ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬದಿರು ಈ ದೇಹ ನರಲೋಕವೆಂಬುದು ಸುಖವೆಂದು ಮಾಯಾ ಪ್ರಪಂಚವನು ಅನುಗಾಲಾ ನಂಬು ನಮ್ಮಂಬುಜಾಂಬಕನ ಪಾದಾಂಬುಜವ ನಂಬಿದರೆ ಮುಕ್ತಿಯಲಿ ಇಂಬುಂಟು ಮರುಳೆ ಪ ತಂದೆ ತಾಯಿ ತಮ್ಮ ಸುಖಕೆ ಏಕಾಂತದಲಿ ಒಂದು ದಿನಲಿರಲಾಗಲವರರೇತಸು ಬಿಂದುವಿನಲಿ ಉತ್ಪತ್ಯವಾಗಿ ಬೆರೆದಾಗ ದು ರ್ಗಂಧದೊಳು ಬಂದು ನಿಂದೂ ಬಂಧನದೊಳಗೆ ಸಿಲುಕಿ ಒಂದೆಂಟು ತಿಂಗಳು ಪೊಂದಿ ಯಾತನೆಬಟ್ಟು ಮಲಮೂತ್ರ ಹೇಸಿಕೆಯಿಂದ ಕುದಿದು ಬಿಂದು ಕೆಳಗೆ ಹೊರಳಿದಿರು ಮರುಳೆ 1 ತಾಮಸವ ಕವಿದು ಕಾವಳಗೊಂಡ ಕತ್ತಲೆಯ ಸೀಮೆಯೊಳಗೆ ಸಿಲ್ಕಿ ಬಾಲತ್ವತನದಲ್ಲಿ ನೀ ಮಂದನಾಗಿ ಮರುಳಾಟಕ್ಕೆ ಮನವು ಉಬ್ಬಿ ಮುಂಜಿಯನು ಕಟ್ಟಿ ಬಂಧುಬಳಗ ಪ್ರೇಮದಿಂದಲಿ ನೆರೆದು ಮೋಹದಲಿ ಒಬ್ಬ ಕೋಮಲೆಯ ಜತೆಮಾಡಲು ನೋಡಿ ಹಿಗ್ಗುತ್ತಾ ಛೀಮಾರಿಯಾಗಿ ತಿರುಗಲಿ ಬೇಡ ಮರುಳೆ 2 ಮದ ಮತ್ಸರ ಲೋಭ ಮೋಹ ಕಾಮಾದಿಯಲಿ ಮದನ ಬಲಿಗೆ ಬಿದ್ದು ಅಹಂಮತಿ ಪಂಕದಾ ಹುದಲಿನೊಳಗೆ ಮುಣುಗಿ ಮುಂಗಾಣದಲೆ ತನು ರೂಹ ತುಂಬಿ ಕಾಲವನು ಕಳೆದು ಮಕ್ಕಳ ಪಡೆದು ತುದಿಮೊದಲು ಧರ್ಮವನು ಮರೆದು ಮಮತೆಯಲ್ಲಿ ಸದರೆಂದಿಲ್ಲದಾ ದುಷ್ಕರ್ಮಗಳು ಮಾಡಿ ಮುದದಿಂದ ನರಕದೊಳು ಬೀಳುವಾ ಹುರುಳೆ 3 ಇದ್ದಾಗ ನೆಂಟರಿಷ್ಟರು ಬಂದು ಚೆನ್ನಾಗಿ ಹೊದ್ದಿಕೊಂಡು ನಿನ್ನ ಕೊಂಡಾಡಿ ನೂರಾರು ಸುದ್ದಿಯನು ಪೇಳಿ ನಡುಮನೆಯೊಳಗೆ ಇದ್ದು ನಿನ್ನಯ ಬದುಕು ಉದ್ದಿನ ಕಾಳಿನಷ್ಟು ಉಳಿಯಲೀಸದೆ ನಿತ್ಯಾ ಬದ್ಧವಿಲ್ಲದಲೆ ಕರಗಾತಿಂದು ಬಡತನಾ ಸಿದ್ಧನಾಗಲು ತಿಂದವರು ಹರದೋಡಿ ಎದ್ದು ಪೋಗಲು ಕೆಟ್ಟಬಾಯಿದೆರವಾ ಮರುಳೆ 4 ಬಿಡು ಬಿಡು ಅಕಟ ಸಂಸಾರ ಸಾಗರದ ಮಡುವಿನೊಳಗೆ ಬಿದ್ದು ಕಾಲ್ಗೆಡೆದು ಪೋಗದೆ ಹಿಡಿ ಹಿಡಿ ಪರಮ ಭಾಗವತರ ಸಂಗತಿಯ ಸರ್ವಜ್ಞತೀರ್ಥರ ಮತದ ಕರುಣವನು ಪಡೆಯಲು ಅಧಿಕಾರನಾಗಿ ಸಿರಿದೇವಿಯ ವೊಡಿಯ ವಿಜಯವಿಠ್ಠಲನಂಘ್ರಿ ನೆರೆ ನಂಬಿ ತಡಿಯದಲೆ ಸದ್ಗತಿಗೆ ಸೇರುವದು ಮರುಳೆ5
--------------
ವಿಜಯದಾಸ
ಭೀಷ್ಟದಾಯಕ ಕರುಣದಿ ಪಿಡಿ ಕೈಯಾ ಪ ರಾಮಕೃಷ್ಣ ಪವನಾತ್ಮಜನಂಘ್ರಿ ತಾಮರಸವ ಧೇನಿಸು ಪರಿವ್ರಾಜಾ ಭೀಮತೀರ ಪಿಪ್ಪಲ ಭೂಜ ಮೂಲ ಸೀಮೆಯೊಳಗೆ ರಾಜಿಸುವ ಯತಿರಾಜ 1 ಭೇದ ಮತಾಂಬುಧಿ ಚಂದಿರಾ ಗುರು ವೇದವ್ಯಾಸ ಮುನಿವರ ಸುಕುಮಾರಾ ಸಾಧು ಸದ್ಗುಣಗಣ ಗಂಭೀರನಾದ ಬಾದರಾಯಣನಾಮದಲಿಪ್ಪ ಧೀರಾ 2 ದೇವ ಜಗನ್ನಾಥ ವಿಠಲನ್ನ ಪಾದ ಸೇವಕ ಭೇಡುವೆ ಹರಿಮೂರ್ತಿ ಧ್ಯಾನ ಕೇವಲ ಭಕುತಿ ನಿರ್ಮಲ ಜ್ಞಾನ ವಿತ್ತು ಪಾವನ್ನ ಮಾಡಿ ಪಾಲಿಸೋ ಪ್ರತಿದಿನ 3
--------------
ಜಗನ್ನಾಥದಾಸರು
ವಲ್ಲಭೆ ಬಲು ಸುಲಭೆ ಪ ಮೂಕಾಸುರನ ಕೊಂದು ಮೂಕಾಂಬಿಕೆನಿಸಿದೆ ಶ್ರೀ ಕಮಲೆ ಎಲ್ಲಿನಾ ಕಾಣೆ ನಿನಗೆ ಸಮಾ 1 ಕೋಲ ಮುನಿಗೊಲಿದಮಲ ಮೃಗನಾಭಿ ಫಾಲೆ ಸಜ್ಜನರ ಪಾಲೆಬಾಲೆ ಜಾತರಹಿತೆ ಲೀಲೆ ನಾನಾ ಪುಷ್ಪಮಾಲೆ ಕಮಲಹಸ್ತೆ2 ಶಿವದುರ್ಗೆ ನೀನೆಂದು ಶ್ರವಣಮಾಡಲು ಮನುಜ ರವರವ ನರಕದಲ್ಲಿ ಬವಣೆಪಟ್ಟ ಮೇಲೆ ಸವಿಯದಂತೆ ತಮಸುನಿವಹದೊಳಗೆ ಇಪ್ಪನು 3 ಕಾಮತೀರ್ಥ ಬಳಿಯ ಪ್ರೇಮದಿಂದಲಿ ನಿಂದೆ ಸೀಮೆಯೊಳಗೆ ನಿನ್ನಯ ನಾಮಕೊಂಡಾಡಲು ತಾಮಸಗಳ ಕಳೆದು ನಿಷ್ಕಾಮ ಫಲ ಪಾಲಿಪೆ 4 ಧರೆಯೊಳು ಷೋಡಶಗಿರಿಯ ಪ್ರಾದೇಶ ಮಂ ನಿತ್ಯ ಸಿರಿ ವಿಜಯವಿಠ್ಠಲನ್ನಪರಮ ಪ್ರೀತಿ ಅರ್ಧಾಂಗಿ 5
--------------
ವಿಜಯದಾಸ
ಸಾಸಿರನಾಮ ಪೂಜೆಸಾಸಿರ ನಾಮ ಪೂಜೆಯ ಸಮಯಾ ಶ್ರೀವಾಸುದೇವನೆ ರಕ್ಷಿಪ ಸಮಯಾ ಸ್ವಾಮಿ ಪಸಾಸಿರ ದಳ ಪದ್ಮ ಮಧ್ಯಕೆ ಶ್ರೀ ವೇದವ್ಯಾಸ ಗುರುವು ಬಂದಿಹ ಸಮಯಾ ಭಾಸುರ ಛಂದಸ್ಸು ಮುಖಮಂಡಲದಿ ಪ್ರಕಾಶಿಸಿ ಮಂತ್ರ ಸಿದ್ಧಿಪ ಸಮಯಾ ಸ್ವಾಮಿ 1ಶ್ರೀರಮೆ ಧರೆ ಸಹ ಹೃದಯಮಧ್ಯದಿ ಶ್ರೀಮನ್‍ನಾರಾಯಣ ನೀನಿಹ ಸಮಯಾತೋರುತಿದಿರೆ ಪೀಠದಿ ಪೂಜೆಗೊಳುತೆನ್ನಸ್ಮೇರಾಸ್ಯದಿಂ ನೋಡುವ ಸಮಯಾ ಸ್ವಾಮಿ 2ಬೀಜನಾಮವು ದಕ್ಷಿಣ ಸ್ತನ ದೇಶದಿಭ್ರಾಜಿಸಿ ಭಕ್ತಿಗೂಡುವ ಸಮಯಾರಾಜಿಪ ಶಕ್ತಿ ನಾಮವು ವಾಮದಿ ಫಲರಾಜಿಯ ಬೆಳಸುತಿರುವ ಸಮಯಾ ಸ್ವಾಮಿ 3ಹೃದಯದಿ ಕೀಲಕ ನಾಮವು ನಿನ್ನಯಪದಸನಿಯವ ಸೇರಿಪ ಸಮಯಾಪದರದೆ ವಿಘ್ನತತಿಗೆ ಭಜಿಸೆನ್ನುತಸದಯ ಸದ್ಗುರು ನಿಯಮಿಪ ಸಮಯಾ ಸ್ವಾಮಿ 4ಅಂಗುಲಿಗಳು ನಿನ್ನ ಮಂಗಳ ನಾಮಗಳಸಂಗದಿ ಶುದ್ಧಿವಡೆದಿಹ ಸಮಯಾಗಂಗೆಯ ಪಡೆದ ನಿನ್ನಡಿಗೆ ತುಲಸಿ ಕುಸುಮಂಗಳನರ್ಪಿಸುತಿಹ ಸಮಯಾ ಸ್ವಾಮಿ 5ಅಂಗಗಳಾರು ಶುಭಾಂಗಗಳಾಗಿ ನಿನ್ನಮಂಗಳ ತನುವ ಧ್ಯಾನಿಪ ಸಮಯಾತೊಂಗದೆ ವಿಷಯಗಳೊಳು ನಿನ್ನ ಪದದುಂಗುಟದುದಿಯ ಸೇರಿಹ ಸಮಯಾ ಸ್ವಾಮಿ 6ದಶನಾಮ ದಶಕ ದಶಕ ಸಮಯದಿ ದಿವ್ಯದಶವಿಧ ಭೋಜ್ಯ ಭೋಜಿಪ ಸಮಯಾದಶವಿಧದಾರತಿಗಳ ಬೆಳಕಿಗಿಂದ್ರಿಯದಶಕವು ವಶಕೆ ಬಂದಿಹ ಸಮಯಾ ಸ್ವಾಮಿ 7ಮೀನ ಕಮಠ ಬುದ್ಧ ಕಲ್ಕಿನೀನಾಗಿ ಭಕತರಿಷ್ಟವನಿತ್ತೆ ನನ್ನಯದೀನತೆಯಳಿವರಿದೇ ಸಮಯಾ ಸ್ವಾಮಿ 8ಅನುಗ್ರಹಶಕ್ತಿಯೊಳಿರುತಷ್ಟಶಕ್ತಿಗಳನು ನೋಡಿ ಸೇವೆಗೊಳುವ ಸಮಯಾಸನಕಾದಿಗಳು ಶ್ರುತಿ ಸ್ಮøತಿ ಪುರಾಣಂಗಳುವಿನಮಿತರಾಗಿ ನುತಿಪ ಸಮಯಾ ಸ್ವಾಮಿ 9ವರ ಸಿಂಹಾಸನದಗ್ನಿ ದಿಕ್ಕಿನೊಳ್ ಧರ್ಮನುಹರುಷದಿಂ ಸೇವೆಗೈಯುವ ಸಮಯಾನಿರುರುತಿ ದೇಶದಿ ಜ್ಞಾನನು ತಾಮಸಬರದಂತೆ ಕಾದು ನಿಂದಿಹ ಸಮಯಾ ಸ್ವಾಮಿ 10ವೈರಾಗ್ಯ ವಾಯವ್ಯದೊಳು ನಿಂದು ದುಃಖವಹಾರಿಸುತಲಿ ಸೇವಿಪ ಸಮಯಾಸಾರಿರುತೈಶ್ವರ್ಯನೀಶನೆಡೆಯೊಳ್ ನೀನುತೋರಿದೂಳಿಗ ಗೈಯುವ ಸಮಯಾ ಸ್ವಾಮಿ 11ಸುರಪತಿ ದೆಶೆಯೊಳಧರ್ಮನು ಬೆದರುತಕರವ ಮುಗಿದು ನಿಂದಿಹ ಸಮಯಾಇರುತ ದಕ್ಷಿಣದಲಜ್ಞಾನನು ಚೇಷ್ಟೆಯತೊರೆದು ಭಯದಿ ಭಜಿಸುವ ಸಮಯಾ ಸ್ವಾಮಿ 12ವರುಣದಿಕ್ಕಿನೊಳವೈರಾಗ್ಯನು ನಿನ್ನಡಿಗೆರಗುವವರ ನೋಡುವ ಸಮಯಾಇರುತಲುತ್ತರದಲನೈಶ್ವರ್ಯ ಮಂತ್ರದುಚ್ಚರಣೆಯ ತಪ್ಪನೆಣಿಪ ಸಮಯಾ ಸ್ವಾಮಿ 13ಕಾಮಾದಿಗಳು ಪೀಠಸೀಮೆಯೊಳಗೆ ನಿಂತು ಕೈಮುಗಿದಲುಗದಿರುವ ಸಮಯಾತಾಮಸ ರಾಜಸ ಸಾತ್ವಿಕಗಳು ನಿನ್ನನಾಮದ ಬಲುಹ ತಿಳಿವ ಸಮಯಾ ಸ್ವಾಮಿ 14ಎಂಟು ದಿಕ್ಕಿನ ದೊರೆಗಳು ಪರಿವಾರ ಸಹಬಂಟರಾಗಿಯೆ ಕಾದಿಹ ಸಮಯಾಎಂಟು ಬಗೆಯ ಸಿರಿದೇವಿಯರೊಂದಾಗಿನಂಟುತನವ ಬಳಸಿಹ ಸಮಯಾ ಸ್ವಾಮಿ 15ಮೊದಲ ನಾಮವು ವಿಶ್ವಮಯ ನಿನ್ನ ನಿರ್ಗುಣಪದವ ಸೂಚಿಸಿ ಸಲಹುವ ಸಮಯಾತುದಿಯ ನಾಮದಿ ಭಕತರಿಗಾಗಿ ತನುದಾಳಿಒದೆದು ದುರಿತವ ರಕ್ಷಿಪ ಸಮಯಾ ಸ್ವಾಮಿ 16ದೂರಕೆ ದುರಿತವು ಹಾರಿ ಹೋಗಿಯೆ ಭಕ್ತಿಸೇರಿ ನಿನ್ನೆಡೆಯೊಳಾನಿಹ ಸಮಯಾದಾರಿದ್ರ್ಯ ದುಃಖವು ತೋರದಾನಂದವ ಸಾರಿ ನಿನ್ನನು ನುತಿಸುವ ಸಮಯಾ ಸ್ವಾಮಿ 17ಸಾಸಿರ ತಾರಕ ಜಪ ಮೊದಲು ಲಭಿಸಿಸಾಸಿರ ನಾಮ ಜಪವು ಮಧ್ಯದಿಸಾಸಿರ ವಂದನೆ ಕುಸುಮ ತುಲಸಿಗಳಸಾಸಿರದಿಂದೊಪ್ಪುವ ಸಮಯಾ ಸ್ವಾಮಿ 18ಸಾಸಿರ ಸಾಸಿರ ಜನ್ಮ ಜನ್ಮಗಳೊಳುಸಾಸಿರ ಸಾಸಿರ ತಪ್ಪುಗಳಾಸಾಸಿರ ಬಾರಿ ಮಾಡಿದ್ದರು ನಾಮದಸಾಸಿರ ಪ್ರಭೆಯೊಳಳಿವ ಸಮಯಾ ಸ್ವಾಮಿ 19ಮುಂದೆನ್ನ ಕುಲವೃದ್ಧಿಯೊಂದಿ ನಿನ್ನಯ ಕೃಪೆುಂದ ಭಕತಮಯವಹ ಸಮಯಾುಂದೆನ್ನ ಭಾಗ್ಯಕೆಣೆಯ ಕಾಣದೆ ನಿನ್ನಮುಂದೆ ನಾ ನಲಿದು ಕುಣಿವ ಸಮಯಾ ಸ್ವಾಮಿ 20ಗುರುವÀರನುಪದೇಶಿಸಿದ ಮಂತ್ರಕೆ ಸಿದ್ಧಿಬರುವ ನಿನ್ನಯ ಕೃಪೆಗಿದು ಸಮಯಾಕರುಣದಿಂ ನೋಡಿ ಕೈವಿಡಿದಭಯವನಿತ್ತುಪೊರೆವದಕೆನ್ನನಿದೇ ಸಮಯಾ ಸ್ವಾಮಿ 21ಧನ್ಯನು ಧನ್ಯನು ಧನ್ಯನು ನಾನೀಗಧನ್ಯನು ಮತ್ತು ಧನ್ಯನು ವಿಭುವೆಧನ್ಯರು ಜನನೀ ಜನಕ ಬಾಂಧವರೆಲ್ಲಧನ್ಯರೆಮ್ಮನು ನೋಡುವ ಸಮಯಾ ಸ್ವಾಮಿ 22ಮೂಲ ಮಂತ್ರಾಕ್ಷರ ಮೂಲ ನೀನಾಗಿಯೆಮೂಲಾವಿದ್ಯೆಯ ತೊಲಗಿಪ ಸಮಯಾಮೂಲೋಕನಾಯಕ ಮುಕ್ತಿ ಮಾರ್ಗಕೆುದೆಮೂಲವಾಗಿಯೆ ಬದುಕುವ ಸಮಯಾ ಸ್ವಾಮಿ 23ಮುರಹರ ಮಾಧವ ತಿಮಿರ ಭಾಸ್ಕರ ಕೃಷ್ಣಶರಣುಹೊಕ್ಕೆನು ನಿನ್ನ ಚರಣ ಪಂಕಜಗಳಪೊರೆಯುವರೆನ್ನನಿದೆ ಸಮಯಾ ಸ್ವಾಮಿ 24ತಿರುಪತಿಯೊಡೆಯನೆ ಶ್ರೀ ವಾಸುದೇವಾರ್ಯಗುರುವಾಗಿ ಕಾವೇರಿ ತೀರದಲಿಕರುಣದಿಂ ಪಾದುಕೆಗಳನಿತ್ತ ಭಾಗ್ಯವುಸ್ಥಿರವಾಗಿ ಭಕತಿ ಹೆಚ್ಚುವ ಸಮಯಾ ಸ್ವಾಮಿ 25 ಓಂ ಶಕಟಾಸುರಭಂಜನಾಯ ನಮಃ
--------------
ತಿಮ್ಮಪ್ಪದಾಸರು