ಒಟ್ಟು 6 ಕಡೆಗಳಲ್ಲಿ , 3 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂದ ಕೃಷ್ಣ ನೀನು ಪವಡಿಸಲೆಂದು ನಾ- ನೊಂದು ಕಥೆಯ ಪೇಳ್ವೆನೋ ನಂದನನೇ ಒಂದು ಕಥೆಯ ಪೇಳ್ವೆನು ಪ ಹಿಂದಿನ ಯುಗದಲ್ಲಿ ಶ್ರೀರಾಮನೆಂಬೊರ್ವ ಕಂದ ಕೌಸಲ್ಯಗಾದ ಮುಂದೆ ಪೇಳು ಹುಂಕಾರದಿ ಕೇಳಿದೆ ಚಂದವಾದೀ ಕಥೆಯ ಸುಧೇಯ 1 ಆತನ ಪತ್ನಿ ಸುಶೀಲೆ ಸೀತೆಯೆಂದು ಖ್ಯಾತಳಾದಳು ಜಗದಿ ಮೂಡಿದನೆಂದೆ ಹುಂ ಮಾತೆ ಮುಂದಕೆ ಪೇಳು ಸೀತಾರಾಮರ ಕಥೆಯು ಸುಶ್ರಾವ್ಯ 2 ಪಂಚವಟಿಯಲಿ ಸಂಚರಿಸುತ್ತಿರೆ ಪಂಚದ್ವಯಾನನನು ಕೊಂಚ ಮಾತ್ರ ಹುಂಕಾರವ ನುಡಿ ವಿ- ರಿಂಚಿ ಪಿತನು ಮುನಿದಾ ಸದ್ದಾದ3 ಮಿಥ್ಯಾಯೋಗಿ ಯಾಗಿ ಸತ್ಯಮಹಿಮಳ ತಾ- ನೆತ್ತಿ ಕೊಂಡೋದನಯ್ಯ ಒತ್ತರಿಸಿತು ಕೋಪ ಮತ್ತೆ ನುಡಿದ ಹರಿ ಎತ್ತ ಸೌಮಿತ್ರೆ ಧನುರ್‍ಧರರ ಧನುರೇತ್ತ ಸೌಮಿತ್ರಿ ಧನುರ್ 4 ಪುಟ್ಟ ಕೂಸÉ ಆರ್ಭಟವೆಷ್ಟು ಮಾಡುವೆ ನಿಟ್ಟಿಪುದಸದಳವು ಥsÀಟ್ಟನೆ ಮಲಗೈಯ್ಯಾ ದಿಟ್ಟಿ ನರಸಿಂಹವಿಠಲ ಪಟ್ಟರಿಸುವೆನಯ್ಯ ರಂಗೈಯ್ಯಾ ಪಟ್ಟರಿಸುವೆನಯ್ಯಾ 5
--------------
ನರಸಿಂಹವಿಠಲರು
ಕಲಶಾಬ್ಧಿಜಾತೆ ಸೀತೆಗಾರತಿಯನು ಬೆಳಗಿರೆ ಲಲನಾಮಣಿಯ ಸಾರಿ ನುತಿಸಿ ನಲಿದು ಪಾಡಿರೆ ಪ. ಸರಸಿಜಾಸನಾದಿ ವಿನುತೆ ಸುರವರಾರ್ಚಿತೆ ಶರದಿಂದುಹಾಸೆ ಧರಣಿಜಾತೆ ಕರುಣಿಸೆನ್ನುತೆ 1 ಕಮಲನಯನೆ ಕಮಲವದನೆ ಕಮಲವಾಸಿನಿ ವಿಮಲಚರಣೆ ರಮಾರಮಣಿ ಮಧುರಭಾಷಿಣಿ 2 ಶೇಷಶೈಲವಾಸದಯಿತೆ ವಿಶ್ವಸನ್ನುತೆ ಪೋಷಿಸೆಮ್ಮ ಪ್ರಾಣದಾತೆ ಸೀತೆಯೆನ್ನುತ 3
--------------
ನಂಜನಗೂಡು ತಿರುಮಲಾಂಬಾ
ಕಲಶಾಬ್ಧಿಜಾತೆ ಸೀತೆಗಾರತಿಯನು ಬೆಳಗುವೆ ಲಲನಾಮಣಿಯ ಸೇರಿ ಸುಖಿಸಿ ನಲಿದು ಪಾಡುವೆ ಪ ಸರಸಿಜಾಸನಾದಿವಿನುತೆ, ಸುರವರಾರ್ಚಿತೆ ಶರದಿಂದುಹಾಸೆÉ ಧರಣಿಜಾತೆ ಕರುಣಿಸೆನ್ನುತೆ 1 ಕಮಲವದನೆ ಕಮಲನಯನೆ ಕಮಲವಾಸಿನೀ ವಿಮಲಚರಣೆ ರಾಮರಮಣಿ ಮಧುರಭಾಷಿಣಿ 2 ಶೇಷಶೈಲಾವಾಸದಯಿತೆ ವಿಶ್ವಸನ್ನುತೆ ಪೋಷಿಸೆನ್ನ ಜನಕಜಾತೆ ಸೀತೆಯೆನ್ನುತೆ 3
--------------
ನಂಜನಗೂಡು ತಿರುಮಲಾಂಬಾ
ಕಾಮಿನೀಮಣಿ ರಾಮಭಾಮಿನಿ ಪ ಸೋಮಬಿಂಬ ವದನೆಯೆ ಸೀತೆಯೆ ಅ.ಪ. ಪಾವಮಾನಿ ಮನೋವಾರಿಜಾಶ್ರಿತೆ ದೇವತಾವಳೀ ದೇವಸನ್ನುತೆ ದೇವಬೃಂದ ವಂದಿತೆ ಸನ್ನುತೆ 1 ಭಕ್ತವತ್ಸಲೆಯೆ ಶಕ್ತಿರೂಪೆಯೆ ಮಾರ್ಗವಿಶದೆಯೆ ಮಾತೆಯೆ 2 ವರಧೇನುಪುರಿ ಪರಮೇಶ್ವರಿ ವರದಾಯಿನಿ ವರಲೋಕಪಾಲೆ ಕರುಣಾಕರೆ ವರರಾಮ ಜಾಯೆ ಪರಿಪಾಲಿತಾಶ್ರಿತೆ ಸುರನುತೆ 3
--------------
ಬೇಟೆರಾಯ ದೀಕ್ಷಿತರು
ಕುಸುಮ ಗಂಧಿನಿ ಸೀತೆಯೆ ಪ ಮಂಜೀರ ಭೂಷೆಯೆ ಮಂಜುಸುವಾಣಿಯೆ ಕಂಜನಾಭ ರಾಮ ಭಾಮೆಯೆ ಮಂಜುಳಾಂಗಿಯೆ 1 ಅಂಬುಜಪಾಣಿಯೆ ಅಂಬುಜನಾಭಿಯೆ ಬಿಂಬಫಲ ಸದೃಶಾನನೆ ಕಂಬುಕಂಧರೆ 2 ಕ್ಷೋಣೀಷ ಸನ್ನುತೆ ವಾಣೀಶ ವಂದಿತೆ ಏಣ ನೇತ್ರೆ ಶ್ರೀರಾಮ ಸುಪ್ರಾಣನಾಯಕಿ 3 ಸುರರಚಿರ ಕುಂತಲೆ ಪರಿಜನ ವತ್ಸಲೆ ನಿರುಪಮ ವಾಣಿಸುನ್ನುತೆ ಪ್ರಣವಾಂಚಿತೆ 4 ಮಾನವ ಸೇವ್ಯಯೆ ಧೇನುಪುರಿಕಾಂತ ಸುಪ್ರಿಯೆ ರಾಮವಲ್ಲಭ 5
--------------
ಬೇಟೆರಾಯ ದೀಕ್ಷಿತರು
ಶ್ಯಾಮಸುಂದರಿ ಭೂಮಿನಂದಿನಿ ರಾಮಸುಂದರಿ ಸೀತೆಯೆ ಪ ಪ್ರೇಮದಿಂದ ದಿವ್ಯ ಪೀಠಕೆ ಭಾಮಿನಿಯೆ ಬಾ ಪ್ರಿಯೆ ಅ.ಪ. ದೇವ ಸುಂದರಿಯರು ಸೇರಿ ದೇವಿ ನಿನ್ನ ಕರೆವರು ದೇವ ವೃಂದವು ನಿನ್ನ ಸ್ಮರಿಸಿ ಭಾವಿಸುತ್ತಲಿರುವರು 1 ಮಂದಗಮನೆ ಸುಂದರಾಂಗಿ ಮಂದಹಾಸ ಶೋಭಿತೆ ಚಂದ್ರಬಿಂಬ ಸದೃಶವದನೆ ಚಂದ್ರವಂಶ ನಂದಿನಿ 2 ಭ್ರಮರ ವೇಣಿ ಸುಮ ಸುಮಾಲಿ ಕಾಯುತೆ ವಿಮಲ ವಾಣಿ ರಮಣಿ ತರುಣಿ, ಸುಮನ ಕೀರವಾಣಿಯೆ 3 ಮಾನಿನಿ ಶಿರೋಮಣಿಯೆ ಧೇನುನಗರ ವಲ್ಲಭೆ ಜಾನಕಿಯೆ ಸನ್ನುತೆಯೆ ಮೌನಿ ಬೃಂದವಂದಿತೆ4
--------------
ಬೇಟೆರಾಯ ದೀಕ್ಷಿತರು