ಒಟ್ಟು 11 ಕಡೆಗಳಲ್ಲಿ , 1 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ನ್ಯಾಯವೋ ಭಾವಜರಿಪುವಿನುತ ನಿಂದು ದಾವ ನ್ಯಾಯವೊ ಪ ಆವ ನ್ಯಾಯವೋ ದೇವ ದೇವ ಮಾವಕಂಸಜೀವಘಾತಕ ಅ.ಪ ಕಪ್ಪು ವರ್ಣನು ಭಕ್ತಜನರ ಲ್ಲಿರ್ಪೆ ಸದಾ ನೀನು ನಿ ನ್ನ ಪಾದದಿ ತಪ್ಪು ಎಲ್ಲನು ಒಪ್ಪಿಬಂದಿಹ್ಯ ಭಕ್ತಜನರ ತಪ್ಪು ಒಪ್ಪಿ ಕ್ಷಮಿಸಿ ದಯದಿ ದುರಿತ ನಿವೃತ್ತಿಗೈದು ಅಪ್ಪಿಕೊಂಡು ಸಲಹದಿರುವಿ 1 ತಂದೆ ತಾಯಿ ನೀನು ಎಂದು ನಂಬಿ ಬಂದು ಬಿದ್ದೆನು ನಿನ್ನ ಪಾದಕೆ ಮಂದಭಾಗ್ಯನು ನೊಂದು ಬೆಂದು ಸಂಸಾರವೆಂಬ ಸಿಂಧುವಿನೊಳು ತಾಪಬಡುತ ಬಂದು ಮೊರೆಯಬಿದ್ದ ಕಂದನ ಮಂದರಮಂದಿರ ಸಲಹದಿರುವಿ 2 ನಿನ್ನನರಿಯದ ಅಜಮಿಳನು ಬಿನುಗನೆನಿಸಿದ ಪಾಪಗೈದವ ಗಣನೆಯಿಲ್ಲದ ಕನಿಕರದಿಂದ ವನಿಗೊಲಿದು ಘನಪದವನಿತ್ತು ಪೊರೆದೆ ಚಿನುಮಯಾತ್ಮ ಸಿರಿಯರಾಮ 3
--------------
ರಾಮದಾಸರು
ಕೇಳಬಾರದೋ ಕರ್ಣದಿಂ ಕೇಳಬಾರದೋ ಪ ಕೇಳಬಾರದು ಕೀಳರಾಡುವ ಕೀಳುವಚನ ಕಾಲತ್ರಯದಿಅ.ಪ ಪರರ ಗುಣವ ಜರೆದು ತಮ್ಮ ಮರುಳಗುಣವ ಪಿರಿದೆನಿಪ ದುರುಳರೊಚನ ಕೇಳುತ್ತೊಡನೆ ಹರಿದು ಪೋಗ್ವುದು ಪೂರ್ವಪುಣ್ಯ 1 ಮರವೆ ಮಾಯ ದುರ್ವರ್ತನ ಸತತ ದುರಾಚಾರದಿ ಹೊರಳುವಂಥ ಪರಮನೀಚರ ಮಾತಿಗ್ಹೋಗಲು ನರಕ ತಪ್ಪದು ಕಡೆಯತನಕ 2 ಗುರುಹಿರಿಯರನು ನಿಂದಿಪ ನರಕಿಗಳ ಆವಾಸದಿರಲು ಶರಣರಸ ಕರುಣಾಭರಣ ಸಿರಿಯರಾಮ ಮರೆಯಾಗ್ವ 3
--------------
ರಾಮದಾಸರು
ಬರಿದಿದೇಕೆಲೋ ನಿನ್ನಂತರಿರವು ಸಿರಿಯರರಸ ಅರಿಯನೇನೆಲೋ ಪ ಮರೆಯ ಮೋಸದಿ ಕುಕ್ಕಲು ಮೀನ ಹರಿವ ಉದಕದಿ ಬಕನು ಮೌನ ಧರಿಸಿದಂದದಿ ಪರಮಮೌನ ಧರಿಸಿ ಕುಳಿತು ಮರುಳುಗೊಳಿಸಿ ಪರರ ಕೊರಳ ಮುರಿವ ದುರುಳತನದ ಕೃತಿಗೆ ಹರಿಯು ಒಲಿಯುವನೇನು ಮರುಳೆ1 ಕಪಟ ನೀಗದೆ ಹುಚ್ಚು ಬಿಡದೆ ಗುಪಿತ ತಿಳಿಸದೆ ಮುಚ್ಚಿ ಕಣ್ಣು ತಪಸಿಯಂದದಿ ಕುಪಿತ ಮಾನಿಸನಾಗಿ ಕುಳಿತು ತಪಸಿಯಂತೆ ತೋರಿ ಜನರ ಅಪಾಯಮಾಳ್ಪ ಕಪಟವೇಷಕೆ ಸುಫಲ ದೊರೆಯುವುದೇನು ಮರುಳೆ 2 ಉದಯದೇಳುತ ಓಡಿ ಹೋಗಿ ನದಿಯ ಮುಳುಗುತ ತೀಡಿಗಂಧ ಹದದಿ ಬರೆಯುತ ವಿಧವಿಧಮಂತ್ರೊದರಿ ಇತರರ ಸದನ ಮುರಿದು ಸತಿಯ ಸುತರ ಮುದದಿ ಪೊರೆವ ಅಧಮ ವ್ರತಕೆ ಸದಮಲಾಂಗೊಲಿವನೆ ಮರುಳೆ 3 ಕಪಟ ನೀಗದೆ ಜಟೆಯ ಬೆಳಸಿನ್ನು ಚಪಲತನದಿಂ ದುಟ್ಟು ಕೌಪೀನ ನಿಟಿಲದಲ್ಲಿ ಭಸ್ಮಧರಿಸಿ ನಟಿಸಿ ಸಾಧುವರ್ತನದಿಂ ದ್ಹೊಟ್ಟೆ ಹೊರೆವ ಭ್ರಷ್ಟತನಕೆ ಕೆಟ್ಟ ಬವಣಳಿಯುವುದೆ ಮರುಳೆ 4 ತತ್ವದರ್ಥವ ಬೋಧಿಸುತ್ತ ಭೃತ್ಯ ಸಮೂಹವ ಸಂಪಾದಿಸುತ್ತ ನಿತ್ಯಸತ್ಯವ ವಿತ್ತದಾಸೆಗುತ್ತರಿಸುವಸತ್ಯಭ್ರಷ್ಟ ವರ್ತನಕೆ ಮುಕ್ತಿದಾಯಕ ಸಿರಿಯರಾಮ ಮುಕ್ತಿಸುಖ ನೀಡುವನೆ ಮರುಳೆ 5
--------------
ರಾಮದಾಸರು
ಬರಿದೆ ಹಾಳು ಶರೀರ ಬಾಳು ಅರಿದಡಿದು ಮಹ ಟೊಳ್ಳು ಟೊಳ್ಳು ಪ ನಾರಿಪುರುಷರು ಮಾರಕದನದಿಂ ಸೇರಿ ಸುಖಿಸಲು ಜಾರಿದಿಂದ್ರಿಯ ಕಾರಣಾಗಿ ಮೂರುದಿನದಿ ತೋರಿ ಪೋಗ್ವಸಾರಮಯ 1 ಮಿಡುಮಿಡುಕಿ ಒಡಲಿಗಾಗಿ ದುಡಿದು ಮೂಢರಡಿಯ ಪಿಡಿದು ಬಿಡದೆ ರೋಗದೊಡನೆ ನರಳಿ ಪಡುತಕಷ್ಟ ಕಡೆಗೆ ಸಾಯ್ವ 2 ಪರರಸೇವೆ ನಿರುತಗೈದು ಪರಕೆ ಇಹ್ಯಕೆ ತಿರುಗಿ ತಿರುಗಿ ಗರುವದಿಂದ ಚರಿಸಿ ನಮ್ಮ ಸಿರಿಯರಾಮನ ಚರಣಕ್ಹೊಂದದ 3
--------------
ರಾಮದಾಸರು
ಬೇಡಿಕೊಂಬೆನೊ ಶ್ರೀಹರಿಯೆ ನಿಮ್ಮ ಅಡಿಯ ಮರೆಯೆನೊ ಪ ಬೇಡಿಕೊಂಬೆನಯ್ಯ ನಿಮ್ಮ ಅಡಿಯಪಿಡಿದು ಬಿಡದೆ ನಾನು ಗಡನೆ ಎನ್ನ ಕಡುದಾರಿದ್ರ್ಯ ಕಡಿದು ಬಯಲು ಮಾಡಿ ಹರಿಯೇ ಅ.ಪ ದೈತ್ಯಶಿಕ್ಷಕ ಚಿತ್ತಜತಾತ ಭಕ್ತರಕ್ಷಕ ಅ ನಾಥ ಪ್ರೀತ ಮುಕ್ತಿದಾಯಕ ಸತ್ಯಸಂಧನನ್ನು ಮಾಡಿ ಮತ್ರ್ಯಭೋಗದಾಸೆಬಿಡಿಸಿ ನಿತ್ಯನಿರ್ಮಲಾತ್ಮ ನಿಮ್ಮ ಭಕ್ತಿಯಿತ್ತು ಸಲಹೊ ಹರಿಯೆ 1 ಶ್ಯಾಮಸುಂದರ ಸ್ವಾಮಿ ಭಕ್ತಪ್ರೇಮ ಮಂದಿರ ರಮಾ ಸತ್ಯಭಾಮಾ ಮನೋಹರ ಪಾಮರತ್ವ ತಾಮಸ ದುಷ್ಕಾಮಿತಂಗಳ್ಹರಿಸಿ ನಿಮ್ಮ ನಾಮಜಪವು ತಪದೊಳಿರಿಸಿ ಪ್ರೇಮದಿಂದ ಸಲಹೊ ಹರಿಯೆ2 ಪದುಮನಾಭನೆ ಸದಮಲಾಂಗ ಒದಗುಬೇಗನೆ ಈ ವಿಧದಿ ಬೇಡ್ವೆ ಸುದಯವಂತನೆ ಸುದತಿ ಮಾಡಿದಂಥ ಪದದ ಕೃಪೆಯನಿತ್ತು ಎನ್ನ ಮುದದಿ ಸಲಹು ಸಿರಿಯರಾಮ 3
--------------
ರಾಮದಾಸರು
ಭಯ ಹಾರಿಣೇ ದಯಾ ಕರುಣೀ ಪ ಜಯಲಕ್ಷ್ಮಿ ನಿನ್ನ ಪದದಿ ಜಯವು ಕೋರಲು ನಿ ರ್ದಯವೇನೆ ಜನನಿ ಅ.ಪ ಏನು ನೀಡಿದಿ ತಾಯಿ ಧ್ಯಾನಿಸಿ ಬೇಡುವಗೆ ಹೀನ ಅಪಜಯವಿದೇನು ಕಾರಣವು 1 ಪರಮಪರತರ ಕಲ್ಪತರುವಿನೊಳ್ಸುಖ ಬಯಸೆ ಪರಮ ಪರಿತಾಪವು ಬರುವುದೇನಮ್ಮ 2 ಸಿರಿಯರಾಮನ ಪ್ರಿಯೆ ಪರಮಮಂಗಳೆ ನಿನ್ನ ಪರಿ ಭಂಗ ಕಳೆಯೆ 3
--------------
ರಾಮದಾಸರು
ಭವ ಎತ್ತಲಾರೆ ಚಿತ್ತಜಪಿತನೆ ನಿತ್ಯ ಮುಕ್ತಿಸುಖವ ನೀಡೊ ಪ ಮರ್ತು ಇಂದಿನತನಕ ನಿಮ್ಮ ನಿತ್ಯನಿರ್ಮಲಪಾದ ಎಂ ಬತ್ತುನಾಲ್ಕುಲಕ್ಷ ಜನುಮ ಗುರ್ತಿಲ್ಲದೆ ತಾಳಿದ್ದೆ ಸಾಕೊ 1 ಉತ್ತಮಸಂಗ ಮರೆದು ಮದೋ ನ್ಮತ್ತನಾಗಿ ಚರಿಸಿ ಮತ್ತೆ ಕತ್ತೆಯಂತೆ ಇಹ್ಯಕೆ ಪರಕೆ ಸುತ್ತಿ ಸುತ್ತಿ ಬೇಸತ್ತದ್ದೆ ಸಾಕೊ 2 ಚಿತ್ತಭ್ರಾಂತನಾಗಿ ಸತತ ಸತ್ಯಮಾರ್ಗದಪ್ಪಿ ಕೆಡುವ ಭಕ್ತನ ತಪ್ಪುಕ್ಷಮಿಸಿ ಕರುಣ ದೆತ್ತಿ ಸಲಹೊ ಸಿರಿಯರಾಮ 3
--------------
ರಾಮದಾಸರು
ಸಾರಸಾಕ್ಷ ಘೋರದುರಿತ ದೂರಮಾಡೈ ಪ ಮಾರಜನಕಪಾರ ಮಹಿಮ ದೂರ ನೋಡದೆ ಬಾರೊ ಬೇಗ ಬಾರಿಬಾರಿಗೆ ನಿನ್ನ ನಂಬಿ ಸಾರಿಕೂಗಿ ಬೇಡುವೆನು 1 ಮೂಢತನದಿ ನಾಡ ತಿರುಗಿ ಖೋಡಿಯಾದೆ ಗಾಢಭಕುತಿಲಿ ಗಾಢ ನಿಮ್ಮ ಪಾವನ ಚರಿತ ರೂಢಿಯೊಳು ಧನ್ಯವಾಗದೆ 2 ಸಿರಿಯರಮಣ ಚರಣನಳಿನ ಮರೆಯಹೊಕ್ಕೆ ಕರುಣದೆನ್ನ ಮೊರೆಯ ಕೇಳಿ ದುರಿತದಿಂದ ಸೆರೆಯ ಬಿಡಿಸೆನ್ನ ಸಿರಿಯರಾಮ 3
--------------
ರಾಮದಾಸರು
ಸುಮ್ಮನ್ಯಾತಕೆ ಕಾಲಕಳೆಯುವಿಯೋ ಹೇ ಸುಮ್ಮನ್ಯಾತಕೆ ಕಾಲಕಳಯುವಿ ಪ ಬ್ರಹ್ಮನಯ್ಯನ ವಿಮಲ ಚರಣ ಒಮ್ಮನದಿಂ ಪೊಗಳುತನುದಿನ ನಿರ್ಮಲಪದವಿ ಸಂಪಾದಿಸದೆ ನೀ ಅ.ಪ ಮತ್ತು ನಿನ್ನಗೆ ಹತ್ತಿ ಬರುವುದೆ ನಿತ್ಯ ವೆನಿಪತ್ಯಧಿಕ ಸಮಯವು ಸತ್ಯ ಸರ್ವೋತ್ತಮನ ಪಾದವ ನಿತ್ಯ ಪಾಡುತ ಸಾರ್ಥಕ್ಹೊಂದದೆ 1 ಮೃತ್ಯುಬಾಧೆಯ ಗೆಲಿಸಿ ನಿನ್ನ ಪ ವಿತ್ರನೆನಿಪ ಮಹ ಮೃತ್ಯುಲೋಕದಿ ಉತ್ಪತ್ತಿಯಾಗಿ ರಿಕ್ತಹಸ್ತದ್ಹೋಗ್ವತಿ ಚಿತ್ತಜಪಿತನ್ನರ್ತು ಭಜಿಸದೆ 2 ಭಕ್ತಜನರು ಕೈಯೆತ್ತಿ ಪೇಳಿದ ಸತ್ಯದೋಕ್ತಗಳ್ನಿತ್ಯವೆಂದು ಭಕ್ತವತ್ಸಲ ಸಿರಿಯರಾಮನ ಚಿತ್ತದರಿತು ಮುಕ್ತಿ ಪಡೆಯದೆ 3
--------------
ರಾಮದಾಸರು
ನಿನ್ನ ಬೆನ್ನುಬಿದ್ದು ಧನ್ಯನಾದೆನು ಪನ್ನಂಗಶಯನನಿನ್ನ ಬೆನ್ನುಬಿದ್ದು ಧನ್ಯನಾದೆನು ಪಇನ್ನು ಭವದೊಳು ಅನ್ಯರಂಜಿಕೆಯನ್ನು ತಪ್ಪಿಸಿನಿನ್ನ ಕರುಣವನು ತೋರಿದಿ ಸನ್ನುತಾಂಗರೂಢಿಯೊಳು ನಾನು ಮೂಢನಾದೆನು ಧೃಢದಿ ನಿನ್ನಗಾಢಮಹಿಮೆಯ ಅರಿಯದಲೆ ಇನ್ನು ಬಡಬಡಿಸಿಕೊಂಡುಕೇಡಿಗೊಳಗಾಗಿ ಕೆಡುತಲಿರ್ದೆನು ಬಿಡದೆ ಪರರನುಬೇಡಿ ಆಸೆಯಿಂ ಭಂಗಮಾಡುತ ಖೋಡಿಯಪ್ಪುದ ಕಂಡು ನೀನೆಮೂಢನೊಳು ದಯಮಾಡಿ ಕರುಣವನೀಡಿ ಕುರುಹನು ತೋರ್ದಿ ದೇವ 1ಹೊಂದಿಕೊಂಡೀ ಮಾಯಾಜಾಲವನು ಒಂದನರಿಯದೆಮಂದಮತಿಯಾಗಿ ಕೆಡುತಲಿ ನಾನುಬಂಧನದ ಭವದ ಸಿಂಧುವಿನೊಳಗಾಡುತಿರ್ದೆನುನೊಂದು ಬೆಂದೆನುಮಂದಭಾಗ್ಯನ ಮಂದಮತಿಗಳುಒಂದು ಉಳಿಯದಂತೆ ಮಾಡೆನ್ನ್ಹøದಯ ಮಂದಿರದೊಳುನಿಂದುನೀನೆ ಮುಂದಕ್ಹಾಕಿದಿ ಮಂದರೋದ್ಧಾರ2ಮರುಳತನವನು ದೂರಮಾಡಿದಿ ಹರಿಯೆ ಎನ್ನಸರುವ ದುರ್ಗುಣ ತರಿದು ಹಾಕಿದಿ ಕರುಣದೆನ್ನದುರಿತಪರ್ವತಮೂಲ ಕಿತ್ತಿದಿ ಮರೆವು ಹರಿಸಿದಿಪರಮಕರುಣಾಕರನೆ ನಿನ್ನುಪಕಾರ ಮರಿಯೆನಾವಕಾಲದಿಪರರ ಬೇಡದಪದವಿನೀಡಿದಿಶರಣಜನಪ್ರಿಯ ಸಿರಿಯರಾಮ 3
--------------
ರಾಮದಾಸರು
ಸಿದ್ಧಿ ಗಣವರ ಬುದ್ಧಿ ನೀಡೆನ್ನನುದ್ಧಾರಮಾಡು ಬೇಗನೆಬದ್ಧಗುಣಗಳ ತಿದ್ದಿ ಎನಗೆ ಶುದ್ಧಮತಿ ನೀಡು ಬೇಗನೆ ಪವಿಮಲಮನ ಸನಮಿತ ತವಪಾದಕಮಲ ಭಜಿಸುವೆನಭನೆವಿಮಲವಿದ್ಯವ ಕ್ರಮದಿಂ ಪಾಲಿಸು ಹಿಮಜೆಸುತ ಕರಿವರದನೆ 1ಸೋಮಶೇಖರ ಪ್ರೇಮದ ಸುಕುಮಾರ ಸುಮನಸಚಂದ್ರನೆಕಾಮಿತಜನ ಶಾಮಪೂರಿತ ಕೋಮಲಗುಣಸಾಂದ್ರನೆ 2ಕೋಮಲಾಂಗನೆ ಕರ್ಣಕುಂಡಲ ಹೇಮಕಂಕಣಧಾರನೆತಾಮಸದಿ ಗಹಗಹಿಸಿದಾ ಮಹ ಸೋಮನಿಗೆ ಶಾಪವಿತ್ತನೆ 3ಪಾರಬುಧ್ಧಿಲಿ ಸಾರವಿದ್ಯದಧಿಕಾರ ಕುಶಲದಿ ಪಡೆದನೆಗೌರಿಶಂಕರರ್ವಾದ ನಿವಾರಿಸಿದ ಮಹಚದುರನೆ 4ತ್ರಿಕ್ಷೆಯರೊಡಗೂಡಿಭುವನರಥಮಾಡಿಮಣಿಯದ್ಹೋಗ್ವುದು ಕಂಡನೆಘನಕೋಪಾಗ್ರಾದಿ ರಥವನಿಲ್ಲಿಸಿ ತ್ರಿಣಯರಿಂ ಪೂಜೆಗೊಂಡನೆ5ವಿಘ್ನನಾಯಕ ಪ್ರಾಜÕಮೂರುತಿ ಸೂಜÕ ಜನರಾರಾಧನೆಸಂಜೆÕದ್ಹೊಗಳುರ್ವಿಘ್ನ ಛೇದಿಸಿಪ್ರಾಜÕಪದವೀವ ಪ್ರೌಢನೆ6ವರುಷಕೊಂದುಮಾಸಧರೆಯೊಳಿಳಿಯುತಪರಮಪೂಜೆಯ ಕೈಕೊಂಬನೆನರರ ದುರ್ಮತಿ ತರಿದು ಸುಗತಿಯ ನಿರುತಪಥದೋರ್ವ ಧುರೀಣನೆ 7ತಂದೆ ನಿನ್ನನು ಹೊಂದಿ ಭಜಿಪರ ಮಂದಮತಿನಿವಾರನೆಬಂದ ದುರ್ಭವದಂದುಗಂಗಳ ಚಂದದಿಂ ಪರಿಹಾರನೆ 8ಶರಣು ಶರಣು ಶರಣು ಗಣವರ ಶರಣುಕರುಣಾಭರಣನೆಸಿರಿಯರಾಮನ ಚರಿತಪೊಗಳುವ ಪರಮಮತಿದೇ ಗಣಾರ್ಯನೆ 9
--------------
ರಾಮದಾಸರು