ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳು ಮಾರುತಿ ಎಂದೆಬ್ಬಿಸಿದಳಂಜನೆಯು ಪ. ಶ್ರೀರಾಮರ ಸೇ[ವೆ]ಗೆ ಹೊತ್ತಾಯಿತೇಳೆಂದುಅ.ಪ. ಸೇತುವೆಯ ಕಟ್ಟಬೇಕು ಸಮುದ್ರವನೆ ದಾಟಬೇಕುಸೀತೆಗುಂಗುರವನ್ನು ಕೊಡಲಿಬೇಕುಪಾತಕಿ ರಾವಣನ ವನವ ಕೀಳಬೇಕುಸೀತೆಯನು ರಾಮರಿಗೆ ಒಪ್ಪಿಸಲಿಬೇಕು 1 ನಿಂತು ಮಾಡಲಿಬೇಕು ಅಜ್ಞಾತವಾಸವನುಅಂತು ಕೀಚಕರನ್ನ ಸವುರಬೇಕುಕಂತುಪಿತನಾಜ್ಞದಿಂ ಕೊಲ್ಲಬೇಕು ಕೌರವರಕುಂತಿ ಸುತನು ಎಂದೆನಿಸಬೇಕಯ್ಯ 2 ಮಧ್ವರಾಯರು ಎಂದು ಪ್ರಸಿದ್ಧರಾಗಲಿ ಬೇಕುಅದ್ವೈತಮತವನು ಗೆದ್ದು ಮುರಿಯಲಿ ಬೇಕುಶುದ್ಧಮಾಡಲಿ ಬೇಕು ಸಕಲ ಶಾಸ್ತ್ರಗಳನೆಲ್ಲಮುದ್ದು ಹಯವದನನ ದಾಸನೆನಿಸಬೇಕು 3
--------------
ವಾದಿರಾಜ
ಕಾಯೋ ಪ್ರಾಣೇಶ ಕೀಶಕುಲೇಶ ವಾಯುಸುತನೆಂದು ಮೆರೆವ ಜೀವೇಶ ಪ ಅಂಜನಾದೇವಿಯೊಳ್ ಜನಿಸಿಕೊಂಡಿರುವಿ ಅಂಜದೆ ಲಂಕೆಗೆ ಬೆಂಕಿ ಹಚ್ಚಿರುವಿ ಸಂಜೀವನವ ತಂದು ಕಪಿಗಳನುಳಿಸಿದಿ ಕಂಜಾಕ್ಷಿ ಸೀತೆಗುಂಗುರವ ತಂದಿತ್ತೆ 1 ಕುಂತಿದೇವಿಯ ಗರ್ಭದೊಳಗುದ್ಭವಿಸಿದಿ ಪಾರ್ಥರೊಳ್ನೀನಗ್ರಗಣ್ಯನೆಂದೆನಿಸಿ ಪಂಥದಿ ಮಗದಾಧಿಪತಿಯ ಸಂಹರಿಸಿ ಕಾಂತೆಯ ತಲೆಯ ಕೂದಲನೆ ಕಟ್ಟಿಸಿದಿ2 ಪಾಜಕ ಕ್ಷೇತ್ರದೊಳ್ ನೀನವತರಿಸಿ ರಾಜತಾಸನದಿ ಶ್ರೀಕೃಷ್ಣನನಿರಿಸಿ ರಾಜೇಶ ಹಯಮುಖ ಕಿಂಕರನೆನಿಸೀ ಮೂಜಗದಲಿ ಶ್ರೇಷ್ಠಗುರು ನೀನೆಂದೆನಿಸಿ 3
--------------
ವಿಶ್ವೇಂದ್ರತೀರ್ಥ
ನಿಖಿಳ ಗುಣಪೂರ್ಣ ಪ ಭಾರತೀಶ ಸಕಲಪ್ರಾಣಿಗಳ ಹೃದಯಾಬ್ಜ ವಾಸ ಸುರೇಶಅ.ಪ ವಾತಸುತನಾಗಿ ರಘುನಾಥ ಪ್ರಿಯ ದೂತ ಬಲುಯೂಥ ಲಂಕೆಯ ಪೊಕ್ಕು ಖ್ಯಾತಿಯನು ಪಡೆದೆಸೀತೆಗುಂಗುರವಿತ್ತು ವೀತಿಹೋತ್ರಗೆ ಪುರವಪ್ರೀತೆನಿಸಿದಾತ ದಿತಿಜಾತರಿಗೆ ಭೀತಿಕರ 1 ಲಂಡ ಕೀಚಕ ಬಕರ ಮಂಡೆಯನು ಒಡೆದು ಉ-ದ್ದಂಡ ಮಗಧಾಧಿಪನ ದಂಡವನು ಸೀಳಿಭಂಡ ಕೌರವರ ಶಿರ ಚೆಂಡಾಡಿ ಪ್ರಬಲ ರಣ-ಮಂಡಲದಿ ಚಂಡರಿಪು ದಂಡೆಗಳ ಖಂಡಿಸಿದೆ 2 ಭೃಂಗ ಮೂಜ್ಜಗದೊಳಗೆತುಂಗ ಭವಭಂಗ ದಯಾಪಾಂಗ ಯತಿಪುಂಗವನೆ3
--------------
ವ್ಯಾಸರಾಯರು
ಪಾದ ಸರೋಜಯುಗಳವ ನೆರೆ ನಂಬಿದೆ ಜೀಯ್ಯ ಪ ತಿಮಿರ ಕಾನನ ಯತಿವರ್ಯ ಮಹಾಶೌರ್ಯ ಮೇರು ಸಮ ಧೈರ್ಯ ತ್ರಿವಿಧ ಜೀವರಿಗೆ ಆಚಾರ್ಯ ಅ.ಪ ರಾಮದೂತಾನಾಗಿ ಸೀತೆಗುಂಗುರವಿತ್ತೆ ಕಲಿಯುಗದಿ ಭೂಸುರಕುಲದಿ ಪುಟ್ಟಿ ನೀ ಮೆರೆದಿ ಆರ್ತಜನ ಕೃಪಾಶರಧಿ 1 ಅನುಸಂಧಾನ ಪೂರ್ವಕ ಕೊಡು ವಿಜ್ಞಾನ 2 ಮೂರವತಾರದಿ ಶ್ರೀರಾಮ ಕೃಷ್ಣ ವ್ಯಾಸ- ರಾರಾಧಿಸಿ ಗೈದ ಧೀರ ಶಿಖಾಮಣಿ ಭವ ಭಯನಾಶ ಕೊಡುವುದು ಲೇಸಾ ಗುರುರಾಮವಿಠಲನದಾಸ 3
--------------
ಗುರುರಾಮವಿಠಲ
ಭೀಮನೆಂಬುವಂಗೆ ಯಾತರ ಭಯವಿಲ್ಲ ಭೀಮರಾಯ ಪ ಕಾಮಿತ ಫಲಗಳ ಕೊಟ್ಟು ನೀ ಸಲಹಯ್ಯ ಭೀಮರಾಯಅ ಅಗಣಿತ ಬಲವಂತ ಭೀಮರಾಯಕಂಜನಾಭನ ದೂತ ಕರುಣಿಸೊ ಬಲವಂತ ಭೀಮರಾಯ 1 ಕಟ್ಟಿದ ಪೂಮಾಲೆ ಕಸ್ತೂರಿ ನಾಮದ ಭೀಮರಾಯ - ಪೊಂಬಟ್ಟೆ ಪೀತಾಂಬರವನುಟ್ಟು ಮೆರೆವಂಥ ಭೀಮರಾಯ2 ವಾರಿಧಿಯನು ದಾಟಿ ಸೀತೆಗುಂಗುರವಿತ್ತ ಭೀಮರಾಯಸೂರಿವೆಗ್ಗಳತನ ಕಿತ್ತು ಈಡಾಡಿದ ಭೀಮರಾಯ3 ರಾಮರಾಯರಿಗೆ ನೀ ಪ್ರೇಮದ ಬಂಟನು ಭೀಮರಾಯಕಾಮಿತ ಫಲವಿತ್ತು ಕರುಣದಿ ಸಲಹಯ್ಯ ಭೀಮರಾಯ 4 ಛಪ್ಪನ್ನ ದೇಶಕ್ಕೆ ಒಪ್ಪುವ ಕಾಗಿನೆಲೆಯ ಭೀಮರಾಯತಪ್ಪದೆ ಕನಕಗೆ ವರಗಳ ಕೊಡುವಂಥ ಭೀಮರಾಯ 5
--------------
ಕನಕದಾಸ
ಜಯಭಾರತೀಶಜಯ ಜಯಭಾರತೀಶಜಯಜಯಭಾರತೀಶಜಯತುಜಯ ರಾಘವಾಂಘ್ರಿಪಾದಕಮಲಭೃಂಗನೆ ನಮಿಪೆಜಯಭಾರತೀಶಜಯತುಪಜಯಭಾರತೀಶಜಯಜಯ ಭೀಮ ಹನುಮನೆಭಯವ ಪರಿಹರಿಸಿ ಪೊರೆಯೈಜಯ ಮಧ್ವಮುನಿರಾಯಗುರುಮಧ್ವಮುನಿರಾಯಗುರುವೆ ಪಾಲಿಸು ಜಯ ಜಯ ಅ.ಪತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆಂದುಸೀತೆಗುಂಗುರವನಿತ್ತುಮಾತೆಯಾಜೆÕಯ ಕೊಂಡುಘಾತಿಸಿದೆ ರಕ್ಕಸರದೂತ ರಾವಣನ ಕಂಡುಭೀತಿಯಿಲ್ಲದೆ ಜನಕ-ಜಾತೆಯಳ ಕಳುಹೆನಲುಆತ ಕೋಪದಿಂದಲಿ ತನ್ನದೂತರಿಂದಲಿ ವಾಲ-ವಗ್ನಿಯಲಿ ದಹಿಸಿರೆನೆಆ ಪುರವ ದಹಿಸಿ ಮೆರೆದೆ 1ದ್ವಾಪರದಿ ಶ್ರೀಕೃಷ್ಣನಂಘ್ರಿ ಸೇವಕನಾಗಿಪಾಪಿ ಜರೆಸುತನ ಸೀಳಿದ್ರೌಪದಿಯ ನುಡಿಕೇಳಿಪಾಪಿ ಕೀಚಕನನ್ನುಕೋಪದಿಂ ಕೊಂದ ಮಹಿಮಾಪಾಪಿ ದುರ್ಯೋಧನಾದಿಗಳ ಸಂಗಡ ಕಾದಿಸೋತು ಓಡಲು ದುರುಳನುನೀತಿ ಬಿಡದಲೆ ಗದೆಯಏಟಿನಿಂದವನ ತೊಡೆಘಾತಿಸುತಲವನನಳಿದೆ 2ಮಧ್ವಮತದವರನುದ್ಧರಿಸ ಬೇಕೆಂದೆನುತಮಧ್ಯಗೇಹರಲಿ ಜನಿಸಿಶುದ್ಧ ಶಾಸ್ತ್ರಗಳನುದ್ಧರಿಸುತ ಜಗದೊಳಗೆ ಪ್ರ-ಸಿದ್ಧನೆಂದೆನಿಸಿ ಮೆರೆದೆಮುದ್ದು ಕೃಷ್ಣನ ಪೂಜೆಶ್ರದ್ಧೆ ಬಿಡದಲೆ ಮಾಡಿಉದ್ಧರಿಸಿ ಸಜ್ಜನರನುಮುದ್ದು ಕಮಲನಾಭ-ವಿಠ್ಠಲಗರ್ಪಿತವೆಂದೆಮಧ್ವಮುನಿರಾಯ ಜಯತು 3
--------------
ನಿಡಗುರುಕಿ ಜೀವೂಬಾಯಿ
ಭಾರತೀರಮಣ ನಂಬಿದೆ ಪಾದವಾರಿಜಾಕರುಣಾ ವಾರಿಧೆ ಯನ್ನನು |ದೂರ ನೋಡದೆ ನಿನ್ನ ಸಾರೆಗರೆದುಭಯ ನಿವಾರಿಸಿ ಸಲಹೋ ಪನೀಲಲೋಹಿತನ ಪಿತನೇ ಗೋಪಾಲನ ಸುತಾ |ಕಾಳಕೂಟ ಪಾನಿ ವಿಶಾಲಾಂಬಕಾ ಮಾರರಿಂದ ||ವೇಳೆ ವೇಳೆಗಳಲ್ಲಿ ವೋಲಗವ ಕೈಕೊಂಬುವ |ಕಾಳೀವಲ್ಲಭಭೇಶಭಾಸ್ಕರರೋಲು ಸನ್ನಿಭ ||ಈ ಲೌಕಿಕ ನರರಾಲಯ ಕಾಯಿಸದೆ |ವಾಲಯ ಸುಮತಿಯ ಪಾಲಿಪುದೊಲಿದು 1ಜಾನಕೀಪತಿ ಸೇವೆ ಮಾಡಿದೈ ಕಾಣೆನೋಪ್ರತಿ|ಯಾ ನಿನಗಾರಾರಾ ಭುವನದೊಳಗೆ ಗಂಧವಹನೆ ||ಮುದ್ರಿಯ ಕೊಂಡು ಕ್ಷಣದೊಳಗೆ ಜಲಧಿಯನ್ನೆ ಹಾರಿದೆ |ಸೀತೆಗುಂಗುರವನ್ನೆ ತೋರಿದೆ ||ಆ ನಗರವನು ದಹನಗೈಸಿ ಬಹು |ದಾನವರನಳಿದು ದಶಾನನನೊದ್ದೆ 2ಪಾಪದೂರನೆ ವೃಕೋದರ ಶ್ರೀ ದ್ರೌಪದೀಶನೇ |ವಿಪಿನಚರಿಸಿ ಕುರುಪತಿಯ ತರಿದು ||ಕ್ಷಿತಿಪರನ್ನು ಬಿಡಿಸಿದೆಯೈ ಪಾಂಡವರ (ಪರಿ) ಪಾಲಕ |ಕೋಪನಾಶನ ಉದ್ಧರಿಸೆನ್ನ ಚಾಪಭಂಜನ ||ಶ್ರೀಪತಿ ದ್ವಯ ಪದ ಆಪಜ ಭಜಿಸುವ |ನೇ ಪರಮೇಷ್ಠಿಯರೂಪಗುಣಾಢ್ಯ 3ದೇಶಿಕೋತ್ತಮ ಮಾರುತಿ ಇಂದಿರೇಶನ ಪ್ರೇಮ |ಸಂಪಾದಿಸಿಕೊಂಡತಿಶಯ ಭಕುತಿಯಿಂದಲೀ ಸಮೀಚೀನವಾಗಿ ||ತ್ರಿಂಶತಿ ಸಪ್ತ ಸಂಖ್ಯಾ ದರುಶನ ಗ್ರಂಥ ವಿರಚಿಸಿ ದು |ರ್ಭಾಷ್ಯವ ಸಂತರಾ ಸಲಹುವರನಾಭಾಸ ಮಾಡಿದೆ ||ವ್ಯಾಸಭಜಕ ನಿನ್ನ ದಾಸನೆನಿಸಿಕೊಳ್ಳೋ4ಅಂಜನಾಸುತ ಪ್ರಾಣೇಶ ವಿಠಲನೆಂಜಲನೊಯ್ಯುತ |ಭುಂಜಿಸಿದಿಯಲೊನಿರಂಜನಕಪಿ ಪ್ರ- ||ಭಂಜನಕೊಡು ಕೃತಾಂಜಲಿಯಿಂ ಬೇಡುವೆ |ಕಂಜನಾಭನ ಸ್ಮರಣೆ ದಿವಾ ಸಂಜೆಯಲಿಘನ||ಪುಂಜ ಸುಗುಣಮಣಿ ಮಂಜರಿ ಅರ್ಥ ಪ- |ರಂಜಳ ತಿಳಿಸೋ ಧನಂಜಯ ರಕ್ಷ 5
--------------
ಪ್ರಾಣೇಶದಾಸರು