ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಹುದಹುದೊ ಹನುಮಂತ ನಿನ್ನ ಮಹಿಮೆಅಹಿತರೆದೆಶೂಲ ನಿಜಪಾಲ ಹರಿಪದಲೋಲ ಪ. ಬೇಡಿದರಿಗಭಯಹಸ್ತದ ಪ್ರಸಾದವನಿತ್ತುಕೂಡೆ ಮನದಭೀಷ್ಟಗಳ ಕೊಡುವೆಆಡಲನ್ನಳಕೊವಿಯನೊಡದು(?)ರಿಪುಖಳ ವಿ-ಭಾಡನೆಂದೆನಿಸಿ ಸೋದೆಯ ಜನರ ಪೊರೆದೆ 1 ರಾಮಲಕ್ಷ್ಮಣರ ಪೆಗಲಲಿ ಹೊತ್ತುಕೊಂಡು ನಿ-ಸ್ಸೀಮನೆಂದೆನಿಸಿ ಸುಗ್ರೀವನಪ್ರೇಮದಿಂದಲಿ ತಂದು ಅವನಿಗಭಯವಿತ್ತುಭೂಮಿಕಪಿಗಳ ಕೂಡಿ ಸೀತೆಯನರಸಿದೆ2 ಮಂಡೋದರಿಯ ಸುತನ ತುಂಡುಚೂರ್ಣವ ಮಾಡಿತಂಡ ತಂಡದ ಅಂಗಡಿಯ ಸಾಲೆಯಲಿಚಂಡ ಪಾವಕÀನಿಪ್ಪ ಸವುದೆಯೊಳು ಖಳರಹಿಂಡ ಹೋಮಿಸಿ ರಣಾಧ್ವರಕೆ ವೀಕ್ಷಿತನಾದೆ3 ಸ್ವಾಮಿಕಾರ್ಯದಿ ದುರಂಧರನೆನಿಸಿ ನಿನ್ನ ಪದಪ್ರೇಮ ವರ್ಧಿಪುವುದೇನು ಚಿತ್ರತಾಮಸಜನರ ಸೀಮೆಯೊಳು ಪೂಜೆಯಗೊಂಬಧೀಮಂತ ನಿನಗಲ್ಲದುಳಿದವರಿಗುಂಟೆ 4 ಗಿರಿವನವ ತಂದು ವಾನÀರ ಸಮೂಹವ ರಕ್ಷಿಸಿದೆದುರುಳ ರಾವಣನ ನೀನೆ ಗುದ್ದಿ ಧರೆಯೊಳಗೆಸಿರಿರಾಮನ ಪಂಥ ಗೆಲಲೆಂದುತಿರುಗಿದೆಯೆಲೊ ಹಯವದನನ ಮೋಹದ ಬಂಟ5
--------------
ವಾದಿರಾಜ
ಏನೆಂದೆ ಏನೆಂದೆ ಪ ನಾನೇನೆಂದೆನೆ ಗಾನಲೋಲಗವ ಮಾನದ ಮಾತಿಂಥ ಜೀನನ ಕಾಣೆನೆಂದೆ ಅ.ಪ ಕಾಲು ಇಲ್ಲದ ಹೆಳವನೆಂದೆ ತಲೆಯ ಕಾಣದ ಕುರೂಪಿಯೆಂದೆ ಚೆಲುವಿಕಿಲ್ಲದ ಕಾಡು ಹೀನಮೃಗವೆಂದೆ ಬಲಿಯ ಬಾಗಿಲ ಕಾಯ್ವ ಕೂಲಿಕಾರನೆಂದೆ1 ನಾಲಗೆ ಚಾಚಿ ರಕ್ತ ಕುಡಿದನೆಂದೆ ತಿಳಿದು ಜನನಿತಲೆ ಕಡಿದವನೆಂದೆ ಲಲನೆಯೊಡನೆ ವನವಾಸಕೆ ಪೋಗಿ ಬಳಲಿ ಬಳಲಿ ಬಾಯಾರಿದನೆಂದೆ 2 ಗೊಲ್ಲರ ಕುಲದಲಿ ಹುಟ್ಟಿದನೆಂದೆ ಗುಳ್ಳೆ ಗುಳ್ಳೆ ಬೆಣ್ಣೆ ಕದ್ದವನೆಂದೆ ಗೊಲ್ಲರ ಅಕಳ ಕಾಯುವ ಚರನೆಂದೆ ಫುಲ್ಲನಲನೆಯರ ವಸ್ತ್ರಗಳ್ಳನೆಂದೆ 3 ಬತ್ತಲೆ ಕುಣಿಕುಣಿದಾಡಿದನೆಂದೆ ಸತ್ಯಭ್ರಷ್ಟ ಮಹಕಲಿಯು ಈತನೆಂದೆ ಮತ್ತೆ ವೈಕುಂಠದಿ ಒದೆಸಿಕೊಂಡು ಇವ ವಿತ್ತದಾಸೆಗೆ ಮತ್ರ್ಯಲೋಕಕಿಳಿದವನೆಂದೆ 4 ಕುದುರೆ ನಡೆಸಿ ಒಬ್ಬನುಳಿಸಿದನೆಂದೆ ಕದನದ್ವೊಂಚಿಸಿ ಒಬ್ಬನಳಿದವನೆಂದೆ ಕುದುರೆ ಕಟ್ಟಿದ ವೀರ ತಾಮ್ರಧ್ವಜಗೆ ಸೋತು ಮುದುಕನಾಗಿ ಭಿಕ್ಷದಶ್ವ ತಂದವನೆಂದೆ 5 ಸೋದರಮಾವನ ಕೊಂದವನೆಂದೆ ಸೋದರಳಿಯರ ಜೀವ ಹೊಡೆಸಿದನೆಂದೆ ಭೇದದಿಂದ ಸಾಧು ಹನುಮನ ಸೋಲಿಸಿ ಸಾಧಿಸ್ವರೂಪಕ್ಕೆ ಪತಾಕೆನಿಸಿದನೆಂದೆ 6 ಜಾರ ಸಿರಿ ಸೊರೆಗೊಂಡವನೆಂದೆ ಮೀರಿದಂಥ ಮಹಮಾಯದ ಹೆಣ್ಣೆಂದೆ ಈರೇಳುಲೋಕದ ಕಪಟನಾಟಕನೆಂದೆ 7 ಮೊಚ್ಚೆಗಾರ ಕೈಯೊಳುಂಡವನೆಂದೆ ಉಚ್ಚಿಷ್ಟನಾಗಿ ಬಹಿಷ್ಕಾರ್ಹೊಂದಿದನೆಂದೆ ವೆಚ್ಚಮಾಡಿ ಮತ್ತು ಕುಲದಿ ಬಿದ್ದವನೆಂದೆ ನಿಶ್ಚಲ ಭಕ್ತರಿಗ್ಹುಚ್ಚ್ಹಿಡಿಸಿದನೆಂದೆ 8 ಪುಲ್ಲನಯನ ಸಿರಿರಾಮನ ಮುಂದೆ ಅಲ್ಲದ ಮಾತುಗಳ್ನಾನೇನೆಂದೆ ಬಲ್ಲಿದ ಹದಿನಾಲ್ಕು ಲೋಕ ಪೊತ್ತವನೆಂದೆ ಉಲ್ಲಾಸದಿ ನಿಮ್ಮ ಬಿರುದು ಸಾರುತ ಬಂದೆ 9
--------------
ರಾಮದಾಸರು
ಜಯ ಮಂಗಳಂ ಸತ್ಯಧೀರತೀರ್ಥರಿಗೆ ಶುಭಮಂಗಳಂ ಯತೀ ಗುಣಮಣಿಗೆ ಪ ಜಗದುದರಧರನಾದ ಜಗವ ಸೃಷ್ಟಿಸಿದಂಥ ಜಗವ ಪಾಲಿಸುವ ಶ್ರೀ ಜಗದೀಶನಾ ತ್ರಿಗುಣಮಾನಿಯಳಿಂದ ಬಗೆ ಬಗೆಯ ಸ್ತುತಿಗೋಳ್ವ ರಘುವರನ ದಿವ್ಯ ಚರಣಗಳ ಸೇವಿಪಗೆ 1 ಜಗದೀಶನಾಜ್ಞೆಯಿಂ ಜಗಕೆ ಗುರುವೆನಿಸಿ ನಾ- ಲ್ಮೊಗನೈಯ್ಯ ಸರ್ವಪರಿಹಾರನೆನಿಸಿದವಗೆ ಜಗದೊಳಿರುವ ಅಜ್ಞ ಜನರುಗಳಿಗೆ ಪಂಚಮು- ದ್ರೆಗಳನೇ ಇತ್ತು ಪಾಪಗಳ ತರಿದವಗೆ 2 ಸತ್ಯವೀರರು ಕರಗಳೆತ್ತಿ ಉತ್ತಮಪದವ ಇತ್ತದ್ದೆ ಪುಸಿಯೆಂದು ನುಡಿದವರ ಮುಖಕೆ ಮೃತ್ತಿಕೆಯನು ಹಚ್ಚಿ ಹತ್ತುಯಂಟೋ ರೂಪ ಸ- ರ್ವೋತ್ತಮನ ಪೂಜಿಸಿದ ಸತ್ಯಧೀರರಿಗೆ 3 ಪುರಕಾಶಿಯಿಂದ ರಾಮೇಶ್ವರದ ಪರಿಯಂತ ಇರುವ ಕ್ಷೇತ್ರಗಳಲ್ಲಿಯ ಮಹಿಮೆಯಾ ದುರುಳ ಕಲಿಯಲಿ ಕಡಿಮೆಯಾಗಬಾರದು ಮನುಜ ಸಿರಿರಾಮನಾಶ್ರಯದಿ ಜನಿಸಿ ಬಂದವಗೆ 4 ಕರುಣಾಸಾಗರನಿಗೆ ಕರೆದಲ್ಲಿ ಬರುವಗೆ ಶರಣುಬಂದವರ ಪರಿಪಾಲಿಸುವಗೆ ವರಗುರು ಮಧ್ವರಾಯರ ಪೀಠಪಾತ್ರಗೆ ಧೀರ ಹನುಮೇಶವಿಠಲ 5
--------------
ಹನುಮೇಶವಿಠಲ
ವರ ಹಳ್ಳೇರಾಯಾ ಮಾಂಪಾಲಯ ಪ ಕರ ಮುಗಿವೆನು ದುಮ್ಮದ್ರಿನಿಲಯ ಅ.ಪ ತರಣಿ ಕುಲತಿಲಕ ಸಿರಿರಾಮನ ಪದ ಸರಸಿಜ ಮಧುಕರ ಸುರಗಣ ಸೇವ್ಯಾ 1 ಸೋಮ ಕುಲಜ ಬಲರಾಮನನುಜನ ಪ್ರೇಮಪಾತ್ರ ಬಲಭೀಮನೆ ಕೃಪಯಾ2 ಸಿರಿಕೃಷ್ಣನೆ ಪರತರನೆಂದರುಹಲು ವಿರಚಿತ ಶಾಸ್ತ್ರ ಶ್ರೀ ಗುರು ಮಧ್ವಾರ್ಯ 3 ಯವನ ಕುಲದಿ ಭಜಿಸುವರಿಗೊಲಿದೆಯಾ ಅವನಿಸುರಾರ್ಚಿತ ಶ್ರೀ ಪವಮಾನತನಯಾ4 ಶರಣು ಜನಕೆ ಸುರತರುವೆಂದೆನಿಸಿದ ಸಿರಿಕಾರ್ಪರ ನÀರಹರಿಗತಿ ಪ್ರೀಯಾ 5
--------------
ಕಾರ್ಪರ ನರಹರಿದಾಸರು
ಹರಿಸರ್ವೋತ್ತಮನೆಂದರಸುವರು ಪ ಹರಿದಾಸರಿವರು ಧರೆಯೊಳಿವರಿಗೆ ಸರಿಗಾಣೆ ಕೇಳಮ್ಮ ಜಾಣೆ ಅ.ಪ ಸಾಧುಸಜ್ಜನರಿಗೆ ಬಾಗುವರು ವೇದಕೆ ನಮಿಸುವರು ವಾದವಾಂಛಲ್ಯವ ತೊಡದಿಹ್ಯರು ಭೇದಿಲ್ಲದಿವರು 1 ಕಾಮ ಕ್ರೋಧಾದಿಗಳು ಜೈಸಿಹ್ಯರು ತಾಮಸಬಿಟ್ಟಿಹರು ಭೂಮಿ ಮೋಹಾದಿಗಳನಳಿದಿಹ್ಯರು ಸ್ವಾಮಿನ ಭಜಿಸುವರು 2 ಕ್ಲೇಶಪಂಚಕದಿಂದುಳಿದಿಹ್ಯರು ಮೋಸಕೆ ಒಳಪಡರು ಅಶಪಾಶಗಳೆಲ್ಲ ತುಳಿದಿಹ್ಯರು ವಾಸನೆ ತೊಳೆದಿಹ್ಯರು 3 ಮೆಚ್ಚದೆ ಸಂಸಾರ ತುಚ್ಛೀಕರಿಸಿಹ್ಯರು ಎಚ್ಚರಗೊಂಡಿಹ್ಯರು ಅಚ್ಚುತಾನಂತನೆ ಗತಿಯೆಂಬುವರು ಬಚ್ಚಿಟ್ಟು ನೆನೆಯುವರು 4 ಹರಿಯೆ ಪರದೈವವೆಂದರಿತಿಹ್ಯರು ಹರಿಯ್ಹೊರತಿಲ್ಲೆಂಬುವರು ಸರುವ ಜಗಭರಿತನೆಂದವರು ಸಿರಿರಾಮನ್ನ ತಿಳಿದಿಹ್ಯರು 5
--------------
ರಾಮದಾಸರು