ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಷದಿ ತಾ ಸಖಿ ತ್ವರದಿ ಆರುತಿಯ ದ್ವಿರದ ವರದ ಶಿರಿನರಹರಿಗೆ ಪ ನಿಗಮ ತಂದವಗೆ ನಗಧರ ಕ್ರೋಢಗೆ ಮಗುವಿನ ಸಲಹಿ ಜಗವ್ಯಾಪಿಸಿದಗೆ ಭೃಗುಜಾ, ರಘುಜಾ ವ್ರಜಜಾರ್ತಿ ಹರಣ ವಿಗತವಸನ ತುರುಗನೇರಿದಗೆ 1 ಗರುಡ ಗಮನಗೆ ಶರಧಿಶಯನಗೆ ಸುರನದಿ ಪಿತ ಭೂಸುರ ಪ್ರಿಯಗೆ ಅರುಣಾ, ಚರಣಾ ಕರುಣಾಕರಮಂ- ದರಧರ ಶರಣರ ಪೊರೆವ ಸಿರಿವರಗೆ 2 ಛಳಿಮಳೆ ಸಹಿಸುತ ಛಲದಲಿಧೇನಿಪ ಬಲುವಿಧ ಭಕ್ತಾವಳಿ ಹೃನ್ಮಧ್ಯದಿ ಪೊಳೆವಾ, ನಲಿವಾ ಕಳೆವಾಘವ ಭೂ-ವಲಯದಿ ಕಾರ್ಪರ ನಿಲಯ ನರಹರಿಗೆ 3
--------------
ಕಾರ್ಪರ ನರಹರಿದಾಸರು
ಹರಿಪಾದ ಮರೆಹೊಕ್ಕು ಪರಿಭವವ ಗೆಲಿರೋ ಪರಮ ಪರತರ ಕರುಣಶರಧಿ ಸಿರಿವರಗೆ ಪ ಕುಲವನು ಗಣಿಸದೆ ಎಳೆಬಾಲನೆಂದಪ್ಪಿ ಬಲು ಉಗ್ರರೂಪದಿಂ ಬಲವಾಗಿ ಕಾಯ್ದ ಖಳನನುಜನೆಂಬುದನು ತಿಲಮಾತ್ರ ತಿಳಿಯದೆ ಒಲಿದು ಸ್ಥಿರಪಟ್ಟವನು ಸುಲಭದಿಂ ಕೊಟ್ಟ 1 ಬಡತನವ ಕಡೆಮಾಡಿ ಸಡಗರದಿ ಕಾಯ್ದ ಕಡುಮುಕ್ತಿಸಂಪದ ತಡೆಯದಲೆ ಕೊಟ್ಟ 2 ತರುಣಿ ದ್ರೌಪದಿಮಾನ ಪೊರೆದಿಂಬುಗೊಟ್ಟ ಕರುಣಾಳು ಶ್ರೀರಾಮ ಜರಹೇವ ಇಲ್ಲದಲೆ ಚರಣದಾಸರ ಮನೆಯ ತುರಗ ತಿರುವಿದನು 3
--------------
ರಾಮದಾಸರು