ಒಟ್ಟು 7 ಕಡೆಗಳಲ್ಲಿ , 2 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರೆದುಣ್ಣಲಿಲ್ಲಾ ಹರಿನಾಮ ಕಾಮಧೇನುವನು ಪ ಹೊರೆಯಲು ಅನುವಾಗಿ ಬಂದಿರಲು | ಮನುಜ ಮೈ ಮರೆವರೆ ನೀನು 1 ಮನವೆಂಬ ಕರುಬಿಟ್ಟು ಘನ ಭಕ್ತಿ ಮುರವಿಟ್ಟು | ತನುವಿನ ಪಾತ್ರೆಲಿ ನೀನು 2 ಕರುಣದಾ ಕೆಚ್ಚಲು ತೊರೆದು ಭೊರ್ಗರೆಯಲು | ಅರಿವೆಂಬ ಕೈಯಿಂದ ನೀನು 3 ಗುರು ಮಹಿಪತಿಕಂದಗರುಹಿದ ನಿಜಾನಂದ ಸಿರಿಸುಖವ ಪಡೆಯಲು ನೀನು 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯ ಜಯ ಕರುಣಾಕರ ಗುರುದೇವ ವಾಸುದೇವ ಧ್ರುವ ಮುನಿಜನ ಪಾಲಕ ದೀನ ದಯಾಳ ಅನಾಥ ಬಂಧು ಶರಣಾಗತ ವತ್ಸಲ ಸನಕಾದಿಗಳೊಂದಿತ ಸಿರಿಸುಖಲೋಲ ಅನುದಿನ ಅಣುರೇಣುಕ ನೀನೆ ಸುಕಾಲ 1 ಪತಿತ ಪಾವನ ಪರಮ ಉದಾರ ಭಕ್ತವತ್ಸಲ ಮಾಮನೋಹರ ಅತಿಶಯಾನಂದ ಸುಜ್ಞಾನಸಾಗರ ಚತುರ್ದಶ ಭುವನಕೆ ನೀ ಸಹಕಾರ 2 ದೇಶಿಕರಿಗೆ ದೇವ ನೀನೇ ನಿಧಾನ ವಿಶ್ವಪಾಲಕ ಸ್ವಾಮಿ ನೀ ಸುಗುಣ ಭಾಸ್ಕರ ಕೋಟಿ ತೇಜ ನೀನೇ ಪೂರ್ಣ ಲೇಸಾಗ್ಹೊರಿಯೊ ದಾಸ ಮಹಿಪತಿ ಪ್ರಾಣ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾರಯ್ಯ ಭಕ್ತವತ್ಸಲ ಬಾರೋ ಶ್ರೀ ಹರಿ ಗೋಪಾಲ ಸಿರಿಸುಖಲೋಲ ಧ್ರುವ ಸಾಮಗಾಯನ ಪ್ರಿಯ ಸಮಸ್ತಲೋಕದ ಶ್ರೇಯ ನೇಮಿಸಿ ಬೀರೊ ದಯ ಸ್ವಾಮಿ ನಮ್ಮಯ್ಯ 1 ಅನಾಥರನುಕೂಲ ಮುನಿಜನ ಪ್ರತಿಪಾಲ ಘನಸುಖದ ಕಲ್ಲೋಳ ದೀನದಯಾಳ 2 ದೀನಮಹಿಪತಿಗಾಳು ಘನವಾಗಿ ಕೇಳು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭವತ್ಕರುಣಿ | ಗುರುಹಿರಿಯರ ಅನುಸರಣಿ ಪ ಜ್ಞಾನ ಭಕುತಿ ಕಲೆ ತಾನರಹಿಸುವ | ಸ್ವಾನುಭವದ ಸುಖಭರಣಿ 1 ಮಂಗಳ ಘನಸುಖ ಇಂಗಿತ ದೋರುವಾ | ಕಂಗಳ ಸಿರಿಸುಖ ಕರಣಿ 2 ತಂದೆ ಮಹಿಪತಿ ನಂದನು ಸಾರಿದಾ | ತರಣಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮೋಹ ಬೇಡಣ್ಣಾ ಸಂಸಾರದೊಳು ಪ ಎರವಿನ ಕಂಗಳು ಎರವಿನ ಶ್ರುತಿಯೊಳು | ನಾಸಿಕ ಎರವಿನ ನಾಲಿಗೆ | ಎರವಿನ ಕರಗಳು ಎರವಿನ ಪಾದವು | ಎರವಿನ ಬುಧ್ಯರವಿನ ಬದುಕು 1 ಎರವಿನ ಹಣಗಳು ಎರವಿನ ಭೂಷಣ | ವಾಹನ ಎರವಿನ ಸಿರಿಸುಖ | ಎರವಿನ ತರುಣಿಮದ್ಯೆರವಿನ ಸುತರು | ಎರವಿನ ಬಂಧು ಎರವಿನ ಬಳಗಾ 2 ಹರಿಯೇ ಕರ್ತನು ಹರಿ ಸೂತ್ರಾತ್ಮನು | ಗುರುಮಹಿಪತಿ ಪ್ರಭು ಹರಿ ಪರವೆಂದು | ಹರಿಯನೆ ಸ್ಮರಿಸಿ ಹರಿಯನೇ ಧ್ಯಾನಿಸಿ | ಹರಿಯನೆ ಪೂಜಿಸಿ ಹರಿ ಪದಹೊಂದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿದಾಸನವನೇ ನೋಡಿ| ಬರೇ ವೇಷ ದೋರಲ ಬೇಡಿ ಪ ಒಂದರ ಘಳಗೆಯ ಕುಂದದಿ ಕಳೆಯಾ|ಮು| ಕುಂದನ ನಾಮವ ಛಂದದಲಿಹ 1 ಅನ್ಯರ ದೂಷಿಸಿ ತನ್ನನೇ ಹೊಗಳನು| ಸಣ್ಣ ದೊಟ್ಟದರಲಿ ಘನ್ನರಿತಿಹ 2 ಹುಲ್ಲ ಮನುಜರಿಗೆ ಹಲ್ಲವದೆರಿಯದೆ| ಫುಲ್ಲನಾಭನಪದದಲಿಹ ಮನ 3 ಮುಂದಿನ ಹಾನಿಯು ಇಂದಿವೆ ತೋರಲಿ| ಮುಂದಿಟ್ಟಟಡಿಯನು ಹಿಂದಕೆಳೆಯ 4 ನುಡಿವದು ಸಲಭ ನಡೆವುದು ದುರ್ಲಭ| ನಡೆನುಡಿಯಲಿ ಸಮಧೃಡಗಂಡಿಹ 5 ಹಂಗವಳಿದು ಸತ್ಸಂಗದಿ ಶ್ರವಣದಿ| ಕಂಗಳ ಸಿರಿಸುಖ ಮಂಗಳಲಿಹ 6 ತಂದೆ ಮಹಿಪತಿ ನಂದನ ಪ್ರಭುದಯ| ದಿಂದ ಭವಾಲಯ ಸಂದ ಜರಿದ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿಯಾ ಪಾದಕ ಶರಣೆನ್ನಿ | ಸ್ಮರಣೆಗೆ ಹರಿಯನು ಕರೆತನ್ನಿ ಪ ಅವನ ನಾಮವನೆನಿಯಲು ಭಕುತಿಲಿ | ಭವಭಯ ಮೂಲದಿ ನೀಗುವದು | ಆವಾಗ ಕಂಗಳ ಸಿರಿಸುಖ ದೋರುತ | ಜೀವನ ಗತಿನೆಲೆ ಹೊಂದುವದು 1 ಸಿಕ್ಕಿತ್ತು ನರದೇಹ ದೊರಿಯಲು ಪುಣ್ಯದಿ | ಸರ್ಕನೆ ಸಂತರ ಮೊರೆಹೊಕ್ಕು | ದಕ್ಕಿಸಿಕೊಳ್ಳದೇ ಬೋಧಾಮೃತವನು | ಪುಕ್ಕಟೆ ದಿನವನು ಗಳೆವರೇ 2 ತನುವಿದು ನೋಡಲು ನೆಚ್ಚಿಕೆ ಇಲ್ಲದ | ಮನಿಗಂಧರ್ವದ ಪುರದಂತೆ | ತನುವಿಗೆ ಹತ್ತಿದ ಸಂಸಾರ ಸುಖ | ಕನಸಿನ ಭಾಗ್ಯವ ತೆರೆದಂತೆ 3 ಇದರೋಳು ನಾ ನನ್ನದು ಎಂದೆನುತಲಿ | ಮದಮತ್ಸರವಾ ಬಗೆಯಲಿ | ಕುದಿಕುದಿದೇಳು ತಜ್ಞಾವಿಹೀನದಿ | ಉದರವ ಹೊರವುತ ತಿರುಗವರೇ 4 ಈಗಾಗಯನ್ನದೇ ಹರಿನಾಮವ | ನಾ | ಲಿಗೆ ಕೊನಿಯಲಿ ತಂದಿರಿಸೀ | ಭವ | ಸಾಗರ ಸುಳಿಯಿಂದಲಿ ತರಸೀ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು