ಒಟ್ಟು 12 ಕಡೆಗಳಲ್ಲಿ , 10 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(1) ನಿಂದಾಸ್ತುತಿಗಳು ಏನುಂಟು ನಿನ್ನೊಳಗೆ ನಾ ಬೇಡಲು ಏನು ಕೊಡುವೆ ಎನಗೆ ಪ ಶ್ರೀನಿವಾಸನೇ ಬಲು ದೀನನೊಳವಲಕ್ಕಿ ಮಾನವ ನೋಡದೆಅ.ಪ ತಿರುಕನಾಗಿ ತಂದೆ ಧರೆಯ ಕಶ್ಯಪನೆಂಬ ತಿರುಕ ಹಾರುವನಿಗೆ ಗುರಿಮಾಡಿದೆ ಸಿರಿಯನು ರಜಕನ ಪರಿವಾರದಿ ಬಿಟ್ಟು ಗರಳ ಹಾಸಿನೊಳೊರಗಿದೆ ಕೃಷ್ಣ 1 ಧನಕನಕಂಗಳು ನಿನಗಿರೆ ಸತ್ರಾಜಿ ತನ ಮಣಿಯನು ನೀಗಣಿಸುವೆಯಾ ಅನುವಾದ ಮನೆಯಿರೆ ಮುನಿಮನವೇತಕೆ ಮನೆವಾರ್ತೆಯುಳ್ಳರೆ ವನವಾಸಬೇಕೆ 2 ಕಾಮಧೇನುವು ಕಲ್ಪನಾಮಕ ತರುವು ಚಿಂ ತಾಮಣಿಗಳನು ಸುತ್ರಾಮಗಿತ್ತು ಗೋಮಯರಸಗಳ ಕಾಮಿಸಿ ಕದ್ದು ನೀ ದಾಮೋದರನಾದೆ ತಾಮರಸಾಕ್ಷ 3 ಖ್ಯಾತಿ ನೋಡದೆ ರಣ ಭೀತಿಯೊಳೋಡಿದೆ ಜಾತಿ ನೋಡದೆ ಜಾಂಬವತಿಗೂಡಿದೆ ನೀತಿಯ ನೋಡದೆ ಕೋತಿಯೊಳಾಡಿದೆ ಮಾತು ನೋಡದೆ ಬರಿ ಮಾಯೆಯ ಪಿಡಿದೆ 4 ಗತಿಹೀನರಿಗೆ ವರ ಗತಿಯ ತೋರಿಪನಾಮ ಸ್ಮøತಿಯೊಂದಿತ್ತರೆ ಸಾಕೆನಗೆ ಅತಿಶಯವಿದು ಎನ್ನ ಮತಿಯೊಳು ನಿನ್ನಯ ರತಿಯನ್ನು ಪಾಲಿಸು ವರದವಿಠಲರಾಮ 5
--------------
ವೆಂಕಟವರದಾರ್ಯರು
ಎಲ್ಲ ಭಯ ಎಲ್ಲ ಭಯ ಕ್ಷುಲ್ಲಕ ಜನಗಳಿಗೆಲ್ಲ ಭಯ ಪ ತಲ್ಲಣಿಸದೆ ಸಿರಿವಲ್ಲಭನಲಿ ಮನ ನಿಲ್ಲಿಸುವರಿಗೆಲ್ಲ ಜಯ ಅ.ಪ ಇರಲು ಭಯ ಧನವಿರಲು ಭಯ ಇಲ್ಲದಿದ್ದರೆ ತಿರಿದುಂಬೊ ಭಯ ನೆರೆ ಹೊರೆ ಜನಗಳ ಸಿರಿಯನು ನೋಡಲು ಉರಿಯುವ ಜನಗಳಿಗೆಲ್ಲಿ ಜಯ 1 ಎಲ್ಲ ಜಯ ಎಲ್ಲ ಜಯ ಬಲ್ಲ ಸುಜನಗಳಿಗೆಲ್ಲ ಜಯ ಪೊಳ್ಳು ಜೀವನದ ಜಳ್ಳು ಸೌಖ್ಯಗಳ ಒಲ್ಲೆನೆಂಬುವರಿಗೆಲ್ಲ ಜಯ 2 ಸರಳ ಜನರ ನೋಡುವುದೆ ಭಯ ದುರುಳ ಜನಕೆ ತಮ್ಮ ನೆರಳನು ಕಂಡರೆ ಅಧಿಕ ಭಯ 3 ಜ್ಞಾನ ಜಯ ದಿವ್ಯ ಜ್ಞಾನ ಜಯ ಜ್ಞಾನದಿಂದ ಹರಿಸ್ಥಾನ ಜಯ ಹಾನಿಯ ನೀಡುವ ನಾನಾ ಭೋಗವ ಮೌನದಿ ತ್ಯಜಿಪರಿಗೇನು ಭಯ 4 ಒಂದು ಜಯ ನೂರು ಭಯ ದ್ವಂದ್ವಗಳನು ಸಹಿಸದ ನರಗೆ ತಂದೆ ಪ್ರಸನ್ನ ಶ್ರೀಕೃಷ್ಣನ ಚರಣ ದ್ವಂದ್ವ ಸೇವಕರಿಗೆಂದೂ ಜಯ 5
--------------
ವಿದ್ಯಾಪ್ರಸನ್ನತೀರ್ಥರು
ಕನಸಿನಲಿ ಕಂಡೆನಾ-ಶ್ರೀನಿವಾಸನಾ ಕಾಣದಾತನ ||ಕನಸಿನಲಿ|| ಪ ಶರದಾಭಗಾತ್ರನ-ಶಂಪಾಭೋಜ್ವಲ ಕರಪೀತವಸ್ತ್ರನ ಸಾರಸಾಕ್ಷನ ಶರದಿಂದುವಕ್ತ್ರನ ಸಿರಿಯನುರದಿತಾನಿರಿಸಿಕರಗಳಿಂ ದರಚಕ್ರಗಳನು ಧರಿಸಿರ್ಪಾತನ 1 ಕಾಮನಂ ಪೆತ್ತನ ಕಾಕುಸ್ಥನಿಗೆ ಕಾಮಿತವಿತ್ತನ ಕೌಸ್ತುಭಮಣಿ-ಧಾಮವಂ ಪೊತ್ತನ ಹೇಮ ಸೂತ್ರಮಣಿ ದಾಮಭೂಷಣ ಸ್ತೋಮ ದಿವ್ಯಗುಣರಾಮಣೀಯನ ||ಕನಸಿನಲಿ || 2 ಸುರವೃಂದಾನಂದದಿ-ಸ್ತುತಿಸುತ್ತ ಬರುತಿರೆ ತೂರ್ಯಾರವದಿ ಸಿತಛತ್ರಾದ್ಯುರುತರ ರಾಜ ಚಿಹ್ನದಿ ಗರುಡನೇರಿ ನಿಜ ಶರಣರ ಪೊರೆಯುವ ವರದಪುಲಿಗಿರಿ ವರದವಿಠಲನ ||ಕನಸಿನಲಿ|| 3
--------------
ಸರಗೂರು ವೆಂಕಟವರದಾರ್ಯರು
ತತ್ವಚಿಂತನೆ ಅರಿಯಲಳವೇ ಜ್ಞಾನಿಯ ಹೊರಗಿನ ಬಡರೂಪದಿ ಪ ಧರೆಯು ಉದರದಿ ನೆಲಸಿಹ ಪರಿಪರಿ ವಿಧ ಸಿರಿಯನು ಅರಿವುದು ಬಲುಸುಲಭವೆ ಅ.ಪ ಹುಚ್ಚರಂದಿ ಕಾಂಬೋರು ಜನ ಮೆಚ್ಚಿಗೆಯನು ಬಯಸರು ಅಚ್ಚರಿಯಲಿ ನಡೆವರು ಎಚ್ಚರಿಕೆಯ ಪೊಂದದಂತೆ 1 ಒಡವೆ ವಸನಗಳೆಲ್ಲವ ಸಡಗರವನು ಅರಿಯರು ಕಡು ಬಡತನ ಕ್ಲೇಶಕೆ ನಡುಗಲರಿಯರು ಸುಲಭದಿ 2 ಮೇದಿನಿಯಲಿ ದಿನಗಳ ಮೋದದಿಂದಲಿ ಕಳೆವರು ಮಾಧವನಲಿ ಭಕುತರು ಬೂದಿ ಮುಚ್ಚಿದ ಕೆಂಡದಂತೆ 3 ಮರುಳು ಮೋಸವನರಿಯರು ಸರಳಮನದಲಿ ಇರುವರು ಕೆರಳಿದ ಸುಮದಂದದಿ ತಿರುಳುಗಳನು ಸುಲಭದಿ 4 ಭಕ್ತ ಪ್ರಸನ್ನನೊಳು ಆಸಕ್ತ ಸನ್ಮನ ಯುಕ್ತರು ಯುಕ್ತಿ ಚತುರತೆಯರಿಯರು ಹುತ್ತದೊಳಿಹ ಸರ್ಪದಂತೆ 5
--------------
ವಿದ್ಯಾಪ್ರಸನ್ನತೀರ್ಥರು
ದರುಶನವಾಯಿತು ಪಂಢರೀಶನ ಪ ದರುಶನದಿಂದಲಿ ಧನ್ಯರಾದೆವು ಸರಸಿಜಭವನ ನಾಭಿಯಲಿ ಪಡೆದವನ ಅ.ಪ ತಂದೆತಾಯಿಯರ ಭಕ್ತಿಯಿಂದ ಸೇವಿಸುವರಿಗೊಲಿದಾ- ನಂದಪದವಿಯನಿತ್ತ ನಂದನ ಕಂದನ 1 ಇಷ್ಟ ಭಕುತ ಕೊಟ್ಟ ಇಟ್ಟಿಗೆ ಮೇಲೆ ನೆಲಸಿ ಶಿಷ್ಟರ ಸಲಹುವ ವಿಠ್ಠಲರಾಯನಂಘ್ರಿ 2 ಉರದಲಿ ಸಿರಿಯನು ಧರಿಸಿ ಸುರರ ಕಾರ್ಯ ನೆರವೇರಿಸುವ ಜಗದ್ಭರಿತನ ಶ್ರೀಪಾದ 3 ನಾಗಶಯನ ನಿಖಿಲಾಗಮವೇದ್ಯನ 4 ಮುಕುತಿದಾಯಕ ಗುರುರಾಮವಿಠಲ ಚರಣ5
--------------
ಗುರುರಾಮವಿಠಲ
ನಡಿ ನೀರೇ ಪೋಪಾ ದೇವಿ ಇದ್ದೆಡೆಗೆ| ಕಡು ಕೋಪವ್ಯಾಕ ಶ್ರೀರಮೆ ಕೂಡ ಎನಗೆ ಪ ಫುಲ್ಲ ಲೋಚನೆ ಕುಂದರದನೆ ಸುಫಣಿ ವೇಣಿ| ಮಲ್ಲಿಕಾ ಮಂದಸ್ಮಿತೆ ಚಲ್ಪಕದಪು| ಬಿಲ್ಲು ಕಾಮನ ಸೋಲಿಪ ಭ್ರೂಲತೆಯುಳ್ಳ| ಸಲ್ಲಲಿತಾಂಗಿಯಾವಾಗ ಕಂಡೆಪೆನೆ 1 ಹುಣ್ಣಿಮೆ ಚಂದ್ರನ ಮಂಡಲ ಪೊಳೆವಾ|ಪೊಂ| ಬಣ್ಣವದನೆ ಮಹಾಸಿಂಹನ ಜರೆವಾ| ಸಣ್ಣ ನಡುವಿನಿಂದೊಪ್ಪುವ ಸಿರಿಯನು| ಕಣ್ಣಾರೆನೋಡಿ ಮತಾಡುವೆ-ನೇಳೆ 2 ಬರಬಾರದು ದೇವಿಯಗಲಿ ಬಂದರ| ಸ್ಥಿರವಾಗದು ಅರಫಳಿಗೆನ್ನ ಮನಸು| ಗುರುಮಹಿಪತಿ ಸುತ ವರದ ದೇವತೆಯಾಗಿ| ಧರೆಯೊಳು ಮೆರವಾ ಶ್ರೀ ಲಕ್ಷೀಯ ತೋರೆ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಂಗಳಾರತಿ ಎತ್ತಿರೀತಗೆ ಮಾನಿನೀಯರು ಹರಿಗೆ ಪ ಕೃಷ್ಣಗೆ ಮಾನಿನೀಯರು ಕಂಗಳಿಂದಲೆ ನೋಡಿಸುಖಿಸಿ ಕಮಲಮುಖಿಯರು ಅ.ಪ. ಕುಂಡಲ ಹಾರ ಪದಕ ಧರಿಸಿ ಕುಳಿತಿಹಾಪದಕ ಧರಿಸಿ ಕುಳಿತಿಹಾಸರಸಿಜಾಕ್ಷನೋಳ್ಪಜನನೆ ಹರುಷ ಕೊಡುತಿಹಾ 1 ಕಡಗ ಕಂಕಣ ವಂಕಿ ನಾಗಮುರಿಗೆ ಪೊಳೆವುದುನಾಗಮುರಿಗೆ ಪೊಳೆವುದುಜರದಗೊಂಡೆ ತಾಯತ ಮುತ್ತು ಸಿರಿಯು ತೂಗೊದು 2 ಕಾಲಕಡಗ ರುಳಿಯು ಗೆಜ್ಜೆ ಸಾಲು ಚರಣದಿಗೆಜ್ಜೆ ಸಾಲು ಚರಣದಿಭಾಳ ದನಿಯ ಮಾಡುತಿಹುದು ಕೇಳಿ ಕರ್ಣದಿ 3 ಕನಕ ವಸನ ಹೀರ ಕಾಂಚಿ ಕಟಿಯ ತಟದಲಿಕಾಂಚಿ ಕಟಿಯ ತಟದಲಿಮಿಂಚಿನಂತೆ ಮಿನುಗುತಿಹದೊ ನೋಡಿ ಸುಖದಲಿ 4 ಬೊಟ್ಟು ಹಿಡಿದು ಬಾಲನಿಂದ ಚರಿಸಿದಂದದಿಹಿಡಿದು ಬರಿಸಿದಂದದಿಕೃಷ್ಣ ವಿಷ್ಣು ಜಯದ ಸಿರಿಯು ಕೃಷ್ಣ ಜನ್ಯದೀ 5 ಕರವ ಪಿಡಿದು ಹಯದ ಷಣಶ ತಿರುಗುವಾ 6 ಹರಣ ಹರಣ ಮಾಡಿದಧುರದಿ ಪಾರ್ಥನ ಹೆಸರು ಮಾಡಿ ಹರಿಯ ನಡೆಸಿದಾ7 ಹರಿಯು ಮುಖವ ನೋಡಿ ರಾಜರು ಹರುಷಬಟ್ಟರುರಾಜರು ಹರುಷಬಟ್ಟರುಮುಖವ ದಯದಿ ಮೋಕ್ಷದ ಸಿರಿಯನುಂಡೆಯೋ 8 ನಿತ್ಯ ತಂದು ಸುಖಿಸುವೆ 9
--------------
ಇಂದಿರೇಶರು
ಲಘುವಾವುದೆಂಬುದನು ನಿಜವಾಗಿ ನುಡಿಯುವೆನು ಸುಗುಣವಂತರು ಕೇಳಿ ವಿನಯದಲಿ ಬೇಡುವೆನು ಪ ಲಘುತೃಣವು ತಾನಲ್ಲದಿಟವೆ ಸರಿ ಈ ಮಾತು ಲಘುತೃಣವ ತಾವುಂಡು ಪಾಲ್ಕೊಡವೆ ಗೋವುಗಳು ಅ.ಪ. ನಾರಿಯನು ಸಾಕುವೆಡೆ ಕೈಲಾಗದ ಲಘುವು ಭಾರಿಸಿರಿಯನು ಪತಿಗೆ ತಾರದಾ ಸೊಸೆ ಲಘುವು ನಾರಿಯರ ಕೈಗೊಂಬೆಯಾಗಿರುವ ನರ ಲಘುವು ಸಿರಿವಂತ ನೆಂಟರಲಿ ಬಡವ ಸೇರಲು ಲಘುವು 1 ವಿತ್ತವಿಲ್ಲದ ಪಿತನು ಪುತ್ರನಿಲ್ಲಿರೆ ಲಘುವು ಪುತ್ರವತಿಯರ ನಡುವೆ ಸವತಿ ಬಂಜೆಯು ಲಘುವು ಅತ್ತಿಗೆಗೆ ಬಹು ಲಘುವು ರಿತ್ತ ಮೈದುನ ಮಂದಿ ಭತ್ರ್ಯತಾನತಿ ಲಘುವು ಶ್ರೀಮಂತ ಕನ್ನಿಕೆಗೆ 2 ಮೋದತೀರ್ಥರ ಮತಕೆ ಮಿಕ್ಕುದೆಲ್ಲವು ಲಘುವು ವೇದನುತ “ಶ್ರೀಕೃಷ್ಣವಿಠಲ”ನ ನೆನೆಯದವ ಶುದ್ಧಲಘು ತಮನೈಯ ವೃದ್ಧ ಸಮ್ಮತ ಹೌದು 3
--------------
ಕೃಷ್ಣವಿಠಲದಾಸರು
ಹರಿಯೇ ನಿನ್ನಯ ಸಿರಿಯನು ಬಣ್ಣಿಸೆ ನರನಾದೆನಗಳವೇ ಪ ಕರುಣಾಳುವೆ ನಾಂ ಕರಗಳ ಮುಗಿವೆ ಪÀರವಾಸುದೇವ ಪರಮಾತ್ಮಾ ಅ.ಪ ಸತಿಶ್ರೀದೇವಿಯು ನುತಚತುರಾನನ ಪತಿತೋದ್ಧರೆ ಗಂಗೆಯು ಮಗಳು ಸ್ತುತಿಗೈಯುವವೇದ ತತಿಯಿಂ ನಿತ್ಯ ಭೃತ್ಯರು ಸುರಗಣ ಸರ್ವೇಶಾ 1 ಸಾಗರ ಮಧ್ಯದಿ ಭೋಗಿಯನೊರಗಿ ಯೋಗೀಜನರ ಹೃದಯದಿ ನೆಲಸಿ ಆಗಮ ಪೂಜೆಯ ರಾಗದಿ ಪಡೆವ 2 ಶಂಖಸುದರ್ಶನ ಪಂಕಜಧರಶ್ರೀ ವೆಂಕಟವರದ ಶೀರಂಗ ಕಿಂಕರ ಪಾಲಕ ಜಾಜೀಶಾ 3
--------------
ಶಾಮಶರ್ಮರು
ಆವ ಕುಲವಾದರೇನು ಪ.ಭಾವದ ಎಲ್ಲಾನ ತಿಳದವನಿಗೆ ಮತ್ತೇ ಅಪಅಸುಡೊಂಕು ಕಬ್ದು ಇರಲು - ಅದರೊಳಗಿದ್ದರಸ ತಾನು ಡೊಂಕೇನಲೊ - ಮರುಳೆವಿಷಯಭಾವನೆ ಬಿಟ್ಟು ನೀ ಹೋಗಿ ಗುರುಗಳಹಸನಾಗಿ ಕೇಳು ಕಾಣೋ - ಮನುಜಾ 1ನಾನಾವರ್ಣದ ಆಕಳ - ಕ್ಷೀರದಲಿನಾನಾವರ್ಣಗಳಹುದೆ - ಮನುಜಾಹೀನ ಭಾವನೆಗಳನಿಂದಿಟ್ಟು ನೀ ಪೋಗಿಜ್ಞಾನಿಗಳ ಕೇಳು ಕಾಣೋ - ಮನುಜಾ 2ಶರಧಿಯೊಳ ತೆರೆನೊರೆಗಳಾ - ಪರಿಯಂತೆಶರೀರವಲ್ಲದೆ ಬೇರಿಹುದೇ ?ವರಪುರಂದರವಿಠಲನ ಸ್ಮರಿಸುತಿರಲು ನಿನಗೆಸಿರಿಯನು ಮುಕುತಿಯಹುದು - ಮನುಜಾ 3
--------------
ಪುರಂದರದಾಸರು
ಭೇದ ಮುಕ್ತಾವಲಿ (ಕೋಲು ಹಾಡು)ಕೋಲು ಮುಕ್ತಿಮಾರ್ಗದ ಕೋಲು ದುಷ್ಟಶಾಸನಕೋಲು ಸುಖತೀರ್ಥಯತಿರಾಯನ ಕರದಂಡುಕೋಲು ಕೋಲೆನ್ನ ಕೋಲೆ ಪ.ಶ್ರೀದೇವಹೂತಿಜಾಜನಂಘ್ರಿಗೆ ನಮಿಸುವೆಶ್ರೀದೇವಿ ಪದಕೆ ಎರಗುವೆ ಕೋಲೆಶ್ರೀದೇವಿ ಪದಕೆ ಎರಗುವೆ ಮುಖ್ಯಗುರುವಾದಜವಾಯುರೊಂದಿಪೆ ಕೋಲೆ 1ವಾಣಿ ಭಾರತಿದೇವಿ ಗರುಡ ಮಹೇಶಾನಂತಜ್ಞಾನದಾತರಿಗೆ ನಮೋ ಎಂಬೆ ಕೋಲೆಜ್ಞಾನದಾತರಿಗೆ ನಮೋ ಎಂಬೆ ಶ್ರೀವಿಷ್ಣುಮಾನುನೆರಾರ್ವರ ಶರಣೆಂಬೆ ಕೋಲೆ 2ಗರುಡನ ರಂಭೆವಾರುಣಿಗಿರಿಜೇರಿಗೊಮ್ಮೆಕರಗಳ ಮುಗಿದು ಸ್ಮರಿಸುವೆ ಕೋಲೆಕರಗಳ ಮುಗಿದು ಸ್ಮರಿಸುವೆ ಇಂದ್ರ ಕಾಮವರಪ್ರಾಣಾನಿರುದ್ಧರ ಬಲಗೊಂಬೆÉ ಕೋಲೆ3ಇಂದ್ರಾಣಿರತಿಮುಖ್ಯರಾದ ತಾರತಮ್ಯದವೃಂದಾರಕಋಷಿನೃಪರನು ಕೋಲೆವೃಂದಾರಕಋಷಿನೃಪರಮನುಷ್ಯೋತ್ತಮರಂ ಧ್ಯಾನಿಸುವೆ ಮನದಲಿ ಕೋಲೆ 4ಏನೂ ಇಲ್ಲೆಂಬನ ಹಾನಿಗೆ ಕಡೆಯಿಲ್ಲತಾನೀಶನೆಂದು ನುಡಿದವ ಕೋಲೆತಾನೀಶನೆಂದು ನುಡಿದವ ತಮಸನುತಾನುಂಬ ತನ್ನ ಬಳಗದಿ ಕೋಲೆ 5ಹರಿಯ ಗುಣಕೆ ಎಣಿಕೆನಿಟ್ಟವ ಕೆಟ್ಟವಹರಿನಿರ್ಗುಣೆಂಬ ಡಂಬರ ಕೋಲೆಹರಿನಿರ್ಗುಣೆಂಬ ಡಂಬರ ಸಂಗದಿಧರೆಯ ಸಜ್ಜನರು ಮತಿಗೆಡಲಿ ಕೋಲೆ 6ಕ್ಷೀರಾಂಬುಧಿಮನೆಯ ವಾಸುದೇವನ ಆಜ್ಞಾಧಾರಿಯೆನಿಪ ವಾಯುದೇವನು ಕೋಲೆ ಆಜ್ಞಾಧಾರಿಯೆನಿಪ ವಾಯುದೇವನು ಮೊದಲಿಗೆವೀರ ಹನುಮ ಭೀಮನಾದನು ಕೋಲೆ 7ಮೂರನೆ ಅವತಾರಿ ಮಧ್ವರಾಯನು ಮುಕ್ತಿದಾರಿಯ ತನ್ನವರಿಗೆಲ್ಲ ಕೋಲೆ ಮುಕ್ತಿದಾರಿಯ ತನ್ನವರಿಗೆಲ್ಲ ತೋರಿದುದಾರಿಯ ಪದವ ಹೊಂದಿದೆ ಕೋಲೆ 8ಗುರುಮಧ್ವ ಎನ್ನ ಮಾತೆ ಗುರುಮಧ್ವನೆನ್ನತಾತಗುರುಮಧ್ವನಾಥ ಸಖಭ್ರಾತ ಕೋಲೆಗುರುಮಧ್ವನಾಥ ಸಖಭ್ರಾತನೆಂದವರಿಗೊಲಿವನು ಗತಿಯ ಕೊಡುವನು ಕೋಲೆ 9ಸುಖತೀರ್ಥರಾಯನ ಹಿತವಾಕ್ಯಕೆಣೆಯಿಲ್ಲಶುಕತಾತ ಸಮನ ದೈವಿಲ್ಲ ಕೋಲೆಶುಕತಾತ ಸಮನ ದೈವಿಲ್ಲವೆಂದವರಭಕುತಿಯ ಬೇಡಿ ಬಯಸಿದೆ ಕೋಲೆ 10ಭಕುತ್ಯೆಂಬ ಮುಯ್ಯವ ಹರಿಪಾದಕರ್ಪಿಸಿದಅಕಳಂಕ ಮಧ್ವ ಮುನಿರಾಯ ಕೋಲೆಅಕಳಂಕ ಮಧ್ವಮುನಿರಾಯನಂಘ್ರಿಗೆಸಕಳ ಭಾರವ ಒಪ್ಪಿಸಿದೆನು ಕೋಲೆ 11ವಿಶಿಷ್ಠ ಸ್ವರೂಪಾನಂದರ್ಭಾವ ಮೋಕ್ಷ ಸುವಾಸಿನೇರೆಲ್ಲರೊಂದಾಗಿ ಕೋಲೆ ಸುವಾಸಿನೇರೆಲ್ಲರೊಂದಾಗಿ ಹೋಗುವಹೇಸಿ ನಾರೇರ ಗೆಲ್ಲುವ ಕೋಲೆ 12ನಮ್ಮ ಮುತ್ತಯ್ಯನಾದ ಮರುತರಾಯನ ಕೀರ್ತಿನಿರ್ಮಲ ಬುಧರಿಗಮೃತವು ಕೋಲೆನಿರ್ಮಲ ಬುಧರಿಗಮೃತವು ಧರೆಯೊಳುಹಮ್ಮಿನ ಖಳರಿಗೆದೆಗಿಚ್ಚು ಕೋಲೆ 13ಮುತ್ತಯ್ನಂಶದ ಒಳಗೊಬ್ಬ ಜನಿಸಿದಹೆತ್ತಯ್ನಮ್ಮ ಜಯರಾಯ ಕೋಲೆಹೆತ್ತಯ್ನಮ್ಮ ಜಯರಾಯ ತನ್ನ ಬಂಧುಮೊತ್ತದಿ ರಾಜ್ಯವಾಳಿದ ಕೋಲೆ 14ಜಯರಾಯ ಸಂತತಿಯ ಮಕ್ಕಳು ನಾವೀಗಜಯನವಭೇರಿ ಹೊಯಿಸುತ ಕೋಲೆಜಯನವಭೇರಿ ಹೊಯಿಸುತ ರವದ ಜಾಗಟೆಯ ಬಿರುದಲಿ ಬರುತೇವೆ ಕೋಲೆ 15ಬಯಲು ಮಾತಿನವ ಕಡೆಗಾಗಿ ತತ್ವವಿನಯ ವಾಕ್ಯ ನಿಮಗೆ ಸೊಗಸಲ್ಲ ಕೋಲೆ ವಿನಯವಾಕ್ಯ ನಿಮಗೆ ಸೊಗಸಲ್ಲ ಕೇಳಿದರೆಭಯಬಿಟ್ಟುಕೇಳಿಕವಿಯರು ಕೋಲೆ16ಲೌಕಿಕ ಮಾತಿನಂತಲ್ಲ ಮುಯ್ಯದ ಹಾಡುವೈಕುಂಠಪತಿಯ ಅರಮನೆಯ ಕೋಲೆವೈಕುಂಠಪತಿಯ ಅರಮನೆಯಾಸ್ಥಾನದಏಕಾಂತ ನಾರೇರೊಪ್ಪಿದ್ದು ಕೋಲೆ 17ಹಾದಿ ಬೀದಿಯ ಜನರ ಮೆಚ್ಚಿನ ಮುಯ್ಯಲ್ಲಮಾಧವನ ಶ್ವೇತದ್ವೀಪದ ಕೋಲೆಮಾಧವನ ಶ್ವೇತದ್ವೀಪದ ಮಂದಿರದಿಶ್ರೀದೇವಿಯಮ್ಮ ಕೇಳ್ವಳು ಕೋಲೆ 18ಭ್ರಾಂತಜನರಿಗೆ ವಿಶ್ರಾಂತಿದೋರದು ಮುಯ್ಯಾನಂತಾಸನದ ಅನಂತನ ಕೋಲೆ ಅನಂತಾಸನದ ಅನಂತನ ಮಡದಿ ಶ್ರೀಕಾಂತೆ ನಮ್ಮವ್ವ ಕೇಳ್ವಳು ಕೋಲೆ 19ಹಾಡುತ ಬರುತೇವೆ ಹರಸುತ ಬರುತೇವೆರೂಢಿಯ ಸಾಧುಜನರನು ಕೋಲೆರೂಢಿಯ ಸಾಧುಜನರ ಗುಣಂಗಳ ಕೊಂಡಾಡುತ ನಾವು ಬರುತೇವೆ ಕೋಲೆ 20ದರ್ಶನರಾಯರು ಮೂವತ್ತೇಳು ಮಂದಿಅರಸರು ನಮ್ಮ ಹಿರಿಯರು ಕೋಲೆಅರಸರು ನಮ್ಮ ಹಿರಿಯರ ಮಹಿಮೆ ಉಚ್ಚರಿಸುತ ನಾವು ಬರುತೇವೆ ಕೋಲೆ 21ನಮ್ಮ ತವರಿಗೆ ಕೀರ್ತಿತಂದ ಕನ್ಯೇರು ನಾವುನಮ್ಮ ನೆಳಲಿಗಂಜಿ ನಡೆದೇವು ಕೋಲೆನಮ್ಮ ನೆಳಲಿಗಂಜಿ ನಡೆದೇವು ದುರುಳೇರಉನ್ಮತ್ತನಮಗೆ ಎಣಿಕಿಲ್ಲ ಕೋಲೆ22ಜ್ಞಾನದೀವಟಿಗೆ ಬೆಳಗಲೆ ಬರುತೇವೆಜ್ಞಾನ ಕತ್ತಲೆಯ ಬೆದರಿಸಿ ಕೋಲೆ ಅಜ್ಞಾನ ಕತ್ತಲೆಯ ಬೆದರಿಸಿ ಬರುವಾಗಹೀನ ಬುಧ್ಯರು ಮೋರೆ ತೆಗೆದಾರು ಕೋಲೆ 23ನಮ್ಮಯ್ಯನಾಸ್ಥಾನ ಬಣ್ಣಿಸಲಳವಲ್ಲನಿರ್ಮಳಾತ್ಮಕರು ಸಚಿವರು ಕೋಲೆನಿರ್ಮಳಾತ್ಮಕರು ಸಚಿವರು ಪರಿವಾರಧರ್ಮಶೀಲರು ವಿರತರು ಕೋಲೆ 24ಎತ್ತ ನೋಡಲಿ ನವಭಕ್ತಿರತ್ನದ ಬೆಳಗುಚಿತ್ರ ಮಂಟಪಕೆ ಎಣಿಕಿಲ್ಲ ಕೋಲೆಚಿತ್ರ ಮಂಟಪಕೆ ಎಣಿಕಿಲ್ಲ ಶಂಖಚಕ್ರಒತ್ತಿಡಿದವು ಭಿತ್ತಿಲಿ ಕೋಲೆ 25ಬ್ರಹ್ಮಸೂತ್ರದ ವಜ್ರಕಂಬದಿ ಕುಳಿತಿಹಬ್ರಹ್ಮಜÕಪರಮ ಹಂಸವು ಕೋಲೆಬ್ರಹ್ಮಜÕ ಪರಮಹಂಸವು ಪುಣ್ಯಶ್ಲೋಕಧರ್ಮಜÕರಾಯ ಗಿಳಿವಿಂಡು ಕೋಲೆ 26ಮ್ಯಾಗೆ ಮ್ಯಾಗೊಪ್ಪುವ ಸದ್ಗ್ರಂಥದುಪ್ಪರಿಗೇಲಿಕೂಗುವ ಸಾಮಕೋಗಿಲೆ ಕೋಲೆಕೂಗುವ ಸಾಮಕೋಗಿಲೆ ನವಿಲ್ಗಳುನಾಗಪಾಲಕಗೆ ಅತಿಪ್ರೀತಿ ಕೋಲೆ 27ಕಡುಭಕ್ತಿಪತಾಕೆ ಹರಿನಿಷ್ಠೆ ಕಳಸವುಕೊಡುವಅಭಯಛತ್ರ ಸಾಲ್ಗಳು ಕೋಲೆಕೊಡುವಅಭಯಛತ್ರ ಸಾಲ್ಗಳು ಶ್ರೀ ತುಲಸಿನಡುವೆ ಪ್ರಣತ ತೋರಣಗಳು ಕೋಲೆ 28ತಪವೆಂಬ ತಪಿತದರ ಮೈಸಿರಿಯನೃಪಜಯರಾಯನೆಸೆದನು ಕೋಲೆನೃಪಜಯರಾಯನೆಸೆದಾ ಸಿಂಹಾಸನದಿಶಶಿತೇಜದಂತೆ ಹೊಳೆದನು ಕೋಲೆ29ಆನೆಗಳೆಣಿಕಿಲ್ಲ ಕುದುರೆಯ ಗಣನ್ಯಿಲ್ಲಕಾಲಾಳು ರಥಕೆ ಮಿತಿಯಿಲ್ಲ ಕೋಲೆಕಾಲಾಳು ರಥಕೆ ಮಿತಿಯಿಲ್ಲ ಅನ್ಯೋಕ್ತಿಜಾಣೆ ದಾಸೇರಿಗೆ ಕಡೆಯಿಲ್ಲ ಕೋಲೆ 30ಕುವಿದ್ಯಾರಣ್ಯವ ಸವರಿ ಬೇಟ್ಯಾಡಿದಕೋವಿದನಮ್ಮ ಹಡೆದಪ್ಪ ಕೋಲೆಕೋವಿದನಮ್ಮ ಹಡೆದಪ್ಪ ರಚಿಸಿದದೇವವನಗಳ ವರ್ಣಿಪೆ ಕೋಲೆ 31ತತ್ವಪ್ರಕಾಶದ್ದಾಳಿಂಬೆ ಸುಧಾರಸಬಿತ್ತಿದ ಕಬ್ಬಮೋಘ ಮಾವು ಕೋಲೆಬಿತ್ತಿದ ಕಬ್ಬಮೋಘ ಮಾವು ಪದ್ಯಮಾಲೆಉತ್ತತ್ತಿ ತೆಂಗು ಹಲಸನ್ನು ಕೋಲೆ 32ಹತ್ತು ಪ್ರಕರಣ ದಾಟಿತೆಂಬೊ ದ್ರಾಕ್ಷದಸುತ್ತಿದ ಬಳ್ಳಿಮಂಟಪ ಕೋಲೆಸುತ್ತಿದ ಬಳ್ಳಿಮಂಟಪದಿ ಶುದ್ಧಮತ್ಯೌನ ಕೂಡಪ್ಪ ನಲಿದನು ಕೋಲೆ 33ದೇಶ ದೇಶದೊಳಿದ್ದದುರ್ವಾದಿಪೋಕರಘಾಸಿಸಿ ಜಯಪತ್ರ ದ್ರವ್ಯವ ಕೋಲೆಘಾಸಿಸಿ ಜಯಪತ್ರ ದ್ರವ್ಯವ ತಂದು ಮಧ್ವೇಶಗರ್ಪಿಸಿದ ಮುದದಿಂದ ಕೋಲೆ 34ಬಂಧು ಸುದರ್ಶನರಾಯರ ಒಡಗೂಡಿಮಂದಿರದೊಳಗಾನಂದಿಪ ಕೋಲೆಮಂದಿರದೊಳಗಾನಂದಿಪ ಶ್ರುತವೇಷತಂದೆಯನೇನ ಹೊಗಳುವೆ ಕೋಲೆ 35ಇಪ್ಪತ್ತೈದು ತತ್ವ ನಾಣ್ಯದಿ ರಾಮನಾಮಸುಪ್ಪಾಣಿಮುದ್ರೆ ನಡೆಸುವ ಕೋಲೆಸುಪ್ಪಾಣಿಮುದ್ರೆ ನಡೆಸುವ ತನ್ನವರಿಗೆತಪ್ತ ಮುದ್ರೆ ಕುರುಹಿಟ್ಟನು ಕೋಲೆ 36ಭೇದಿಸಿ ನೋಡಿರೊ ಭೇದವ ತಿಳಿಯಿರೊಮಾಧವಜೀವ ಜಡರೊಳು ಕೋಲೆಮಾಧವಜೀವ ಜಡರೊಳು ಎನುತಲಿಬೋಧಿಸಿದನು ಹಿತಮಾರ್ಗ ಕೋಲೆ 37ತನ್ನ ಹೊಂದಿದರಿಗೆ ಪ್ರೌಢವೃತ್ತಿಯನು ಶ್ರೀಮನ್ನಾಮಾಮೃತವನುಣಿಸುವ ಕೋಲೆ ಶ್ರೀಮನ್ನಾಮಾಮೃತವನುಣಿಸುವ ಹೊರೆವನುಉನ್ನತ ಮಹಿಮ ಜಯರಾಯ ಕೋಲೆ 38ಆವಾಗಸೂತ್ರಾರ್ಥ ನಿಸ್ಸಾಳ ವ್ಯಾಖ್ಯಾನತೀವಿದ ಶ್ರುತಿಯ ಕಹಳೆಯು ಕೋಲೆತೀವಿದ ಶ್ರುತಿಯ ಕಹಳೆ ಧ್ವನಿಯುಂಟುಶ್ರೀವ್ಯಾಸ ರಾಮಾರ್ಚನೆಯುಂಟು ಕೋಲೆ 39ಅಚ್ಚ ಸಾತ್ವಿಕನಾದ ರಾಜಾಧಿರಾಜನಹೆಚ್ಚಿನಸತಿಶುದ್ಧಮತಿಯಮ್ಮ ಕೋಲೆಹೆಚ್ಚಿನಸತಿಶುದ್ಧ ಮತಿಯಮ್ಮ ನಮ್ಮಮ್ಮನಿಚ್ಚನಮ್ಮನು ಹೊರೆವಳು40ತಾಯಿ ತಂದೇರ ಹಾಡಿ ದಣಿಯದು ನಮ್ಮ ಮನಭಯವು ಅದರಲ್ಲಿರುವುದು ಕೋಲೆಭಯವು ಅದರಲ್ಲಿರುವುದು ಶುಭಗುಣಬಾಯಿ ಮಾತಿಗೆ ತೀರವು ಕೋಲೆ 41ಬಂದೆವು ಬೀಗರ ಮನೆಗಿಂದೆ ಮುಯ್ಯವತಂದೇವು ಬಾಲೇರೊಡಗೂಡಿ ಕೋಲೆತಂದೇವು ಬಾಲೇರೊಡಗೂಡಿ ಬೀಗರಅಂದವ ಹೇಳಲಳವಲ್ಲ ಕೋಲೆ 42ಬಹುಕಾಲದ್ಹಿರಿಯರು ಬಾಳಿದ ಮನೆಯಿದುವಿವರಿಸಿ ನೋಡಲರಿಯದೆ ಕೋಲೆವಿವರಿಸಿ ನೋಡಲರಿಯದೆ ಕೆಡಿಸಿದರುಧವಳಾರವೆಲ್ಲ ಮಲಿನವು ಕೋಲೆ 43ಬೀಗರಿದ್ದ ಮನೆಯನೆತ್ತೆತ್ತ ನೋಡಲುಬಾಗಿಲು ಬಯಲು ಬರೆಹುಯಿಲು ಕೋಲೆಬಾಗಿಲು ಬಯಲು ಬರೆಹುಯಿಲು ನಮ್ಮವರುಹ್ಯಾಗೆಂತು ಹೆಣ್ಣು ಕೇಳುವರು ಕೋಲೆ 44ಸಂಖ್ಯಾವಿದನೆಂಬಾತ ಮಾವನಾತನ ರಾಣಿಬಿಂಕದ ಬೌದ್ಧದೇವ್ಯತ್ತಿ ಕೋಲೆಬಿಂಕದ ಬೌದ್ಧದೇವ್ಯತ್ತಿ ಭಾಟ್ಟ ನಿ:ಶಂಕ ಚಾರ್ವಾಕಭಾವಮೈದುನರು ಕೋಲೆ45ಮಿಥ್ಯನಮ್ಮತ್ತಿಗೆಮಾಯೆನಮ್ಮ ನಾದಿನಿಸುತ್ತಿನ ಬಳಗಕೆಣಿಕಿಲ್ಲ ಕೋಲೆಸುತ್ತಿನ ಬಳಗಕೆಣಿಕಿಲ್ಲ ಕೆಣಕಿದರೆಮತ್ತೇನಾದರು ಹುರುಳಿಲ್ಲ ಕೋಲೆ 46ಇಪ್ಪತ್ತೊಂದು ಮಂದಿ ಹೆಸರಾದವರ ಕೂಡಬಹುಕಾಲ ಕಜ್ಜವು ನಮಗುಂಟು ಕೋಲೆಬಹುಕಾಲ ಕಜ್ಜವು ನಮಗುಂಟು ಹಾಲಿಗೆಹೆಪ್ಪನೆರೆದಂತೆ ಹಿತಮಾತು ಕೋಲೆ 47ಅಂಗಳದೊಳು ಬಂದು ತಿಳಿದೇವು ಅತ್ತಿಗೇರಶೃಂಗಾರಗರತಿ ಸಿರಿಯನು ಕೋಲೆಶೃಂಗಾರಗರತಿ ಸಿರಿಯನು ಕಾಣುತಹಿಂಗದೆ ನಿಂತು ನುಡಿಬೇಕು ಕೋಲೆ 48ತಂಗಳೆಂಜಲು ಎಂಬೊ ಅಂಜಿಕೆ ತಮಗಿಲ್ಲಮಂಗಳಧಾತು ಕಾಣೆವು ಕೋಲೆಮಂಗಳಧಾತು ಕಾಣೆವು ಅತ್ತಿಗೇರುತಿಂಗಳಸ್ನಾನ ಅರಿಯರು ಕೋಲೆ 49ದಾವಮೂಲೆಲಿ ಬೂದಿ ಮನೆಗಸ ನೋಡಿರೆಭಾವಿ ಅತ್ತೆಯಕೆಲಸವ ಕೋಲೆಭಾವಿ ಅತ್ತೆಯ ಕೆಲಸಕೆ ಮೆಚ್ಚಿದೆವುನಾವೇನುಡುಗೊರೆಯ ಕೊಡಬೇಕು ಕೋಲೆ 50ಮಿಥ್ಯಾವಾದದಲಿ ನಮ್ಮತ್ತಿಗೆ ಬಲುಜಾಣೆಹೆತ್ತವ್ರನೆಲ್ಲ ಹುಸಿಯೆಂದು ಕೋಲೆಹೆತ್ತವ್ರನೆಲ್ಲ ಹುಸಿಯೆಂದು ಶಿವನೊಬ್ಬಸತ್ಯ ತಾನೆಂದು ನುಡಿವಳು ಕೋಲೆ 51ಕಚ್ಚೆ ಹಾಕಿದವರಿಗೆ ವಿಪ್ರರೆಂದ್ಹೆಸರಿಟ್ಟುನಿಚ್ಚಗೆಳತೇರ ಒಡಗೂಡಿ ಕೋಲೆನಿಚ್ಚಗೆಳತೇರ ಒಡಗೂಡಿ ಗೆಳೆತನಹೆಚ್ಚಾಗಿ ನಡೆಸುತಿಹಳು ಕೋಲೆ 52ದೊಡ್ಡಾಕಿ ನಾನೆಂದು ಅಡ್ಡಡ್ಡ ನಡೆವಳುದೊಡ್ಡವರ ಕಂಡರೋಡೋಳು ಕೋಲೆದೊಡ್ಡವರ ಕಂಡರೋಡೋಳು ನಡುಮನೆದೊಡ್ಡಿಗೆ ತಾನು ಹಿರಿಯಳೆ ಕೋಲೆ 53ಮಾಯಿನ ದನಿನೋಡಿ ಮಾವನ ಕಿರಿಮಗಳುಬಾಯಿ ಬಡಕಿಯು ಬಹುಭಾಷಿ ಕೋಲೆಬಾಯಿ ಬಡಕಿಯು ಬಹುಭಾಷಿ ವೆಡ್ಡಗೊಂಡನಾಯಿಯ ತೆರದಿ ಬಲುಕೋಪಿ ಕೋಲೆ 54ತಾಯಿ ತಂದೆಯರಿಗೆ ಗುಣವಂತೆ ಮಗಳೀಕೆನೋಯಿಯ ನುಡಿವಳುಂಡುಟ್ಟು ಕೋಲೆನೋಯಿಯ ನುಡಿವಳುಂಡುಟ್ಟು ಆ ಕ್ಷಣಬಾಯಾರುವಲ್ಲಿ ಬಲ್ಲಿದಳು ಕೋಲೆ 55ಮಹಾತ್ತುಮರ ಮಟಾಮಾಯ ಮಾಡುವ ಶಕ್ತಿಮಹಾಢಾಳಿಕಿಯ ಬಲ್ಲಳು ಕೋಲೆಮಹಾಢಾಳಿಕಿಯ ಬಲ್ಲಳು ಆ ಬುಧರಮಾಯಿ ಅಭದ್ರೆಘನಕ್ಷುದ್ರೆ ಕೋಲೆ56ತನ್ನ ಬದಿಯ ತನ್ನೆರೆಹೊರೆಯವರನುತನ್ನಂತೆ ಮಾಡಿಕೊಂಡಳು ಕೋಲೆತನ್ನಂತೆ ಮಾಡಿಕೊಂಡಳು ಮನದಲಿಉನ್ಮತ್ತವೃತ್ತಿಕಲಿಸೋಳು ಕೋಲೆ57ಪ್ರಸ್ತವ ಮಾಡುವ ಮನೆಯೊಳು ಹೋಗುವಳುಅಸ್ತವ್ಯಸ್ತದಲಿ ಬಲುಬೇಗ ಕೋಲೆಅಸ್ತವ್ಯಸ್ತದಲಿ ಬಲುಬೇಗ ಷಡ್ರಸನ್ನಹಸ್ತಲಾಘವದಿ ಕೆಡಿಸುವಳು ಕೋಲೆ 58ಒಳ್ಳೆ ಶಾಲ್ಯೋದನ ಭಕ್ಷ್ಷ್ಯಭೋಜನದೊಳುಕೊಳ್ಳಿಯಿಕ್ಕಿ ಕೆಡಿಸುವಳು ಕೋಲೆಕೊಳ್ಳಿಯಿಕ್ಕಿ ಕೆಡಿಸುವಳು ಪದಾರ್ಥವನೆಲ್ಲ ಏಕಾಕಾರ ಮಾಡುವಳು ಕೋಲೆ 59ಅತ್ತಿಗೆನಾದಿನೇರ ಗೋಡೆಯ ಮೇಲಿನಚಿತ್ತಾರದ ಗೊಂಬಿ ನೋಡಿರೆ ಕೋಲೆಚಿತ್ತಾರದ ಗೊಂಬಿ ನೋಡಿರೆ ಅಖಂಡಮತ್ತೆ ಭೇದಗಳು ತಿಳಿಯವು ಕೋಲೆ 60ಕಂಬ ಬೋದುಗಳೊಂದೆ ಕೆಳಮೇಲು ಕಟ್ಟು ಒಂದೆಅಂಬುಜಮದ್ದುಗುಣಿಕೊಂದೆ ಕೋಲೆಅಂಬುಜಮದ್ದುಗುಣಿಕೊಂದೆ ತುಲಸಿ ಕದಂಬವು ಎಕ್ಕೆ ಗಿಡವೊಂದೆ ಕೋಲೆ 61ಕಾಗೆ ಕೋಗಿಲೆ ಒಂದೆ ಗೂಗೆ ನವಿಲು ಒಂದೆನಾಗನೀರೊಳ್ಳಿಯ ಹಾವು ಒಂದೆ ಕೋಲೆನಾಗನೀರೊಳ್ಳಿಯ ಹಾವು ಒಂದೆ ಚಿತ್ತರದಾ ಗಿಳಿಹಿಂಡು ತಿಳಿಯವು ಕೋಲೆ 62ಕುದುರೆ ಕತ್ತೆಯ ಬಣ್ಣ ಆನೆ ಹಂದಿಯ ಬಣ್ಣಮದಹುಲಿಗೆ ನಾಯಿ ಬಣ್ಣವು ಕೋಲೆಮದಹುಲಿಗೆ ನಾಯಿ ಬಣ್ಣ ಒರ್ಸಿಟ್ಟಿಹಚದುರೆಯ ಕೈಗೆ ಕಡಗವು ಕೋಲೆ 63ಅತ್ತಿಗೆನಾದಿನೇರ ಚಿತ್ತಾರ ಬಲುಘನಮತ್ತೆ ತೀರದ ಗುಣಗಳು ಕೋಲೆಮತ್ತೆ ತೀರದ ಗುಣಗಳುಭಾವಮೈದುನರೆತ್ತೋಡಿದರು ಸುಳುಹಿಲ್ಲ ಕೋಲೆ 64ಗುರುಗಳ ಭಯವಿಲ್ಲ ಹಿರಿಯರ ಸ್ಮರಣಿಲ್ಲಹರಿಯೆ ತಾವೆಂದು ಬೆರೆತರು ಕೋಲೆಹರಿಯೆ ತಾವೆಂದು ಬೆರೆತರು ದಿಂಡೇರಿಗೊರೆವರು ತಮ್ಮ ಬುದ್ಧಿಯ ಕೋಲೆ 65ಲಗಳಿಯ ಕೋಣಗೆ ಲಘ್ವಾದ ಕೆಲಸೆತ್ತಜಗದೀಶನೆತ್ತ ತಾವೆತ್ತ ಕೋಲೆಜಗದೀಶನೆತ್ತ ತಾವೆತ್ತ ಭಾವರನಗೆಗೇಡು ನೋಡಿ ನಗುತೇವೆ ಕೋಲೆ 66ಹೆಗಲ ಕಾವಡಿಯವಗೆ ಹಗಲು ದೀವಟಿಗೇಕೆಮಿಗಿಲಾದ ಬಿರುದು ತಮಗೇಕೆ ಕೋಲೆಮಿಗಿಲಾದ ಬಿರುದು ತಮಗೇಕೆ ಮೈದುನರಮೊಗ ನೋಡಿದರೆ ಹೊಗೆಗೆಂಡ ಕೋಲೆ 67ಪಂಚದೇವನ ಪೂಜೆ ಮಾಡುವರೊಂದಾಗಿಹಿಂಚು ಮುಂಚುಗಳ ಅರಿಯರು ಕೋಲೆಹಿಂಚು ಮುಂಚುಗಳ ಅರಿಯರು ಬರಿದೆ ಪ್ರಪಂಚವ ಬಿಟ್ಟೆವೆನಿಸುವರು ಕೋಲೆ 68ಹಿಂಡುಬಾಂಧವರು ತಮ್ಮೊಳು ತಾವೆ ಕೊಂಡಾಡಿಮಂಡಿಕೆಸೂತ್ರಹರಕೊಂಡು ಕೋಲೆಮಂಡಿಕೆಸೂತ್ರಹರಕೊಂಡು ಕೊಂಡಾಡಿಮಂಡೆಯ ಬಿಟ್ಟು ತಿರುಗೋರು ಕೋಲೆ 69ಇವರ ಲೆಕ್ಕದೊಳಗೆ ಹರಿಶಿವನೊಬ್ಬನೆರವಿಗಣನಾಥನೊಬ್ಬನೆ ಕೋಲೆರವಿಗಣನಾಥನೊಬ್ಬನೆ ಎಲ್ಲೆಲ್ಲಿದಿವಿ ದೇವರೊಳಗೆ ಬೇರಿಲ್ಲ ಕೋಲೆ 70ವಿಧಿನಿಷಿದ್ಧಗಳಿಲ್ಲಪೋಕಮತದೊಳುಉದರ ತುಂಬಿದರೆ ಸಮದೃಷ್ಟಿ ಕೋಲೆಉದರ ತುಂಬಿದರೆ ಸಮದೃಷ್ಟಿ ಹರಿವ್ರತಮೊದಲಿಗಿಂದಿಗೆ ಸೊಗಸವು ಕೋಲೆ 71ಬದನೆ ನುಗ್ಗೆಯ ಕಾಯಿ ಸಲೆ ತೊಂಡೆ ತುಪ್ಹೀರೆಮೃದು ಮೂಲಂಗಿ ಗಜ್ಜರಿಗಳು ಕೋಲೆಮೃದು ಮೂಲಂಗಿ ಗಜ್ಜರಿಗಳು ಇವರಿಗೆಮುದದೂಟ ಆತ್ಮಾರಾಮನ ತೃಪ್ತಿ ಕೋಲೆ 72ಬಸಳೆ ಸಬ್ಬಸೆ ಸೊಪ್ಪು ಹುಳಿ ಚುಕ್ಕದ ಗೂಡೆಹಸನಾದ ಪುಂಡಿ ಬಲುಪ್ರೀತಿ ಕೋಲೆಹಸನಾದ ಪುಂಡಿ ಬಲುಪ್ರೀತಿಹಸಿವಿಗೆ ದೊರೆಯ ಪರಲೋಕ ಕೋಲೆ 73ಮಡಿ ಮೈಲಿಗೆಯು ಒಂದೆ ಸ್ನಾನಪಾನಗಳೊಂದೆಹುಡುಗ ಹಿರಿಯರ ಬಳಿಕೊಂದೆ ಕೋಲೆಹುಡುಗ ಹಿರಿಯರ ಬಳಿಕೊಂದೆನುಡಿಬೇರೆ ಪೋಕರ ನಡೆಬೇರೆ ಕೋಲೆ 74ನಮ್ಮ ನಗೆಯೊಳಗೆ ಉನ್ನತ ಸುಖವುಂಟುರಮ್ಮೆಯ ರಮಣ ಕರುಣಿಪ ಕೋಲೆರಮ್ಮೆಯ ರಮಣ ಕರುಣಿಪ ಒಡಲ್ಹೊಕ್ಕುನಮ್ಮವರಾಗಿ ಸುಖಿಯಾಗಿ ಕೋಲೆ 75ನಿಮ್ಮ ಹಿರಿಯರೆಲ್ಲ ನಮ್ಮ ಮನೆಯ ಹೊಕ್ಕುಧರ್ಮಾರ್ಥ ಸೂರೆಗೊಂಡರು ಕೋಲೆಧರ್ಮಾರ್ಥ ಸೂರೆಗೊಂಡರು ಜಗವರಿಯೆನಿರ್ಮಳರಾಗಿ ಸುಖಿಯಾಗಿ 76ಮಾವನೊಳಗೆ ನಮ್ಮ ನಗೆಯಿಲ್ಲ ಬೌದ್ಧದೇವೀರ ಕೂಡ ಸರಸಿಲ್ಲ ಕೋಲೆದೇವೀರ ಕೂಡ ಸರಸಿಲ್ಲ ಹಿರಿಯರುತಾವವರ ಗೆದ್ದು ನಗುವರು ಕೋಲೆ 77ನಿಪುಣೆಂದೆನಿಸುವಿರಿ ಚಪಳೆರೆಂದೆನಿಸುವಿರಿಅಪರಾತ್ರೆ ಆಯಿತು ಬಂದೀಗ ಕೋಲೆಅಪರಾತ್ರೆ ಆಯಿತು ಬಂದೀಗ ನಮಗಿನ್ನುಉಪಚಾರವುಂಟೊ ಗತಿಯಿಲ್ಲೊ ಕೋಲೆ 78ಮೋರೆ ತೋರದಿದ್ದರೆ ಮನೆಯೊಳಗಿರಿ ನೀವುಜಾರುತೇವೆ ನಮ್ಮ ಮನೆಗೀಗೆ ಕೋಲೆಜಾರುತೇವೆ ನಮ್ಮ ಮನೆಗೀಗೆ ಬೀದಿಲಿತೂರುತೇವೆ ನಿಮ್ಮ ಕರುಳನು ಕೋಲೆ 79ಈಪರಿನಾರೇರ ಹಿತವಾದ ನಗೆಗಳಕೋಪವ ಬಿಟ್ಟು ಕೇಳುತ ಕೋಲೆಕೋಪವ ಬಿಟ್ಟು ಕೇಳುತ ಬಂದು ಸವಿi್ಞಪಕ ಕೈಯವಿಡಿದರು ಕೋಲೆ 80ರತ್ನಗಂಬಳಿ ಹಾಸಿ ಒಳ್ಳೇರ ಮಕ್ಕಳೆಂದುಉತ್ತಮಗುಣವ ಕೊಂಡಾಡಿ ಕೋಲೆಉತ್ತಮ ಗುಣವ ಕೊಂಡಾಡಿ ಕುಳ್ಳಿರಿಸಿಚಿತ್ತಕೆ ಸುಖವ ಕೊಟ್ಟರು ಕೋಲೆ 81ಶ್ರೀಕಾಂತನರಮನೆಯ ಹೊಂದಿದವರು ನೀವುಏಕಾಂತ ಭಕ್ತಿ ಬಲ್ಲವರು ಕೋಲೆಏಕಾಂತ ಭಕ್ತಿ ಬಲ್ಲವರು ನಮ್ಮ ನೀವೆ ಕೂಡಿಕೊಳ್ಳಿ ದೂರ್ಯಾಕೆ ಕೋಲೆ 82ಸುಖದೂಟಸವಿಯನು ಅರಿಯದೆ ಕೆಟ್ಟೆವುಸುಖತೀರ್ಥಗುರುವು ನಮಗಾಗಿ ಕೋಲೆಸುಖತೀರ್ಥಗುರುವು ನಮಗಾಗಿ ಪರಲೋಕಸುಖ ಸೂರೆಗೊಂಡು ಬದುಕೇವು ಕೋಲೆ 83ಐದು ಭೇದವನರಿತು ನಡೆದೇವು ನಾವಿಪ್ಪತ್ತೈದು ತತ್ವಗಳ ತಿಳಿದೇವು ಕೋಲೆ ಇಪ್ಪತ್ತೈದು ತತ್ವಗಳ ತಿಳಿದೇವು ಮೇಲೆ ಮತ್ತೈದು ಮುಕ್ತಿಯ ಪಡೆದೇವು ಕೋಲೆ 84ಮುದ್ರೆ ಇಲ್ಲದ ನಾಣ್ಯ ಶುದ್ಧಲ್ಲ ಜಗದೊಳುಮುದ್ರಾಂಕರಾಗಿ ಬದುಕೇವು ಕೋಲೆಮುದ್ರಾಂಕರಾಗಿ ಬದುಕೇವು ಮಲೆತವರಗೆದ್ದೇವು ವಾಕ್ಯ ಬಲದಲ್ಲಿ ಕೋಲೆ 85ಇಂತೆಂಬ ನುಡಿಗೇಳಿ ಅಪಾರಾನಂದದಲ್ಲಿಕಾಂತೆಯರೆಲ್ಲ ಒಂದಾಗಿ ಕೋಲೆಕಾಂತೆಯರೆಲ್ಲ ಒಂದಾಗಿ ಮನದಿ ವಿಶ್ರಾಂತರಾದರು ತಮತಮಗೆ ಕೋಲೆ 86ಗುರುಭಕ್ತಿ ಅರಿಷಿಣ ಹರಿಭಕ್ತಿ ಕುಂಕುಮಪರಮಾರ್ಥ ಜ್ಞಾನಾಂಜನವನು ಕೋಲೆಪರಮಾರ್ಥ ಜ್ಞಾನಾಂಜನವನು ಇಟ್ಟರುಹರಿನಿರ್ಮಾಲ್ಯದ ಪುಷ್ಪ ಮುಡಿದರು ಕೋಲೆ 87ಸಸ್ಯ ಸಾರಾವಳಿಯ ಸೀರೆಯ ತೆಗೆದರುಅತ್ತಿಗೆಯವರ ಮನಮೆಚ್ಚು ಕೋಲೆಅತ್ತಿಗೆಯವರ ಮನಮೆಚ್ಚಿನುಡುಗೊರೆಅರ್ಥಿಲಿ ಕೊಟ್ಟು ನಲಿದರು ಕೋಲೆ 88ಮಾಧವಪ್ರತಿಷ್ಠಾನ ಪೇಟೆಯೊಳುದಿಸಿದಮಾದಳದ ಹಣ್ಣು ಬಣ್ಣದ ಕೋಲೆಮಾದಳದ ಹಣ್ಣು ಬಣ್ಣದ ಸೀರೆಯನಾದಿನಿ ಜಾಣೆಗಿತ್ತರು ಕೋಲೆ 89ಅಚ್ಚ ಬಂಗಾರದ ಶಂಖಚಕ್ರಂಗಳಅಚ್ಚನೆತ್ತಿದ ನಯವಾದ ಕೋಲೆಅಚ್ಚನೆತ್ತಿದ ನಯವಾದ ಬೇರೆ ಬೇರೆಹಚ್ಚಡಗಳು ಬಾವರಿಗಿತ್ತು ಕೋಲೆ 90ಭೇದ ಭೇದದ ಬಣ್ಣ ಬಗೆ ಬಗೆ ಚಿತ್ರದನಾದ ಸಮುದ್ರದ ಪೇಟೆಯ ಕೋಲೆನಾದ ಸಮುದ್ರದ ಪೇಟೆಯ ವಲ್ಲಿಗಳುಮೈದುನ ಜಾಣರುಡುಗೊರೆ ಕೋಲೆ 91ಹಿರಿಯ ಕಿರಿಯರ ನೋಡಿ ಮಾನ್ಯಾಮಾನ್ಯನ ನೋಡಿತರತಮ ಭಾವದುಪಚಾರ ಕೋಲೆತರತಮ ಭಾವದುಪಚಾರ ಮಾಡಿದರುಹರಿಗುರು ಮೆಚ್ಚಿ ನಲಿವಂತೆ ಕೋಲೆ 92ಈ ಪರಿಯಲಿವರ ಮನಮುಟ್ಟಿ ಮನ್ನಿಸಿಸುಗಂಧ ಪರಿಮಳ ದ್ರವ್ಯವ ಕೋಲೆಸುಗಂಧ ಪರಿಮಳ ದ್ರವ್ಯವ ಚೆಲ್ಲಾಡಿಶ್ರೀಪತಿಗವರರ್ಪಿಸಿ ಮುದದಿಂದ ಕೋಲೆ 93ಪರಸ ಮುಟ್ಟಿದ ಮೇಲೆ ಲೋಹ ಚಿನ್ನಾಗದೆಸುರನದಿಮುಟ್ಟಿ ಸಗರರ ಕೋಲೆಸುರನದಿಮುಟ್ಟಿ ಸಗರರುದ್ಧಾರಾದಂತೆಕರಗಿತುಅವರಮನಮೈಲಿಗೆ94ಶುಭಭರಿತಾದ ತಾಂಬೂಲ ಕೈಕೊಂಡುಶುಭವಾಕ್ಯ ನುಡಿದು ನಡೆವಾಗ ಕೋಲೆಶುಭವಾಕ್ಯ ನುಡಿದು ನಡೆವಾಗ ಬೀಗರುಅಬಲೇರಿಗೆ ಕೈಯ ಮುಗಿದರು ಕೋಲೆ 95ನಾಳೆ ನಿಮ್ಮಾಜÕ ಬರೆ ಮುಯ್ಯ ತರುವೆಆಳವಾಡದಿರಮ್ಮ ನಮ್ಮನು ಕೋಲೆಆಳವಾಡದಿರಮ್ಮ ನಮ್ಮನು ನೀವೀಗಏಳಿಲ ಮಾಡದಿರಿ ಕಂಡ್ಯಾ ಕೋಲೆ &ಟಿ;, bsಠಿ; 96ಹೀಗೆಂದ ಮಾತಿಗೆ ನುಡಿದರು ಹರಿಹರಿಭಾಗವತರೆಲ್ಲ ಧರೆಯೊಳು ಕೋಲೆಭಾಗವತರೆಲ್ಲ ಧರೆಯೊಳು ನಮ್ಮವರುಶ್ರೀಗಂಧ ಕರ್ಪೂರಕೆ ಮೈತ್ರವು 97ಅಪ್ಪ ಜಯತೀರ್ಥಗೆ ಹೆತ್ತವ್ವ ಶುದ್ಧಮತಿಗೆಒಪ್ಪುವ ಬಂಧು ಬಳಗಕೆ ಕೋಲೆಒಪ್ಪುವ ಬಂಧು ಬಳಗಕೆ ನಿಮ್ಮಗುಣಒಪ್ಪಣೆ ಹೇಳೇವು ಕೋಲೆ ಗನೀವು ಬಂದಾಕ್ಷಣ ಶ್ರೀವ್ಯಾಸರಾಯರನೈವೇದ್ಯ ತೀರ್ಥವು ಲಭ್ಯವು ಕೋಲೆನೈವೇದ್ಯ ತೀರ್ಥವು ಲಭ್ಯವು ನಮ್ಮಪ್ಪನಾವ ಪರಿಯಲಿ ಒಲಿಸೇವು ಕೋಲೆ 9ಮೆಲ್ಲನೆ ಹೊರವಂಟು ಫುಲ್ಲಭವ ಕೀರ್ತಿಸೊಲ್ಲುಸೊಲ್ಲಿಗೆ ಉಗ್ಗಡಿಸುತ ಕೋಲೆಸೊಲ್ಲುಸೊಲ್ಲಿಗೆ ಉಗ್ಗಡಿಸುತ ಹಾರುವಾಗಕ್ಷುಲ್ಲರ ಮನಕೆ ದಣಿವಾಯ್ತು ಕೋಲೆ 100ಮನೆ ಮುಟ್ಟಿ ಬಂದರು ಗುರುಪಾದ ಕಂಡರುಜನನಿಗೆ ಕೈಯ ಮುಗಿದರು ಕೋಲೆಜನನಿಗೆ ಕೈಯ ಮುಗಿದರುಕೈವಲ್ಯಕ್ಕನುಮಾನವಿಲ್ಲದೆ ನಡೆವರು ಕೋಲೆ 101ಧರೆಯ ಸಜ್ಜನರಿಗೆ ಸಕ್ಕರೆ ಸವಿಗಿಂತಉರೆ ಕಾಯ್ದ ಹಾಲ ಕೆನೆಗಿಂತ ಕೋಲೆಉರೆ ಕಾಯ್ದ ಹಾಲ ಕೆನೆಗಿಂತ ಸವಿಯುಂಟುಗುರುಭಕ್ತಿ ಉಂಟು ಪರವುಂಟು ಕೋಲೆ 102ಅಲ್ಪ ಕನ್ನಡದ ನುಡಿಯೆನ್ನಲಾಗದುಫಣಿತಲ್ಪನ ಪ್ರಿಯಗುರುಮಹಿಮೆ ಕೋಲೆಫಣಿತಲ್ಪನ ಪ್ರಿಯಗುರುಮಹಿಮೆ ನೋಡುವುದುತಪ್ಪನಾರಿಸದೆ ಶಿಷ್ಟರು ಕೋಲೆ 103ಜನ್ಮ ಜನ್ಮ ಬ್ರಹ್ಮ ವಾಯೂರೆ ಗುರುಗಳುರಮ್ಮೆಯ ರಮಣ ಮನೆದೈವ ಕೋಲೆರಮ್ಮೆಯ ರಮಣ ಮನೆದೈವವಾಗಲಿಶ್ರೀಮಧ್ವಾಚಾರ್ಯರು ಕೋಲೆ 104ಪ್ರಸನ್ನವೆಂಕಟಪತಿ ನಾಮದುಚ್ಚಾರಣೇಲಿಅಶುಭಕೋಟಿಗಳು ಉಳುಹಿಲ್ಲ ಕೋಲೆಅಶುಭ ಕೋಟಿಗಳು ಉಳುಹಿಲ್ಲ ಶುಭಮಸ್ತುಕುಶಲಾಯುರಾರೋಗ್ಯವಾಹುದು ಕೋಲೆ 105
--------------
ಪ್ರಸನ್ನವೆಂಕಟದಾಸರು