ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯಾನಿಧಿ ತೋರಿದ ಎನ್ನ ಜಿಹ್ವೆಯೊಳು ಪ ವಸುದೇವಾತ್ಮಜನಾದ ಕೇಶವ ದೇವಕಿ ಬಸುರೊಳಗುದಿಸಿದ ನಾರಾಯಣನು ಎಸೆದು ನಿಂದನು ಗೋಕುಲದೊಳು ಮಾಧವ ಕುಸುಮನಾಭನು ಗೋವಿಂದ ನಂದ ನಂದನಕಂದ 1 ದುಷ್ಟಪೂತನಿಯನ್ನು ವಿಷ್ಣುವೆ ಕೊಂದನು ತೊಟ್ಟಿಲ ಶಿಶುವಾಗಿ ಮಧುಸೂದನ ಮೆಟ್ಟಿ ಕೊಂದನು ತ್ರಿವಿಕ್ರಮ ಶಕಟನ ಕಟ್ಟಿಗೆ ಸಿಲುಕಿದನು ವಾಮನ ಯಶೋದೆಗೆ 2 ಬೆಣ್ಣೆಯ ಮೆದ್ದನು ಮಿಣ್ಣನೆ ಶ್ರೀಧರ ಕಣ್ಣಿಯ ಕರುವನು ಹೃಷಿಕೇಶನು ಉಣ್ಣಬಿಟ್ಟನು ತಾಯ ಮೊಲೆಯ ಪದ್ಮನಾಭ ಸಣ್ಣವ ಕ್ಷಣದೊಳು ದಾಮೋದರನಾದ 3 ವಾಸುದೇವನು ದ್ವಾರಾವತಿವಾಸನೆನಿಸಿದ ಸಾಸಿರ ನಾಮನು ಸಂಕರುಷಣನು ಆಸುರವಾಗಿಯೆ ಪ್ರದ್ಯುಮ್ನನೆಸೆದನು ದೋಷರಹಿತನಾದ ಅನಿರುದ್ಧನು 4 ಉತ್ತಮನಾಗಿ ಪುರುಷೋತ್ತಮನೆಸೆದನು ಅಧೋಕ್ಷಜ ನಾಮದಿ ಮೃತ್ಯುವಾದನು ದೈತ್ಯಕುಲಕೆಲ್ಲ ನರಸಿಂಹ ಮುಕ್ತಿದಾಯಕನಾದನಚ್ಯುತ ನಾಮದಿ 5 ಕಡಲ ನಡುವೆ ಜನಾರ್ದನನೆನಿಸಿ ತಾನು ಹಡಗನು ಸೇರಿಯೆ ಬಂದನುಪೇಂದ್ರನು ಉಡುಪಿಯ ಸ್ಥಳದೊಳು ಹರಿಯೆಂಬ ನಾಮದಿ ಕಡಗೋಲ ಕೈಯೊಳು ಹಿಡಿದು ನಿಂದಿಹ ಕೃಷ್ಣ 6 ಇಪ್ಪತ್ತು ನಾಲ್ಕು ನಾಮದ ಸ್ವಾಮಿಯು ತಪ್ಪದೆ ಒಂಬತ್ತು ಪೂಜೆಯಗೊಂಬನು ವರಾಹ ತಿಮ್ಮಪ್ಪರಾಯನು ಒಪ್ಪುಗೊಂಡನು ಮಧ್ವರಾಯನಾಗಮದೊಳು 7
--------------
ವರಹತಿಮ್ಮಪ್ಪ
ಪೊರೆಯಲಿದು ಸಮಯ ಗೋವಿಂದ ದೇವ ಶರಣರಕ್ಷಕ ನೆಂಬ ಬಿರುದು ಮೆರೆದ ಮುಕುಂದ ಪ ಬಂಧನದ ಭವದೊಳಗೆ ನಾನೊಂದು ದಿನ ಸುಖವನರಿಯೆ ಮಂದ ಮತಿಯಲಿ ತೊಳಲಿ ಕಂದಿಕುಂದಿ ಮುಂದು ಗಾಣದೆ ಯಮನ ಬಂಧದೊಳು ಸಿಲುಕಿದನು ಮಂಧರಧರ ಕರುಣಸಿಂಧು ನೀ ಬಂದು 1 ಘೋರ ತಾಪವು ಬಂದು ಸಾರಿ ಎನ್ನನು ಮುಸುಕೆ ಭೋರ ನುರಿಯಲಿ ಬಳಲಿ ಚೀರಿಹಾರಿ ದುರಿತ ವಾರಿಧಿಯೋಳ್ ಬಿದ್ದು ಬಾಯಾರಿ ಮೊರೆಯಿಡುವೆ ನರಕಾರಿ ದಯತೋರಿ 2 ತಂಡತಂಡದಿ ವೈರಿಗಳು ಕೂಡಿ ಕಾಯದೊಳು ಅಂಡುಗೊಂಡೆನ್ನಳೆದು ತಂದು ಕೊಂಡು ಹಿಂಡು ಖಂಡವನು ಸುಟ್ಟುರುವಿ ನುಂಗುವರೆನುತ ಕಂಡು ಕೊಂಡಾನು ಸಾರಿದೆನಿಂದು ಬಂದು 3 ತರಳತನ ದಾಯಸದÀಲಿ ನೊಂದೆ ಮುನ್ನಬಲು ತರುಣಿಯರ ಸಂಗದಲಿ ಮರುಳಾದೆನು ಜರೆಬಂದು ಮುಸುಕಿ ಕಣ್ಗಾದೀ ಪರಿಯಭವ ಶರಧಿಯೊಳು ಮುಳುಗಿ ಮೊರೆಯಿಡುವ ಚಿನ್ಮಯನೆ 4 ಹಿಂಗದಿದು ಭಯವ ಪೇಳಲು ತೀರದೆನಗೆ ಶ್ರೀ ರಂಗನಿನ್ನಧೀನ ಜನವರಿಯಲೂ ಮಂಗಳಾತ್ಮಕ ವಾಯುಜನ ಕೋಣೆ ಲಕ್ಷ್ಮೀಶ ನಿನ್ನ ಡಿಂಗರಿಗನ ಕಾಯ್ವುದೀಗ ಸಮಯ ಕೃಪಾಳೋ 5
--------------
ಕವಿ ಪರಮದೇವದಾಸರು