ಒಟ್ಟು 10 ಕಡೆಗಳಲ್ಲಿ , 9 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕದರುಂಡಲಗಿ ಹನುಮಂತದೇವರು ಇಂಥಾ ಕೀರ್ತಿಯ ಮೂರ್ತಿನ್ನಾರೇ ನೋಡಮ್ಮಯ್ಯ ಪ ಸಂತತ ಸೀತಾಪತಿಯ ಧ್ಯಾನರೊಳು ಕಂತುವಿನಸ್ತ್ರವ ಖಂಡಿಸಿದೊಡೆಯಾ ಅ.ಪ. ಸೂರಿ ಸುಲಿಗೆ ನೋಡಮ್ಮಯ್ಯ ನೋಡಮ್ಮಯ್ಯ ಭೂಸುರರಾಯರು ಸೀಮೆಯ ಸುತ್ತಲು ಗಾಸಿಯ ಮಾಡದೆ ಗ್ರಾಮವ ಕಾಯ್ದ 1 ತಾರಣ ನಾಮ ಸಂವತ್ಸರ ಶುದ್ಧ ವೈಶಾಖದಿ ನೋಡಮ್ಮಯ್ಯ ಧರೆಯೊಳು ಕಲಹ ವಿಪರೀತವದರೊಳು ರಣಮಂಡಲ ನೋಡಮ್ಮಯ್ಯ ಊರೆಲ್ಲ ಮೊರೆಯಿಡೆ ಈಕ್ಷಿಸಿ ಮಹಿಮೆಯ ತೋರುವ ಅಭಯ ಪ್ರಸಾದವ ಕೊಡುವಾ 2 ಜಯ ನಮೋ ಎನೆ ನೋಡಮ್ಮಯ್ಯ ಅಕಲಂಕ ಶೇಷಾನೃಪ ಶ್ರೀ ರಾಮರ ಸೇವಕಮಣಿ ನೋಡಮ್ಮಯ್ಯ ಲೋಕದಧಿಕ ಗುರು ಕದರುಂಡಲೀಶಾ ಬೇಕೆಂದು ನಿಂತಾ ಶ್ರೀ ಹನುಮಂತ 3
--------------
ಕದರುಂಡಲಗೀಶರು
ಜಾನಕೀರಮಣನೆ ಮಾನದಿ ಸಲಹೆನ್ನ ಪ ಮಾನಾಪಮಾನ ನಿಂದೋ ದೀನರ ಬಂಧೋ ಅ.ಪ ದಾಸದಾಸರ ದಾಸ ದಾಸನಾಗುವೆನೆಂದು ಬೇಡುವೆ ದಯಸಿಂಧೋ ನೀಡು ವರವ ಬಂಧೊ 1 ನಂದತೀರ್ಥರ ಮತ ಎಂದೊ ಎನಗೆ ಹಿತ ಪೊಂದಿಸಬೇಕೊ ಸೀತಾಪತಿಯೆ ಕೇಳೆಲೊದಾತ 2 ನಾಮಗಿರಿ ಲಕ್ಷ್ಮೀಸ್ವಾಮಿ ಶ್ರೀ ನರಹರೆ ಚರಣ ಕಮಲಯುಗ ಸ್ಮರಣೆ ಸ್ಥಿರಪಡಿಸೊ 3
--------------
ವಿದ್ಯಾರತ್ನಾಕರತೀರ್ಥರು
ಪಂಚಮುಖ ಹನÀುಮತೇ ಶರಣುಮಾಂಪಾಹಿ ಪ ಜ್ಞಾನ ಬಲ ರೂಪನೇ ಹನುಮ ಮುಖ್ಯಪ್ರಾಣ ಅನಿಮಿಷವೃಂದದಲಿ ಪ್ರವರನೇ ಶರಣು ಅನುಪಮಾನಂದಮಯ ಅನಘ ಸೀತಾಪತಿಯ ಅನುಪಮ ಮಹಾದಾಸ ಹನುಮ ಪಾಲಯಮಾಂ 1 ನಿರುಪಮಮಹಾತೇಜ ಸರ್ವತೋಮುಖ ಉಗ್ರ ವೀರ ಭೀಕರ ಮೃತ್ಯುಮಾರಕ ಮಹಾವಿಷ್ಣು ನರಸಿಂಹ ಶುಭಕರಗೆ ಪ್ರಿಯತಮನೆ ಶರಣಾದೆ ಕರುಣದಿಂದಲಿ ಎನ್ನ ತ್ರುಟಿ ಬಿಡದೆ ಸಲಹೋ 2 ಬಂಗಾರಮಯ ಸುಧಾ ಪೂರ್ಣ ಕುಂಭವುಕರದಿ ಜಂಗಮದ ಸ್ಥಾವರದ ವಿಷಹರ ಅಭಯದ ಖಗರಾಜನಿಗೆ ವರನೆ ತದ್ರೂಪಮುಖಧರನೆ ಗಮನ ಶ್ರೀಕರನ ಒಲಿಸೆನಗೆ 3 ಅರಿ ಶಂಖಧರ ಅಭಯ ಸದ್ವರಹಸ್ತ ಭೂಮಿಧರ ಸರ್ವವಾಂಛಿತ ಸಿದ್ಧಿದಾತ ಭೂಮ ನಿರ್ಮಲ ಕೋಲ ರೂಪ ಸರ್ವೋತ್ತಮನು ಮನ್ಮನದಿ ಪೊಳೆವಂತೆ ನೀದಯ ಮಾಡೋ 4 ಜ್ಞಾನ ವಿದ್ಯಾಕಾಂತಿ ಪ್ರತಿ ವಾದಿಜಯದಾತ ಮನಬುಧ್ಧಿದೇಹ ದಾರುಢ್ಯ ಸ್ಥೈರ್ಯ ಘನ ಭಕ್ತಿ ಮುಕ್ತಿ ಸಾಧನ ವೀವ ಹಯಶೀರ್ಷ ಪ್ರಸನ್ನ ಶ್ರೀನಿವಾಸನ ಒಲಿಸೆನಗೆ ಗುರುತಮನೇ 5 || ಶ್ರೀ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಕೃಷ್ಣಾರ್ಪಣಮಸ್ತು ||
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಾಣಪತೇ ನೀ ಸಲಹೊ ಪ ಜಾಣ ಲಕ್ಷ್ಮಣನಿಗೆ ಪ್ರಾಣದಾನವ ಗೈದ ಅ.ಪ ಧೀರಶೂರ ಗಂಭೀರ ಕಪಿ ವೀರನೆಭಾರತಿಕಾಂತನೆ ಮರುತಾವತಾರನೆ1 ಸೀತಾಪತಿಯ ದೂತ ಖ್ಯಾತ ಹನುಮಂತನೆಮತಿವಂತ ಭೀಮನೆ ಯತಿ ಮಧ್ವರಾಯ2 ದುಷ್ಟ ಶಿಕ್ಷ ಬಲು ಕಷ್ಟ ನಿವಾರಣಇಷ್ಟವ ಪಾಲಿಪ ಸಿರಿಕೃಷ್ಣನ ದೂತನೆ 3
--------------
ವ್ಯಾಸರಾಯರು
ಮಂಗಳ ಮುಖ್ಯಪ್ರಾಣೇಶಗೆ ಜಯ ಮಂಗಳ ಮೂಜಗವಂದಿತಗೆ ಪ. ಅಂಜನೆತನಯಂಗೆ ಮಾಪ್ರತಿ ಮಹಿಮಂಗೆ ಕಂಜನಾಭನ ಕಾರ್ಯದನುಕೂಲಗೆ ರಂಜಿಪ ಹನುಮಗೆ ಮಂಗಳ 1 ಆ ಮಹಗಡಲ ಲಂಘಿಸಿ ಹೋಗಿ ಲಂಕೆಯ ಧಮಧುಮ ಮಾಡಿ ವನವ ಕಿತ್ತು ರಾಮ ಮುದ್ರಿಕೆ ಜಾನಕಿಗೆ ತಂದಿತ್ತÀ ಹೇಮಾದ್ರಿ ಹನುಮಗೆ ಮಂಗಳ 2 ಸುತ್ತ ಸಾಗರ ಮಧÀ್ಯದಲ್ಲಿ ಲಂಕೆಯ ಮುತ್ತಿ ವನಜಾಕ್ಷಿಯ ಮುಂದೆ ಬಂದು ಹತ್ತು ತಲೆಯ ರಾವಣನೈಶ್ವರ್ಯವನಳಿದಗೆ ಖ್ಯಾತ ಹನುಮಗೆ ಮಂಗಳ 3 ಜಾತಿ ಬಂಧುಗಳ ಒಡಗೊಂಡು ಸಮುದ್ರದ ಸೇತುವ ಕಟ್ಟಿ ಸಾಹಸದಿಂದಲಿ ಸೀತಾಪತಿಯ ಬಲವ ನಡೆಸಿದ ಪ್ರ ಖ್ಯಾತ ಹನುಮಗೆ ಮಂಗಳ 4 ಈ ಕಾಡಕಪಿಯಲ್ಲ ನಿಮ್ಮ ಸೇವಕನೆಂದು ಬೇಡವೆಂದು ಸೀತೆಯ ಭಯಬಿಡಿಸಿ ಚೂಡಾರತ್ನ ಶ್ರೀ ರಾಮರಿಗಿತ್ತ ಬಂಟ ಕೊಂಡಾಡಿಸಿಕೊಂಬಗೆ ಮಂಗಳ 5 ಬಲ್ಲಿದ ರಾವಣೇಶ್ವರನ ಮಾರ್ಬಲವನು ಕಲ್ಲು ಮರದೊಳಿಟ್ಟು ಕೆಡಹಿದಗೆ ಜಲ್ಲುಕ ದೈತ್ಯರಿಗೆಲ್ಲ ಎದೆಯ ಶೂಲವಗಿದ ಧಲ್ಲ ಹನುಮಗೆ ಮಂಗಳ 6 ಬಲು ದೈತ್ಯರನೆಲ್ಲ ಗೆಲಿದು ಮುದ್ದೇನಹಳ್ಳಿಲಿ ಸ್ಥಿರವಾಗಿ ನಿಂದು ಭಕ್ತರ ಹೊರೆವ ಹೆಳವನಕಟ್ಟೆ ವೆಂಕಟೇಶನ ದೂತ ಚಲದಂಗ ಹನುಮಗೆ ಮಂಗಳ 7
--------------
ಹೆಳವನಕಟ್ಟೆ ಗಿರಿಯಮ್ಮ
ಮಹಿಮೆ ನೋಡಿರೈ ರಾಯರ ಮಹಿಮೆ ಪಾಡಿರೈ ಪ ಜಲಜನಾಭನೊಲುಮೆ ಪಡೆದು ಇಳೆಯೊಳು ಪ್ರಖ್ಯಾತರಾದ ಅ.ಪ ರಾಘವೇಂದ್ರ ಯತಿಗಳೆಂದು ಬಾಗಿ ನಮಿಸುವವರ ಮನದ ರಾಗ ದ್ವೇಷಾದಿಗಳ ಕಳೆದು ನೀಗಿಸುವರೊ ಭವದ ಬಂಧ 1 ತಾಳ ತಂಬೂರಿಪಿಡಿದು ಭೋಗಶಯನನನ್ನು ಭಜಿಸಿ ಕೂಗಿ ಪಾಡುತಿರಲು ನಲಿದು ಬೇಗ ಪಾಲಿಸುತಲಿ ನಲಿವ2 ದೇಶದೇಶದವರು ಬಹಳ ಕ್ಲೇಶಪಡುತ ಬರಲು ಅವರ ಕ್ಲೇಶಗಳನು ಕಳೆದು ಪರಮ ಉ- ಲ್ಲಾಸ ನೀಡಿ ಪೊರೆಯುವಂಥ 3 ಸೀತಾಪತಿಯ ಪೂಜಿಸುತಲಿ ಖ್ಯಾತರಾದ ಯತಿಗಳನ್ನು ಪ್ರೀತಿಯಿಂದ ಸೇವಿಸುವರ ಪಾತಕಗಳ ಕಳೆದು ಪೊರೆವ 4 ಗಳದಿ ಹೊಳೆವ ತುಳಸಿ ಮಾಲೆ ಹೊಳೆವ ನಗೆಯ ಮುಖದ ಭಾವ ಕಮಲನಾಭ ವಿಠ್ಠಲನೊಲಿಸಿ ಹಲವು ವಿಧದಿ ಪೂಜಿಸುವರು5
--------------
ನಿಡಗುರುಕಿ ಜೀವೂಬಾಯಿ
ವಾಸುದೇವಯನ್ನ ಸಲಹೋ ವಾರಿಜಾಸನ ಈಶವಾಸವಾರ್ಚಿತ ಚರಣ ವನಜೋದರ ಭಾಸುರಾಂಗ ಕೋಟಿ ಪ್ರಭಾಕರ ಪ್ರಕಾಶ ಮಂದಹಾಸ ಕಮಲಾಚಲನಿವಾಸ ಶ್ರೀ ಜಗದೀಶ ಪ ತಾಪಸೋತ್ತಮ ಸತಿಗೆ ಕೋಪದಿಂದ ಪಾಷಾಣರೂಪವಾಗಿ ಬಿಟ್ಡೆನುತ ಶಾಪಕೊಡಲು ಕೋಪನಾಮಣಿ ಬಲು ಪ್ರಲಾಪಿಸುತ ಮನದಿ ನಿಷ್ಪಾಪರರ ನುಡಿಯಂತೆ ಧರಿಯಲಿಬಿದ್ದಿರಲು ಪಾದ ಸ್ಪರ್ಶಿಸಲಾಕ್ಷಣ ಸೀತಾಪತಿಯ ಸೇವೆಯಿಂದ ಸುಂದರಿಯಾದಳು ತ್ವರದಿ 1 ಪಾಪಗಳು ಮಾಡಿದವನಂತ್ಯ ಕಾಲದಲಿ ಸುತನ ನಾರಗೆಂದು ಕರಿಯೇ ಗತಿ ತೋರಿದಿ ಹಿತದ ಲಾಮರಾಮರೆಂಬ ನಿನ್ನ ಹರುಷದಲಿ ಪೊರೆದೆ ಕ್ಷಿತಿ ನಾಥ ಹರಿ ಮಹೋನ್ನತ ಚರಿತನೆ ಪತಿತ ಪಾವನ ಬಿರುದು ಪರಮಾತ್ಮ ನಿನಗಿರಲು ಸ್ತುತಿಸುವೆನು ಗೋವಿಂದ ಶುಭಕರ ಶ್ರೀ ಮುಕುಂದ 2 ಶರಧಿ ಗಂಭೀರ ಹಾಟಕಾಂಬರ ಶೋಭಿತ ಪುರುಷೋತ್ತಮಾನಂತ ಮುರವೈರಿ ಮುರಲೀರವ ವಿನೋದ ಗರುಡಗಮನ `ವರ ಹೆನ್ನೆಪುರನಿಲಯ' ಪರಮಪಾವನ ನೃಹರೆ ಉರಗೇಂದ್ರಶಯನ ಮಂದರಧರ ಕೃಪಾಂಬುಧೆ3
--------------
ಹೆನ್ನೆರಂಗದಾಸರು
ಹನುಮಂತ ದೇವರು (ದಂಡಕ) ಅಂಜನಿಯ ಉದರದಿಂ ಪುಟ್ಟುತಾರ್ಭಟಿಸುತಲಿ ಕಂಜಮಿತ್ರಂಗೆ ಹಾರ್ದೆ ಧೀರಾ ವಾಯುಕುಮಾರಾ ರಣರಂಗಧೀರಾ ಕದನಕಂಠೀರಾ ದಿನಮಣಿಯ ಪಿಡಿದು ನುಂಗುವೆನೆಂಬೊ ಸಮಯದೋಳ್ ಬರಲು ದೇವತೆ ನಿಕರಗಳೆಲ್ಲಾ ಬೆದರಿಸಿದಿ ಎಲ್ಲಾ ಭಾಪು ಭಲ ಭಲ್ಲ ಭಾರತಿಯ ನಲ್ಲ ಸೂರ್ಯಸುತನಂ ಕಂಡು ಪಂಪಾಸರೋವರದಿ ಭಾಸ್ಕರಾನ್ವಯಗೆರಗಿ- ದೆಂದು ಜಯ ಜಗದ್ಬಂಧು ಕಾರುಣ್ಯಸಿಂಧು ಸೀತಾಪತಿಯ ಕರುಣದಿಂದ ಗಗನಕ್ಕೆ ಖ್ಯಾತಿಯಿಂದಲಿ ಬ್ಯಾಗ ಬೆಳದಿ ವೃಷಿಗಳನಳದಿ ದೈತ್ಯರ ತುಳದಿ ರಾಮಮುದ್ರಿಯ ಕೊಂಡು ಅಜನಸುತ ಸಹಿತಾಗಿ ನೇಮದಿಂ ಶರಧಿಯಂ ನೋಡಿ ದುರಿತಗಳ ದೂಡಿ ಪಾಡಿ ಕೊಂಡಾಡಿ ಕೋಟಿ ಸಿಡಿಲಬ್ಬರಣೆಯಿಂದ ಜಲಧಿಯ ಜಿಗಿದು ದಾಟಿದಿ ಲಂಕಾಪುರ- ವನ್ನು ಪೇಳಲಿನ್ನೇನು ಭುಜಬಲವನ್ನು ತೃಣಬಿಂದು ಋಷಿಯ ಕಾಣುತಲಲ್ಲಿ ಕುಣಿದಾಡಿ ಪರಿಪರಿಯ ಚೇಷ್ಟೆ- ಗಳಿಂದ ಮಾಡಿದೈ ಛಂದ ಅಂಜನೆಯ ಕಂದ ಪುನಹ ಲಂಕೆಗೆ ಹಾರಿ ಲಂಕಿಣಿಯ ಸಂಹರಿಸಿ ಭೂಜಾತೆಯನು ಅರಸು- ತಲ್ಲಿ ಅತಿರೋಷದಲ್ಲಿ ತಿರುತಿರುಗುತಲ್ಲಿ ರಾಮನಾಮಾಮೃತವ ಜಿಹ್ವಾಗ್ರದೋಳ್ ಸುರಿವ ಭೂವಿಜಯ ಚರಣಮಂ ಕಂಡು.... ಮಾಡಿದೈ ಗಂಡು ರಘುವರನ ಮುದ್ರೆಯನಿತ್ತು ನಿಜಮಾತೆಗೆ ಹರುಷಬಡಿಸಿದಿ ಹನೂ- ಮಂತಾ ಗುರುಮುನಿಯ ಶಾಂತಾ ದಿವಸಾಧಿಪತಿಕೋಟಿತೇಜದಿಂ ಮೆರೆವಂಥಾ ಜಯ ಹನುಮ ಭೀಮ ಬಲವಂತಾ ಬಾಲದಿಂ ಬೆಂಕಿಯಂ ಹಚ್ಚಿ ಲಂಕಾಪುರವ ಲೀಲೆಯಿಂದಲಿ ದಹನಮಾಡಿ ಸುತ್ತ ಓಡ್ಯಾಡಿ ದೈತ್ಯರಂ ಕಾಡಿ ಸುರನಿಕರವಂದು ಆಕಾಶಮಾರ್ಗದಿ ಎಲ್ಲ ದೇವದುಂದುಭಿನಾದ ಗೈದು ..................................ಮಹಿಮೆ ಹೌಧೌದು ತ್ರಿಭುವನದೊಳಗಧಿಕನೈ ಕದರುಂಡಲಗಿರಾಯಾ ಅಭಯಮಂ ಕೊಡು ಎನ್ನ ಧೊರೆಯೆ ನಾ ನಿನ್ನ ಮರೆಯೆ ಅಗಡಿಪುರದಲಿ ನಿನ್ನ ಕೃಪೆಯಿಂದ ಪೇಳ್ದೆನೈ ಸೊಗಸಿನಿಂದ ಇಡು ಮಹಾರಾಯ ಅವನಾಯುಗೇಯಾ ಹನುಮಂತರಾಯಾ ಶ್ರೀಹನುಮಂತಗೌಡರ್À ಬಹಾದ್ದೂರರನ್ನು ಸರ್ಪಸುತಪುರದಲ್ಲಿ ಕಾಯ್ವ ಇಷ್ಟಾರ್ಥವೀವ ಭಕುತ ಸಂಜೀವ ಶ್ರೀ ಹನುಮಂತ ದಂಡಕವ ಕೇಳ್ದರ್ಗೆ ಇಹಪರದಿ ಶ್ರೀಹರಿಯೆ ಬಂದು ಅವರಲ್ಲಿ ನಿಂದು ಕಾರುಣ್ಯಸಿಂಧು ಪರಾಕು ಪರಾಕು
--------------
ಕದರುಂಡಲಗಿ ಹನುಮಯ್ಯ
2 (ಅ) ಗುರುಸ್ತುತಿ165ಅಗಲಿ ಜೀವಿಸಬಹುದೆ ಕರುಣಿಯನಗಲಿ ಜೀವಿಸಬಹುದೆ ಪ.ಆಗಮಜÕನಬುಧಉಡುಗಣ ಚಂದ್ರನವಿಗಡಜನಾರ್ದನವರ್ಯರನುಳಿದುಅ.ಪ.ಇಳೆಯೊಳು ಸುರತರುವಿಲ್ಲದ ಕಾರಣನಳಿನನಾಭಾಜÕದೊಳವತರಿಸಿನೆಳಲೊಳಿರಿಸಿ ಬಹುಸಲಹಿಕರವಬಿಟ್ಟುಸಲೆ ಹರಿಪುರಕೆ ಪೋಗಿಹ ಮಾತಾಪಿತನ 1ಆರುಕರ್ಮಕ್ಕೆ ಎಳ್ಳನಿತು ಕುಂದಿಲ್ಲದೆಮೀರದೆ ಹರಿಪದಸೇವೆಯನುಸೂರೆ ಮಾಡಿದ ತತ್ವಸಾರವ ಜನರೊಳುಮೀರಿದ ಸುಗುಣನ ಪರಮಪಾವನನ 2ಸೀತಾಪತಿಯ ಪಾದಯಾತ್ರೆಯ ಕಾಲಕೆಇತರ ವಿಷಯ ಭ್ರಾಂತಿಯಜರಿದುಪ್ರತತಿಮತಿಗುಣಾನ್ಮುಕ್ತಿಮೇತೇ ವ್ರಜಂತಿಯೆಂದುಪಥವಿಡಿದ ಪ್ರಸನ್ವೆಂಕಟೇಶ ಪ್ರಿಯನ 3
--------------
ಪ್ರಸನ್ನವೆಂಕಟದಾಸರು
ವಾಯುದೇವರು152ಎಣೆಗಾಣೆ ಭುವನದಿ ಶ್ರೀರಾಮಚಂದ್ರನ ಪ್ರಿಯವೀರಹನುಮ ಘನಧೀರ ಪ.ಬ್ರಹ್ಮ ಪಿತೃ ಪಾದಕ್ಕೆರಗಿ ಉಮ್ಮಯದಿ ಕೊಂಡಾಜೆÕಸಮನೆಶರಧಿಗೋಷ್ಪದ ಮಾಡಿ ಹೋಗ್ಯಮ್ಮ ಜಾನಕಿಗೆ ಪರಬೊಮ್ಮನುಂಗುರವಿತ್ತುಹಮ್ಮಿನ ನಿಶಾಚರನಿಗುಮ್ಮಳಿಕೆನಿತ್ತೆ 1ಕ್ರೀಡೆಯಿಂ ದಶಶಿರನನೊಡೆವನಾಯದೆ ಶಿಥಿಲಮಾಡುವನಾಗಿನಾ ಮಾತನಾಡಿ ರಮೆಯಚೂಡಾಮಣಿಯ ತಂದು ನೀಡಿ ರಾಘವಗೆ ಸುಖಮಾಡಿಸಿದೆ ಅಪ್ರತಿಮಾರುತಿ ಅತಿಧೀರ 2ಗರುವಿನ ಖಳನ ವನದತರುವಿಟಪಮೂಲಸಹಮುರಿದು ಕರಚರಣದಿ ತಂದಾನೆರದ ರಿಪುರಕ್ಕಸರ ತರಿ ತರಿದು ಮರಲುಂದಿ ರಭಸದಿಂದಸುರಪುರವನುರುಹಿದೆ 3ಕದನಕರ್ಕಶರಿಪುಗಳೆದೆಯೊದೆದು ಕೋಟಿ ಸಿಂಹದ ರಭಸದಿನಲ್ಲಿ ಬಿಸುಟಿ ಉದಧಿಯಲ್ಲಿಸುದುರ್ಲಭಾದ ನಾಕೌಷಧವ ತಂದು ರಣದಿ ಮಲಗಿದ ವೀರರಸುಗಾಯಿದೆ ಅದ್ಭುತ ಮಹಿಮ 4ಸೀತಾಪತಿಯ ಪ್ರೀತಿಯತ್ಯಾದರದಿ ಪಡೆದು ವಿಷಯಾತೀತನಾಗಿ ವಿಧಾತನಾದೆವಾತಜಾತನೆ ನಿಮ್ಮ ಖ್ಯಾತಿಯ ಹೊಗಳಲಳವೆನಾಥ ಪ್ರಸನ್ನವೆಂಕಟ ದಾತನಿಗೆ ದೂತ 5
--------------
ಪ್ರಸನ್ನವೆಂಕಟದಾಸರು