ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥ ಮಹಿಮ ಬಲವಂತ ನಮ್ಮ ್ಹನುಮಂತ ನಿಂತು ನೀ ಸಲಹೋ ನಿರಂತರದಲ್ಲೆನ್ನ ಪ ರಾಮನುಂಗುರ ಸೀತೆಗಿಟ್ಟ ಮರವ ಕಿತ್ತಿಸೂ- ರೆ ಮಾಡ್ಯಕ್ಷಕುಮಾರನ್ನ ಮುರಿದು ರಾವಣೇಶನ ಲಂಕಾದ್ವೀಪಕೆ ದೀಪಗಳ್ಹಚ್ಚಿ ಹಾರಿದ್ವಾರಿಧಿ ವಾರ್ತೆ ಹರಿಗೆ ಬಂದರುಹಿದ 1 ಭೀಮಸೇನವತಾರ ಮಾಡಿ ತಾ ಪಾಂಚಾಲಿ ಕೂಡಿ ಕೊಂಡ್ವನವಾಸ ಚರಿಸಿ ಬಂದು ಕ್ರೂರ ಕುರುಪತಿ ಕುಲಕಂತಕನೆಂದರಸನ ಪಟ್ಟ- ರಾಜ್ಞಿ ದ್ರೌಪದಿಧರ್ಮರಾಜಗ್ವಂದಿಸಿದನು 2 ಮಾಯಾವಾದಿಯ ಮುರಿದೊತ್ತಿದ ತಾ ಮಧ್ವ- ರಾಯರಾಗಿ ರಜತಪೀಠಪುರದಲ್ಲೆ ಭೀಮೇಶ ಕೃಷ್ಣನ್ನ ನಿಲಿಸಿ ಬಂದೀ ಬೊಮ್ಮ ಗ್ರಾಮದಿ ನಿಂತನೆ ಸೀತಾರಾಮರ ಸಹಿತವಾಗಿ3
--------------
ಹರಪನಹಳ್ಳಿಭೀಮವ್ವ
ಕಂದ ಕೃಷ್ಣ ನೀನು ಪವಡಿಸಲೆಂದು ನಾ- ನೊಂದು ಕಥೆಯ ಪೇಳ್ವೆನೋ ನಂದನನೇ ಒಂದು ಕಥೆಯ ಪೇಳ್ವೆನು ಪ ಹಿಂದಿನ ಯುಗದಲ್ಲಿ ಶ್ರೀರಾಮನೆಂಬೊರ್ವ ಕಂದ ಕೌಸಲ್ಯಗಾದ ಮುಂದೆ ಪೇಳು ಹುಂಕಾರದಿ ಕೇಳಿದೆ ಚಂದವಾದೀ ಕಥೆಯ ಸುಧೇಯ 1 ಆತನ ಪತ್ನಿ ಸುಶೀಲೆ ಸೀತೆಯೆಂದು ಖ್ಯಾತಳಾದಳು ಜಗದಿ ಮೂಡಿದನೆಂದೆ ಹುಂ ಮಾತೆ ಮುಂದಕೆ ಪೇಳು ಸೀತಾರಾಮರ ಕಥೆಯು ಸುಶ್ರಾವ್ಯ 2 ಪಂಚವಟಿಯಲಿ ಸಂಚರಿಸುತ್ತಿರೆ ಪಂಚದ್ವಯಾನನನು ಕೊಂಚ ಮಾತ್ರ ಹುಂಕಾರವ ನುಡಿ ವಿ- ರಿಂಚಿ ಪಿತನು ಮುನಿದಾ ಸದ್ದಾದ3 ಮಿಥ್ಯಾಯೋಗಿ ಯಾಗಿ ಸತ್ಯಮಹಿಮಳ ತಾ- ನೆತ್ತಿ ಕೊಂಡೋದನಯ್ಯ ಒತ್ತರಿಸಿತು ಕೋಪ ಮತ್ತೆ ನುಡಿದ ಹರಿ ಎತ್ತ ಸೌಮಿತ್ರೆ ಧನುರ್‍ಧರರ ಧನುರೇತ್ತ ಸೌಮಿತ್ರಿ ಧನುರ್ 4 ಪುಟ್ಟ ಕೂಸÉ ಆರ್ಭಟವೆಷ್ಟು ಮಾಡುವೆ ನಿಟ್ಟಿಪುದಸದಳವು ಥsÀಟ್ಟನೆ ಮಲಗೈಯ್ಯಾ ದಿಟ್ಟಿ ನರಸಿಂಹವಿಠಲ ಪಟ್ಟರಿಸುವೆನಯ್ಯ ರಂಗೈಯ್ಯಾ ಪಟ್ಟರಿಸುವೆನಯ್ಯಾ 5
--------------
ನರಸಿಂಹವಿಠಲರು
ಕಾಮಿತಾರ್ಥದಾಯಿ ಸೀತಾರಾಮರಾಜ ರಾಜ ಸ್ವಾಮಿಯೆನ್ನ ಕಾಯೊ ಖಳನಿರ್ನಾಮ ಭಕ್ತಕಲ್ಪಭೂಜ ಪ. ಸಾಕೇತಪುರದಿ ವಾಸಪ್ರಾಕೃತ ಲೀಲಾ ವಿಲಾಸ ಸ್ವೀಕೃತ ರಕ್ಷಾವಿಭೂಷ ಯಾಕೆನ್ನೊಳುಪೇಕ್ಷೆ ಶ್ರೀಶಾ ಬೀಕೃತಿಗಳ ದೂರೀಕರಿಸುವ ಕರು ಣಾಕರ ಭಕ್ತ ಪರಾಕ ಪರಾತ್ಪರ 1 ಪಾತಕಿ ಜನೋದ್ಧಾರೈಕ ಹೇತುವ ತೋರುವೆನೆಂದು ಸೇತು ನಿರ್ಮಿಸಿದ ರಘುನಾಥ ನೀನೆ ದೀನ ಬಂಧು ವಾತಜಾತನಿಗೊಲಿದು ಸಂಪ್ರೀತಿಯೊಳಂಬುಜ ಜಾತನಪದವಿಯನಾತಗೆ ಸಲಿಸಿದ 2 ಪಾಮರ ಪಾವನದಿವ್ಯ ನಾಮದೇವ ಸಾರ್ವಭೌಮ ಸೀಮಾಹಿತಸದ್ಗುಣೈಕ ಧಾಮಾ ಸೀತಾಪೂರ್ಣಕಾಮಾ ತಾಮರಸಾಸನವಂದ್ಯ ಶೇಷಗಿರಿ ಧಾಮ ದಯಾಂಬುಧಿ ದಶರಥ ರಾಮಾ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಗಳೆ ಜಾನಕಿ ನಿನ್ನ ಸುಗುಣಸನ್ಮೋಹನ್ನ ಖಗಕುಲರನ್ನ ಮನೋರಮಣ ಮನೋರಮಣ ಕಾಂತ ಶ್ರೀರಾಮನ ಅಗಲದಿರು ಕಾಣೆ ಮರಿಯಾನೆ ಶೋಭಾನೆ 1 ಪತಿಯೇಳ್ವ ಮೊದಲು ಜಾಗ್ರತೆಯಾಗಿ ಯೆದ್ದು ಗೃಹ- ಕೃತ್ಯಕೆಲ್ಲಕ್ಕನುಸರಿಸಿ ಅನುಸರಿಸಿ ನಡೆ ನೀ ಮಗಳೆ ಹಿತವಾಗಿ ಬಾಳು ಪತಿಯೊಳು ಶೋಭಾನೆ 2 ಗಂಡನ ಮಾತಿಗೆ ದುರ್ಚಂಡಿಸದಿರು ಮಗಳೆ ಗಂಡನುಣ್ಣದ ಮೊದಲು ನೀ ಮೊದಲು ನೀನುಣ್ಣದಿರು ಪುಂಡರೀಕಾಕ್ಷಿ ಪುಣ್ಯರಾಶಿ ಶೋಭಾನೆ 3 ಮುಗುಳು ನಗೆಯ ಬೀರು ಜಗಳವ ಮಾಡದಿರು ಜಗದೊಳು ಕೀರ್ತಿಯುತಳಾಗು ಯುತಳಾಗು ಬಂಧುಗಳಲಿ ನೀ ಹಗೆಯ ಮಾಡದಿರು ಕೃಪೆದೋರು ಶೋಭಾನೆ 4 ಪಾದ ಹೊದ್ದಿ ಸೇವೆಯ ಮಾಡು ಸುದ್ಧ ಭಾವದೊಳು ನಡೆ ಮಗಳೆ ನಡೆ ಮಗಳೆ ನಿತ್ಯಸುಮಂಗಲೆ ಮುದ್ದಾಗು ಬಂಧು ಬಳಗಕ್ಕೆ ಶೋಭಾನೆ 5 ಅತ್ತೆಯ ಮಾತಿಗೆ ಪ್ರತ್ಯುತ್ತರ ಕೊಡದಿರು ಪ್ರತ್ಯೊಬ್ಬಳೆ ಸ್ಥಳದಿ ನಿಲದಿರು ನಿಲದಿರು ನೀರಜಗಂಧಿ ಸತ್ಯ ವಚನವನೆ ಸವಿಮಾಡು ಶೋಭಾನೆ 6 ಮೈದುನರನ್ನು ತನ್ನ ಮಕ್ಕಳೆಂಬಂತೆ ನೋಡು ಸಾಧುಭಾವದದಲಿ ನಡೆ ಮಗಳೆ ನಡೆ ಮಗಳೆ ಪಂಕ್ತಿಯಲಿ ಭೇದ ಮಾಡದಿರು ಕೃಪೆದೋರು ಶೋಭಾನೆ 7 ಕಂಡರೆ ಶಿಷ್ಟರ ದಂಡ ನಮಸ್ಕರಿಸು ಹಿಂಡು ದಾಸಿಯರ ದಣಿಸದಿರು ದಣಿಸದಿರು ಉತ್ತಮಳೆಂದು ಭೂ- ಮಂಡಲದಿ ಕೀರ್ತಿಪಡು ಪೂರ್ತಿ ಶೋಭಾನೆ8 ಚಂಡಿತನವ ನಿನ್ನ ಗಂಡನೊಳ್ಮಾಡದಿರು ಗಂಡಸರ ಮುಂದೆ ಸುಳಿಯದಿರು ಸುಳಿಯದಿರು ಸಂತತ ಸೌಖ್ಯ- ಗೊಂಡು ಬಾಳಮ್ಮ ಸೀತಾಭಾಮಾ ಶೋಭಾನೆ 9 ಕ್ಷಮೆಯಲ್ಲಿ ಧಾತ್ರಿಯುಂಬ ಕ್ರಮದಲ್ಲಿ ಮಾತೆ ಸುರತ ಸಮಯದಿ ವೇಶ್ಯಾ ತರುಣಿಯಳ ತರುಣಿಯಳ ತೆರದಿ ರಾಮನ ಸತಿಯಂ- ತೆ ಮಾಡವ್ವ ಸುಖಂ ಜೀವಾ ಶೋಭಾನೆ 10 ಲಕ್ಷ್ಮೀನಾರಾಯಣರಂತೆ ಸೀತಾರಾಮರು ನೀವು ಕುಕ್ಷಿ ಈರೇಳು ಜಗವನ್ನು ಜಗವನ್ನು ನಮ್ಮನ್ನು ಸರ್ವರ ರಕ್ಷಣ್ಯ ಮಾಡಿ ಸುಖಿಯಾಗಿ ಶೋಭಾನೆ 11
--------------
ತುಪಾಕಿ ವೆಂಕಟರಮಣಾಚಾರ್ಯ
ಸ್ಮರಿಸೊ ಮಾನವನೆ ಗುರುಚರಣ ಅಂತ: ಕರಣ ಶುದ್ಧಿಯಲಿ ಮರೆಯದೆ ಪ್ರತಿದಿನ ಪ ದುರಿತ ಘನತತಿ ಮರುತ ಶ್ರೀ ರಘುದಾಂತ ತೀರ್ಥರ ಕರಜ ಶ್ರೀ ರಘುವೀರ ತೀರ್ಥರ ಚರಣಯುಗಲವ ಹರುಷದಿಂದಲಿ ಅ.ಪ ಧರೆಯೋಳ್ ಸುಂದರ ಸುರಪುರದಿ ಜನಿಸಿ ಗುರು ವಿಠ್ಠಲಾರ್ಯರ ಚರಣಾನುಗ್ರಹದಿ ವರ ಶಬ್ದ ಶಾಸ್ತ್ರವ ತ್ವರದಿ ಕಲಿತು ತುರಿಯಾ ಶ್ರಮವನೆ ಸ್ವೀಕರಿಸಿ ಗುರುಮುಖದಿ ಮರುತ ಶಾಸ್ತ್ರವನರಿತು ಧರ್ಮದೊಳಿರುತ ವಿಷಯದಿ ವಿರತಿಯಲಿ ಅನವರತ ಪ್ರವಚನ ನಿರತ ಸದ್ಗುಣ ಭರಿತ ಪಾವನ ಚರಿತರಂಘ್ರಿಯ 1 ಹೇಮಾಲಂಕೃತ ರತ್ನನಿಚಯಯುಕ್ತ ಹೇಮ ಮಂಟಪದಿ ಸುಂದರ ಶುಭಕಾಯಾ ಶ್ರೀ ಮನೋಹರ ಕವಿಗೇಯಾ ಬ್ರಹ್ಮ ವ್ಯೋಮ ಕೇಶಾದಿ ನಿರ್ಜರಗÀಣಶೇವ್ಯಾ ಭೂಮಿ ಸುರಜನ ಸ್ತೋಮಕನುದಿನ ಕಾಮಿತಾರ್ಥವ ಗರಿವ ಸೀತಾರಾಮರಂಘ್ರಿಯ ತಾಮರಸವನು ನೇಮದಿಂದರ್ಚಿಪರ ಶುಭಪದ2 ಪರಿಶೋಭಿಸುವ ಕಾಷಾಯ ವಸ್ತ್ರ ವರನಾಮ ಮುದ್ರಾಲಂಕೃತ ತನುಸಿರಿಯ ಗುರು ಅಕ್ಷೋಭ್ಯರ ಶುಭಚರಿಯ ಗ್ರಂಥ ವಿರಚಿಸಿದರು ನವರತುನ ಮಾಲಿಕೆಯ ಧರಣಿಯೊಳು ಸಂಚರಿಸುತಲಿ ಬಲು ಕರುಣದಿಂದಲಿ ಶರಣು ಜನರಘ ಭವ ಭಯಹರಣ ಗುರುವರ ಚರಣಯುಗಲವ3 ವಿನುತ ಸಮೀರ ಕೃತ ಸಾರಶಾಸ್ತ್ರವನೆ ಬೋಧಿಸುತ ಸಜ್ಜನರ ಘೋರ ಸಂಸೃತಿ ಭಯದೂರ ಮಾಡಿ ತೋರಿ ಸನ್ಮಾರ್ಗ ದೀಪಿಕೆಯ ಸುಸಾರ ಸೇರಿದವರಘ ದೂರ ಪರಮೋದಾರ ಗುಣ ಗಂ- ಸೂರಿಜನ ಪರಿವಾರನುತ ಜಿತ- ಮಾರ ಶ್ರೀ ರಘುವೀರ ತೀರ್ಥರ 4 ಶೇಷಾಚಲದಿ ಶಿಷ್ಯಗಣದಿ ಬಂದ ಶ್ರೀ ಸತ್ಯ ಪ್ರಮೋದ ತೀರ್ಥರ ಸ್ವರ್ಣೋತ್ಸವದಿ ತೋಷಬಡಿಸುತ ನಿರ್ಭಯದಿ ಉಪನ್ಯಾಸ ಮಾಡಿದರು ವೀಶಗಮನ ಸುರೇಶ ಭಕುತರ ಸಿರಿ ನರಕೇಸರಿಗೆ ಪ್ರಿಯದಾಸ ಕೊಡಲಿವಾಸ ಕರ್ಮಂದೀಶರಂಘ್ರಿಯ 5
--------------
ಕಾರ್ಪರ ನರಹರಿದಾಸರು
ಮಗಳೆ ಜಾನಕಿ ನಿನ್ನ ಸುಗುಣಸನ್ಮೋಹನ್ನಖಗಕುಲರನ್ನ ಮನೋರಮಣಮನೋರಮಣ ಕಾಂತ ಶ್ರೀರಾಮನಅಗಲದಿರು ಕಾಣೆ ಮರಿಯಾನೆ ಶೋಭಾನೆ 1ಪತಿಯೇಳ್ವ ಮೊದಲು ಜಾಗ್ರತೆಯಾಗಿ ಯೆದ್ದು ಗೃಹ-ಕೃತ್ಯಕೆಲ್ಲಕ್ಕನುಸರಿಸಿಅನುಸರಿಸಿ ನಡೆ ನೀ ಮಗಳೆಹಿತವಾಗಿ ಬಾಳು ಪತಿಯೊಳು ಶೋಭಾನೆ 2ಗಂಡನ ಮಾತಿಗೆ ದುರ್ಚಂಡಿಸದಿರು ಮಗಳೆಗಂಡನುಣ್ಣದ ಮೊದಲು ನೀಮೊದಲು ನೀನುಣ್ಣದಿರುಪುಂಡರೀಕಾಕ್ಷಿ ಪುಣ್ಯರಾಶಿ ಶೋಭಾನೆ 3ಮುಗುಳು ನಗೆಯ ಬೀರು ಜಗಳವ ಮಾಡದಿರುಜಗದೊಳು ಕೀರ್ತಿಯುತಳಾಗುಯುತಳಾಗು ಬಂಧುಗಳಲಿ ನೀಹಗೆಯ ಮಾಡದಿರು ಕೃಪೆದೋರು ಶೋಭಾನೆ 4ವೃದ್ಧ ಮಾವನಪಾದಹೊದ್ದಿ ಸೇವೆಯಮಾಡುಸುದ್ಧ ಭಾವದೊಳು ನಡೆ ಮಗಳೆನಡೆ ಮಗಳೆ ನಿತ್ಯಸುಮಂಗಲೆಮುದ್ದಾಗು ಬಂಧು ಬಳಗಕ್ಕೆ ಶೋಭಾನೆ 5ಅತ್ತೆಯ ಮಾತಿಗೆ ಪ್ರತ್ಯುತ್ತರ ಕೊಡದಿರುಪ್ರತ್ಯೊಬ್ಬಳೆ ಸ್ಥಳದಿ ನಿಲದಿರುನಿಲದಿರು ನೀರಜಗಂಧಿಸತ್ಯ ವಚನವನೆ ಸವಿಮಾಡು ಶೋಭಾನೆ 6ಮೈದುನರನ್ನು ತನ್ನ ಮಕ್ಕಳೆಂಬಂತೆನೋಡುಸಾಧುಭಾವದದಲಿ ನಡೆ ಮಗಳೆನಡೆ ಮಗಳೆ ಪಂಕ್ತಿಯಲಿಭೇದ ಮಾಡದಿರು ಕೃಪೆದೋರು ಶೋಭಾನೆ 7ಕಂಡರೆ ಶಿಷ್ಟರ ದಂಡ ನಮಸ್ಕರಿಸುಹಿಂಡುದಾಸಿಯರ ದಣಿಸದಿರುದಣಿಸದಿರು ಉತ್ತಮಳೆಂದು ಭೂ-ಮಂಡಲದಿ ಕೀರ್ತಿಪಡು ಪೂರ್ತಿ ಶೋಭಾನೆ 8ಚಂಡಿತನವ ನಿನ್ನ ಗಂಡನೊಳ್ಮಾಡದಿರುಗಂಡಸರ ಮುಂದೆ ಸುಳಿಯದಿರುಸುಳಿಯದಿರು ಸಂತತ ಸೌಖ್ಯ-ಗೊಂಡು ಬಾಳಮ್ಮ ಸೀತಾಭಾಮಾ ಶೋಭಾನೆ 9ಕ್ಷಮೆಯಲ್ಲಿ ಧಾತ್ರಿಯುಂಬ ಕ್ರಮದಲ್ಲಿ ಮಾತೆಸುರತಸಮಯದಿ ವೇಶ್ಯಾ ತರುಣಿಯಳತರುಣಿಯಳ ತೆರದಿ ರಾಮನ ಸತಿಯಂ-ತೆ ಮಾಡವ್ವ ಸುಖಂ ಜೀವಾ ಶೋಭಾನೆ 10ಲಕ್ಷ್ಮೀನಾರಾಯಣರಂತೆ ಸೀತಾರಾಮರು ನೀವುಕುಕ್ಷಿಈರೇಳು ಜಗವನ್ನುಜಗವನ್ನು ನಮ್ಮನ್ನು ಸರ್ವರರಕ್ಷಣ್ಯ ಮಾಡಿ ಸುಖಿಯಾಗಿ ಶೋಭಾನೆ 11
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ