ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲ ಭಯ ಎಲ್ಲ ಭಯ ಕ್ಷುಲ್ಲಕ ಜನಗಳಿಗೆಲ್ಲ ಭಯ ಪ ತಲ್ಲಣಿಸದೆ ಸಿರಿವಲ್ಲಭನಲಿ ಮನ ನಿಲ್ಲಿಸುವರಿಗೆಲ್ಲ ಜಯ ಅ.ಪ ಇರಲು ಭಯ ಧನವಿರಲು ಭಯ ಇಲ್ಲದಿದ್ದರೆ ತಿರಿದುಂಬೊ ಭಯ ನೆರೆ ಹೊರೆ ಜನಗಳ ಸಿರಿಯನು ನೋಡಲು ಉರಿಯುವ ಜನಗಳಿಗೆಲ್ಲಿ ಜಯ 1 ಎಲ್ಲ ಜಯ ಎಲ್ಲ ಜಯ ಬಲ್ಲ ಸುಜನಗಳಿಗೆಲ್ಲ ಜಯ ಪೊಳ್ಳು ಜೀವನದ ಜಳ್ಳು ಸೌಖ್ಯಗಳ ಒಲ್ಲೆನೆಂಬುವರಿಗೆಲ್ಲ ಜಯ 2 ಸರಳ ಜನರ ನೋಡುವುದೆ ಭಯ ದುರುಳ ಜನಕೆ ತಮ್ಮ ನೆರಳನು ಕಂಡರೆ ಅಧಿಕ ಭಯ 3 ಜ್ಞಾನ ಜಯ ದಿವ್ಯ ಜ್ಞಾನ ಜಯ ಜ್ಞಾನದಿಂದ ಹರಿಸ್ಥಾನ ಜಯ ಹಾನಿಯ ನೀಡುವ ನಾನಾ ಭೋಗವ ಮೌನದಿ ತ್ಯಜಿಪರಿಗೇನು ಭಯ 4 ಒಂದು ಜಯ ನೂರು ಭಯ ದ್ವಂದ್ವಗಳನು ಸಹಿಸದ ನರಗೆ ತಂದೆ ಪ್ರಸನ್ನ ಶ್ರೀಕೃಷ್ಣನ ಚರಣ ದ್ವಂದ್ವ ಸೇವಕರಿಗೆಂದೂ ಜಯ 5
--------------
ವಿದ್ಯಾಪ್ರಸನ್ನತೀರ್ಥರು
ಎಲ್ಲಿರುವುದೋ ಸಿರಿವಲ್ಲಭನೆ ನಿನ ಗಲ್ಲದ ಕಾರ್ಯಗಳು ಪ ಕಲ್ಲಾಗಿದ್ದ ಅಹಲ್ಯಯೆ ನಿಮಿಷದಿ ಚಲ್ವೆಯ ಮಾಡಿದ ನಲ್ಲ ತ್ರಿಭುವನದಿ ಅ.ಪ ಶರಧಿಯೆ ವಾಸವು ಗರುಡನೆ ವಾಹನ ಉರಗಪತಿಯೆ ನಿನ್ನ ಪರಿಯಂಕ ಶರಧಿ ಕುಮಾರಿಯು ವರರಮಣಿಯು ಸುರ ವೀರರು ನಿನಗೆ ಕಿಂಕರರಾಗಿರಲು 1 ಕಂಬದಿ ಜನಿಸಿದೆ ಅಂಬಿಗರವಳನು ಸಂಭ್ರಮದಲಿ ನಿನ್ನ ಜನನಿಯೆನಿಸಿದೆ ಅಂಬುಜ ಮಿತ್ರನ ತನಯಗೆ ಮರುತನ ಬೆಂಬಲವರಿಯುತ ಉಳಿಸಿದೆ ಗೆಲಿಸಿದೆ 2 ಅಮಿತ ಕಾರ್ಯಗಳ ಕ್ರಮದಲಿ ನಡಿಸಿದೆ ವಿಮಲ ತನೋ ಸುಮನಸರೊಡೆಯನೆ ಕ್ಷಮಿಸಿ ಎನ್ನಯ ಮೋಹ ತಿಮಿರವ ತೊಲಗಿಸೊ ಸುಮನ ಪ್ರಸನ್ನನೆ 3
--------------
ವಿದ್ಯಾಪ್ರಸನ್ನತೀರ್ಥರು
ಕರಗತನಾಗಿರಲು ಶ್ರೀಕೃಷ್ಣನು ಪ ಪುರಜನಗಳಿಗಿನ್ನು ಕೊರತೆಗಳುಂಟೆ ಅ.ಪ ಪರಮದಯದಿ ತನ್ನ ನೆರಳಿನೊಳೆಲ್ಲರ ಪೊರೆಯುತಿರುವ ನಮ್ಮ ಸಿರಿವಲ್ಲಭನು 1 ನಾಡಿನ ಭಕುತರ ಕೂಡಿಸಿ ಮುದದಲಿ ಬೇಡಿದ ವರಗಳ ನೀಡುವ ದೊರೆಯು 2 ಬಿಡಿಬಿಡಿ ನಿಮ್ಮಯ ಕಡು ಕ್ಲೇಶಗಳೆಂದು ಗಡಗಡ ದುಂದುಭಿ ಹೊಡೆಸುವ ಧೀರನು 3 ಪತಿತ ಪಾವನೆಂದು ಪ್ರಥೆಯನು ಪೊಂದಿಹ ಕ್ಷಿತಿಸುರರೊಡೆಯನು ಅತಿಸುಲಭದಿಲಿರೆ 4 ಎನ್ನನು ಸೇವಿಸಿ ಧನ್ಯರಾಗಿ ಎಂದು ಸನ್ನೆಯನೀವ ಪ್ರಸನ್ನ ಶ್ರೀಮಾಧವ 5
--------------
ವಿದ್ಯಾಪ್ರಸನ್ನತೀರ್ಥರು
ಪೊಗಳು ಮನವೆ ನೀ ಯುಗಯುಗದಲಿ ‌ಘನ ಸೊಗಸಿಲಿಂದ ಗುರು ಜಗನ್ನಾಥರಾಯರ ಪ ಪುಲ್ಲಜಾಂಡದಿ ಸಿರಿವಲ್ಲಭನ ಪದ ಪಲ್ಲವ ಪೂಜಿಸಿದ ಸಹ್ಲಾದರಾಯರ 1 ಮಾನವಿಕ್ಷೇತ್ರದಿ ಧೇನಿಪ ಸುಜನರ ಮಾಣದೆ ಕಾಯುವ ಮಹಾನುಭಾವರ ಸದಾ 2 ಧರಿವರ ಶಾಮಸುಂದರ ಚರಿತಾಮೃತ ಸರಸ ಸುಗ್ರಂಥವ ವಿರಚಿಸಿದೋಡೆಯರ 3
--------------
ಶಾಮಸುಂದರ ವಿಠಲ
ಎಷ್ಟು ಮರುಗಿದರು ನಿನ್ನ ಹಣೆಯ ಬರೆಹಅಷ್ಟಲ್ಲದಿಲ್ಲ ಸ್ತುತಿ ವಚನದ ಫಲ ಕಂದಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಅಂಬರದೊಳಾಡುವ ಪಕ್ಷಿ ತನ್ನ ವಶವಹುದೇಉಂಬುವರ ಕರುಬಿದಡೆ ಉದರ ತುಂಬುವುದೇಕಂಬಳಿಯ ಕೊಡಲು ಕನಕಾಂಬರ ತನಗಹುದೆಹಂಬಲಿಸಿ ಹಲವ ಹಲುಬಿದಡೆಸಿರಿಬಹುದೆ1ಇಲ್ಲದುದ ಬಯಸಿ ಬೇಡಿದೊಡೆ ಭಂಗಬಹುದೊಬಲ್ಲೆನೆಂದೊಡೆ ಮಣಿಸದೆ ಬಿಡಳು ವಿಧಿಯುಬಲ್ಲಿದನು ಬಡವನಿವನೆಂದು ನೋಡರುಸಿರಿವಲ್ಲಭನ ಮಗಳ ಮೀರುವರಾರು ಕಡೆಗೆ2ಸಿರಿಗೆ ಹಿಗ್ಗದೆ ಬಡತನಕೆ ಬೆಂಡಾಗದಿರುಸೇರಿದ ನೆಲೆಯಲಾ ಸುಖ ಸಾವ ಕಾಲದಲಿಶರಣ ಜನಾಶ್ರಿತ ನೆಲೆಯಾದಿಕೇಶವನಚರಣಕಮಲವ ಭಜಿಸಿ ಸುಖಿಯಾಗು ಮನವೆ3
--------------
ಕನಕದಾಸ