ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಾಯಣ ನರಹರಿಯೆ ನರ ಜನ್ಮದಿ ಸಿಲುಕಿದೆನು ಮರಳಿ ಜನಿಸದಂದಲೆನ್ನ ಕರುಣಿಸೋ ಕ್ಷೀರವಾರಿಧಿಶಯನ ಪ ಮುರಹರ ಮಧುಸೂಧನ ಶ್ರೀಹರಿ ಧರಣೀಧರ ವರಾಹ ನಾರಾಯಣ ವಟು ವಾಮನ ಕೇಶವ ವಾರಿಜದಳನಯನ 1 ನಂದನಂದನ ಹರಿಯೆ ನಾರದವಂದಿತ ಸುರ ಸಂಹಾರಿ ಮಂದಜಾಯತನಯನ 2 ಅರಿಗದೆ ಶಂಖಾಬ್ಜ ಕರದೊಳು ಮೆರೆವ ಪೀತಾಂಬರ ಧಾರಿ ಕರಿವದನನೆ ಕಾಳಿಂಗಮರ್ಧನ ಸರಸಿರುಹದಳನಯನ 3 ಮುಳುಗಿದೆನು ಎತ್ತು ಕಮಲನಯನ 4 ಬಲ್ಲುದೇ ಕರು ಎತ್ತಿಕೋ ಹರಿಯೇ 5
--------------
ಕವಿ ಪರಮದೇವದಾಸರು
ಪಂಥ ಬೇಡವೊ ಲಕ್ಷ್ಮಿಕಾಂತ ಎನ್ನಯ ಮನದ ಚಿಂತಿತಾರ್ಥವನೀಯೊ ಸಂತತಂ ಕಾಯೊ ಪ ಚರಣ ಕಮಲವ ಕಂಡು ಶರಣು ಹೊಕ್ಕೆನು ನಾನು ಕರುಣದಿಂದನುದಿನವು ಕಾಯಬೇಕೆನುತ ಸ್ಮರಣೆಪೂರ್ವಕವಾಗಿ ಹರಣವನೆ ಹರಸಿಹೆನು ಹರಿಣನೊಳು ಬಿಲುಗಾರ ಕರುಣ ಬಿಟ್ಟಂತೆ 1 ನರಜನ್ಮವೆಂಬುದಿದು ಕರಕಷ್ಟವಾಗಿರುವ ಉರಿಯ ಮನೆಯನು ಹೊಗುವ ತೆರನಲ್ಲವೆ ಪರಿಪರಿಯ ದುಃಖಗಳು ಬರುವ ಸಮಯಾಂತರದಿ ಮರೆಯಾಗದಿರು ಎನ್ನಸ್ಥಿರದಿ ಮೈದೋರು 2 ತಪ್ಪುಗಳು ಹೊರತಾಗಿ ಅಪ್ಪ ಸೇರುವುದುಂಟೆ ಒಪ್ಪುಗೊಂಬವರಾರು ಸರ್ಪಶಯನ ಬೊಪ್ಪ ಬಹ ದುರಿತಗಳ ತಪ್ಪಿಸಿಯೆ ಕಳೆದೆನ್ನ ಮುಪ್ಪುಗಳ ಪರಿಹರಿಸೊ ಅಪ್ಪಗಿರಿವಾಸ 3 ಉರಗ ಗಿರಿವಾಸ ನಿನ್ಸೆರಗವಿಡಿವೆನು ನಾನು ಕರಗಿ ಹೋಯಿತು ಇರವು ಕಾವರಿಲ್ಲ ಮರುಗಿದರೆ ಧೈರ್ಯವನು ತಿರುಗಿ ಹೇಳುವರಿಲ್ಲ ಕುರಿ(ಗಾ)ಯ್ವ ತೆರನಂತೆ ಕೈಗೆ ಸಿಲುಕಿದೆನು 4 ಇಹಪರದ ಸೌಖ್ಯಗಳ ಕರೆದಿತ್ತು ಕರವಿಡಿದು ಸಹವಾಸವಾಗಿರ್ದು ಸಲಹಿಕೊಂಡು ವಹಿಲದಲಿ ವರವೀವ ವರಾಹತಿಮ್ಮಪ್ಪ ಬಹುಭಾರವನು ತಾಳ್ದು ಸಲಹೆನಿಸೊ ನೀನು 5
--------------
ವರಹತಿಮ್ಮಪ್ಪ
ಮೂಢನು ನಾನಯ್ಯ ನಿನ್ನನುಬೇಡಲರಿಯೆನಯ್ಯಪ. ದಯಾಸಿಂಧು ಹರಿಯೆ ದಯದಲಿ ನೋಡು ವಜ್ರದಖಣಿಯೆಭಯಪಡುವೆನು ಈ ಭವಸಾಗರದಿ ಅ-ಭಯವ ಪಾಲಿಸೊ ಹಯವದನನೆ ಹರಿ 1 ದಿಕ್ಕುಯಾರು ಇದಕೆ ಪಾಪವು ಉಕ್ಕಿತು ದಿನದಿನಕೆಸೊಕ್ಕಿ ಸಿಲುಕಿದೆನು ಯಮನ ಪಾಶಕೆಚಿಕ್ಕವನನು ನೋಡಕ್ಕರದಲಿ ಹರಿ 2 ಸಿರಿಹಯವದನನ್ನ ಶರಣರ ಶಿರೋಮಣಿರನ್ನಗುರುದೊರೆಯೆ ನಂಬಿದೆ ನಿನ್ನಕರಿಯ ರಕ್ಷಕನೆಂದು ಕರೆವೆನೊ ಮುನ್ನ3
--------------
ವಾದಿರಾಜ
ಶ್ರೀಧರಾಕರ ಕಂಜ ಸೇವಿತ ಪಾದ ಪದ್ಮಜ ಪದದ ಪುರು ಕರು- ಣೋದಧಿಯೆ ಲಾಲಿಪುದು ಪಾಮರನೆಂಬ ಬಿನ್ನಪವ ಸೋದರ ಸ್ಥಿತ ಸಕಲ ಬ್ರಹ್ಮಾಂ- ಪತಿ ನೀನರಿವಿಯಾದರು ಮಾಧವನೆ ಮನದಿರವ ಪೇಳ್ವೆನು ಮನುಜಭಾವದಲಿ 1 ಸುಕೃತ ಫಲವೋ ದೋಷದೂರನೆ ನಿನ್ನ ಪದವನು ಮೀಸಲಳಿಯದೆ ಸೇವೆ ಮಾಳ್ವದು ಲೇಸುಲೇಸೆಂದು ದಾಸಕೂಟದಿ ಸೇರಿ ಮನೆಯಲಿ ವಾಸವಾಗಿರಲಿದರ ಮಧ್ಯಮ ರಾಶೆ ಬಲೆಯಲಿ ಸಿಲುಕಿದೆನು ಕರುಣಾ ಸಮುದ್ರಹರಿ 2 ತನ್ನಿಕೃಷ್ಟ ಮನೋವಿಕಾರಗ- ಳಿನ್ನು ಬಿಡದಲೆ ಪೀಡಿಸುವ ಪರಿ ಯನ್ನು ಪರಮ ಕೃಪಾಳು ನೀನೆಂದೊರವೆನಖಿಳೇಶ ಮಾನ್ನವರ ಮಧ್ಯದಲಿ ಮಾನದಿ ಎನ್ನ ಕಾಪಾಡುವದು ಭಾರವೆ ತನ್ನ ಫಲಗಳ ತಾನೆ ಕೆಡಹುವದುಚಿತವೇ ತೆಗೆ 3 ಯುಕ್ತಿಯಲಿ ನಿನ್ನಂಥ ದೇವರ ರೆತ್ತಿ ವೈದಮೃತವನು ಸುಲಭದೊಳಿತ್ತೆ ದಿವಿಜರಿಗೆ ಔತ್ತರೇಯನ ಕಾಯ್ದ ದ್ರೌಣಿಯ ನೆತ್ತಿಯೊಳಗಿನ ರತ್ನ ಭೀಮನಿ ಗಿತ್ತ ಪರಿಯನು ಪಠಿಸಿ ತಿಳಿದೆನು ಪಾವನಾತ್ಮಕನೆ 4 ಬ್ರಹ್ಮತೇಜೋ ವೃದ್ಧಿ ಬಲಿಯೊಳು ಬ್ಯಾಡ ಸಂಗರ ನಮಗೆನುತ ನಿ- ಮ್ಮಮ್ಮನೊಳ್ ನುಡಿದಂದು ಕಶ್ಯಪನಿಂದಲವತರಿಸಿ ಬ್ರಹ್ಮಚಾರಿಯ ರೂಪದಿಂದೀ ಕ್ಷಮ್ಮೆಯನು ಸೆಳೆದಿಂದ್ರಗಿತ್ತಮ- ಹಾನ್ಮಹಿಮ ನಿನಗಾವದಘಟಿತ ನೀರಜಾರಮಣ5 ನಾರದರ ನುಡಿ ನಿಜವೆನುತ ಮೂ- ರಾರು ಭಕ್ತಿಯ ತಾಳ್ದ ಮನುವಿನೊ- ಳಾರುಭಟಿಸುತ ಕಾಶ್ಯಪನು ಮದವೇರಿ ನಿಂದಿರಲು ಯಾರು ತಿಳಿಯದ ತೆರದಿ ಕಂಭದಿ ಮೃಗ ರೂಪವನು ಹೆ- ಮ್ಮಾರಿ ದೈತ್ಯನ ತರಿದು ತ್ವತ್ಪದವಿತ್ತೆ ದಾಸನಿಗೆ 6 ಏನು ಶ್ರಮವಿಲ್ಲದಲೆ ಪಿಡಿದು ದ- ಶಾನನನ ತೊಟ್ಟಿಲಿಗೆ ಕಟ್ಟಿ ಪ್ರ- ವೀಣತೆಯ ತೋರಿಸಿದ ವಾಲಿಯ ಪಕ್ಷವನು ತ್ಯಜಿಸಿ ದೀನ ಬಾಂಧವನೆಂಬ ಬಿರುದನು ದಿಟವೆ ನಿಶಿತದ್ರಾಜ್ಯ ಪದವಿಯ ಭಾನುಜನಿಗೊಲಿದಿತ್ತ ಭಕ್ತಜನಾರ್ತಿ ಭಂಜನನೆ 7 ಶಬ್ದಗೋಚರವಾದ ಕಥೆಗಳು ಬದ್ಧವೆಂಬುದು ಪೂರ್ವದನುಭವ ಸಿದ್ಧವಾಗಿಹುದೆನಗೆ ಸಜ್ಜನಲಬ್ಧಪದ ಪದ್ಮ ಬುದ್ಧಿಹೀನತೆಯಿಂದ ನುಡಿದರು ಮಧ್ವವಲ್ಲಭ ನಿನ್ನ ದಾಸನ- ನುದ್ಧರಿಸು ನೀನಲ್ಲದೆನಗಿನ್ನಾರು ಗತಿ ಹರಿಯೆ8 ಒಡೆಯರೆಂಬರನೆಲ್ಯುಕಾಣದೆ ಉಡುವದುಂಬುದಕೇನು ದೊರೆಯದೆ ಗಿಡವ ನಿಲುಕದ ಬಳ್ಳಿಯಂದದಿ ಬಡುವ ಕಷ್ಟವನು ತಡೆಯಲಾರದೆ ತಳಮಳಿಸುತಿರೆ ಪಿಡಿದು ಕರವನು ಕಾಯ್ದೆಯೆನ್ನನು ನುಡಿವದೇನಖಿಳಾಂಡ ನಾಯಕ ನಿನ್ನ ಮಹಿಮೆಯನು 9 ಮಾರಿಯಂದದಿ ಮಧ್ಯದೊಳಗೊ- ಬ್ಯಾರುವೇನೆಂಬಧಮ ಹೂಣನು ತೀರಿಸುವೆನೆಂದೆನ್ನೊಳಿಲ್ಲದ ದೂರ ಸಂಗ್ರಹಿಸಿ ಗಾರಗೊಳಿಸುವದರಿತು ಕಕ್ಷವ ಹಾರಿಸುತ ಸುರವಂದ್ಯ ಮೂರ್ತಿಯ ತೋರಿ ತಂದಿಲ್ಲಿರಿಸಿ ಪೊರೆದವನ್ಯಾರು ಪೇಳ್ದೊರೆಯೆ 10 ಶ್ರೀಶ ನಿನ್ನ ಪದಾಬ್ಜ ಪೊಗಳುವ ದಾಸ ಕೂಟದಿ ಸೇರಿ ಸೇವೆಯ ಬ್ಯಾಸರದೆ ನಡೆಸುತಿರೆ ಮತ್ತೊಬ್ಬಾಸುರನ ತೆರದಿ ದ್ವೇಷದಿಂದಿರೆ ದೂರ ಓಡಿಸಿ ದುರಿತ ಭಯಗಳ ಪರಿಹರಿಸಿದ ಮ- ದೀಶ ನೀನೆಂದನವರತ ನಂಬಿರುವೆ ಶ್ರೀಪತಿಯ 11 ಇಷ್ಟು ಪರಿಯಿಂದೆನ್ನ ರಕ್ಷಿಸು- ತಿಷ್ಟ ಫಲಗಳನೀವ ವೆಂಕಟ ಬೆಟ್ಟದೊಡೆಯನೆ ಬೇಡಿಕೊಂಬುವೆ ಒಂದು ಕೃತ್ಯವನು ಮಾನವ ನುಡಿಯಕಾಡನು ಸುಟ್ಟು ಸೂರೆಯಗೈದು ನಾ ಮನ ಸಿಟ್ಟ ತೆರದಲಿ ತೋರು ಚಿತ್ತವ ಸೃಷ್ಟಿಕರ ಶ್ರೀಶ 12
--------------
ತುಪಾಕಿ ವೆಂಕಟರಮಣಾಚಾರ್ಯ