ಶರಣ ರಕ್ಷಕನಹುದೊ ಸಿರಿಯಲೋಲನೆ ಪೂರ್ಣ ಧ್ರುವ
ವರ ಪಾಂಡವರ ಮಿತ್ರ ಕರುಣಾನಂದದ ಗಾತ್ರ
ಅರವಿಂದ ನೇತ್ರ ಸುರಮುನಿ ಸ್ತೋತ್ರ
ಹರಿ ನಿನ್ನ ಚರಿತ್ರ ಪರಮ ಪವಿತ್ರ 1
ವಿದುರ ವಂದಿತ ದೇವ ಬುಧಜನ ಪ್ರಾಣಜೀವ
ಯದುಕುಲೋದ್ಭವ ನೀನೆ ಶ್ರೀಮಾಧವ
ಸದಾ ಸದ್ಗೈಸುವ ಆದಿ ಕೇಶವ 2
ಅನಂದ ಘನಲೋಲ ನೀನೆ ಸರ್ವಕಾಲ
ಅನಾಥರನುಕೂಲ ಶರಣಾಗತ ವತ್ಸಲ
ದೀನ ಮಹಿಪತಿ ಸ್ವಾಮಿ ನೀನೆ ಕೃಪಾಲ 3