ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನು ಸರ್ವಜ್ಞನಾಗಿರಲು ನಿನ್ನಲಿ ಜನರು ಜಾಣತನ ತೋರಲಾಗುವುದೆ ಪವಮಾನ ಪ ಪ್ರಾಣಪತೇ ನಿನ್ನೊಲುಮೆ ಪಡೆದು ಸುಜನರು ದಿವ್ಯ ಸ್ಥಾನಗಳ ಪೊಂದಿ ಇಹಪರದಿ ಸುಖಿಸುವರು ಅ.ಪ ಧರ್ಮಯೋನಿಯ ಶಾಸನಗಳ ಸಂರಕ್ಷಣೆಯ ಕರ್ಮ ನಿನಗಲ್ಲದನ್ಯರಿಗೆ ತರವೆ ಕಿಮ್ಮೀರ ಕೀಚಕ ಜರಾಸಂಧ ಮೊದಲಾದ ಧರ್ಮಘಾತಕರ ಸದೆ ಬಡಿದ ಬಲಭೀಮ 1 ಜ್ಯೇóಷ್ಠನೆಂಬುವ ಮಮತೆ ತೊರೆದು ಧೈರ್ಯದಲಿ ಧೃತ ರಾಷ್ಟ್ರನಿಗೆ ಕಿಲುಬು ಕಾಸನು ಕೊಡದೆಲೆ ಭಾಗವತ ಧರ್ಮಗಳ ಹಂಚುವ ಹರಿಗೆ ಪ್ರೇಷ್ಟತಮ ನೀನಲ್ಲದನ್ಯರಾರಿಹರೊ 2 ನಿನ್ನ ಮತವೇ ಸಿರಿಯರಮಣನಿಗೆ ಸಮ್ಮತವು ನಿನ್ನ ದಯವೇ ಸಾಧು ಜನಕೆ ಅಭಯ ನಿನ್ನ ಮಾರ್ಗವ ನಂಬಿ ಧನ್ಯರಾಗುವರಲಿ ಪ್ರ ಸನ್ನನಾಗುವ ಹನುಮ ಭೀಮ ಮಧ್ವೇಶ 3
--------------
ವಿದ್ಯಾಪ್ರಸನ್ನತೀರ್ಥರು
ಪುಂಡರೀಕಾಂಬಕ ಪರಮದಯಾಳೊ ಬ್ರ- ಹ್ಮಾಂಡರರಸನಾಥ ಬಿನ್ನಹ ಕೇಳೊ ಪ. ನಂಬಿದವನು ಬಲ್ಲೆ ನಿನ್ನ ಪಾದವನು ಇಂಬಾಗಿ ಸಲಹುವಿ ಎನ್ನ ಮಾನವನು ಕುಂಬಾರ ಜನರೆಂಬ ಕುಹಕದ ನುಡಿಯ ಶಂಭುವಂದಿತ ತಾಳಲಾರೆ ಎನ್ನೊಡೆಯ 1 ಅಜ ಭವೇಂದ್ರಾದಿ ಲೋಕೇಶರು ನಿನ್ನ ಭಜಿಸಿ ಪೊಂದಿಹರತ್ಯಧಿಕ ಭಾಗ್ಯವನ್ನು ಕುಜನರು ಕುತ್ಸಿತಾಹಂಕಾರವನ್ನು ತ್ಯಜಿಸುವಂದದಿ ಎನ್ನೊಳಾಗು ಪ್ರಸನ್ನ 2 ಗರುಡಗಮನ ಗಜರಾಜನ ಪೊರೆದಂತೆ ತ್ವರೆಯಿಂದೆನ್ನನು ಕಾಯ್ದರಹುದು ನಿಶ್ಚಿಂತೆ ಉರಗರಾಜೇಂದ್ರ ಶಿಖರ ಸನ್ನಿವಾಸ ಸಿರಿಯರಮಣ ಶುಭಕರ ಶ್ರೀನಿವಾಸ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಾಧವ ಮಧುಸೂದನ ತೇರಾ ಚರಣ ಭಜಿಪೆ ಪಾಲೋ ಮೇರಾ ಪ ಹರಿಯೆ ತುಮ್ಹಾರೇ ಚರಣಭಜನ ಕರುಣಾಕರ ಮುಝೇ ಸಿರಿಯರಮಣ ದುರಿತ ಮೇರೇ ಪರಿಹಾರ ಕರ್ಕರ್ ಪಾರಕರ್ ಪರಿಭವಸೇ ದೇವ 1 ರಕ್ಷ ಮೇರೇ ಕೋಯೀ ನಹೀ ಹೈ ಪಕ್ಷಿಗಮನ ತೇರೇ ಶಿವಾಯ ಲಕ್ಷಿಸಿ ಮೊಕ್ಕೆಮೇಸೇ ಪಾರಕರ್ ರಕ್ಷ ತೇರಾ ಗೋಷ್ಮೇ ಲೇಕರ್2 ಸೀತಾಪತೇ ಶ್ರೀರಾಮ ತೂಹೀ ಪಾತಕ ವಿಮೋಚನ ಹೈ ಪ್ರೇಮಸೇ ದೇಖಕೇ ಮುಝಕೋ ಪಾಪಕೂಪಸೇ ಉಠಾ ಲೀಜೀಯೇ 3
--------------
ರಾಮದಾಸರು
ಸಾರಸಾಕ್ಷ ಘೋರದುರಿತ ದೂರಮಾಡೈ ಪ ಮಾರಜನಕಪಾರ ಮಹಿಮ ದೂರ ನೋಡದೆ ಬಾರೊ ಬೇಗ ಬಾರಿಬಾರಿಗೆ ನಿನ್ನ ನಂಬಿ ಸಾರಿಕೂಗಿ ಬೇಡುವೆನು 1 ಮೂಢತನದಿ ನಾಡ ತಿರುಗಿ ಖೋಡಿಯಾದೆ ಗಾಢಭಕುತಿಲಿ ಗಾಢ ನಿಮ್ಮ ಪಾವನ ಚರಿತ ರೂಢಿಯೊಳು ಧನ್ಯವಾಗದೆ 2 ಸಿರಿಯರಮಣ ಚರಣನಳಿನ ಮರೆಯಹೊಕ್ಕೆ ಕರುಣದೆನ್ನ ಮೊರೆಯ ಕೇಳಿ ದುರಿತದಿಂದ ಸೆರೆಯ ಬಿಡಿಸೆನ್ನ ಸಿರಿಯರಾಮ 3
--------------
ರಾಮದಾಸರು
ಹರಿಯೆ ಪೊರೆಯೊ ಪರತರ ಮರೆಯ ಹೊಕ್ಕೆ ಕರುಣಾಕರ ಶ್ರೀಕರ ಪ ಸರುವತಾಪದಿಂದ ಗೆಲಿಸಿ ಸರುವವಿಷಯದಿದ ಉಳಿಸಿ ಪರಮ ನಿಮ್ಮ ಕರುಣ ಬರೆಸಿ ಕರವ ಪಿಡಿದು 1 ಘೋರ ಭವಕಡಲವ ಘೋರ ಬಟ್ಟು ಈಸಿಸಭವ ಸೈರಿಸದೆ ನಿಮ್ಮ ಪಾದವ ಸೇರಿದೆ ಸಲಹು ಪರಮಕರುಣ ಸಿರಿಯರಮಣ2 ಮಾಯಮೋಹಗಳ ಬಿಡಿಸಿ ಕಾಯಕರ್ಮಗಳನು ಕೆಡಿಸಿ ತೋಯಜಾಕ್ಷೆನ್ನಯ್ಯ ರಾಮ ಸಿಂಧು 3
--------------
ರಾಮದಾಸರು
ಹರಿಯೆ ಯನ್ನ ಧೊರೆಯೆ ನಿನ್ನಮರೆಯ ಹೊಕ್ಕೆನೊ ಸಿರಿಯರಮಣ ಪ ಸಕಲ ಲೋಕಗಳನುನೀನೇ ಸೃಜಿಸುವಾತನು ಸುಖದಿ ಪ್ರಾಣಿಗಳನು ನೀನೆ ಸಲಹುವಾತಾನು ಪ್ರಕಟವಾದ ಜಗವ ನೀನೆ-ಪ್ರಳಯಗೈವನು ನಿಖಿಲ ಜೀವಸಾಕ್ಷಿಯಾಗಿ ನಿತ್ಯನೀನೆನಿಯಮಿಸುವನು 1 ಸ್ಥೂಲಸೂಕ್ಷ್ಮರೂಪನೀನೆ ಮೂಲಪುರುಷನು ಲೀಲೆಯನ್ನು ಪ್ರಕಟಗೈವ ಕಾಲರುಪನು ನೀಲ ಲೋಹಿತಾದಿ ವಿಬುಧಜಾಲ ವಂದ್ಯನು ಪಾಲಿತಾಖಿಲಾಂಡ ರಮಾಲೋಲ ಸುಗುಣಜಾಲ ಶ್ರೀ 2 ಪರಮ ಪುರುಷ ಪಂಕಜಾಕ್ಷ-ಪತಿತ ಪಾವನ ಶರಧಿಶಯನ ಸಕಲಲೋಕ ಸಂವಿಭಾವನ ವಿಶ್ವ ಮೋಹನ ದುರಿತ ಗಜಮೃಗಾಧಿರಾಜವರದ ವಿಠಲ ವಿಹಗಯಾನ 3
--------------
ಸರಗೂರು ವೆಂಕಟವರದಾರ್ಯರು