ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪನ್ನಗ ನಗಾಧೀಶ ಅಗಣಿತ ಗುಣಾನಂದ ಚಿದ್ಘನ ಪರೇಶ ಪ. ಜಗದ ಜೀವರಿಗೆ ಬಗೆ ಬಗೆ ವೇಷವ ತೊಡಿಸಿ ಸೊಗಸಿನಿಂದಲಿ ನೋಡಿ ನಗುತಲಿಹೆಯೊ ತ್ರಿಗುಣಮಾನಿನಿಯೊಡನೆ ಹಗಲಿರುಳು ಕ್ರೀಡಿಸುತ ಮಿಗೆ ಹರುಷದಿಂದಿರುವ ಖಗವರಧ್ವಜ ಹರಿಯೆ 1 ನಾನಾವತಾರದಲಿ ನಂಬಿದ ಸುರಾದಿಗಳಿ- ಗಾನವಾರಿಧಿಯ ಸ್ನಾನ ಮಾಡಿಸುವಿ ದೀನತ್ವದಲಿ ನಿನ್ನ ಧ್ಯಾನವೇ ಗತಿಯೆಂದು ನಾನಿದಿರು ಬಂದೆರಗೆ ಮಾನಿಸದೆ ಮರುಳಾಗಿ 2 ಅಂತರಾತ್ಮಕನಾಗಿ ಚಿಂತನಾದಿಗಳ ಬಲ ವಂತದಲಿ ನೀನೆ ಮಾಡಿಸಿದ ಮೇಲೆನ್ನ ಇಂತು ಬಳಲಿಸುವ ದುರಂತ ಮಹಿಮನೆ ನಿನಗೆ ಕಂತು ಬ್ರಹ್ಮರ ಜನಕ 3 ನಾನು ನನ್ನದು ಎಂಬ ಮಾನವಿತ್ತದರಿಂದ ಈ ನಳಿನಜಾಂಡವದೊಳು ನಾನು ಸಿಲುಕಿಹೆನು ಮಾನಾಭಿಮಾನಿಗಳ ನೀನೀವುದರಿಂದ ದೀನತನ ಕಳದು ಸನ್ಮಾನ ಪಾಲಿಸು ದೇವ 4 ತಂದೆತಾಯಿಗಳು ನಿಜ ಬಂಧುಬಳಗಗಳೆಲ್ಲ ಒಂದೊಂದು ಜನ್ಮದಲಿ ಬ್ಯಾರೆಬ್ಯಾರಹರು ಎಂದೆಂದಿಗೂ ನೀನೆ ತಂದೆ ನಿನ್ನರಸಿ ತಾ- ಯ್ಯೆಂದು ತಿಳಿಹೆನು ಮುಚಕುಂದ ರಕ್ಷಕ ಸ್ವಾಮಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಹಿಂಗಾಯಿತಲ್ಲಾ ಏನಿದು ಹರಿಹರಿಪ ಮಂಗನ ತೆರ ಈ ಅಂಗವ ವಿಷಯತ ರಂಗೆ ವಡ್ಡುತ ರಂಗನ ಮರೆತಿಹೆ ಅ.ಪ. ಬರಿದೆಯೆ ಹೋಗುತ್ತಿರುವುದು ಹೊತ್ತು ಹರಿಧ್ಯಾನಕೆ ಸಾಲದು ಪುರಸೊತ್ತು ತಿರುಗಲು ಮನೆಮನೆ ಸಾಲದು ಹೊತ್ತು ಸರಸಿಜನಾಭನೆ ಇದಕ್ಕೇನು ಮದ್ದು 1 ಶ್ರೀ ಕಮಲೇಶನ ಪೂಜೆಯ ಮಾಡನೆ ಆಕಳಿಸುತ ಮೈ ಕೈ ಮುರಿಯುವೆನು ಸ್ವೀಕರಿಸಲು ಸವಿ ಪಾನೀಯಂಗಳ ಮುಖಸಹತೊಳೆಯದೆನೂಕುತ ಮುಖ ಪ್ರಕ್ಷಾಳನೆ ಬಿಡುವೆ2 ಸ್ನಾನವ ಮಾಡೆನು ಸಂಧ್ಯಾ ತಿಳಿಯೆನು ಧ್ಯಾನವು ಯೆಂತೆನೆ ಕೂಳಿನ ಚಿಂತೆಯು ಆನನ ಮುಸುಕುತ ಬರಿಪಿಚಿಯೆಂದು ನಿ ಧಾನದಿ ಜಪಸರ ನೂಕುವೆನಲ್ಲಾ 3 ಮಂತ್ರವು ಬಾರದು ಸ್ತ್ರೋತವು ಬಾರದು ತಂತ್ರದಿ ನೂಕುವೆ ದೇವರ ಪೂಜೆಯ ವಿಧಿಗಳ ಮೌನದಿ ಕರ್ಮಗಳೆಲ್ಲವ ಮಂತ್ರಿಯ ಮಡಿದಿಯು ಪೇಳಿದ ತೆರದೂಳು ಯಂತ್ರ ವಿಧಾನದಿ ನುಡಿಯುವೆ ದಿನವಹಿ4 ಹೀನಕ ವೃತ್ತಿಗಳಿಂದಲಿ ಜೀವನ ವರ್ಣವಿವೇಕವ ನಡಿಸಲಸಾಧ್ಯವು ಜನ್ಮದಿ ವಿಪ್ರನು ನಾನಿಹೆ ಬರಿಸರಿ ತಿನ್ನುತ ಕುಡಿಯುತ ತಳ್ಳುವೆ ಆಯುಷ್ಯ5 ಊಟದ ಚಪಲವು ತಿಂಡಿಯ ಚಪಲವು ನೋಟದ ಚಪಲವು ಚಪಲ ಕಂದರ್ಪನ ಕಾಟದಿ ಸಿಲುಕಿಹೆ ಕೈಟಭಮರ್ದನ ದಾಟುವೆದೆಂತೋ ಭವವನು ಕಾಣೇ 6 ಏರಿದೆ ಬಹುನಿತ್ರಾಣವು ಗಾತ್ರದಿ ಮೀರಿದವಯ ಶಾಸ್ತ್ರಾಭ್ಯಾಸಕೆ ಕಾರುವರೈ ವಿಷ ಬಾಂಧವರೆಲ್ಲರು ಆ ರವಿಸುತನಾಳ್ಗಳಗು ನಾನಿಹೆ 7 ಮಡದೀ ಮಕ್ಕಳ ಪಾಶದಿ ಬಿದ್ದಿಹೆ ದುಡಿಯದ ಕಾರಣ ದುಗುಡವ ತೋರ್ಪರು ನಡೆಯದು ತುಸನನ್ನ ಮಾತೇನಿಲ್ಲ ಮಿಡುಕುತ ಮಿಡುಕುವೆ ಮುಪ್ಪಿನ ಹಿಡಿತದಿ 8 ತೋಡಿದರೂ ಎದೆ ಕಾಣೆನು ಭಕ್ತಿಯ ಕಾಡನು ಸೇರಲೊ ಬಾವಿಗೆ ಬೀಳಲೋ ಜೋಡಿಯು ಆಗಲೊ ಜೋಳಿಗೆ ಪಿಡಿಯಲೊ ಓಡದು ಬುದ್ಧಿಯು ತೋರಿಸು ಹಾದಿ 9 ಕರುಣಾಮಯ ನೀನೆಂಬುವ ಬಿರುದನು ಹಿರಿಯರ ಮುಖದಿಂ ಕೇಳಿಹೆ ಸ್ವಾಮಿಯೆ ಭರವಸೆ ಎನಗಿಹದೊಂದೇ ನಿಶ್ಚಯ ಶರಣನ ಬಿಡದಿರು ಆಪದ್ಬಾಂಧವ 10 ಪಾಮರ ನಿಹೆಬಹು ಕಲುಷಿತ ಚಿತ್ತನು ಭೀಮಾರ್ಚಿತ ಪದಯಗ ನಂಬಿಹೆ ಪ್ರೇಮವ ಸುರಿಸುತ ಕಾಯೈ ಬೇಗನೆ ಸಾಮನೆ ಶರಣೈ “ಶ್ರೀ ಕೃಷ್ಣವಿಠಲಾ” 11
--------------
ಕೃಷ್ಣವಿಠಲದಾಸರು
ಕಾಡದಿರೆನ್ನ ಕಿಡಿಗೇಡಿ ಮನವೆಓಡದಿರು ಅಚ್ಯುತಾಂಘ್ರಿನೋಡುಮನವೆಪ.ಬೆಲೆಯಿಲ್ಲದಾಯು ರತ್ನದ ಮಾಲೆ ಹರಿದಿದೆಆಲಸಿಕ್ಯಾತಕೆ ಹರಿಯ ಊಳಿಗಕೆಹುಲಿಯ ಬಾಯಿಯ ನೊಣನ ತೆರನಂತೆ ಮೃತ್ಯುಮುಖದಿಸಿಲುಕಿಹೆನು ಸರಸವಾಡದೆ ನಂಬು ಹರಿಯೆ 1ಕಂಡ ಕಡೆಯಲಿ ತಿರುಗಿ ಬಳಲಿದೆಯಲ್ಲದೆ ಬೇರೆಉಂಡುಟ್ಟು ಸುಖಿಸಿ ಯಶಸೊದಗಲಿಲ್ಲಪುಂಡರೀಕಾಕ್ಷಾಂಘ್ರಿ ಪುಂಡರೀಕವ ಹೊಂದಿಬಂಡುಣಿಯೆನಿಪರ ಸೇರು ಸಾರು 2ಗೋವರಂತಖಿಳ ಪಶುಗಳನು ದಾತಾರನಿಗೆತಾವು ಒಪ್ಪಿಸುವಪರಿಸತಿಸುತರನುದೇವದೇವ ಪ್ರಸನ್ನ ವೆಂಕಟಪಗರ್ಪಿಸಿಹೇವಹೆಮ್ಮೆಯ ಬಿಟ್ಟು ಸತತ ಹೊಗಳದೆ3
--------------
ಪ್ರಸನ್ನವೆಂಕಟದಾಸರು