ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಿಣಿಯೆ ನಿನಗೇನು ಬೇಕದನೀವೆ ಹಯವದನ-ನೆನಿಪ ಹರಿಯನು ಕರೆತಾರೆ ಗಿಣಿಯೆಮುನಿ ವಾದಿರಾಜನಿಗೆ ವರವೀವ ದೇವನವನೆನೆವವರ ಬಿಡನೆಲೆ ಗಿಣಿಯೆ ಪ. ವೃಂದಾವನದಿ ಚಂದ್ರನಂತೆಸೆವ ಗೋವಿಂದಚಂದದಿ ನಿನ್ನ ಮಾತ ಮನ್ನಿಸುವನಂದಗೋಪಿಯ ಮುದ್ದುಕಂದನೆನಿಪ ಮುಕುಂದನ-ನಿಂದಿರುಳು ತಂದು ತೋರು ಗಿಣಿಯೆ 1 ಮೂರು ಬಣ್ಣದ ಕೊರಳ ತಿರಿಯುಳ್ಳ ಗಿಣಿ ನೀನುಮೂರು ಬಣ್ಣದ ಚಾರುನಯನಮಾರನನುಚರ ನೀನು ಮಾರನ ಜನಕನವನುಮೀರ ನಿನ್ನ ಬಿನ್ನಪವ ಗಿಣಿಯೆ 2 ಸತತ ಸಿರಿದೇವಿಯರ ಸುತನೆನಿಪ ಕಾಮನಿಗೆರಥವಾಗಿ ಮೆರೆವೆ ನೀ ಗಿಣಿಯೆಕೃತಕೃತ್ಯನಾದರೂ ಅದರಿಂದ ನಿನ್ನ ಮಾತಪ್ರತಿಪಾಲಿಸುವನೆÉಲೆ ಗಿಣಿಯೆ 3 ಎಲ್ಲರು ಭುಂಜಿಸುವ ಮೊದಲೆ ಭುಂಜಿಸುವ ನಮ್ಮಿನಿಯಬಲ್ಲಿದಾತನ ಬಿರುದ ನಿನಗಿತ್ತಚೆಲುವ ಸಸಿಗಳ ತೆನೆಯ ತಂದು ತಂದು ಮೆಲುವೆ ಗಡಸಲುವುದು ಮೋಹನದ ಗಿಣಿಯೆ 4 ಪಚ್ಚೆಯ ಬಣ್ಣದ ಗರಿಯ ಸಿರಿಯುಳ್ಳ ಗಿಣಿ ನೀನುಪಚ್ಚೆಯ ಬಣ್ಣದ ವ್ಯಾಸನವನುಎಚ್ಚರಿಸಿ ಕೊಡುತಿದೆ ನಿನ್ನ ಕಂಡರಾ ಮುನಿಯಮೆಚ್ಚಿದೆ ನಾನವನ ತಂದು ತೋರು ಗಿಣಿಯೆ 5 ಕೆಂದಾವರೆಯ ಪೋಲ್ವ ನಿನ್ನ ಚರಣ ಹರಿಯ ಪದದÀಂದವನು[ತಂದುತೋರು]ಗಿಣಿಯೆಚೆಂದದ ಅವನ ಚೆಂದುಟಿಯಂತೆ ನಿನ್ನ ಚೆಲುವ ಮುಖ ಕೆಂಪುತÀಂದು ಮುಂದಿರಿಸು ನೀ ಗಿಣಿಯೆ6 ಅವನ ವಾಹನನೆನಿಪ ಗರುಡನ ಕುಲದಲುದ್ಭವಿಸಿ-ದವ ನೀನೆಲೆ ಗಿಣಿಯೆಅವನ ಮುದ್ದು ನುಡಿಯ ಬಲ್ಲರೆ ನೀನು ಜಗದೊಳಗೆಸವಿಮಾತುಗಳ ನುಡಿವೆ ಗಿಣಿಯೆ 7 ಗಮನ ನಿನಗೆಸೊಗಸುನುಡಿಯಿಂದವನ ಪದಕೆ ಬಿನ್ನಹ ಮಾಡಿಸುಗುಣನ ಕರೆತಾರೆ ಗಿಣಿಯೆ8 ತಮ್ಮ ತಮ್ಮ ಮನೆಗಳಲ್ಲಿ ರಮೆಯರಸ ಕೃಷ್ಣನ-ನು ಮನದಲ್ಲಿ ಅರ್ಚಿಸಿ [ಪೂಜಿಸುವರು]ಸುಮುಖನೆಂದು ನಿನ್ನ ಮನೆಯ ಚಾವಡಿಯಲಿ ಇಹ-ನ ಮನ್ನಿಪರೆಲೆ ಗಿಣಿಯೆ 9 ಉರದಲ್ಲಿ ಸಿರಿವತ್ಸಯೆಂಬ ಕುರುಹುಂಟವಗೆಕರಗಳಲಿ ಶಂಖಚಕ್ರಗಳು ಕೊರಳಲ್ಲಿ ಕೌಸ್ತುಭಮಣಿಯಿಹ ಹಯವದನ ನ-ಮ್ಮರಸನೆಂದರಿತುಕೊ ಗಿಣಿಯೆ 10
--------------
ವಾದಿರಾಜ
ಪಾದ 1ಸುರರ ಮಣಿಮಕುಟಗಳು ಸೋಕಿ ಶೋಭಿಪ ಪಾದಪರಮ ಪಾವನೆ ಲಕ್ಷ್ಮಿ ಪಿಡಿದೊತ್ತುವ ಪಾದಧುರದಿ ನರರಥವೇರಿ ದೇದೀಪಿಸಿದ ಪಾದಹರಿವೈರಿಕರಗಳಲಿ ಹೊಳೆವ ಪಾದ 2ಸಿರಿಯುಳ್ಳ ಕುರುಪತಿಯ ಶಿರವೆರಗಿಸಿದ ಪಾದಪರಿದು ನಾಗನ ಶಿರಗಳೊಳು ಹೊಳೆದ ಪಾದಅರವಿಂದಮುಖಿಯರೊಡನತಿ ನರ್ತಿಸಿದ ಪಾದನೆರೆ ಜರೆದ ಶಿಶುಪಾಲನ್ನೊಳಗಿಟ್ಟ ಪಾದ 3ಕರುಗಳೊಡಗೂಡಿ ಕಾನನದಲಾಡಿದ ಪಾದಕರುಣದಿಂ ಪಾಂಡವರ ಕಾಯ್ದ ಪಾದಮರೆಯೊಕ್ಕ ಸುಜನರಿಗೆ ಮುಕ್ತಿಗೊಡುತಿಹ ಪಾದಸ್ಮರಿಸಲಘರಾಶಿಗಳ ಸಂಹರಿಪ ಪಾದ 4ಬಲಿ ಯಜ್ಞವಾಟಕ್ಕೆ ಬಂದು ನೆಲಸಿದ ಪಾದಬಲು ಬೆಳೆದು ಲೋಕಗಳ ಬಂಧಿಸಿದ ಪಾದಕಲಕಿ ಗಂಗೆಯ ಧರೆಗೆ ಕೋಡಿವರಿಸಿದ ಪಾದಸುಲಭದಿಂ ಭಕ್ತರಿಗೆ ಸುಖವೀವ ಪಾದ 5ಧ್ವಜರೇಖೆುಂ ಕೂಡಿ ಥಳಿಥಳಿಸುತಿಹ ಪಾದವಿಜಯವಹ ವಜ್ರದಿಂದೊಪ್ಪುತಿಹ ಪಾದಗಜವ ಶಿಕ್ಷಿಪಮುದ್ರೆ ಗೋಚರಿಸುತಿಹ ಪಾದನಿಜಪದ್ಮದಿಂ ಲೋಕನಿಧಿಯಾದ ಪಾದ 6ಅರೆಯಾದ ಸತಿಯನಂಗನೆಯ ಮಾಡಿದ ಪಾದಧರೆಯ ಧರಿಸಿಹ ಶೇಷ ಧ್ಯಾನಿಸುವ ಪಾದತರುಣನಾಯಕ ಪುರದಿ ಸ್ಥಿರದಿ ನೆಲಸಿದ ಪಾದತಿರುಪತಿಯ ವೆಂಕಟೇಶ್ವರ ನಿಮ್ಮ ಪಾದ 7ಓಂ ವೃಷಭಾಸುರ ವಿಧ್ವಂಸಿನೇ ನಮಃ
--------------
ತಿಮ್ಮಪ್ಪದಾಸರು
ಸಾರ ಪ ಧರೆಯನಾಳಿದ ತ್ರಿಶಂಕು ದೊರೆಯು ತಾನೆಲ್ಲಿಹರಿಶ್ಚಂದ್ರ ಮೊದಲಾದ ಚಕ್ರವರ್ತಿಗಳೆಲ್ಲಿಶರಧಿ ಮಧ್ಯದೊಳಿದ್ದ ರಾವಣಾಸುರನೆಲ್ಲಿಸಿರಿಯುಳ್ಳ ಕೌರವರು ಪಾಂಡವರು ತಾವೆಲ್ಲಿಧರೆಗಿಳಿದು ಪೋದಾತ ವಾಲಿಯು ತಾನೆಲ್ಲಿಸುರರೊಡನೆ ಹೋರಿದಾ ಬಲಿಯು ತಾನೆಲ್ಲಿ 1 ದಶರಥ ಮೊದಲು ಷೋಡಶ ರಾಯರುಗಳೆಲ್ಲಿಅಸಹಾಯ ಶೂರ ವೀರ ವಿಕ್ರಮರೆಲ್ಲಿಅಸಮಬಲ ವಸುಮತಿಯ ಹಿರಣ್ಯಾಕ್ಷನೆಲ್ಲಿವಸುಧೆಯೊಳಗಿದ್ದ ಹದಿನಾರು ಸಾವಿರರೆಲ್ಲಿಕುಸುಮ ಬಾಣನ ಪಡೆದ ದೇವ ತಾನೆಲ್ಲಿಸುಶರೀರ ಎನಿಸಿದ ಅಭಿಮನ್ಯು ತಾನೆಲ್ಲಿ 2 ಈ ಪರಿಯೆ ಈ ಧರೆಯನಾಳಿ ಹೋದವರೆಷ್ಟುಈ ಪರಿಯೆ ಸ್ವರ್ಗಕ್ಕೆ ಇಂದ್ರಾದಿಗಳು ಎಷ್ಟುಈ ಪರಿಯೆ ಹರಬ್ರಹ್ಮರಾದವರು ತಾವೆಷ್ಟುಈ ಪರಿಯೆ ಯುಗಪ್ರಳಯವಾಗಿ ಹೋದವು ಎಷ್ಟುಈ ಪರಿಯೆ ಜಲ ಪ್ರಳಯವಾಗಿ ಹೋದವು ಎಷ್ಟುಶ್ರೀಪತಿ ಕೇಶವನಲಿಡು ಭಕುತಿ - ಕೊಡುವ ಮುಕುತಿ 3
--------------
ಕನಕದಾಸ
ಏತರ ಚೆಲುವು-ರಂಗಯ್ಯ ಪಹಡೆದ ತಾಯಿ ತನಗುಳ್ಳೊಡೆ-ರಂಗ |ಬುದ್ದಿ ಪೇಳುವ ಪಿತನುಳ್ಳೊಡೆ-ರಂಗ |ಸಿರಿಯುಳ್ಳೊಡೆ ತಾನು ಬಲಿಯ ಮನೆಗೆ ಪೋಗಿ |ಮದನಜನಕನಿಚ್ಚಚೆಲುವನೆಂತೆಂಬೆನೆ |
--------------
ಪುರಂದರದಾಸರು