ಒಟ್ಟು 8 ಕಡೆಗಳಲ್ಲಿ , 6 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಔಷಧದ ಬೇರೊಂದನು ನಾರದನು ತಂದ ಪೋಷಣೆಗೆ ಸಕಲರೂ ಸವಿಯಲೆಂದ ಪ ಜ್ವರಭೇದಗಳಿಗೆಲ್ಲ ನರಹರಿ ಎಂಬ ಬೇರು ಶಿರವೇಧೆ ಎಂಬುದಕೆ ಹರಿಹರಿ ಎಂಬ ಬೇರು ವಾತ ರುಜೆಗಳಿಗೆ ಸಿರಿಲೋಲನೀ ಬೇರು ಪರಿಪರಿಯ ಭವಗಳಿಗೆ ನಾರಾಯಣಾ ಎಂಬ ಬೇರು 1 ಪಿತ್ತರೋಗಂಗಳಿಗೆ ಚಿತ್ತಜನಪಿತನೆಂಬ ಪೃಥ್ವಿಯೊಳಗತ್ಯಧಮ ವಿಭಂದ ರೋಗಗಳಿ ಗರ್ಥಿಯಿಂ ಲೇಪಿಸುವ ಸತ್ವಗುಣನಿಧಿಯೆಂಬ ನಿತ್ಯಶೌರಿಯ ನಾಮ ಶಿವಬೇರು 2 ನಾರದನು ಬೇರೂರೆ ನೀರೆರೆದ ಪ್ರಹ್ಲಾದ ಧೀರಬಲಿ ಬೆಳೆಯಿಸಿದ | ನೀರ ಗಜನೆರೆದ ವೀರದಶಶಿರನನುಜನೆಚ್ಚರದೊಳಿದ ಕಾಯ್ದ ನಾರಿ ದ್ರೌಪದಿ ಶಿರದಿ ಮೊಗ್ಗಾಗಿ ಧರಿಸಿದಂಥ 3 ಅರಳಿದ ಸುಮಗಳನು ಅಕ್ರೂರ ಪೋಷಿಸಿದ ತ್ವರಿತದಿ ಕಾಯ್ಗಳನು ಶುಕದೇವ ಕಾಯ್ದ ನರರೆಲ್ಲರೀ ಫಲವ ದಿನದಿನವು ಮೆಲಲೆಂದು ವರದ ಮಾಂಗಿರಿರಂಗ ಪೇಳುತಿಹನು 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದೇವ ನೀನಹುದೈ ಭುವನತ್ರಯದ ಜೀವ ವಾಸುದೇವ ಧ್ರುವ ದೇವಕಿಯ ಕಂದ ದೈತ್ಯಾರಿ ಶ್ರೀ ಗೋವಿಂದ ಮಾಧವ ಮುಕುಂದ 1 ಮದನ ಮೋಹನಮೂರ್ತಿ ಯದುಕುಲೋದ್ಭವ ಕೀರ್ತಿ ಆದಿ ಪಾಂಡವ ಸಾರ್ಥಿ ಬುಧಜನರ ಸ್ಪೂರ್ತಿ 2 ಶರಣ ಜನರಾಭಣ ಸಿರಿಲೋಲನೆ ಪೂರ್ಣ ತರಳ ಮಹಿಪತಿಸ್ವಾಮಿ ಘನಕರಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಜಿಸು ಮನವೆ ಭಜಿಸು ಮನವೆ ಅಜ ಸುರ ಮುನಿ ವಂದಿತ ಪಾದ ಪೂಜಿಸು ನಿಜಸ್ವರೂಪ ನಿತ್ಯ ಸುಜನ ಮನೋಹರನ 1 ಪರಮಪುರುಷ ಪರಂಜ್ಯೋತಿ ಪಾರಾವಾರ ಹರಿಗೋಪಾಲ ಕರುಣಾಕೃಪಾಲ ಮೂರುತಿ ಸ್ವಾಮಿ ಸಿರಿಲೋಲನ 2 ಅತೀತ ಗುಣಾನಂತಮಹಿಮ ಪತಿತಪಾವನ ಪೂರ್ಣ ಸತತ ಸದೋದಿತ ಪಾದ ಅತಿಶಯಾನಂದನ3 ಅವ್ಯಕ್ತ ಅವಿನಾಶ ಸು ದಿವ್ಯ ಸುಪವಿತ್ರದಾಗರ ಘವಘವಿಸುವ ದಿವ್ಯ ತೇಜ ರವಿಕೋಟಿ ಕಿರಣನ 4 ಅನಾಥಬಂಧು ಅನುದಿನ ಅಣುರೇಣು ತೃಣಪೂರ್ಣ ಪ್ರಾಣದೊಡೊಯ ಮಹಿಪತಿ ದೀನದಯಾಳುನಾ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮುದ್ದು ಮೋಹನದಾಸರೆ | ಎನ್ನನು ಬೇಗ ಉದ್ಧರಿಸಿರಿ ಪ್ರೀತರೆ ಪ. ಬಿದ್ದಿಹೆ ದುರ್ವಿಷಯಾಂಧ ಕೂಪದೊಳೀಗ ಶುದ್ಧ ಜ್ಞಾನವನಿತ್ತು ಪದ್ಮನಾಭನ ತೋರಿ ಅ.ಪ. ಪರಮಯತಿಚರ್ಯರೆ | ಈ ಜಗದೊಳು ವರ ಭಕ್ತಿವೆಗ್ಗಳರೆ ತರಳತನದಲಿ ಪಾದಚಾರಿಗಳಾಗಿ ಧರೆಯ ಕ್ಷೇತ್ರವನೆಲ್ಲ ಚರಿಸಿರ್ಪ ವಶಗೈದು ಹರಿಯ ಮೆಚ್ಚಿಸಿ ದಾಸಭಾವದಿ ಪರಿಪರಿಯ ಅಂಕಿತದಿ ಶಿಷ್ಯರ ಪರಮ ಸಂಭ್ರಮಗೊಳಿಸಿ ಮೆರೆಯುತ ಸಿರಿವರನ ಪದಸಾರಿದಂಥ 1 ಶೀಲವಂತರೆ ನಿಮ್ಮನು | ಕೊಂಡಾಡೆ ಈ ಸ್ಥೂಲಮತಿಗೆ ಸಾಧ್ಯವೆ ಕಾಲಕಾಲದಿ ಹರಿಲೀಲೆಯ ಪಾಡುತ ನೀಲವರ್ಣನ ಹೃದಯಾಲಯದಿ ಕಂಡು ಮೂಲರೂಪಿಯ ಪಾದಕಮಲದಿ ಲೋಲುಪಡುತಲಿ ಓಲ್ಯಾಡಿದ ಬಹು ಶೀಲಗುಣಗಣಪಾಲರೆ ಎನ್ನ ಪಾಲಿಸಿರಿ ಸಿರಿಲೋಲನ ತೋರಿ 2 ಸಂದೇಹವಿನ್ಯಾತಕೆ | ಮಂತ್ರದ ಮನೆ ಮಂದಿರದೊಳಗಿರೆ ಬಂದಿರಿ ದಾಸತ್ವದಿಂದ ಧರೆಯೊಳು ನಂದಕಂದನ ಲೀಲೆ ಅಂದ ಪಾಡುತಲಿ ಅಂದು ಗ್ರಂಥಗಳನೋದಿ ಪದವನು ಒಂದು ರಚಿಸಿ ಸಾಲದೆ ಮು- ಕುಂದನಾ ಗುಣವೃಂದ ಪೊಗಳಲು ಚಂದದಿಂದ ವಸುಂಧರೆಯೊಳು 3 ವರತತ್ವ ಅಂಶದಲಿ | ಶ್ರೀ ಗುರುವಿಗೆ ತಾರಕರೆನಿಸಿದಿರಿ ಸಾರಿರೆ ನಿಮ್ಮ ಪದ ಸ್ವಪ್ನದೊಳು ತೋರಿ ತೀರುಥವನೆ ಕೊಟ್ಟು ಸುಮ್ಮನಿರಲು ಗುರು ಸಾರಿ ಬಂದು ಬದಿಯಲಿ ನಿಂದು ಭೂರಿ ಕರುಣವ ಮಾಡಬೇಕೆಂದು ತೋರಿ ಪೇಳಲು ಹರಿ ನಿರ್ಮಾಲ್ಯ ಅಪಾರ ಕರುಣದಿ ಕೊಟ್ಟು ಪೊರೆದಿರಿ 4 ಸ್ತುತಿಸಲಳವೆ ನಿಮ್ಮನು | ಈ ಜಡಮತಿ ಕೃತಕವಲ್ಲವು ಇದಿನ್ನು ಅತಿಪ್ರೇಮ ಗುರುಗಳ ಹಿತದಿಂದ ನುಡಿದುದು ಚ್ಯುತದೂರ ಗೋಪಾಲಕೃಷ್ಣವಿಠ್ಠಲನ ಸತತ ಸ್ತುತಿಸುವ ಮತಿಯ ಪಾಲಿಸಿ ಪಥವ ತೋರಿರಿ ಕರ್ಮಜರೆ ಬೇಗ ಸತತ ಶ್ರೀ ಗುರು ವ್ರತವ ಪಾಲಿಪ ಮತಿಯ ದೃಢದಲಿ ಹಿತದಿ ಕರುಣಿಸಿ 5
--------------
ಅಂಬಾಬಾಯಿ
ಯಾಕೆ ಕಳವಳವೋ-ಮಾನಸ ನಿನಗ್ಯಾಕೆ ಕಳವಳವೋ ಪ ಶ್ರೀಕಳತ್ರನು ಜಗದೇಕ ನಾಯಕ ನಿರಲ್ಯಾಕೆ ಅ.ಪ. ಹೊಟ್ಟೆಯೊಳಿರಲನ್ನ ವಿಟ್ಟು ಕಾಪಾಡಿದ ಸೃಷ್ಠಿಪಾಲಕ ಪರಮೇಷ್ಠಿಜನಕ ನಿರೆ 1 ಬಾಲನಾಗಿರೆ ಮೊಲೆಪಾಲ ನಿರ್ಮಿಸಿ ಪರಿ ಪಾಲಿಸಿದವ ಸಿರಿಲೋಲನಲ್ಲವೇ 2 ಲೋಪವಿಲ್ಲದೆ ಕಾಯ್ವ ಶ್ರೀಪತಿ ಪುಲಿಗಿರಿ ಭೂಪವರದ ವಿಠ್ಠಲಾ ಪದ್ರಕ್ಷಕ ನಿರಲ್ಯಾಕೆ ಕಳವಳವೋ 3
--------------
ಸರಗೂರು ವೆಂಕಟವರದಾರ್ಯರು
ಯಾಕೆ ಕಳವಳವೋ-ಮಾನಸ ನಿನಗ್ಯಾಕೋ ಕಳವಳವೋ ಪ ತ್ರೀಕಲತ್ರನು ಜಗದೇಕನಾಯಕನಿರಲ್ಯಾಕೆ ಅ.ಪ ಹೊಟ್ಟೆಯೊಳಿರನ್ನವಿಟ್ಟು ಕಾಪಾಡಿದ ಸೃಷ್ಟಿ ಪಾಲಕ ಪರಮಷ್ಠಿ ಜನಕನಿರಲು 1 ಬಾಲನಾಗಿರೆ ಮೊಲೆಪಾಲ ನಿರ್ಮಿಸಿ ಪರಿ ಪಾಲಿಸಿದವ ಸಿರಿಲೋಲನಲ್ಲವೆ 2 ಲೋಪವಿಲ್ಲದೆ ಕಾಯ್ವ ಶ್ರೀಪತಿ ಪುಲಿಗಿರಿ ಭೂಪÀ ವರದವಿಠಲಾಪದ್ರಕ್ಷಕನಿರಲು 3
--------------
ವೆಂಕಟವರದಾರ್ಯರು
ಸಾಸಿರ ನಾಮವ ಹಾಡೆ | ತಂಗಿ ಪ ದಾಸರು ಬಂದರೆ ಕೈ ಜೋಡಿಸಿ ವಂದಿಸೆ ತೋಷದಿ ವರಗಳ ಸೀಡುವರಮ್ಮ ಅ.ಪ ಪರಿಮಳ ಭರದಲಿ ಮೆರೆಯುವ ಹೂಗಳ ಅರಸಿ ತಂದಿರುವಳು ನೀನಲ್ಲವೇ ಪರಮ ಮಂಗಳಕರ ಸರಸಿಜಪಾದಕೆ ಹರುಷದೊಳರ್ಪಿಸೆ ಮರೆಯದಿರಮ್ಮ 1 ಮಂದರಧರ ಗೋವಿಂದನು ಮನದಲಿ ನಿಂದಿರುವನು ತಾನೆಂದೆಣಿಸಮ್ಮ ಬಂಧಿಸಿ ಪಂಚೇಂದ್ರಿಯಗಳನೆಲ್ಲ ವಂದಿಸಿ ಕೈಪಿಡಿ ಎಂದು ಬೇಡಮ್ಮ 2 ಅಂಗನೆಯರ ಭಾವಭಂಗಿಗೆ ನಲಿಯುವ ಮಾಂಗಿರಿಯರಸನು ನಿಜವಮ್ಮ ಇಂಗಿತವರಿತು ಗೋಪಾಂಗನೆಯರಿಗಾ- ಲಿಂಗನವಿತ್ತವನಿವನಮ್ಮ 3 ಇವನಮ್ಮ ಮನದೈವ ಗೋಪಾಲನು ಇವನಮ್ಮ ಪರದೈವ ನೀಲಾಂಗನು ಭವದೂರ ಸುಕುಮಾರ ಸಿರಿಲೋಲನು ನವನೀತ ದಧಿಚೋರ ಸುವಿಲಾಸನು 4 ಪರಮಾರ್ಥ ಚರಿತಾರ್ಥ ವರದಾತನು ಪರತತ್ವ ಚಿರತತ್ವ ಗುರುವೀತನು ದುರಿತಾರಿ ಉಪಕಾರಿ ಪರಮಾತ್ಮನು ಸಿರಿರಂಗ ಮಾಂಗಿರಿಯ ದೊರೆಯೀತನು 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹರಿನೀನೇ ಗತಿಯೆಂದು ನೆರೆನಂಬಿದವರನುಮರೆತಿರುವುದು ನ್ಯಾಯವೆ? ಪಗರುಡಗಮನ ನೀ ಸಿರಿಲೋಲನಾರಿಗೆ |ಅರಸಿ ಎನ್ನನು ಕಾಯ್ವ ದೊರೆಗಳಿನ್ನಾರಯ್ಯ ಅ.ಪಮುಟ್ಟಿ ಪೂಜಿಸಿ ನಿನ್ನ ಇಷ್ಟವ ಬೇಡುವದೃಷ್ಟಿಯೆನ್ನೊಳಗಿದೆಯೆ?ಕಷ್ಟವ ಪಡಲಾರೆ ಸೃಷ್ಟಿಯೊಳಗೆ ಎನ್ನದುಷ್ಟ ಕರ್ಮವ ಬಿಡಿಸಿ ದಿಟ್ಟನೆಂದೆಣಿಸೊ 1ಭುಜಗಶಯನ ನಿನ್ನ ಭಜಕರ ಹೃದಯದಿನಿಜವಾಗಿ ನೀನಿಲ್ಲವೇ?ಅಜನ ಪಿತನೆ ಕೇಳು ತ್ರಿಜಗವೆಲ್ಲವು ನಿನ್ನಸುಜನಪಾಲಕನೆಂದು ಭಜನೆ ಮಾಳ್ಪುದ ಕಂಡು 2ಭಾಗವತರರಸನೆ ಯೋಗಿಗಳೊಡೆಯನೆಬಾಗಿ ಬಿನ್ನಯಿಪೆ ನಿನ್ನಸಾಗರ ಶಯನನೆ ನೀಗಿಸಿ ಶ್ರಮವನುಜಾಗುಮಾಡದೆ ಎನ್ನ ಬೇಗದಿ ಕಾಯಯ್ಯ3ತುಂಟರೈವರ ತುಳಿದು ಕಂಟಕನೊಬ್ಬನ ಕಳೆದು |ಎಂಟು ಮಂದಿಯ ಗರುವವನಳಿದು ||ನಂಟ ನೀ ಬಂದೆನ್ನ ಕಂಟಕವನೆ ಬಿಡಿಸಿ |ಉಂಟಾದ ವೈಕುಂಠ ಬಂಟನೆಂದೆನಿಸೊ 4ಧರಣಿಯೊಳಗೆ ನೀ ಸುಜನರ ಸಲಹುವಬಿರುದು ಪಡೆದವನಲ್ಲವೆ? ||ಸಿರಿರಮಣನೆ ಎನ್ನ ಕರುಣದಿಂದಲಿ ಕಾಯೊ |ಪರಮಪುರುಷಸಿರಿಪುರಂದರವಿಠಲ5
--------------
ಪುರಂದರದಾಸರು