ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಕರ್ಮೇಂದ್ರಿಯ ಸೇವಿತನಿಗೆಮಂಗಳಂ ಉಡುಪಿನ ಶ್ರೀಕೃಷ್ಣನಿಗೆಪ. ನಂದನ ಕಂದನಿಗೆ ವೃಂದಾರಕೇಂದ್ರನಿಗೆಮಂದರ ಗಿರಿಧರಗೆ ಇಂದಿರಾಕಾಂತನಿಗೆನಂದ ಸುರವ್ರಾತನಿಗೆ ನಂದ ತೀ-ರ್ಥೇಂದ್ರ ಗೋವಿಂದ ಹರಿಗೆ1 ಮಕರ ಕುಂಡಲಧರ ರುಕುಮಿಣಿ ರಮಣನಿಗೆಅಕಳಂಕ ಮಹಿಮಗೆ ಅಕುಟಿಲನಿಗೆಶುಕವಾಹನನ ಪಿತಗೆ ಭಕುತವತ್ಸಲಗೆ ಅ-ಧಿಕ ಕೋಟಿರವಿತೇಜ ಮಕುಟ ದಿಟ್ಟನಿಗೆ 2 ಸರಸ ಮಂದಹಾಸನಿಗೆ ನರಹರಿ ರೂಪನಿಗೆವರ ಕೌಸ್ತುಭಹಾರ ಧರಿಸಿದವಗೆಕರುಣದಿ ಗೋಪಿಯರ ಧುರದಿ ರಕ್ಷಿಪನಿಗೆಸಿರಿಮುದ್ದು ಹಯವದನ ಮುರಹರನಿಗೆ 3
--------------
ವಾದಿರಾಜ
ಪಾಲಿಸೊ | ಗುರುವರನೇ ಪಾಲಿಸೋ ಪ ಪಾಲಿಸೊ ಗುರುವರ ಎನ್ನ | ಬಲುಬಾಲ ಭಾಷೆಗೆ ಒಲಿದಿನ್ನ | ಆಹ |ಕಾಲ ಕಾಲಕೆ ಹೃದ | ಯಾಲಯದಲಿ ನಿಂತುಶೀಲ ಗೋಪಾಲನ | ಲೀಲ ಧ್ಯಾನವನಿತ್ತು ಅ.ಪ. ತಂದೆ ವೆಂಕ್ಟನಾ ಕೃಪಾ ಬಲದೀ | ಸಾರಿಬಂದೆನೋ ಪೊಗಳುತ್ತ ಮುದದೀ | ನಿನ್ನದ್ವಂದ್ವ ಪಾದವ ನೋಡೆ ಜವದೀ | ಭವಬಂಧವ ಕಳೆಯಲೋಸುಗದೀ | ಆಹ |ಮಂದಾನ ಕರೆ ತಂದು | ಸಂದೇಶ ಎನಗಿತ್ತುಛಂದಾದಿ ಸಲಹಿದ್ಯೋ | ಸಿಂಧೂರ ಗಿರಿವಾಸ 1 ಅಹಿನವಾಭಿಧ ಕಾಯೋಯನ್ನಾ | ಮನಮೋಹ ಜಾಲವ ನೀಗೋ ಘನ್ನಾ | ಬಲುಕುಹಕ ಬುದ್ಧಿಯ ಬಿಡಿಸೆನ್ನಾ | ನಿನ್ನನೇಹ ಕರುಣೀಸೆನಗೆ ಮುನ್ನ | ಆಹವಿಹಗವಾಹನ ದೂತ | ಮಹಭಯ ವಾರಣಸಹನಾದಿ ಗುಣವಂತ | ಪ್ರಹಿತಾದಿ ಸಲಹೆನ್ನ 2 ಮುದ್ದು ಮೋಹನ ಗುರು ಬಾಲಾ ತಂದೆಮುದ್ದು ಮೋಹನ್ನ ವಿಠ್ಠಲ್ಲಾ | ಸಿರಿಮುದ್ದು ನೃಸಿಂಹನ ಲೀಲಾ | ಬಲುಮುದ್ದಿಸಿ ಪಾಡುವೆ ಬಹಳಾ | ಆಹಮಧ್ವಾಂತರ್ಗತ ಗುರು | ಗೋವಿಂದ ವಿಠಲನೆಹೆದ್ದ್ಯವ ವೆಂತೆಂಬ | ಶುದ್ಧ ಮತಿಯನಿತ್ತು 3
--------------
ಗುರುಗೋವಿಂದವಿಠಲರು
ಇದು ಏನಂಗ ಮೋಹನಾಂಗ |ಮದನಜನಕ ತೊರವೆಯ ನರಸಿಂಗ ಪ.ಸುರರುತುತಿಸಿ ಕರೆಯೆ ತುಟಿಯ ಮಿಸುಕದವತೆರೆದೆ ಏತಕೆ ಬಾಯ ತೆರನ ಪೇಳೊಮ್ಮೆ 1ವರನೀಲರತುನ ಮಾಣಿಕದ ಹಾರಗಳಿರೆ |ಕೊರಳೊಳು ಕರುಳ ಮಾಲೆಯ ನಿಟ್ಟು ಮೆರೆವುದು 2ಸಿರಿಮುದ್ದು ನರಸಿಂಹ ಪುರಂದರವಿಠಲ |ಸಿರಿಯಿಪ್ಪ ತೊಡೆಯಲಿ ಅರಿಯ ತಂದಿಡುವುದು 3
--------------
ಪುರಂದರದಾಸರು
ದಾನವನ ಕೊಂದದ್ದಲ್ಲ ಕಾಣಿರೊ |ನಾನಾ ವಿನೋದಿ ನಮ್ಮ ತೊರವೆಯ ನರಸಿಂಹ ಪ.ಅಚ್ಚ ಪ್ರಹ್ಲಾದನೆಂಬ ರತ್ನವಿದ್ದ ಒಡಲೊಳು |ಬಿಚ್ಚಿ ಬಗಿದು ನೋಡಿದನಿನ್ನೆಷ್ಟು ಇದ್ದಾವೆಂದು 1ನಂಟುತನ ಬೆಳೆಯಬೇಕೆಂದು ಕರುಳ ಕೊರಳೊಳು |ಗಂಟುಹಾಕಿಕೊಂಡನೆಷ್ಟು ಸ್ನೇಹಸಂಬಂಧದಿಂದ 2ಸಿರಿಮುದ್ದು ನರಸಿಂಹ ಪ್ರಹ್ಲಾದಪಾಲಕ |ಉರಿಮೋರೆ ದೈವ ನಮ್ಮಪುರಂದರವಿಠಲ3
--------------
ಪುರಂದರದಾಸರು