ಒಟ್ಟು 6 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಸುದೇವಸುತನಿಗೆ ನಮೋ ನಮೋ ನಮ್ಮ ವಸುಧೆ ಪಾಲಕನಿಗೆ ನಮೋ ನಮೋ ಪ ಮಚ್ಚಾವತಾರಗೆ ಮೊದಲೆ ಮಂಗಳವೆಂದು ಸಾಕ್ಷಾತ ಕೂರ್ಮಗೆ ನಮೋ ನಮೋ ಸುತ್ತಿ ಸುರುಳಿ ಭೂಮಿ ಒಯ್ದಿ ್ಹರಣ್ಯಾಕ್ಷಕನ ವರಾಹ ನಮೋ ನಮೋ1 ಕೂಸು ಕರೆಯೆ ಕಂಬದಿಂದ ಬಂದ್ಹಿರಣ್ಯ- ಕಶ್ಯಪನ ಕೊಂದ್ಹರಿಗೆ ನಮೋ ನಮೋ ಆಕಾಶವ್ಹಿಡಿಯದೆ ಬೆಳದು ಬಲಿಯ ಭಾಗ್ಯ ಆಕ್ರಮಿಸಿದಾತಗೆ ನಮೋ ನಮೋ 2 ಪೊತ್ತು ಕೊಡಲಿ ಕ್ಷತ್ರಿಯರ ಕಡಿದ ಸ- ಮರ್ಥ ಭಾರ್ಗವ ನಮೋ ನಮೋ ಹತ್ತು ಶಿರಗಳ ಕೊಂದು ಸೀತಾಸಮೇತನಾದ ಪೃಥಿವಿ ಪಾಲಕ ರಾಮ ನಮೋ ನಮೋ 3 ಬೆರಳಲಿ ಗೋವರ್ಧನ ಎತ್ತ್ಯಾಕಳಕಾಯ್ದ ಕೊಳಲನೂದುವ ಕೃಷ್ಣ ನಮೋ ನಮೋ ತರಳರೂಪದಿ ತ್ರಿಪುರದ ದುರುಳರನೆಲ್ಲ ಮರುಳು ಮಾಡಿದ ಬೌದ್ಧ ನಮೋ ನಮೋ 4 ಮುದ್ದು ತೇಜಿಯನೇರಿ ಕಲಿಗಳ ಕಡಿದಂಥ ಕಲ್ಕ್ಯಾವತಾರಗೆ ನಮೋ ನಮೋ ಶುದ್ಧ ವೈಷ್ಣವರಿಗೆ ಸುಲಭದಿಂದೊಲಿದು ಮುಕ್ತಿ ಕೊಡುವೊ ಭೀಮೇಶ ಕೃಷ್ಣಗೆ ನಮೋ ನಮೋ 5
--------------
ಹರಪನಹಳ್ಳಿಭೀಮವ್ವ
ದಶಾವತಾರ ಭವ ದೀನಾತ್ಮ ಜನಗಳಿಗೆ ಜ್ಞಾನಾರ್ಥವಾಗಿ ನದಿಯೋಳ್‍ಸ್ನಾನಾರ್ಥ ಮುಣಗಿರುವ ಶೋಣೀತ ಸತ್ಯವೃತ ಪಾಣೀಲಿ ಬಂದು ಭರದೀಮಾನವರಂತೆ ಮೃದು ವಾಣೀಲಿ ತನಗೆ ಭೂಸ್ಥಾನವಾಬೇಡಿ ಬೆಳೆದೂಪಾನೀಯ ಪಾತ್ರಸ್ವ ವಿಷಾಣಾದಿ ಧರಿಸಿ ರವಿ ಸೂನುನ ಮಾಡಿಹನು 1 ವೃಂದಾರಕಾರು ಬಲ ವೃಂದಾವ ಕೂಡಿ ಗಿರಿಯಿಂದಾಲೆ ಕ್ಷೀರಧಿಯನೂವಂದಾಗಿ ಮಥಿಸುತಿರೆ ಸಿಂಧೂವಿನೋಳ್ ಜರಿದು ಪೊಂದೀತು ತತ್ತಳವನೂಮಂದಾತ್ಮರಾದುಭಯ ಮಂದೀಯ ನೋಡಿ ಬೆನ್ನಿಂದಾಲೆಯೆತ್ತಿ ಸುಧೆಯಾತಂದ್ಯೋರು ರೂಪನಮರಿಂದ್ರಾರಿಗಿತ್ತು ದಿತಿಜೇಂದ್ರಾರಮೋಹಿಸಿದನು 2 ಕ್ಷೋಣೀಶ ಕ್ಷೋಣೀಯನೆತ್ತಿ ಪಥಿ ದಾನಾವತಡಿಯುತಿರಲೂನಾಸವಾತ್ಮನವನ್ಹಾನೀಯ ಮಾಡಿ ನಿಜ ಸೂನೂಗೆಒಪ್ಪಿಸಿದನುಣೇಶ ಜಾತ ನಿಜಮಾನಿನೀ ಸಹಿತ ಸಂಸ್ಥಾನಾದಿ ಕೂತುಸುಖದೀತಾನವರಾನ ಪಡಿಸಿದಾನಂದ ಭೋಗಿಸಲು ತಾ ನೋಡಿಮೋದಿಸಿದನು 3 ಶುಭ ಭರಾತೀಯ ತತ್ಸುತಗೆ ಪ್ರೀತೀಲಿಪಾಲಿಸಿದನೂ 4 ದುಷ್ಟಾತ್ಮರಿಂದ ಬಹು ದುಷ್ಟಾತ್ಮರಾಗಿ ಸುರರಿಷ್ಟಾವ ಸ್ವರ್ಗ ಸುಖವಾಬಿಟ್ಟಾವನಲ್ಲ ನಿಜ ಪೊಟ್ಟೀಯಗೋಸುಗದಿ ಕಷ್ಟಾದಿಸಂಚರಿಸಲೂದೃಷ್ಟಿಂದ ಕಂಡದಿತಿ ತುಷ್ಟೀಸುತಿರಲವಳ ಪೊಟ್ಟೀಯೊಳವತರಿಸಲೂಪುಟ್ಟಾತ್ಮ ಬಲಿಗೆ ಸುತಲಿಷ್ಟಾವ ನೀಡಿ ಸುರರಿಷ್ಟಾವಪಾಲಿಸಿದನೂ 5 ಭೂತೇಶನೊಬ್ಬ ತನ ತಾತಾನ ಕೊಂದುನವ ಮಾತೇಯನಪಹರಿಸಲೂಭೀತೀಲಿ ತಾಯಿಯುರ ಘಾತಕ್ಕ ಸದೃಶ ಭುವಿ ಧಾತ್ರೀಶದುಷ್ಕಲವನೂಘಾತೀಶಿ ಪೂರ್ವಜರ ಪ್ರೀತೀಯ ಪಡೆದು ಮುನಿ ಪೋತಾನ ರಕ್ಷಿಸುತಲೇಪಾಥೋದಿ ತಟದಿ ರಘುನಾಥೇಷ್ಟದಾತ ನಿಜ ಶಾಪಾವಭೋಗಿಸುವನೂ6 ತಾಪ ರಘುನಾಥಾನುನೋಡಿ ವಿಥಿಲಾಜಾತಾಸಮೇತ ಸಹಜಾತಾನ ಕೂಡಿ ವನಜಾತಾದಿಸಂಚರಿಸುತಾಘಾತೀಸಿ ರಾಕ್ಷಸರ ಪ್ರಿಯನಿತ್ತು ಮುನಿಪಾತ್ಮರಿಗೆಲ್ಲ ಪುರದೀಸೀತಾಸಮೇತ ಕಪಿ ಪೋತಾನ ಕೂಡಿ ನಿಜ ಭೂತಿಯಭೋಗಿಸಿದನು 7 ಕಾರಾಳಯಾದಿ ನಿಜ ನಾರೀಯ ಕೂಡುತಲೆಶೂರಾತ್ಮಜಾತನಿರಲೂನಾರಾಯಣಾತ್ಮತನು ತೋರೀಸಿ ಬಾಲವಪುಗೋರಾಜನಾಲಯದಲೀಶೀರೀಯ ಕೂಡಿ ಸುರವೈರಿಗಳಳಿದು ನದಿ ತೀರಾದಿಕೊಳಲನೂದಿನಾರೇರಿಗೆಲ್ಲ ನಿಜ ಜಾರಾಟ ಸೌಖ್ಯವನು ತೋರೀಸಿತೋಷಿಸಿದನು 8 ವೃಷ್ಣೀಯ ಮಧುರೆಯಲಿ ಪುಟ್ಟೂತ ಗಾರ್ಗಸುತನಟ್ಟೂಳಿಗಾಗಿಜಲದೀಪಟ್ಟಣ ನಿರ್ಮಿಸುತಲಿಷ್ಟಾಪ್ತ ಜನರುಗಳ ನಿಟ್ಟಲ್ಲೆ ಪಾಲಿಸಿದನುಸೃಷ್ಟೀಶಮಕ್ಕಳನು ಮುಟ್ಟೂತ ಕರದಿ ತದಭಿಷ್ಟಾರ್ಥಗಳನುಸುರಿದೂತೃಷ್ಣೇಶ ಪಾಂಡವರ ಕಷ್ಟಾವ ಕಳಿದು ಗಜಪಟ್ಟಣವಸಾಧಿಸಿದನು 9 ಪಾರ್ಥಾರ ಶಾಲೆಯೊಳು ಪೂತಾತ್ಮರಿಂದ ಹರಿ ಭೂತೀಶುಕೇಳಿ ಮನದೀಪ್ರಾತಃ ಸಮಾರಭಿಸಿ ರಾತ್ರೀಯತನಕ ಹರಿ ಮೂರ್ತೀಯಪೂಜಿಸುತಿಹಾದೈತ್ಯಾರ ನೋಡಿ ಸುರನಾಥರ ಜಯಿಸಿ ಜಿನ ಪೋತಾತ್ಮ ಮಲಗಿ ತೊಡಿಯೋಳ್‍ಶಾಸ್ತ್ರಾವ ಬೋಧಿಶ್ಚವರಾತ್ಮಾವ ಕೆಡಿಸಿ ಸುರವೈತಾವತೋಷಿಸಿದನೂ10 ಶುಭ ಸತಿ ಮಿಷ್ಟಾತ್ಮಹಯವ ಮಾಡಿಅಷ್ಟಾಷ್ಟ ಖಡ್ಗವನು ಮುಷ್ಟೀಲಿ ಪಿಡಿದು ಬಹು ಶಿಟ್ಟೀಲಿಸುತ್ಲೆ ಚರಿಸೀವಿಪ್ಲವಾತ್ಮಕ ಕಲ್ಕಿ ಖಳರ್ಹೊಟ್ಟೀಯವಡೆದು ಶುಭಪಾಲಿಸಿದನು11 ವೆಂಕಟನಾಥ ಭವಪರಿಕವ ಹರಿಸೂತ ಕಿಂಕರನಾಗಿರುವೆನೂಶಂಬಾಸುರೋದರಜ ಶಂಖಾವಪಿಡಿದು ಮುಖ ಪಂಕೇಜದಿಂದೂದುತಾಹುಂಕಾರ ಮಾಡುತಲೆ ಕಿಂಕಿರನೆಂದು ಭುವಿ ಸಂಕರ್ಷಣದಿಸುರರೂಶಂಕೀತರಾಗುತ ಭಯಂಕಾರವೆಂದು ಮಹಾತಂಕಾದಿಸಂಸ್ಮರಿಪರೂ 12 ದಂಷ್ಟ್ರೇಶ ಬ್ರಹ್ಮಾನಾಸಿ ಪುಟ್ಟೂತವಾರಿನಿಧಿ ಮೆಟ್ಟೂತಘರ್ಘವಿಸಲೂದೃಷ್ಟೀಲಿ ನೋಡಿ ಕಿವಿಗೊಟ್ಟಾಲಿಸೂತ ನಿಜಪೊಟ್ಟೀಯರಾಂತರದಲೀಯಷ್ಟೇನೊ ಸನ್ನಾವಿದು ಪುಟ್ಟೂತಲ್ಹಂದಿ ಮರಿಬೆಟ್ಟೇಶದಂತಿರುವದೂಧಿಷ್ಟ್ಯಾದಿ ಕೂತು ಪರಮೇಷ್ಠೀಯ ಮಹಿಮೆಯನು ತುಷ್ಟಿಸಿ ಪಾಡುತಿಹನು 13 ತರೂನ ಮೂಲದಿ ಕೂತು ಬೋರೆಯಾ ಹರಿಯ ಶಾಸ್ತ್ರವ ಪೇಳೆ ಮುನಿಪನ ಸ್ವರವ ಸ್ಮರಿಸಿರಿ ಮನುಜರೇ ಭವದರವು ಪೋಗುವದು 14 ಚಿಕ್ಕ ಹುಡುಗೆಯು ತನ್ನಾಗತ ಚಕ್ರದಲಿ ಬ್ರಹ್ಮಾಂಡ ಕಟಹವ ಟೊಕ್ಕ ವೆನಿಸುತ ಜೀವ ಸಂಸ್ಕಾರ ಮುಕ್ಕು ಮಾಡುವಳು ಮೋಘ ಸೌಖ್ಯ ನೀಡುವಳು 15 ಧ್ವಾನ ಮಾಡಲುಧರ್ಮರಾಜಗೆಮಾನವಾದಿಗಳೆಲ್ಲ ಮುಖಭವ ಶೋಣಿತಾಗುವದು 16 ತತ್ವ ದಿವಿಜರು ನಮ್ಮ ದೇಹದಿ ನಿತ್ಯದಲಿ ಹರಿಸ್ಮರಿಸಿ ತುತಿಸುತಸತ್ವ ದಿವಿಜರಿಗೆತ್ತುವೆನು ಕರವಾ17 ದುರಿತ ಹರಿಸುವನೂ 18 ಯಲ್ಲಿ ಬ್ರಹ್ಮಾಂಡದಲಿ ಶಿರಿ ವರವಲ್ಲಭವ ಸಂಸ್ಮರಿಸಿ ಹಿಗ್ಗುವಫುಲ್ಲನಾಭನ ಭಕ್ತರನು ಮನದಲ್ಲಿ ಸ್ಮರಿಸುವೆನೂ 19 ಶ್ರೀಶಾನು ಭಕ್ತಜನದಾಶೀಯ ಪೂರೈಸಲು ಕೂಸಾಗಿದೇವಕಿಸುತಾಯೇಷಾದಿಗಳ ದಿಶುಭರಾಶೀಲಿ ಪುಟ್ಟುತವನೀಶಾರ ವಂಶಬೆಳೆಸಿ 20 ದೋಷಾತ್ಮಾ ದೈತ್ಯಕುಲ ಘಾಶೀಶಿ ಭೂದೇವಿ ಕ್ಲೇಶಾವನೆಲ್ಲಕಳೆದೂ ದಾಶೀಜ ನಾಗಿ ನಿಜ ಕೋಶಾದಿ ಮೋಕ್ಷಾ ಪದಮೀರೇಶ ತೋರಿಸಿದನು ಇಂದಿರೇಶನ ಸಾಧಿಸಿದನು 21 ನಾರದರ್ಷಿಯ ಕರುಣದಲಿ ಶನಿವಾರ ಮಾಡೀದ ಪರಮತುತಿಯನುಭೂರಿ ಪಠಿಸಲು ಇಂದಿರೇಶನುದಾರ ನೋಡುವನು 22
--------------
ಇಂದಿರೇಶರು
ಮಂಗಳಂ ಶ್ರೀರಾಮಚಂದ್ರಗೆ ಜಯ ಮಂಗಳಂ ಸೀತಾಸಮೇತನಿಗೆ ಪ. ಮಚ್ಛಾವತಾರಗೆ ವೇದವ ತಂದಗೆ ಕೂರ್ಮರೂಪದಿ ಜಲದೊಳು ಪೊಕ್ಕವಗೆ ಹಿರಣ್ಯಾಕ್ಷಸುರನ ಗೆಲಿಯೆ ಬಂದು ಮೆಚ್ಚೆ ವರಹರೂಪ ತೋರಿದಗೆ 1 ಛತ್ರಿಯ ಪಿಡಿದು ಭರತ ನಿಂದಿರಲಾಗ ಶತ್ರುಘ್ನ ಚಾಮರವನು ಬೀಸಲು ಮತ್ತೆ ಲಕ್ಷ್ಮಣ ಮಡುದೆಲೆ ಕೊಡುತಿರಲಾಗಿ ವಿಸ್ತಾರ ವೈಭೋಗ ರಘುರಾಮಗೆ 2 ತಮ್ಮ ಲಕ್ಷ್ಮಣ ಸಹ ಒಲ್ಮೆಯಿಂದಲಿ ಬಂದ ನಮ್ಮ ಶ್ರೀರಘುರಾಮಚಂದ್ರನಿಗೆ ಸನ್ಮಾನದಲಿ ರಾಮ ಸಾಗರಶಯನಾಗೆ ಚೆನ್ನ ಚುಂಚನಕಟ್ಟೆಸ್ಥಿರವಾಸಿಗೆ 3 ಎಡದ ಕರದಿ ಬಿಲ್ಲು ಬಲದ ಕರದಿ ಬಾಣ ಕರದ ಕಮಲದೊಳಗಿಪ್ಪವನಿಗೆ ಸಿರಿ ಸೀತೆಯ ಧರಿಸಿದ ಚದುರ ಶ್ರೀ ಕಲ್ಯಾಣ ಚಂದ್ರನಿಗೆ 4 ಹರುಷದಿ ದೇವತೆಗಳಿಗೊರವಿತ್ತಗೆ ದುರುಳ ರಕ್ಕಸರ ಸಂಹರಿಸಿದಗೆ ಪರಮ ಭಕ್ತನಿಗೆ ಸ್ಥಿರರಾಜ್ಯವನೆ ಕೊಟ್ಟ ಹಯವದನಮೂರ್ತಿ ಎಂದೆನಿಸಿದಗೆ 5
--------------
ವಾದಿರಾಜ
ಕೂಡಲ ಮಾಣಿಕ್ಯ ಕ್ಷೇತ್ರಸ್ಥ ಭರತ ಪ್ರದ್ಯುಮ್ನ60ಶ್ರೀ ರಾಮಚಂದ್ರಾನುಜ ಭರತರಾಜಶರಣಾದೆ ತವಚರಣಯುಗಳ ತೋಯಜಕೆ ಪಉರು ಪರಾಕ್ರಮಿ ದುರ್ಗೆರಮಣ ಹರಿಚಕ್ರದಲಿಇರುವೆ ನೀ ತದ್ರೂಪದಲಿ ಸೇವಿಸುತಲಿಮಾರಶ್ರೀ ಕೃಷ್ಣಸುತ ಸ್ಕಂಧಾದಿರೂಪಿ ನೀಧೀರ ನಿನ್ನಲಿ ಕೃತೀಪತಿಯು ಪ್ರಜ್ವಲಿಪ 1ಉಡುಪಶೇಖರ ಕೊಟ್ಟ ವರಬಲದಿ ಪೌಲಸ್ತ್ಯಕಡು ಕಷ್ಟ ಕೊಡಲಾಗಸುರರುಮೊರೆಯಿಡಲುಕಡಲಶಯನನು ರಾಮ ಪ್ರಾದುರ್ಭವಿಸಲು ನೀನುಹೆಡೆರಾಜ ಅನಿರುದ್ಧಸಹ ಬಂದೆ ಬುವಿಯೊಳ್ 2ಕೇಕಯಕೆ ನೀ ಪೋಗೆ ಕೈಕೇಯಿ ವರದಿಂದರಾಕೇಂದುನಿಭಮುಖನು ನಿಷ್ಕಳ ಶ್ರೀರಾಮನನೂಕಲು ವನಕೆ ನೀ ಬಂದರಿತು ಧಿಕ್ಕರಿಸಿಏಕಾತ್ಮ ರಾಮನಲಿ ಪೋಗಿ ಬೇಡಿದೆಯೊ 3ಸ್ವೀಕರಿಸಿ ರಾಜ್ಯವಾಳೆಂದು ನೀ ಬೇಡಲುಅಖಿಲಾಂಡಕೋಟಿ ಬ್ರಹ್ಮಾಂಡಪತಿ ರಾಮನಾಕಿ ಭೂಸುರರೊಡೆಯ ಹದಿನಾಲ್ಕು ವರ್ಷಗಳುಆಗೆ ತಾ ಬರುವೆನು ಎಂದು ಪೇಳಿದನು 4ದೇವ ಶ್ರೀ ರಾಮನ ಸುಖಜ್ಞಾನಮಯಪಾದಸೇವಿಸಿ ಪ್ರೇಮಪ್ರವಾಹದಲಿ ನೀನುಬುವಿಯನು ಪವಿತ್ರ ಮಾಡುವ ಪಾದಪೀಠವನುನವವಿಧ ಭಕ್ತಿಯಲಿ ತಂದು ಪೂಜಿಸಿದೆ 5ನಂದಿಗ್ರಾಮದಲಿ ನೀ ತಪಶ್ಚರ್ಯದಲಿ ಇದ್ದುಬಂದಿಲ್ಲ ರಾಮನೆಂದಗ್ನಿ ಮುಖದಲಿ ನಿಲ್ಲೆಬಂದ ಇಕ್ಕೋ ಸ್ವಾಮಿ ರಾಮಚಂದ್ರನು ಎಂದಇಂದಿರೇಶನ ಪ್ರಥಮ ದೂತ ಶ್ರೀ ಹನುಮ 6ಅಖಿಲೇಶ ಸುಖಮಯನು ಶ್ರೀ ರಾಮಚಂದ್ರನುಸುಖ ಪೂರ್ಣ ಸೀತಾಸಮೇತ ಬರುವುದನುನೀಕೇಳಿಮುದದಲಿ1 ಮಾತೇರು ಶತ್ರುಘ್ನಭಕುತ ಪುರಜನ ಕೂಡ ಪೋದೆ ಕರೆತರಲು 7ಕಮಲೆ ಜಾನಕಿಪತಿಯ ಮೇಲೆ ಪೂಮಳೆ ಕರೆದುನಮಿಸೆ ನೀ ಭಕ್ತಿಯಲಿ ಕೃತಕೃತ್ಯ ಮನದಿಸ್ವಾಮಿ ರಾಮನು ನಿನ್ನಅಚಲಭಕ್ತಿಯ ಮೆಚ್ಚಿಪ್ರೇಮದಿಂದಲಿ ನಿನಗಾಲಿಂಗನವನಿತ್ತ 8ಸುರರ ನಗರೋಪಮವು ಸರೆಯೂ ತಟಿನಿಯಲ್ಲಿಇರುವುದು ಅಯೋಧ್ಯಾ ಆ ಪುರಿಜನರು ಎಲ್ಲಾಶ್ರೀರಾಮ ಸೀತಾಸಮೇತ ಪರಿವಾರ ಸಹಪುರಿಯೊಳು ಬರಲು ಆನಂದ ಹೊಂದಿದರು 9ಅಘದೂರ ಪೂರ್ಣಕಾಮನ ಮಂದಹಾಸವನುನರಜನರು ನೋಡಿ ಹಿಗ್ಗಿ ಘೋಷಿಸಲುಜಗಜ್ಜನ್ಮ ಸ್ಥಿತ್ಯಾದಿಕರ್ತ ಭೂಕಾಂತ ಶ್ರೀರಾಘವಗೆ ಮಾಡಿಸಿದೆ ರಾಜ್ಯಾಭಿಷೇಕ 10ಶ್ರೀ ರಾಮಭದ್ರನಿಗೆ ಯುವರಾಜನಾಗಿದ್ದುಭರತರಾಯನೆ ನೀನು ಸೇವೆ ಅರ್ಪಿಸಿದೆಸರಸಿಜೋದ್ಭವ ಲೋಕದಂತಾಯಿತೀ ಲೋಕವರವಿಷ್ಣು ಭಕ್ತಿಯು ಸೌಖ್ಯ ಎಲ್ಲೆಲ್ಲೂ11ಶರದಿಂದ ನೀನು ಗಂಧರ್ವರೂಪದಲಿದ್ದಮೂರು ಕೋಟಿ ಕ್ರೂರ ಅಸುರರನು ಕೊಂದೆಕರುಣಿಸಿ ನೀ ಎನ್ನ ಕಷ್ಟಗಳ ಪರಿಹರಿಸೊಶ್ರೀ ರಾಮಪ್ರಿಯ ಭರತ ಎನ್ನ ಗುರುಗಳ ರಾಜ 12ಶ್ರೀ ರಾಮ ಅವತಾರ ಕಾರ್ಯ ತಾ ಪೂರೈಸಿಸುರರುಮುನಿಗಣ ಮುಕ್ತಿಯೋಗ್ಯರ ಸಮೇತತೆರಳೆ ಸ್ವಧಾಮಕ್ಕೆ ಚಕ್ರ ನೀ ಚಕ್ರವನುಶ್ರೀರಾಮನಿಗೆ ದಕ್ಷಪಾಶ್ರ್ವದಲಿ ಪಿಡಿದೆ 13ಗರುಡಮೃಡಶೇಷಸ್ಥ ಭಾರತೀಪತಿ ಹೃಸ್ಥಪರಮಪೂರುಷ ಕೃತೀಪತಿಯು ಪ್ರದ್ಯುಮ್ನಹರಿರಾಮನಲಿ ಸದಾ ಭಕ್ತಿಭರಿತನೆ ಭರತವರನೀನು ಅಹಂಕಾರಿಕ ಪ್ರಾಣಾದ್ಯರಿಗೆ14ಸರಸಿಜಾಸನ ಪಿತ ಶ್ರೀ ಪ್ರಸನ್ನ ಶ್ರೀನಿವಾಸನವರಭಕ್ತ ವೃಂದ ಶಿರಮಾಣಿಕ್ಯ ಭರತಧರೆಯೊಳುತ್ತಮ ಕೂಡಲ್ ಮಾಣಿಕ್ಕವೆಂಬುವಕ್ಷೇತ್ರದಲಿ ನಿಂತು ಹರಿಭಕ್ತರನು ಪೊರೆವೆ 15
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಸನ್ನ ಶ್ರೀ ಜಯರಾಮಚಂದ್ರ ಸ್ತೋತ್ರ143ಬಿಸಜನಯನನೆ ಇವಗೆ ಒಲಿಯೋ ದಯದಿಂದ ಪವೇದ ತತಿಗಳಿದಿರ್ಯ ಉರುಗುಣಾಂಬುಧಿ ಶ್ಶಾಮಸುಂದರನೆ ಸೀತಾಸಮೇತ ವಿಭು ನಿನ್ನಪಾದಪದುಮಗಳಲ್ಲಿ ಹನುಮದಾದಿಗಳೆಲ್ಲಆದರದಿ ಸರ್ವದಾ ಭಜಿಸುವರೋ ಸ್ವಾಮಿ 1ವರಅಭಯಕರಗಳಲ್ಲಿ ಶರಚಾಪ ಪಿಡಿದಿರುವಿಕಾರುಣ್ಯ ಬೀರುವ ನೋಟ ಮುಗಳ್‍ಹಾಸಶರಣಾದೆ ನಿನಗೆನಾ ಸುಕೃತ್ ವಿಭುವೇ ಸದಾವರಜ್ಞಾನ ಭಕ್ತ್ಯಾದಿ ಐಶ್ವರ್ಯ ಈಯೋ 2ಅನಂತಾರ್ಕ ಶಶಿಅಧಿಕ ಕಾಂತಿಯಿಂ ಜ್ವಲಿಸುತಿಅನಂತ ಪಾಪಗಳೆÀಲ್ಲ ಮನ್ನಿಸಿ ದಯದಿಎನ್ನ ಇವನ ಸರ್ವವೈಷ್ಣವರ ಕಾಯಯ್ಯವನರುಹಾಸನ ಪಿತ ಪ್ರಸನ್ನ ಶ್ರೀನಿವಾಸ 3
--------------
ಪ್ರಸನ್ನ ಶ್ರೀನಿವಾಸದಾಸರು