ಒಟ್ಟು 6 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನನ್ನ ಗುರು ಯೆಂತಪ್ಪ ದೊಡ್ಡವನೋ [ಘನ್ನ] ಸೀತಾಮನೋಹರ ಪ ನಿನ್ನೆಯೆನಗೊದಗಿದ ದು:ಖದಿ ಬನ್ನಬಡಿಸುವದಾಗಿ ಅಳುತಿರೆ ಚನ್ನಕೇಶವನಾಗಿ ತಾನೆ ಪ್ರ ಸನ್ನನಾದ ಮಹಾತ್ಮ ಜಯಜಯ1 ಭಗವದಾಜ್ಞೆಯನನುಗೊಳಿಸದಲೆ ಕುಗುಣ ಕುಚಿತದೊಳಿರಲು ಬಂದದ ಸಿಗಿದು ಹೊಡೆದು ಬಿಸಾಡಿದಾ ನಮ್ಮ ಸಗುಣ ಸಾಕ್ಷಾತ್ಕಾರ ನಿರ್ಗುಣ2 ದುರ್ಗುಣವು ದುಸ್ಸಂಗ ದುವ್ರ್ಯಾವಾರದೊಳು ದುರ್ಗತಿಕುಮತಿ ನಾನಧಿಕನಾಗಿರೆ ಸ್ವರ್ಗನಾಯಕ ಬಂದುಮೆನ್ನುಪ ಸರ್ಗಮಳಿದ ಮಹಾನುಭಾವಾ 3 ಅರಿಯದರಿಲಿಕೆ ಅರಿಗಳಾರನೂ ಹರಿಯೆ ತಾನಾಗೈದು ತೋರಿದ ಪರಮಗುರು ಶ್ರೀ ತುಲಸಿರಾಮನ ಚರಣ ಸೇವಕನಾದೆನಹುದೆಲೊ 4
--------------
ಚನ್ನಪಟ್ಟಣದ ಅಹೋಬಲದಾಸರು
ಮಂಗಳಂ ಸೀತಾಮನೋಹರ ಪ ಮಂಗಳಂ ಜಗದೇಕ ಸುಂದರ ಅ.ಪ ಮಂಗಳಂ ವಿಧಿರುದ್ರಮುಖ ಸುರವಿನುತ ಪದಯುಗಳ ಸೂರ್ಯ ಕುಲಭೂಷಣ ಮಂಗಳಂ ಮರುತಾತ್ಮಜ ಪ್ರಿಯ ಮಂಗಳಂ ಪರಾತ್ಪರಾನಂತ ಗುಣಾರ್ಣವ ಪ್ರಭೋ ಪಾದ ಪಂಕಜ ಸರೋಜಮಿತ್ರಾನ್ವಯ ಪೂರ್ಣ ಚಂದ್ರಮಾ ನಮಾಮ್ಯಹಂ ತೇ ಗುರುರಾಮವಿಠ್ಠಲ
--------------
ಗುರುರಾಮವಿಠಲ
ಸೀತಾಮನೋಹರ ಬಾರೊ | ಸ್ವಾಮಿ ಪ ಸೀತಾಮನೋಹರ ಶ್ರಿತ ಲೋಕೋದ್ಧಾರ ರಘು | ದಾತ ಬಾರೋ ಅ.ಪ ಅಂಬುಜ ಲೋಚನ ಬಾರೋ 1 ನೀನು ಮಾಡಿಸಿದಂತೆ ನಾನು ಮಾಡುವೆನೆಂಬಸು | ಜ್ಞಾನವಪಾಲಿಸೆ ಬಾರೊ 2 ಅಂತಃ ಪ್ರೇರಕನಾಗಿ ನಿಂತು ಜೀವರನೆಲ್ಲ ಸಂತೈಸುತಿಹ ದೇವ ಬಾರೋ 3 ಬಾಗಿ ನಮಿಸುತಿರ್ಪ ಭಾಗವತರ ಭವ- ರೋಗಕ್ಕೆ ವೈದ್ಯ ನೀನೆ ಬಾರೊ 4 ಪರಮ ನಿಷ್ಕಾಮಿಯಾದ ಮರುತಾತ್ಮಜಾಂತರ್ಗತ ಶ್ರೀ ಗುರುರಾಮ ವಿಠಲಬೇಗ ಬಾರೋ ಸ್ವಾಮಿ 5
--------------
ಗುರುರಾಮವಿಠಲ
ಸೀತಾಮನೋಹರ ವಿಠಲಾ | ಕಾಪಾಡೊ ಇವಳಾ ಪ ಮಾತುಮಾತಿಗೆ ನಿನ್ನ | ಸ್ಮರಣೆ ಸುಖ ಕೊಟ್ಟು ಅ.ಪ. ಮಂಗಳಾಂಗನೇ ಹರಿಯೇ | ಶೃಂಗಾರ ಮೂರುತಿಯೇಭಂಗಗೈ ಅಜ್ಞಾನ | ಸತ್ಸಂಗವನೆ ಕೊಟ್ಟುಸ್ವಾಂಗಾಯ ನಾಮ | ನೀಲಾಂಗ ಶ್ರೀ ಹರಿಯೆಕಂಗಳಿಂದಲಿ ಕಾಂಬ | ಹವಣೆಯನು ತಿಳಿಸೋ 1 ತರತಮಾತ್ಮಕ ಜ್ಞಾನ | ಹರಿಗುರು ಸದ್ಭಕ್ತಿಮರುತ ಮತ ದೀಕ್ಷೆಯನು | ಕರುಣಿಸೋ ಹರಿಯೇದುರಿತಾಳಿ ದುಷ್ಕರ್ಮ | ಪರಿಹರಿಸಲೀವಳಿಗೆಪರಮ ಆನಂದವನೆ | ಕರುಣಿಸೊ ಹರಿಯೇ 2 ಪೇಳ್ವುದೆನಿಹುದೆನಗೆ | ಸರ್ವಜ್ಞ ನೀನಿರುವೆಭವದಿಂದ ಕಡೆಗಿತ್ತು | ಪವನಂತರಾತ್ಮಈ ವಿಧದಭಿನಿಪವ | ನೀವೊಲಿದು ಸಲಿಸೆಂದುದೇವ ಪ್ರಾರ್ಥಿಪೆ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಹರಿಯಂದು ಸ್ಮರಿಸುವರ ದುರಿತಪರಿಹಾರವೆಂದು ನೆರೆಪೇಳ್ವ ಶೃತಿ ತಿಳಿದು ಮನವೆ ಕರುಣಾಸಾಗರನಾದ ಕಮಲಾದ್ರಿವಾಸ ನರಹರಿಯಪಾದ ಭಜಿಸುವ ಮನವೆ ಪ ಸುತನ ನಿಂದಗನೆಂದು ಹಿತದಂತ್ಯಕಾಲ ಸಂಘಾತನೆ ಹಿತ ವೇಳ್ವೆ ಕರಿಯಲು ಮನವೆ ಚತುರಾಸ್ಯ ಜನಕ ಮನ್ಮಥಕೋಟಿರೂಪ ಸದ್ಗತಿ ತೋರಿಸಲಹುದೇನು ಮನವೆ 1 ಆ ಮರರೀಮರ ಎಂಬ ಪಾಮರಗೆ ಪಟ್ಟಾಭಿರಾಮ ಭಕ್ತರ ಪ್ರೇಮ ಮನವೆ ಕಾಮಿತಾರ್ಥವನಿತ್ತ ಕಂಜಾಕ್ಷದಯದಿ ಸೀತಾಮನೋಹರ ರಾಮ ಮನವೆ 2 ಕರಿಯು ಮಕರಿಗೆ ಶಿಲ್ಕಿ ನೆರಳುತಲಿ ಪರಮಾತ್ಮ ಪರಬ್ರಹ್ಮನೆಂದು ಸ್ತುತಿಸಿ ಮನವೆ ಗರುಡವಾಹನ ಹೆನ್ನೆಪುರನಿಲಯ ಮರಿಯದಲೆ ಪರಿಪಾಲಿಸಿ ಪೊರೆವ ಮನವೆ 3
--------------
ಹೆನ್ನೆರಂಗದಾಸರು