ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿ ನಿನ್ನ ದಾಸರ ಸೇವೆಯ ಕರುಣಿಸೆನಗೆ ಸುರಪತಿಯ ನಾನೊಲ್ಲೆನೈ ಪ ಸ್ಮರನ ಹಾವಳಿ ಬಿಡಿಸಿ ಗುರುಭಕ್ತಿಯನು ಕೊಟ್ಟು ನಿರುತವು ನಿನ್ನ ನಾ ಸ್ಮರಿಸುವಂದದಿ ಮಾಡು ಅ.ಪ ಎಷ್ಟು ಸ್ಥಿರ ಮಾಡಿದಾಗ್ಯು ಎನ್ನ ಮನ ಬಟ್ಟ ಕುಚೆಯರ ಬಲೆಗೆ ಸಿಲುಕುತಲಿ ಬಿಟ್ಟು ನಿನ್ನಯ ಧ್ಯಾನ ಕೆಟ್ಟುಪೋಗುತಲಿದೆ ದಿಟ್ಟ ನಿನ್ನ ಮಗನ ಬಲುಹಿನ್ನೆಷ್ಟೆಂದು ಪೇಳಲೊ 1 ಕುಸುಮಗಂಧಿಯರ ಓರೆನೋಟವೆಂಬ ಮಸೆದ ಕಣೆಯ ತಾನು ಪೂಡುತಲಿ ಎಸೆ ಮೋಹತಿಗೆ ನಾ ಸೈರಿಸಲಾರೆನೋ ಬಿಸಜನಾಭನೆ ನಿನ್ನ ಸುತಗೆ ಪೇಳೋ ಬುದ್ಧಿ 2 ಅಂಗನೆಯರ ಸವಿ ನುಡಿಗಳಿಗೆ ನಾ ಮರುಗಿ ಭೃಂಗದಂತವರ ಬಲೆಗೆ ಬೀಳದಂತೆ ಸಂಗ ಸುಜನರಲ್ಲಿ ಇತ್ತು ಕಾಯೊ ದೇವ ಅಂಗಜಪಿತ ಶ್ರೀ ರಂಗೇಶವಿಠಲನೇ 3
--------------
ರಂಗೇಶವಿಠಲದಾಸರು
ದಾರಿಯ ತೋರೊ ಮುಕುಂದ - ಹರಿ-|ನಾರಾಯಣ ಗೋವಿಂದ ಪಬಂದೆನು ಬಹುಜ್ಮನದಲಿ -ನಾ-|ಬಂಧನದೊಳು ಸಿಲುಕುತಲಿ ||ಮುಂದಿನದಾವುದು ಪಯಣ -ತೋರೊ-|ಇಂದುನೀ ಇಂದಿರೆರಮಣ1ಗತಿಯಿಲ್ಲದವರಿಗೆ ನೀನೆ -ಸದ್-|ಗತಿಯೆಂದು ಸ್ತುತಿಮಾಡಿದೆನೊ ||ಗತಿಯೆಂದು ನಂಬಿದೆ ನಿನ್ನ |ಸತುವ ತೋರು ನರಹರಿಯೆ ಗೋವಿಂದ 2ಮಡವಿನೊಳಗೆ ಧಮುಕಿದೆನೆ -ಇನ್ನು-ಕಡಹಾಯಿಸುವರ ನಾ ಕಾಣೆ ||ಹಡೆದ ತಾಯಿ - ತಂದೆ ನೀನೆ -ಕೈ-|ಹಿಡಿದು ಸಲಹೊ ಎನ್ನೊಡೆಯ ಮುರಾರಿ 3ಮಿಕ್ಕಿ ಬರುವ ಹೊಳೆಯೊಳಗೆ -ನಾನು-|ಸಿಕ್ಕಿದೆ ನಡುನೀರೊಳಗೆ ||ಕಕ್ಕುಲಾತಿನಿನಗಿರದೆ |ಭಕ್ತವತ್ಸಲ ನೀ ದಯಮಾಡೋ 4ಕುಕ್ಷಿಯೊಳಗೆ ಇಂಬಿಟ್ಟು -ಎನ್ನ-|ರಕ್ಷಿಸಿ ಸಲಹಬೇಕು ||ಅಕ್ಷಯಅನಂತ ಮಹಿಮನೆ - ನೀನು |ಪಕ್ಷಿವಾಹನನೆಪುರಂದರವಿಠಲ5
--------------
ಪುರಂದರದಾಸರು