ಒಟ್ಟು 8 ಕಡೆಗಳಲ್ಲಿ , 8 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯೇ - ಕಮಲಾಲಯೆ ಶ್ರೀ ಲಕುಮೀ | ಭಕುತ ಸುಪ್ರೇಮಿ ಪ ಕಾಯಜ ಜನನಿಯೆ | ಮಾಯ ಭವದೊಳೆನ್ನಕಾಯ ಮುಳಗದೂ | ಪಾಯವ ಕಲ್ಪಿಸಿ ಅ.ಪ. ಸತಿ ಸತ್ಯ ರುಕ್ಮಿಣಿ ಯನ್ನನು | ಶಿಷ್ಟ ಜನರೊಳಿಟ್ಟು ಶ್ರೇೀಷ್ಠ ಸಾಧನವೀಯೆ 1 ಯಾತ್ರೆ ತೀರ್ಥಂಗಳ ಮಾಡರಿಯೇ | ಕೈ ಮುಗಿವೆನು ಸಿರಿಯೇಪಾತ್ರಾ ಪಾತ್ರಂಗಳ ನಾನರಿಯೇ | ದಾನೆಂಬುದನರಿಯೇಮಾತ್ರಾ ಸ್ಪರ್ಶಂಗಳ ಗೆಲಲರಿಯೇ | ಮನನಿಲ್ಲದು ಸರಿಯೇ |ಗಾತ್ರಗಳಿಸಿತಿದು ವಿಧಾತೃಜನನಿಯೇ | ಸೂತ್ರಗತನ ಈ | ಗಾತ್ರದಿ ತೋರಿಸಿ 2 ಇಂದಿರೆ ಗುರು ಗೋವಿಂದ ವಿಠಲನರಸಿ 3
--------------
ಗುರುಗೋವಿಂದವಿಠಲರು
ತೆರೆ ಬಾಗಿಲವ ಸುಗುಣೆ ಸುಂದರಿ ಮುಗಿವೆ ಕರವನುನಗಧರನ ಚರಣಕಮಲಯುಗಳ ನೋಳ್ಪೆನು ಪ ಪೇಳಿದವರು ಯಾರು ನಿನಗೆ ಕೀಲಿ ಹಾಕಲುಶೀಲಲಾಮನೊಬ್ಬನಾಜ್ಞೆ ಕೇಳಿ ನಡೆವಳು 1 ಹರಿಯು ಎಷ್ಟು ಸಾರೆ ನಿನಗೆ ತೆರೆಯ ಕೀಲಿಯೆಕರೆದು ಪೇಳಿದಾನೆ ಮಾತು ಸಿರಿಯೇ ಮರೆತೆಯಾ 2 ಬಾರೋ ಎಂದು ನೀನೆ ಎಷ್ಟು ಸಾರಿ ಕರೆದೆಯಾನಾರಿಮಣಿಯೆ ಬಂದರ್ಹೀಗೆ ತೋರ್ಪೆ ರೀತಿಯಾ 3 ಇಂದು ಹರಿಯ ದ್ವಾರದಲ್ಲಿ ಬಂದು ನಿಂತಿಹೆಮಂದಗಮನೆ ಕೀಲಿನೀನು ಬಂಧ ಮಾಳ್ಪರೆ 4 ಇಷ್ಟು ನೋಡಿ ಇಂದಿರೇಶನ ಭೆಟ್ಟಿ ಭರದಲಿಕೃಷ್ಣೆ ಬಂದು ತೆರೆಯೆ ಕೀಲಿ ದೃಷ್ಟಿಯಾಗಲು 5
--------------
ಇಂದಿರೇಶರು
ನೀ ಕೃಪೆ ಮಾಡೋ ಹರಿಯೇ ಲೋಕವಿನುತ ಸಿರಿಯೇ ಪ ಶ್ರೀಕರ ಭಾಸ್ವರಾ ಭಕ್ತಸುಧಾಕರ ಶೋಕಹರಣಾ ನೀ ಶೂರಾ ಅ.ಪ ನಡು ನೀರೋಳೆನ್ನ ಕೈಯ ಬಿಡಬೇಡ ಮಾರನಯ್ಯ ಅಡಿಗೆರಗುವೆನಯ್ಯ ಕೊಡು ನಿನ್ನ ನಾಮಾವಳಿಯ ದೃಢದೆ ಭಜಿಪೆನಯ್ಯ ಮೃಡನುತಾನೇ ಗೋವಿಂದಯ್ಯ 1 ಕಳೆದ ದುರಿತಾವೃತ ಉಳಿದುದು ವೋವರಾ ಅಳಿವ ಕಾಲವಿದಿನ್ನು ಬಳಲಿಸೋಲುವೆ[ನಯ್ಯ] ಘಳಿಲನೆ ನಿನ್ನ ನಾಮಾವಳಿಯ ಸ್ಮರಣೆಯ 2 ಅನ್ಯರ ಭಜಿಸೆನು ಅನ್ಯರ ನುತಿಸೆನು ಅನ್ಯರಿಗೆರಗೆನು ಅನ್ಯರ [ಪೂಜಿ]ಸೆನು [ಅ ನನ್ಯ ಶರಣನೆ ಮನ್ನಿಸೊ ಶರಣುಬಂದಿಹೆನು] 3 ಕಾವಧೀರನು ಇನ್ನು ಅವನೇ ಶ್ರೀಹರಿ ಸೇವಕರಿಗೆ ನಾನು ಸೇವಕನೆನ್ನುತಾ ಭಾವಿಸೋ ದೇವದೇವಾ ಮಾವಿನಾಕೆರೆರಂಗ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮರದೆನೋ ಯನ್ನ ಶ್ರೀಹರಿಯೇ ಭಕ್ತರಿಸಿರಿಯೇ ಸ್ಮರಿಸುವರ ಧೊರಿಯೇ ಭಜಿಸವರನ ಬಿಡದಲೆ ಬಿರುದು ನಿನ್ನದೆಂದು ಪೇಳುತಿರೆ ಶೃತಿ ಪ ತಂದೆ ಕಂದನ ಭಾದಿಸಲು ಶ್ರೀಧರ ಬೇಗ ಬಂದೆನ್ನ ಸಲಹೆನ್ನಲು ಮಂದರಧರ ವಳಿ- ತೆಂದು ಸಂಧಿಸಿ ಕಾಲದ್ವಂದ್ವ ರೂಪವನೇ ಕರುಣಾಸಿಂಧು ಶ್ರೀಹರಿ 1 ಅಂದು ಅಜಾಮಿಳನು ಅಕ್ಷರದ್ವಯದಿಂದ ಮುಕ್ತನಾದನು ಕುಂದರದನ ದ್ರೌಪದಿ ಮಾನಕಾಯಿದಿ ಇಂದಿರೇಶನೆ ಮುದದಿ ಭವ ಬಂಧನದಿ ಬಲುನೊಂದೆನೋ ಇಂದು ವದನ 2 ಘನತರ ಶಿಲೆಯಾಗಿರಲು ಪಾದಸ್ಮರಿಸಲಾಕೆಯು ದುರಿತ ಕರಿವರದ 'ಹೆನ್ನೆಯ ಉರಗಶಯನಾಂಬುರುಹ ನಯನ 3
--------------
ಹೆನ್ನೆರಂಗದಾಸರು
ಲಾಲಿತ್ರಿ ಗುಣಗಾತ್ರ ಲಕ್ಷ್ಮಿಕಳತ್ರಾ ಲಾಲೀ ಪ ನೀರೊಳಗೆ ಮನೆಯು ಮಾಡಿಓಡ್ಯಾಡೀ | ಕೋರೆಯನೆ ಮಸೆದು ಭೂಮಿಗೆ ಕಡೆದಾಡೀ ಮೋರೆಯನು ಮುಚ್ಚಿಕೈಕಾಲು ತೂಗ್ಯಾಡೀ ಘೋರ ರೂಪವ ಧರಿಸಿ ಬಲಿದಾನವನೆ ಬೇಡೀ 1 ಕೊಡಲಿಯನು ಪಿಡಿದು ಮಾತೆಯ ಶಿರವನೇ ಒಡೆದೂ ಮಡದಿಗೋಸ್ಕರ ದಶಶಿರನ ಶಿರವತರಿದೂ ತುಡುಗ ತನದಿ ಮೊಸರು ಗಡಿಗೆಗಳ ಒಡೆದೂ ಮಡದಿಯರ ವ್ರತಭಂಗ ಮಾಡಿದೆಯೊ ಪಿಡಿದೂ 2 ಹಯವನೇರಿದ ಹರಿಯು ಬಹುಜನರ ಪೊರೆಯೇ ಚೆಲುವ ಮೂರುತಿ ತೊಟ್ಟಿಲೊಳು ಮುದ್ದು ಸುರಿಯೇ ಪರಮ ಪುರುಷ ಸದ್ಭಕ್ತರ ಸಿರಿಯೇ ಪವಡಿಸೋ ನರಸಿಂಹ ವಿಠಲಾ ಧೊರಿಯೇ ಲಾಲೀ 3
--------------
ಓರಬಾಯಿ ಲಕ್ಷ್ಮೀದೇವಮ್ಮ
ಶುಕಪಿತನ ಪದಕಂಜ ಪದುಪಾ | ಅಖಿಳ ಲೋಕದ ಗುರುವೆ ಸುಖ ತೀರ್ಥ ಮುನಿಪಾ ಪ ನಿತ್ಯ ನೈಮಿತ್ಯಗಳು | ಗತಿ ತಪ್ಪಿ ಪೋಗಿರಲು ಸರ್ವ ದೇವತೆಗಳು || ಪಥವ ಕಾಣದೆ ನೆರೆದು ಯೋಚಿಸಿ ತಮ್ಮೊಳು | ಅತಿಶಯದಿ ವೊದರಿ ಕೇಳು ಭವನದಾ | ಪತಿಯಾದ ಬೊಮ್ಮಗುಸರಿದರಂದು ಮೇಲು1 ತುತಿಸಲಾಕ್ಷಣ ಕೇಳಿ ಅಜನು ಶಿರದೂಗಿದನು | ಕೃತಭುಜರ ಸಹವಾಗಿ ಹರಿಪುರಕೆ ಸಾಗಿದನು | ನತನಾಗಿ ಶಿರಿಪತಿಯ ಪದಯುಗಕೆ ಬಾಗಿದನು | ಗತಿ ನೀನೆ ಎಂದು ಕೂಗಿದನು ಹರಿ ಕೇಳಿ | ಸತತ ನಿನ್ನನ್ನು ಕರೆದು ಪೇಳಿದವೇಗಿದನು 2 ಭೂಸುರನ ಗರ್ಭದಲಿ ಬಂದೆ ನೀನವತರಿಸಿ | ವಾಸುದೇವನೆಂಬ ನಾಮದಿಂದಲಿ ಜನಿಸೀ | ಭಾಸುರ ಕೀರ್ತಿಯಲಿ ಮೆರೆÀದೆ ಬಲು ಪಸರಿಸಿ | ದೋಷ ವರ್ಜಿತದ ಗುಣರಾಸಿ ಎನಿಸುವಾ | ಲೇಸು ಆರೈದೆರಡು ಲಕ್ಷಣ ಸಂನ್ಯಾಸಿ 3 ಪುಟ್ಟಿ ಇಳಿಯೊಳಗೆ ಸಂಕರನೆಂಬ ದುರವಾದಿ | ಜಟ್ಟಿಗನಾಗಿ ಸೋsಹಂ ಯೆಂಬ ಅತಿ ಕ್ರೋಧಿ | ಅಟ್ಟಹಾಸದಲಿ ತಿರುಗಿದನು ಬೀದಿ ಬೀದಿ | ಘಟ್ಟವಚನದಿಂದ ಕಾದಿ ಅವನ ಮುರಿ | ದೊಟ್ಟಿದೇ ವಪ್ಪದಲಿ ಮಾಯಿ ಮತಭೇದಿ 4 ಅಮೃತ | ಗ್ರಂಥ ಉತ್ತಮರಿಗೆರೆದು ಸುಖ ಬಡಿಸಿದೆ ಅತಿಶ್ಯಾಂತ | ಅತ್ಯಂತ ಮಹಿಮ ಬಲವಂತ ನಿಮಗೆ ನಾ | ಎತ್ತಿ ಕರಗಳ ಮುಗಿವೆ ತೋರು ನಿಜ ಪಂಥ 5 ಹರಿಯೆ ಪರನೆಂದು ಬೊಬ್ಬರಿದು ಎಳಹರಿ | ಮರಿಯೆ ಬಿರಿದು ಡಂಗುರವ ಹೊಯಿಸಿ | ಚರಿಸಿದ ಗುರು ದೊರೆಯೇ | ಸರಿಗಾಣೆ ನಿನಗೆಲ್ಲಿ ಮತ್ತೊಬ್ಬರನ ಕರಿಯೇ | ವರ ಬದರಿಲಿಪ್ಪ ವೈರಾಗ್ಯದ ಸಿರಿಯೇ 6 ಮುನಿಗಳೊಳಗೆ ರನ್ನ ಮುನಿದವರಿಗಿರಬೆನ್ನ | ಘನ ವಿದ್ಯಸಂಪನ್ನ ಗುಣದಲ್ಲಿ ಅಚ್ಛಿನ್ನ | ನೆನೆದವರ ಪ್ರಸನ್ನ ತನುವೆ ತಪುತ ಚಿನ್ನ | ಮಿನಗುವಂತೆಯಿಪ್ಪ ಪಾವನ್ನ ಮಧ್ವಮುನಿ | ಚಿನುಮಯ ವಿಜಯವಿಠ್ಠಲನ್ನ ಪ್ರಸನ್ನಾ7
--------------
ವಿಜಯದಾಸ
ಹೇಳಯ್ಯಾ ಶ್ರೀ ಗುರುವೇ ಬಾಳುವೆನದರಂದವಿ ಸುರ ತರುವೇ ಪ ಹೀನ ಯೋನಿಯ ಮುಖದಲಿ ಬಂದು ನಾನಾ ತಾಪತ್ರಯದಿ ಬಹುನೊಂದು ನೀನೆ ಗತಿಯನುತ ಬಂದೆ ನಿಂದು ನಾನು ಭವದಿಂದ ತರಿಸುವ ಉಪಾಯವ ವಂದು 1 ಕೇಳಯ್ಯಾ ನೀ ಕಂದಾ ಹೇಳುವ ನುಡಿ ಗ್ರಹಿಸಲಾನಂದಾ ಆದಿಯಲಿ ದುರ್ಜನ ಸಂಗವಳಿದು ಸಾಧುಜನಸಂಗವನೇ ಬೆರೆದು ಬೋಧೆಯಂದಲಿ ಮನನವ ಬಲಿದು ಸಾಧಕನ ಉದ್ಯೋಗಿಸ ಸಿದ್ಧಿಯಹುದು2 ಸ್ವಾಮಿ ಸಜ್ಜನ ಸಂಗವನೇ ಬಯಸಿ ಪ್ರೇಮದಿರಬೇಕು ಇದೇ ನಿತ್ಯವೆನಿಸಿ ತಾಮತ್ತರ ಘಳಿಗಿಯೊಳು ವಲಿಸಿ ಭ್ರಮಿಸುತಿಹಿದು ಅದು ಏನೆಂದು ವಿಸ್ತರಿಸಿಹೇ3 ಕೇಳಯ್ಯಾ ಲೋಕವೆಲ್ಲಾ ಛಲನೆ ಮಾಡುವುದು ವಿಕಲ್ಲುಳ್ಳದು ನೋಡುಮನವದು ನಾಕು ತೆರದೊಳಿಸಿ ಕೊಳ್ಳಲದು ಬೇಕಾದುದನು ವಸ್ತು ಇದಿರಿಡುತಲಿಹುದು4 ನಳಿನ ಜಪರಾಸುರಗಳಿಗೆ ಛಲಿಸಲಿಕೆ ಮನ ಅಂಗನಿಗೆ ಬಲಿ ವಿಡಿದು ಮೋಹಿಸಿದ ರಾಗ ಇಳಿಯೊಳಗ ವಶಯಂತಹುದು ಮನುಜಗ5 ಕೇಳಯ್ಯಾ ಶುಕನಾರದ ಭೀಷ್ಮರ ನೋಡಾ ವಿಕಳಿಗೊಳ್ಳದೆ ಮನಕೂಡಾ ಸಕಲಗೆದ್ದರು ಅತಿಗಾಢಾ ಯುಕುತಿಲೆ ಮನೊಲಿಕೊವೈರಾಗ್ಯದಿಂದ ಧೃಡಾ6 ಹೇಳೈಯ್ಯಾ ಜ್ಞಾನಸಾಧನವೆಂಬುದನರಿಯೇ ಎನಗೆಂತಹದಿಂತಿದು ಧೋರಿಯೇ ನೀನೇ ತಾರಿಸುದಯದೆನ್ನ ಸಿರಿಯೇ ನಾನು ಎಂದೆಂದು ತವಪಾದಸ್ಮರಣಿ ಮರಿಯೆ7 ಎಂದು ಬಾಗುವ ಕಂದನನು ನೋಡಿ ಕರ ನೀಡಿ ಛಂದದಲಿ ತರಿಪಂತೆ ಮಾಡಿ ಬಂದು ಧನ್ಯ ಗೈಸಿದ ಗುರು ಮಹಿಪತಿ ಕೈಯ್ಯಗೂಡಿ8
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಾತಕೆ ಕೃಪೆಮಾಡದೆ ಯಿರುತಿಹೆ ಸಿರಿಯೇಪೀತಾಂಬರಧರ ತರುಣಿಯೆ ಪಪಾತಕಹಾರಿಣಿ ಭಾವಜನನೀಭಕ್ತ ಕುಟುಂಬಿನಿಭವಭಯ ನಾಶಿನಿ 1ದಾರಿದ್ರ್ಯಾಂಬುಧಿ ತರುಣೋಪಾಯವುತೋರಿಸು ರಘುಕುಲದೊರೆ ಸುಪ್ರಿಯಳೆ 2ರತ್ನಾಭರಣಯುಕ್ತ ಸುಗಾತ್ರೇರತ್ನಾಕರಸುತೇ ರಾಜೀವಾಲಯೇ 3ಹೇಮಭೂಧರ ಸ್ವಾಮಿನಿ ತುಲಸೀರಾಮದಾಸ ಸುಕ್ಷೇಮವು ನಿನ್ನದು 4
--------------
ತುಳಸೀರಾಮದಾಸರು