ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಲು ತಿಗಡೋ ಇದು ಬಲು ತಿಗಡೋ ಗಲಿಬಿಲಿ ಸಂಸಾರ ತಾರತಿಗಡೋ ಪ ತಿಳಿಯದರು ಎಲ್ಲ ಅಳಿದರೊಳಗೆ ಬಿದ್ದು ತಿಳಿದವರು ಗೆಲಿದರೀಮೊಲೆಮುಡಿಯೊ ಅ.ಪ ಅಲಕುಮಲಕು ಇದು ಬಲುತಂಟೋ ಜರ ಸಿಲುಕಲು ಬೀಳ್ವುದು ಕಗ್ಗಂಟೋ ಸೆಳೆದು ಮಾಯದಿಂ ಒಳಗೆ ಹಾಕಿಕೊಂಡ ಬಳಿಕ ಬಿಚ್ಚದಿದು ಬ್ರಹ್ಮಗಂಟೋ 1 ಎಣಿಕೆಗೆ ಮೀರಿದ ಹಳೆ ಗುದ್ದೋ ಇದು ಘನ ಘನ ಜನರನು ನುಂಗಿದ್ದೋ ಗುಣಿಸಿ ನೋಡದೆ ಮರ್ತು ಹಣಿಕಿಹಾಕಲಿದು ಕುಣಿ ಕುಣಿಸಿ ಕೊಲ್ಲುವ ಮೆಚ್ಚು ಮದ್ದೋ 2 ಆರಿಗೆ ತಿಳಿಯದು ಇದರ್ಹೊಲಬೋ ಜಗ ದ್ಹಾರಿಬಿದ್ದರಪ್ಪ ಸುತ್ತಿ ಮೆಚ್ಚೋ ಧೀರ ಶ್ರೀರಾಮನ ಚಾರುಚರಣಕ್ಕೆ ಸೇರಿದವರಿಗೊಂದೆ ಬಲು ಸುಲಭೋ 3
--------------
ರಾಮದಾಸರು
ಭೋಗ ಬೇರಿಹುದಣ್ಣ ಭವ ಭೋಗಗಳೆಲ್ಲವು ರೋಗಗಳಣ್ಣ ಭೋಗವ ಪೊಂದುವ ಯೋಗವ ಮರೆಸುವ ರೋಗಗಳಿಗೆ ಗುರಿಯಾಗದಿರಣ್ಣ 1 ಬಗೆ ಬಗೆ ಭಕ್ಷಗಳ ಭೋಗವು ಸೊಗಸೆಂದರಿಯದಿರು ಹಗರಣದಲಿ ತನು ದುಗುಡಕೆ ಸಿಲುಕಲು ಸೊಗಸುಗಳೆಲ್ಲವು ಹಗೆಯಾಗುವುವು 2 ಅಂಗನೆಯರ ಸರಸ ಎಳೆಯ ಭು ಜಂಗನ ಸಹವಾಸ ಅಂಗಗಳಲಿ ಬಲ ಸಡಲಲು ನಿನ್ನಯ ಹಂಗಿಲ್ಲದೆ ಮಾನಭಂಗ ಮಾಡುವರು 3 ಉಡಿಗೆ ತೊಡುಗೆ ಯೋಗ ಜಗದಲಿ ಹುಡುಗುತನದ ಭೋಗ ಗಿಡಗ ಗಿಳಿಮರಿಯನೊಯ್ಯುವ ತೆರದಲಿ ಪಿಡಿಯಲು ದೂತರು ತಡೆ ಮಾಡುವರೇ 4 ಪ್ರಕೃತಿಯೊಳ್ ಸಿಲುಕಿರಲು ಭೋಗಕೆ ಶಕುತಿ ಸಾಲದಣ್ಣ ಭಕುತ ಪ್ರಸನ್ನನು ಭಕುತಿಯೆಂಬೊ ನಿನ್ನ ಯುಕುತಿಗೆ ನೀಡುವ ಮುಕುತಿಯೆಂಬ ದಿವ್ಯ 5
--------------
ವಿದ್ಯಾಪ್ರಸನ್ನತೀರ್ಥರು
ವಿಶ್ವಪತಿ ಇಂದುಶೇಖರ ಸುರಮಸ್ತಕಮಣಿ ಮನ್ಮಥರಿಪುವೆ ವಿಸ್ತರಿಪೆನು ನಿಮ್ಮ ಮಹಿಮೆಯ ಜಗದೊಳು ಸ್ವಸ್ಥವಾಗಿ ಪ. ಎಲ್ಲಿ ನೋಡಲು ಲಿಂಗಮಯವು ಅಲ್ಲಿಗಲ್ಲಿಗೆ ತೀರ್ಥಯಾತ್ರೆಯು ಸೊಲ್ಲು ಸೊಲ್ಲಿಗೆ ಹರಮಹಾದೇವಂತೆಲ್ಲರು ಸ್ತುತಿಸುವರು ಬಲ್ಲವರು ಇದು ಭಾವಿಸಿ ಕಾಶಿಗಿಂತ ಮಹಿಮೆ ವೆಗ್ಗಳವಹುದೆನುತ ಸುಲಕ್ಷಣೆ ಶಿವಗಾತ್ರೆ ಶಿವನವಲ್ಲಭೆ ತ್ರಾಸಿನಲಿ ತೂಗುವಳು 1 ನಾಟಕದಿ ನಾನಾಜನ್ಮದಿ ಬಂದು ದಾಟದಂತರವನಳಿದನು ಚಂದ್ರ ಕೋಟಿತೀರ್ಥದಿ ಮಿಂದು ಮೈಯ ಕೋಟಲೆ ಸಂಸಾರಗಳೆಲ್ಲ ದಾಟಿದೆನು ಇನ್ನು ಜನನಮರಣಗಳೆಂಬೋಪಾಯಗಳಿಲ್ಲವು 2 ಕೂಪಾರದಲಿ ಬಂದು ಸೂಸುವ ತೆರೆಗಳು ಅಭ್ರದಿಂದಲಿ ಅಪ್ಪಳಿಸಲು ಉನ್ನತ ಭ್ರಮೆಗೊಂಡಿದ್ದ ಕರ್ಮದ ಬಲಿಗಳು ಮಿಗಿಲಾದವು ಉರ್ವಿಯೊಳಗುಳ್ಳ ಸಕಲನದಿಗಳನು ಗರ್ಭದಲಿ ಇಂಬಿಟ್ಟು ಮೆರೆದಂತಿಹ ಸರ್ಬಗೂಡಿಸುವ ಸಿಂಧುರಾಜನಲಿ ಮಿಂದು ನಿರ್ಭಯಳಾದೆನು 3 ಬಲಿದ ದನುಜನ ಭಾವಕ್ಕೆ ಮೆಚ್ಚಿ ಒಲಿದಷ್ಟವರವಿತ್ತ ಸಿಲುಕಲು ಸುಲಭನೆಂದು ಹೇರಂಬನೊಳಿತ್ತು ನೆಲೆಗೊಳಿಸಿ ಎಳೆದರೆ ಎಳೆಯಲೊಲ್ಲದೆ ಛಲವಿಡಿದ ಲಂಕಾಧಿಪತಿಯ ಅಹಂಕಾರ ವಳಿದು ಇಂದ್ರಾದಿಗಳಿಗೆ ವರವಿತ್ತ ಮಹಾಬಲಲಿಂಗನ ಕಂಡೆ 4 ಅನ್ನದಾ ಶತಶೃಂಗ ಪರ್ವತ ಪಶ್ಚಿಮದಿಂದ ಪಾತಾಳಗಂಗೆ ಸಹಿತಲಿ ಪ್ರ- ಸನ್ನನಾಗಿ ನಿಂದ ಚೆನ್ನ ಹೆಳವನಕಟ್ಟೆರಂಗನ ಪ್ರಿಯ ಪನ್ನಂಗಧರ ಪರಮಪವಿತ್ರ ಗೋಕರ್ಣೇಶನ ಕಂಡೆ ಪಾ- ವನವಾಯಿತು ಎಲ್ಲಾ ಕುಲಕೋಟಿಯು 5
--------------
ಹೆಳವನಕಟ್ಟೆ ಗಿರಿಯಮ್ಮ