ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂಸಾರದೊಳು ಸುಖವಿಲ್ಲ ಪ ದುಂಡನೆ ಬಂದಿಹೆ ದುಂಡನೆ ಹೋಗುವೆ ಹೆಂಡಿರು ಮಕ್ಕಳ ನಡುವೆಯಲಿ ತಂಡ ತಂಡದಿ ಹುಟ್ಟಿ ಕೊಂಡವರು ನಚ್ಚಿ ಕೊಂಡಿವರನು ಪರಗತಿಯ ಕೆಡಿಸದಿರು 1 ಹುಟ್ಟುತ ತರಲಿಲ್ಲ ಹೋಗುತ ವೈಯೊಲ್ಲ ನಟ್ಟ ನಡುವೆ ಬಂದ ಸಿರಿಯಿದು ಕಟ್ಟ ಕಡೆಗೆ ನೀನು ಮಡಿಯಲಿ ಕರುವೆಯ ಬಟ್ಟೆಯ ಶವ ಕಿತ್ತಲಿದು ಬಳ್ಳಿತೆಂಬರು 2 ಎನ್ನಮನೆಯು ಎನ್ನತೋಟ ತುಡಿಗೆಯಿದು ದೆನುತ ಹಿಗ್ಗದಿರು ಇದರೊಳಗೊಂದು ಚಿನ್ನ ಬಾರದು ಕಾಲನವರೆಳೆದೊಯ್ವಾಗ 3 ಘಟ್ಟದ ಕೆಳಗುಷ್ಟು ಬೆಟ್ಟದ ಮರಗಾಯಿ ಹುಟ್ಟಿದ ಬಯಲ ಸೀಮೆಯ ಮೆಣಸು ಬಟ್ಟಾದ ಲವಣ ಶಾಕದ ವೋಲು ಸಂಸಾರ 4 ಜಾಣನಾದರೆ ಪರಗತಿಯ ನೀ ನೊಲುವೊಡೆ ತ್ರಾಣ ವಿರಲಿಕೆ ತೊಡಕಬಿಟ್ಟು ಕಾಣುಸಂಸಾರವ ವಿಷವೆಂದು ತ್ಯಜಿಸಿ ಗೀರ್ವಾಣವಂದಿತ ಲಕ್ಷ್ಮೀರ ಮಣನ ಮೊರೆಹೋಗು 5
--------------
ಕವಿ ಪರಮದೇವದಾಸರು
ಸಾರಿ ಸಾರಿ ಹೇಳು ತೀನಿ ಕಡ್ಡಿ ಮುರಿದು ನಾನು ಬಾರಿ ಬಾರಿಗೆ ಸತ್ತು ಹುಟ್ಟತಲಿಹೆ ನೀನು ಪ ಇರುಳು ವಿಷಯದೊಳಗೆ ಮನವ ನಿರಿಸಿ ಮಡದಿ ಮಕ್ಕಳೆಂಬಲೆಯಲಿ ಪರಿಯನರಿಯದಿದು ಇನ ಸುತನ ದೂತರೊಡನೆ ಕೊಲಿಸಿ ಕೊಳದಿರು 1 ನೀನು ಹುಟ್ಟಿ ಬರುವ ಮುನ್ನ ಇವರಿಗೆಲ್ಲ ವಾಸವೆಲ್ಲಿ ನೀನದೆಲ್ಲಿ ನಟ್ಟನಡುವೆ ಬಂದ ಸಿರಿಯಿದು ಕಾನ ಕಪಿಗಳಂತೆ ನೆರೆದು ಮಡದಿ ಮಕ್ಕಳೆಂದು ಈಗ ಪ್ರಾಣವನ್ನು ತಿನಲು ಬಂದ ನರಿಗಳಿವದಿರು 2 ದಾರಿ ಹೋಕರಿವರು ನಿನ್ನ ಋಣವು ತೀರಿ ಹೋದ ಬಳಿಕ ಯಾರಿಗಾರು ಇಲ್ಲ ನಿನಗೆ ನೀನದಲ್ಲದೆ ವೈರಿ ಕೋಣೆಲಕ್ಷ್ಮೀಪತಿಯ ಸೇರಿ ನಾಮ ಸ್ಮರಣೆಯಿಂದ ಮುಕ್ತಿ ಪಡೆದಿರು 3
--------------
ಕವಿ ಪರಮದೇವದಾಸರು