ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರೆಯದೆ ನೆನೆ ಚಿನ್ಮಯನ ಹರಿನಾರಾಯಣ ಅಚ್ಯುತನ ಪ ಮಗಳ ತಾನೆ ಮದುವೆಯಾದವನಮಗಳ ಮಗನ ಮೊಮ್ಮಗನಮಗಳ ಗಂಡನ ಮೇಲೆ ಮಲಗಿದ ಜಾಣನಮಗಳ ಮಾವನಿಗೆ ಮೈದುನನ1 ತಂದೆಗೆ ತಾನೆ ತಂದೆಯಾದವನ ತಂದೆಗೆ ತಾಯಿಯ ತಂದವನತಂದೆಗೆ ಪೂರ್ವದಿ ತಾ ಪುಟ್ಟಿಹನತಂದೆಗೆ ತಂದೆಗೆ ತಂದೆಯಹನ 2 ರಾಮನ ಸಮರೋದ್ಧಾಮನ ಸುಗುಣಾಭಿರಾಮನ ಸೀತಾನಾಯಕನರಾಮನ ಪೆತ್ತನ ಕಮಲದಳಾಕ್ಷನಪ್ರೇಮದಿ ನೆಲೆಯಾದಿಕೇಶವನ3
--------------
ಕನಕದಾಸ
ಸುನಾಮ ಗುರುವಂದಿತ ಶ್ರೀರಾಮ ಪ ಅಹಿಭೂಷಣ ನುತರಾಮ | ಮಹಿಜಾಪ್ರಿಯ ಶ್ರೀರಾಮ ಅ.ಪ ದಶರಥೇಂದ್ರ ಸುಕುಮಾರ | ನಿಶಿಚರಾಳಿ ಸಂಹಾರ | ಕೌಶಿಕ ಭಯ ಪರಿಹಾರ | ಪರಮಶೂರ ಶ್ರೀರಾಮ 1 ಮುನಿಗೌತಮ ಸತಿಪಾವನ | ಜನಕಾತ್ಮಜ ಮನಮೋಹನ | ಮುನಿಸನ್ನುತ ಸುರಜೀವನ | ವನಜೇಕ್ಷಣ ಶ್ರೀರಾಮ 2 ಜನಕಜಾ ಸುಮಿತ್ರಜಾಯುತ | ವನವನಾಂತರ ಸಂಚರಿತ | ಸನಕಾನತ ಶ್ರೀರಾಮ 3 ಭರತಾನತ ಪೂಜ್ಯಪಾದ | ಪರಮಾದ್ಭುತ ಶರ ವಿನೋದ | ಸುರಭೀಕರ ದೈತ್ಯಸೂದ | ಅಭಯಪ್ರದ ಶ್ರೀರಾಮ 4 ಖಚರಾಧಿಪ ಪ್ಲವಗೇಶ್ವರರಾಮ ವರದಾಯಕ ಭಯಹಾರಕ ರಾಮ | ಶುಭಕಾರಕ ಶ್ರೀರಾಮ 5 ನಿಶಿಚರ ಕಾಲಾಂತಕ ರಣಭೀಮ | ಸನ್ನುತ ಶ್ರೀರಾಮ 6 ಭುವನೋದ್ಧಾರಣ ಕಂಕಣ ರಾಮಾ | ಭುವನಾನಂದದ ಶ್ರೀರಾಮಾ 7 ದಾವಾನಲ ಸಮರಂಜಕ ರಾಮಾ | ರಾವಣಕುಲ ವಿಧ್ವಂಸಕ ರಾಮಾ | ಸೀತಾನಾಯಕ ಶ್ರೀರಾಮಾ 8 ರಾಕಾಚಂದ್ರ ಸುಧಾಕರ ರಾಮಾ | ಏಕಚಕ್ರಾಧಿಪ ರಘುರಾಮ | ಲೋಕಸುಖಂಕರ ಶ್ರೀರಾಮ 9 ಅಂಗದ ಹನುಮತ್ಸೇವಿತರಾಮ | ಮಂಗಳಕರ ಸೀತಾರಾಮ | ಮಾಂಗಿರಿನಿಲಯ ಶುಭಾನ್ವಿತ ರಾಮ | ಜಗವಂದಿತ ಶ್ರೀರಾಮ10
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವೇಣುನಾದ ಬಾರೊ, ವೆಂಕಟರಮಣನೆ ಬಾರೊ |ಬಾಣನ ಭಂಜಿಸಿದಂಥ ಭಾವಜನಯ್ಯನೆ ಬಾರೊ ಪಪೂತನಿಯ ಮೊಲೆಯುಂಡ ನವ-|ನೀತ ಚೋರನೆ ಬಾರೊ ||ದೈತ್ಯರಾವಣನ ಸಂಹರಿಸಿದ |ಸೀತಾನಾಯಕ ಬಾರೊ 1ಹಲ್ಲು ಮುರಿದು ಮಲ್ಲರ ಗೆದ್ದ |ಘುಲ್ಲನಾಭನೆ ಬಾರೊ ||ಗೊಲ್ಲತಿಯರೊಡನೆ ನಲಿವ |ಚೆಲ್ವ ಮೂರುತಿ ಬಾರೊ 2ಮಂದಾರವನೆತ್ತಿದಂಥ |ಇಂದಿರಾ ರಮಣನೆ ಬಾರೊ ||ಕುಂದದೆ ಗೋವುಗಳ ಕಾಯ್ದ |ನಂದನಂದನನೆ ಬಾರೋ 3ನಾರಿಯರ ಮನೆಗೆ ಪೋಪ |ವಾರಿಜಾಕ್ಷನೆ ಬಾರೋ ||ಈರೇಳು ಭುವನವ ಕಾಯ್ವ |ಮಾರನಯ್ಯನೆ ಬಾರೊ 4ಶೇಷಶಯನ ಮೂರುತಿಯಾದ |ವಾಸುದೇವನ ಬಾರೊ ||ದಾಸರೊಳು ವಾಸವಾದ |ಶ್ರೀಶಪುರಂದರವಿಠಲ ಬಾರೊ5
--------------
ಪುರಂದರದಾಸರು