ಎಡಖಗ ಬಲಕ್ಕಾಗಿ ಕೊಟ್ಟವು ಶಕುನ ಜಲಕ್ರೀಡೆಗೆ 14 ಕಾಳಿಮರ್ದನ ಕೃಷ್ಣ ಹಾರಿದ ಮಡುವಿದು ಕಾಳಿಂಗನೋಡಿಸಿ ಕಳೆದ ವಿಷ ಕೆಟ್ಟ ನೋಡೆ ಅಮೃತಕೆ ಮಿಗಿಲಾಗಿದೆ ಈ ಜಲ ಏನು ಪುಣ್ಯ ಮಾಡಿದ್ದಳೊ ಯಮುನಾ 15 ನೀಲ ಮಾಣಿಕ್ಯ ಮುತ್ತು ಕೂಡಿಸಿದಂತೆ ತ್ರಿವೇಣಿ ಆ- ದಳು ತಾ ಪ್ರಯಾಗದಲಿ ತ್ರಿವೇಣಿ ಭಾಗೀರಥಿ ಸರಸ್ವತಿ ಕೂಡಿ ಸಂಗಮಳಾಗಿ ಪೋಗೋಳು ಕಾಶಿ ಪಟ್ಟಣಕೆ 16 ಕಮಲಸಖನ ಪುತ್ರಿ ಕಾಮಿತ ಫಲಕೊಟ್ಟು ವರುಣನರ್ಧಾಂಗಿ ನೀ ವರವ ಕೊಡೆ ತಾಯೆ ಯಮಧರ್ಮರಾಯನ ಭಗಿನಿ ನಿಮ್ಮ ಸ್ನಾನ- ಫಲಕೊಟ್ಟು ಪಾಲಿಸೀಗೆಂದೆನುತ 17 ನೋಡುತ ನಗುತ ಮಾತಾಡುತ ನಿಂತರು ಓಡುತಾವೆ ಜಲ ಸೆಳವಿನಿಂದ ಆಹ ಮಾಡುವೋಣ್ಹ್ಯಾಗೆ ಸ್ನಾನವ ನಾವು ಎನುತಲಿ ಜೋಡಿಸಿ ತಮ್ಮ ್ಹಸ್ತ ಮುಗಿದರಾಗ 18 ಉಟ್ಟ ಸೀರೆಗಳನು ಬಿಟ್ಟು ಕುಪ್ಪಸ ಕಟ್ಟಿ ಇಟ್ಟರು ಉಸುಕಿನ ಮಿಟ್ಟಿಯಲ್ಲೇ ತಾವು ಮಿತ್ರೆಯರೆಲ್ಲ ತಮ್ಮ ಸ್ತನಗಳ್ಹಿಡಕೊಂಡು ಥಟ್ಟನೆ ಇಳಿದರು ನದಿಯೊಳಗೆ 19 ವಾರಿಗೆ ಗೆಳೆತೇರು ವರ ಮೋಹನಾಂಗೇರು ಮೋರೆಗೆ ಅರಿಷಿಣ ಕುಂಕುಮ್ಹಚ್ಚಿ ತಮ್ಮ ನೀರಜಾಕ್ಷಿಯರೆಲ್ಲ ನಿರ್ಮಲವಾಗಿದ್ದ ನೀರೊಳು ನಿಂತು ಮೈ ತೊಳೆದರಾಗ 20 ಭಾರಿ ಸೆಳವಿನೊಳು ಬತ್ತಲೋಲ್ಯಾಡುತ ಸಾರಸಮುಖಿಯರು ಸರಸದಿಂದ ಚೆಲ್ಲೆ ದ್ವಾರ್ಯ ಕಂಕಣಕರ ಬೊಗಸೆಲಿಂದ ನೀರು ತುಂಬಿ ಚೆಲ್ಲ್ಯಾಡುತಲಿ 21 ಸರ್ಪನಂಥ ಹೆರಳೊಲಿವುತ ನೀರೊಳು ಮುತ್ತಿನ ಸರಪದಕ್ಹೊಳೆಯುತಲಿ ಬುಕ್ಕ್ಹಿಟ್ಟು ಗಂಧ ಮಲ್ಲಿಗೆ ಪಾರಿಜಾತವು ತೆಪ್ಪದಂದದಲಿ ತೇಲಾಡುತಿರೆ22 ಅಂಬುಜಮುಖಿಯರು ಸಂಭ್ರಮದಿಂದಲಿ
--------------
ಹರಪನಹಳ್ಳಿಭೀಮವ್ವ
ಅಸಿಸ್ಟೆಂಟ್ ಅಮಲ್ದಾರ್ರು ಹೇಳಿಕಳುಹಿಸಿದ್ದಾರೆ ಪ ಬಿಸಿ ನೀರು ನಿನಗಾಗಿ ಹಸನಾದ ಪನ್ನೀರ- ರಿಸಿನ ಕುಂಕುಮ ಕಳಶ ಕನ್ನಡಿಗಳಾ ಶಶಿಮುಖಿಯರೆಲ್ಲರು ತಂದು ಕಾದಿಹೆವಿಲ್ಲಿ ಕುಸುಮಾಸ್ತ್ರ ನಾಟದಲಿ ನಿಶಿ ನಿದ್ರೆ ಇಲ್ಲವೇನೋ 1 ಒಬ್ಬ ಒಡವೆಗಳು ಮತ್ತೊಬ್ಬ ಸೀರೆಗಳು | ಇ ನ್ನೊಬ್ಬ ಪರಿಮಳ ದ್ರವ್ಯ ತಂದು ಕೊಡುವಾ ಹಬ್ಬ ಪ್ರತಿದಿನ ರಾತ್ರಿಯಾಗುತ್ತಲೆ ನಿನಗೆ ನಮ್ಮ ಸುಬ್ಬ ಪೋಲೀಸನವರಿಂದ ಬಿಡಿಸಲಿಲ್ಲವೆ 2 ಹೊನ್ನು ಹಣಗಳಿಗೇನು ಕಡಿಮೆಯಿಲ್ಲ ಇನ್ನಾದರು ಸ್ಮರಿಸಿ ಕಣ್ದೆರೆದು ನೋಡೆ 3
--------------
ಗುರುರಾಮವಿಠಲ
ಸಖಿ ವಾರಿಜ ಹಾರವನಾ ಶ್ರೀಕೃಷ್ಣನ ಕೊರಳಿಗೆ ಹಾಕುವೆನಾ ಪ ಕುಂದಮಲ್ಲಿಗೆ ಅರವಿಂದಗಳಿಂದತಿ ಸುಂದರ ಹಾರವನಾ ಮು- ಕ್ಕುಂದನ ಕೊರಳಿಗೆ ಹಾಕುವೆನಾ 1 ನಾರಿ ದ್ರೌಪದಿಗೆ ಸೀರೆಗಳುಡಿಸಿದ ಪಾರ ಮಹಿಮದವನಾ ಸಖಿಯೇ ಆ ಪಾರ ಮಹಿಮದವನಾ 2 ಕರುಣದಿ ಶರಣರ ಪೊರಿಯುವ 'ಕಾರ್ಪರ ನರಹರಿ ಯೆನಿಸುವನಾ ಸಖಿಯೆ ನರಹರಿಯೆನಿಸುವನಾ ನರಸಿಂಹನ ಕೊರಳಿಗೆ ಹಾಕುವೆನಾ 3
--------------
ಕಾರ್ಪರ ನರಹರಿದಾಸರು
ರಂಗನೊಲಿದ ನಮ್ಮ ಕೃಷ್ಣನೊಲಿದ |ಅಂಗನೆ ದ್ರೌಪದಿಗೆ ಅಕ್ಷಯವಸ್ತ್ರವನಿತ್ತುಪಕರಿಯಪುರದ ನಗರದಲ್ಲಿ ಕೌರವರು ಪಾಂಡವರು |ಧರೆಯನೊಡ್ಡಿ ಲೆತ್ತವಿಡಿದು ಜೂಜನಾಡಲು ||ಪರಮಪಾಪಿ ಶಕುನಿ ತಾನು ಪಾಸಿನೊಳಗೆ ಪೊಕ್ಕಿರಲು |ಧರುಮರಾಯ ಧಾರಿಣಿ - ದ್ರೌಪದಿಯ ಸೋತನು 1ಮುದ್ದುಮೊಗದ ದ್ರೌಪದಿಯ ಮುಂದೆಮಾಡಿ ತನ್ನಿರೆಂದು |ತಿದ್ದಿ ತನ್ನ ಮನ್ನೆಯರಿಗೆ ತಿಳಿಯಹೇಳಿದ ||ಮುದ್ರೆಮನ್ನೆಯರು ಬಂದು ದ್ರೌಪದಿಯ ಮುಂದೆ ನಿಂತು |ಬುದ್ಧಿಯಿಂದಲೆಲ್ಲವನು ಬಿನ್ನಹಮಾಡಲು 2ಅಮ್ಮ ಕೇಳೆ ಅರಸುಗಳು ಅಚ್ಚ ಪಗಡೆ ಪಂಥವಾಡಿ |ಹೆಮ್ಮೆಯಿಂದ ಜೂಜಿಗಿಟ್ಟು ಲೆತ್ತವಾಡಲು ||ಧರ್ಮರಾಯ ಸೋತನೆಂದು ಸತ್ಯವಚನಿ ಕೌರವಂಗೆ |ನಿಮ್ಮ ನಿಜದಿ ಸೇರಿ ಆಗ ಕೊಟ್ಟರೆಂದರು 3ಪಟ್ಟಪದವಿ ಅವರಿಗಾಗಿ ಬಡವರಾಗಿ ಇರುವೆವೆಂದರೆ |ಕಿಟ್ಟ ಪಗಡೆ ಪಂಥ ಜೂಜಿದೆಲ್ಲಿ ಒದಗಿತು ? ||ದುಷ್ಟ ಕೌರವನು ಎನ್ನ ಲಜ್ಜೆ - ನಾಚಿಕೆಯ ಕೊಂಡು |ಭ್ರಷ್ಟ ಮಾಡುವನು ಎಂದು ಬಳಲಿ ದ್ರೌಪದಿ 4ಬಾಗಿ ಬಳುಕಿ ಬೆದರಿ ಬಿಕ್ಕಿ ಕಣ್ಣ ನೀರನುದುರಿಸುತಲಿ |ಮಾಗಿಯ ಕೋಗಿಲೆಯಂತೆಕಾಯ ಒಲೆಯುತ ||ಆಗ ಕೃಷ್ಣನಂಘ್ರಿಗಳನು ಅಂತರಂಗದಲಿ ನೆನೆದು |ಸಾಗಿಸಾಗಿ ಹೆಜ್ಜೆ ಇಡುತ ಸಭೆಗೆ ಬಂದಳು 5ವೀರಕರ್ಣ ಅಶ್ವತ್ಥಾಮ ವಿದುರ ಶಲ್ಯ ಭಗದತ್ತರು |ಕ್ರೂರ ಕೌರವ ದುಃಶಾಸನ ಗುರುಹಿರಿಯರು ||ಸಾರುತಿಪ್ಪ ಭಟರು ಪರಿವಾರ ರಾವುತರ ಕಂಡು |ಧಾರಿಣಿಗೆ ಮುಖವ ಮಾಡಿ ನಾಚಿನಿಂತಳು 6ಚೆಂದದಿಂದ ದುರ್ಯೋಧನ ಚದುರಿ ದ್ರೌಪದಿಯ ಕಂಡು |ಮುಂದರಿಯದೆ ಮುಗುಳುನಗೆಯ ಮಾತನಾಡಿದ ||ಅಂದು ಸ್ವಯಂವರದಲ್ಲಿ ಐವರಿಗೆ ಆದ ಬಾಲೆ |ಇಂದು ಎನ್ನ ಪಟ್ಟದರಸಿಗೊಪ್ಪಿದೆಯೆಂದನು7ಮಲ್ಲಿಗೆಯನು ಮುಡಿಯೆ ನಾರಿ ಮುದ್ದುಮೊಗದ ಒಯ್ಯಾರಿಚೆಲ್ಲೆಗಂಗಳ ದ್ರೌಪದಿಯೇ ಬಾರೆ ಎಂದನು ||ಬಿಲ್ಲು ಎತ್ತಲಾರದವನೆ ಬಂಡಣ ಕಾದದಿದ್ದವನೇ |ಹಲ್ಲುಕೀಳುವರೈವರು ಬೇಡವೆಂದಳು 8ಬಟ್ಟೆಬಡಕರೈವರಿಗೆ ಮಿತ್ರೆಯಾಗುವುದು ಸಲ್ಲ |ಪಟ್ಟಿಮಂಚಕೊಪ್ಪುವಂತ ಬಾರೆ ಎಂದನು ||ಕೆಟ್ಟಮಾತನಾಡದಿರೊ ಕ್ರೋಧದಿಂದ ನೋಡದಿರೊ |ರಟ್ಟೆಕೀಳುವರೈವರು ಬೇಡವೆಂದಳು 9ಅಡವಿತಿರುಕರೈವರಿಗೆ ಮಡದಿಯಾಗುವುದು ಸಲ್ಲ |ತೊಡೆಯ ಮೇಲೆ ಒಪ್ಪುವಂತೆ ಬಾರೆ ಎಂದನು ||ಬೆಡಗುಮಾತನಾಡದಿರೊ ಭೀಮಸೇನನ ಗದೆಯು ನಿನ್ನ |ತೊಡೆಯ ಮೇಲೆ ಒಪ್ಪುವದು ಬೇಡವೆಂದಳು 10ಅಚ್ಚ ಪೊಂಬಣ್ಣದ ಬೊಂಬೆ ಆನೆಯಂತೆ ನಡೆವ ರಂಭೆ |ಅಚ್ಚ ಮುತ್ತಿನಂತೆ ಬಿಂಬೆ ಬಾರೆ ಎಂದನು ||ಹೆಚ್ಚು - ಕುಂದನಾಡದಿರೊ ಪರರ ಹೆಣ್ಣ ನೋಡಿದಿರೊ |ಚುಚ್ಚಿ ಹಾಕುವರೈವರು ಬೇಡವೆಂದಳು 11ಎಷ್ಟುಬಿಂಕ - ಬಡಿವಾರವು ಹೆಣ್ಣ ಬಾಲೆಗಿವಳಿಗೆಂದು |ಸಿಟ್ಟಿನಿಂದ ದುರ್ಯೋಧನ ಸಾರಿ ಕೋಪಿಸಿ ||ಉಟ್ಟ ಸೀರೆ ಸೆಳೆಯಿರಿವಳಉಬ್ಬು ಕೊಬ್ಬು ತಗ್ಗಲೆಂದು |ದೃಷ್ಟಿಯಿಂದ ದುಃಶಾಸಗೆ ಸನ್ನೆ ಮಾಡಿದ 12ದುರುಳ ದುಃಶಾಸನ ಬಂದು ದ್ರೌಪದಿಯ ಮುಂದೆ ನಿಂತು |ಕರವ ಪಿಡಿದು ಸೆರಗಹಿಡಿದು ನಿರಿಯ ಸೆಳೆಯಲು ||ಮರುಳು ಆಗದಿರೋ ನಿನ್ನ ರಕ್ತದೊಳಗೆ ಮುಡಿಯನದ್ದಿ |ಕರುಳ ದಂಡೆಯನ್ನೆ ಮಾಡಿ ಮುಡಿವೆನೆಂದಳು 13ಗುಲ್ಲುಗಂಟಿ ಹೆಣ್ಣೆ ನಿನ್ನ ಕಾಡಿ ಬಳಲಿಸುವೆನು ಎಂದು |ಗಲ್ಲದಲ್ಲಿ ಕೈಯನಿಕ್ಕಿ ನಿರಿಯ ಸೆಳೆಯಲು ||ನಿಲ್ಲೊ ನಿಲ್ಲೊ ಪಾಪಿ ನಿನ್ನ ನಾಲಗೆ ಎರಡಾಗಿ ಸೀಳಿ |ಪಲ್ಲಿನಲ್ಲಿ ಕೇಶ ಹಿಕ್ಕಿಕೊಂಬೆನೆಂದಳು 14ಬೆನ್ನಿನಲಿ ಪೆಟ್ಟನಿಕ್ಕಿ ಭಂಡುಮಾಡುವೆನು ಎಂದು |ಕೆನ್ನೆಯಲಿ ಕೈಯನಿಕ್ಕಿ ನಿರಿಯ ಸೆಳೆಯಲು ||ರನ್ನೆ ವೀರಬೊಬ್ಬೆಯಿಕ್ಕಿ ರಭಸದಿಂದ ಸಾರುತಲಿ |ಪನ್ನಗಶಯನ ಕೃಷ್ಣ ಕೃಷ್ಣ ಕಾಯೊ ಎಂದಳು 15ಮಚ್ಚ ಕೂರ್ಮವರಹ ಕಾಯೊ, ಮುದ್ದು ನಾರಸಿಂಹ ಕಾಯೊ |ಹೆಚ್ಚಿನ ವಾಮನನೆ ಕಾಯೊಭಾರ್ಗವ ಕಾಯೊ ||ಅಚ್ಯುತ ರಾಮಕೃಷ್ಣ ಕಾಯೊ ಬೌದ್ಧ ಕಲ್ಕಿರೂಪ ಕಾಯೊ |ಸಚ್ಚಿದಾನಂದ ಸ್ವಾಮಿ ಕಾಯೊ ಎಂದಳು16ಸಜ್ಜನರ ಪ್ರಿಯನೆ ಕಾಯೊ ಸಾಧುರಕ್ಷಕನೆ ಕಾಯೊ |ನಿರ್ಜರವಂದಿತನೆ ಕಾಯೊ ನರಹರಿ ಕಾಯೊ |ಅರ್ಜುನನ ಸಖನೆ ಕಾಯೊ ಆನತಪಾಲಕನೆ ಕಾಯೊ |ಲಜ್ಜೆ - ನಾಚಿಕೆಯ ಕಾಯೊ ಸ್ವಾಮಿ ಎಂದಳು 17ಸಿಂಧು ಸಾಗರದ ಶಯನ ದ್ರೌಪದಿಯ ಮೊರೆಯಕೇಳಿ |ಅಂದು ಉಟ್ಟ ವಸ್ತ್ರಗಳುಅಕ್ಷಯ ವೆಂದನು||ಒಂದು ಎರಡು ಮೂರು ನಾಲ್ಕು ಕೋಟ್ಯಸಂಖ್ಯ ಸೀರೆಗಳು |ನೊಂದು ಬೆಂದು ದುಃಶಾಸನು ನಾಚಿಕುಳಿತನು 18ನೋಡಿದರು ದ್ರೌಪದಿಯ ಮಾನರಕ್ಷ ಲೀಲೆಗಳನು |ಮಾಡಿದರು ಮಾಧವನ ಮುದ್ದು ಸ್ತೋತ್ರವ ||ಮೂಢ ಕೌರವನ ಕೂಡಮಾನಿನಿ ದ್ರೌಪದಿಯು ಪಂಥ - |ವಾಡಿ ತನ್ನ ಪತಿಗಳೈವರನ್ನು ಗೆಲಿದಳು19ಕೇಶಮುಡಿಗಳನ್ನಕಟ್ಟಿ ಕ್ಯೆಯಕಾಲಮಣ್ಣನೊರಸಿ |ಸಾಸಿರನಾಮದ ಕೃಷ್ಣನು ಸುರರ ಪಾಲಿಪ |ವಾಸಿಯುಳ್ಳ ಕೃಷ್ಣ ಎನ್ನ ವಹಿಸಿ ಮಾನಕಾಯ್ದನೆಂದು | ಸಂತೋಷದಿಂದ ದ್ರೌಪದಿಯು ಮನೆಗೆ ಬಂದಳು 20ಇಂತು ಆ ದ್ರೌಪದಿಯ ಮಾನರಕ್ಷ ಲೀಲೆಗಳನು |ಸಂತತದಲಿ ಹಾಕಿಕೇಳಿ ನಲಿವ ಜನರಿಗೆ |ಸಂತಾನ ಸೌಭಾಗ್ಯ ಸಕಲಭೀಷ್ಟೆಗಳನು ಕೊಡುವ |ಕಂತು ಜನಕ ನಮ್ಮ ಪುರಂದರವಿಠಲನು21
--------------
ಪುರಂದರದಾಸರು