ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥ ಆಟವಿದು ಕ್ಷಿತಿಜಪತಿದೆಂಥ ಆಟವಿದು ಪ ಎಂಥ ಆಟ ಶ್ರೀ ಕಂತುಜನಕ ಭ ಕ್ತಾಂತರಂಗ ಸುರಚಿಂತಾಮಣಿಯೇ ನಿನ್ನದೆಂಥ ಅ.ಪ ಮಡುವಿನೊಳಡಗಿರುವ ಉರಗನ ಹೆಡೆಮೆಟ್ಟಿ ನಾಟ್ಯಮಾಡುವ ಸಡಗರದಲಿ ಗೊಲ್ಲ ರ್ಹುಡುಗರ ಕೂಡಿಸಿ ಒಡನೆ ಬಿಲ್ಲಿನಾಟ ರಚಿಸಿ ಮಧುರಪುರ ಬಿಡದೆ ಸೇರಿ ಗಡಕಡಿದು ಮಾವನ ಶಿರ ತಡೆಯದೆಮನಪುರಪಥವ ಪಿಡಿಸಿದ್ದು 1 ಗೋವಳರೊಡಗೂಡಿ ಗೋವುಗಳ ಕಾಯಲ ಡವಿಸೇರಿ ಮಾಯವೃಷ್ಟಿ ಅತಿಭರದಿ ಗೈಯಲಾಗ ಗೋವರ್ಧನ ಗಿರಿಯೆತ್ತೆ ಏಳುದಿನ ಗೋವುಗಳನು ಮತ್ತು ಗೋವಳರೆಲ್ಲರ ಜೀವ ಸಮಾನಮಾಡಿ ಪ್ರೇಮದಿ ಸಲಹಿದ್ದು 2 ಎಷ್ಟು ಕ್ಷೀರ ನೀಡೆ ಜನನಿಗಿನ್ನಿಷ್ಟೆಂದ್ಹಟ ಮಾಡೆ ಸಿಟ್ಟಿನಿಂದ ತಾಯಿ ಕಟ್ಟಲು ಒರಳಿಗೆ ಅಟ್ಟಹಾಸದಿ ಡುರುಕಿಟ್ಟು ನಡೆದು ಶಾಪ ಪಟ್ಟು ಪಟ್ಟಣಮುಂದೆಷ್ಟೋಕಾಲದಿಂದ ಕಷ್ಟಪಡುವರ ದಯದೃಷ್ಟಿಯಿಂ ಸಲಹಿದ್ದು 3 ದುರುಳ ಭಸ್ಮನಂದು ಹರನಿಂ ಉರಿಹಸ್ತವನು ಪಡೆದು ಪರಮಪಾಪಿ ವರ ಕರುಣಿಸಿದವನಿಗೆ ಮರುಳಮಾಡವನ ಕರವೆ ಅವನ ಮೇ ಲ್ಹೊರೆಸಿ ಉರುವಿಸಿ ಹರನ ರಕ್ಷಿಸಿದ್ದು 4 ಬತ್ತಲೆ ಪುರಗಳನ್ನು ಪೊಕ್ಕು ನೀ ಸತಿಯರ ವ್ರತಗಳನು ಹತಗೈದು ತ್ರಿಪುರದ ಪಥಪಿಡಿಸೆಮಪುರ ಹಿತದಿಂ ಸುರಗಣಕತಿಸೌಖ್ಯವ ನಿತ್ತು ಜತನಗೈದಿ ಸಿರಿಪತಿಯ ಶ್ರೀರಾಮನೆ ಸತತದಿಂಥ ಮಹಪತಿತ ಮಹಿಮದಿಹ 5
--------------
ರಾಮದಾಸರು
ಕರುಣಿಸಲಾರೆಯಾ ಇನ್ನಷ್ಟು ನೀ ಸಿರಿಪತಿಯಾ ಪ ಕರುಣಿಸಲಾರೆಯಾ ಕರುಣಾಕರನೆಂಬೊಬಿರುದನುಳಿಸಿಕೊಳ್ಳಲಾರೆಯಾ ನೀನರಿಯಾ ಅ.ಪ. ಬುವಿಯೊಳು ನಿನ್ನ ದಯವಿರದಿರೆ ಕಣಲವಸಹ ಸರಿಯದಯ್ಯಾಭವದೊಳು ದೇವ ನಿನ್ನ ಕೃಪೆಯಾಗಲುಜವದೊಳೀಗಿನ ಸುಖ ಸ್ರವಿಸಿ ಪೋಗುವದಯ್ಯಾ 1 ಈಗೆಲ್ಲ ನಿನ್ನದಯೆದಿಂದೀ ಬಾಳ್ವೆಸಾಗಿದೆ ಬಲ್ಲೆನಯ್ಯಾಹೋಗಿಸಿ ಸಂಸಾರ ಬೇಗುದಿಯನು ನೀನುಬೇಗ ನಿನ್ನ ಧ್ಯಾನಭೋಗವ ನೀಡಯ್ಯಾ 2 ತುಷ್ಟಿಹೊಂದಲು ನೀ ಜೀಯಾ ಕಷ್ಟದ ಪರಿಯಾನಷ್ಟಮಾಡಲು ಅರಿಯಾಸೃಷ್ಟಿಯ ಜೀವಿಗದೃಷ್ಟ ಎಷ್ಟೆಷ್ಟೆಂಬಸ್ಪಷ್ಟ ಸಂಕಲ್ಪವ ಬದಲಿಸಲರಿಯಾ 3 ಎಲ್ಲವು ನಿನ್ನಧಿವಲ್ಲವೇ ಹರಿಯೇಸಲ್ಲದ ಅನುಮಾನಖುಲ್ಲ ದೈವವ ತಿರುವ ಬಲ್ಲೆಯಲ್ಲವೇ ನೀನುಬಲ್ಲೇಕೆ ಮನವನು ಕಲ್ಲು ಮಾಡಿದೆಯಾ 4 ಶರಣೆಂಬ ಜನ ಕೈಯ್ಯಾ ಎಂದೂ ಬಿಡದೆಪೊರೆಯುವೆ ಎಂಬರಯ್ಯಾಧರೆಯೊಳು ಗದುಗಿನ ವೀರನಾರಾಯಣಮರೆಯದೆ ಸಲಹಯ್ಯಾ ಕೇಳ್ವೆನ್ನ ಮೊರೆಯಾ 5
--------------
ವೀರನಾರಾಯಣ
ಗಣೇಶ ಹಿತಮತಿಯ ಪಾಲಿಸೊ ಪ ಗತಿಯ ಕಲ್ಪಿಸಿ ಸಿರಿಪತಿಯ ಪಾದದಿ ಅ.ಪ ಗಜವದನನೆ ಎನ್ನ ನಿಜಭಕುತಿಯೊಳ್ನಿನ್ನ ಭಜನೆ ಮಾಡುವಂಥ ನಿಜವ ಪಾಲಿಸಿ 1 ಹರಣ ಮಾಡಿ ನಿನ್ನ ಸ್ಮರಣೆಯ ಕೊಟ್ಟು 2 ದೀನನಾಗಿ ನಾ ನಿನ್ನ ಸನ್ನಿಧಾನಕೆ ಬಂದೆ ಜ್ಞಾನವಿತ್ತು ಕಾಯೋ ಈಗ ಪ್ರಾಣನಾಥ ವಿಠಲನಲ್ಲಿ 3
--------------
ಬಾಗೇಪಲ್ಲಿ ಶೇಷದಾಸರು
ತಪ್ಪು ಪೇಳ್ವೆ ನಿನ್ನೊಳೆನ್ನಪ್ಪಿ ಸಲಹಯ್ಯ ಅಪ್ಪ ಸಿರಿಪತಿಯೆನ್ನ ನೆಪ್ಪಿನೊಳಗಿರ್ದು ಪ ಅರಿವಿಟ್ಟು ತವಚರಣ ಸ್ಮರಿಸದಿರೆ ಎನ್ನ ತಪ್ಪು ಮರೆವೆಯನು ಪರಹರಿಸದಿರೆ ನಿನ್ನ ತಪ್ಪು ಧರೆಯ ಭೋಗವ ಮೀರಿ ನಡೆಯಿದಿರೆ ಎನ್ನ ತಪ್ಪು ಪರಮವೈರಾಗ್ಯ ಭಕ್ತಿ ಕೊಡದಿರೆ ನಿನ್ನ ತಪ್ಪು 1 ಅರ್ತಿಯಿಂ ತವಭಜನೆ ಮಾಡಿದಿರೆ ಎನ್ನ ತಪ್ಪು ಚಿತ್ತ ಚಂಚಲಗೊಳಿಸಿದರೆ ನಿನ್ನ ತಪ್ಪು ಸತ್ಯಭ್ರಷ್ಟನಾಗಾಚರಿಸಿದರೆ ಎನ್ನ ತಪ್ಪು ಸತ್ಯಜನಸಂಗ ಕೊಡದಿರೆ ನಿನ್ನ ತಪ್ಪು 2 ನಾಶವೊಂದೋ ಮಹಹೇಸಿಸಂಸಾರದ ವಾಸನೆಯ ಬಿಡದಿರೆ ಎನ್ನ ಘನತಪ್ಪು ಶ್ರೀಶ ಶ್ರೀರಾಮ ತವ ದಾಸತ್ವ ಕೊಡದಿರೆ ಸಾಸಿರಪಾಲಿಗೆ ನಿನ್ನ ಮಹತಪ್ಪು 3
--------------
ರಾಮದಾಸರು
ತೆರಳಿದರು ಶ್ರೀ ಜಗನ್ನಾಥದಾಸಾರ್ಯರು ಸಿರಿಪತಿಯ ಸ್ಮರಿಸಿ ಹರಿಪುರಕೆ ಹರುಷದಲಿ ಪ ವರಶುಕ್ಲವತ್ಸರದ ಭಾದ್ರಪದ ಶಿತಪಕ್ಷ ಹರಿವಾರ ನವಮಿಯಲ್ಲಿ ಸುರಸಿದ್ಧ ಸಾಧ್ಯ ಸನ್ಮುನಿಗಣಾರ್ಚಿತ ಪಾದ ಹರಿಯೆ ಪರನೆಂದೆನುತಲಿ ಧರಣಿಯನು ತ್ಯಜಿಸಿ ಬಹುಮಾನಪೂರ್ವಕವಾಗಿ ಬೆರೆದು ಸುರಸಂದಣಿಯಲಿ ಪರಮಾರ್ಥವೈದಿ ಮನ ಹರಿಯ ಪಾದದಲಿಟ್ಟು ವರವಿಷ್ಣುದೂತ ವೈಮಾನಿಕರ ಒಡಗೂಡಿ 1 ಅತಿಪ್ರೇಮಿಗಳು ಹಸನ್ಮುಖರು ದಯೆ ಬೀರುವರು ಖತಿದೂರರಿವರು ಜಗದೀ ಮಿತಿಮೀರಿ ಶ್ರೀಹರಿಯ ಕಥೆ ನಾನಾ ಪರಿಯಲ್ಲಿ ಅತಿಶಯದಿ ಪೇಳಿ ಇಹಕೆ ಸತತವು ಶರಣರ್ಗೆ ಗತಿಯಾಗುವಂತೆ ಸ ತ್ವಥವಿಡಿಸಿ ಕರುಣದಿಂದ ಹಿತವಂತರೆನಿಸಿ ಸಮ್ಮತವಾಗಿ ಸರ್ವರಿಗೆ ಮತಿದೋರಿ ಕೊಟ್ಟು ಸದ್ಗತಿಯಗೋಸುಗವಾಗಿ 2 ಆಚರಣೆಯಲಿ ಒಂದರಘಳಿಗೆ ಬಿಡದೆ ಬಲು ಖೇಚರಾರೂಢ ಹರಿಯಾ ಸೋಚಿತಾರಾಧನೆಯ ಮಾಡಿ ಮರೆಯದಲೆ ಮಹಾ ವೈಚಿತ್ರ್ಯವನು ತೋರಿ ಈ ಚರಾಚರದಿ ಸಂಗೀತ ಸಾಹಿತ್ಯದಲಿ ಪ್ರಾಚಾರ್ಯವಂತರೆನಿಸೀ ಆ ಚತುರ್ದಶಭುವನಪತಿ ಶ್ರೀದವಿಠಲನ ಯೋಚನೆಯ ಬಿಡದೆ ಮಂಗಳ ಶಬ್ದವಾದ್ಯದಿಂ 3
--------------
ಶ್ರೀದವಿಠಲರು
ಮಾನವಿ ದಾಸರ | ನಿ ಸೇರೋಹೀನ ಮನುಜ ನಿನ್ನಘವನೆ ನೀಗುವ ಪ ಕೃತ ಯುಗದಲಿ ಹಿರಣ್ಯಜನೆನಿಸೀವಿತತ ಮಹಿಮ ಹರಿಯನೆ ಭಜಿಸೀ ||ಸತತದಿ ಸುಜನರ ಸಂತವಿಸಿ ಸಿರಿಪತಿಯ ಸೇವಿಸೆ ಸಹ್ಲಾದ ನೆನಿಸಿದಾ 1 ಎರಡೊಂದ್ಯು ಯುಗದಲಿ ಶಲ್ಯನಾಗಿ ಜನಿಸೀಕುರುಪಗೆ ಋಣರೂಪ ಸೇವೆ ಸಲಿಸಿ ||ಉರುತರ ಭಕುತಿಲಿ ಶೌರಿಯ ನೆನೆಯುತಹರಿಪದ ಸೇರಿದ ನೃಪಕುಲ ಮೌಳೀ 2 ವರಕಲಿಯಲಿ ದ್ವಿಜನಾಗವತರಿಸೀನರಮೃಗಾಖ್ಯಸುತ ಶ್ರೀನಿವಾಸನೆನಿಸೀ ||ವರದೇಂದ್ರ ಯತಿಯಲಿ ತರ್ಕವ ಕಲಿತುದುರುಳರ ಮುರಿದತಿ ಗರ್ವದಿ ಮೆರೆದಾ 3 ಭೃಗ್ವಂಶಜ ವಿಜಯಾಖ್ಯ ದಾಸ ಬಂಧೂಋಗ್ವಿನುತನ ಪ್ರಾಕೃತದೊಳು ಪಾಡೆ ||ದಿಗ್ಗಜ ಗರ್ವದಿ ಗೆಜ್ಜೆಯ ಕಟ್ಟಿದಅಗ್ಗದ ನಟನಿವನೆನುತಲಿ ಜರೆದಾ 4 ದಾಸರ ನಿಂದ್ಯದಿ ಬಂದುದು ಅಪಮೃತ್ಯುದೋಷನೀಗೆ ಗೋಪಾಲರ ಭಜಿಸೆನ್ನ ||ಔಷಧ ಪೇಳಲು ದಾಸರ ನಾಲ್ದಶವರ್ಷಾಯುಷ್ಯವ ಪೊಂದಿದವರನಾ5 ಇಂದು ಭಾಗದಲಾನಂದದಿ ಮೀಯೇಬಂದೊದಗಿತು ಜಗನ್ನಾಥ ನಾಮಾ ||ಪೊಂದುತ ಅಂಕಿತ ಕುಣಿಯುತ ಪಾಡುತಇಂದಿರೆಯರಸನ ಛಂದದಿ ತುತಿಸಿದ 6 ಪಾವನತರ ಹರಿಕಥೆ ಸುಧೆ ರಚಿಸೀಪವನ ಮತದವರನ್ನುತ್ತರಿಸೀ ||ಪವನನ ಹೃತ್ಕಂಜದಿ ನೆಲೆಸಿಹ ಗುರುಗೋವಿಂದ ವಿಠಲ ಪದಾಬ್ಜವ ಸೇರಿದ 7
--------------
ಗುರುಗೋವಿಂದವಿಠಲರು
ದಡ ಸೇರಿಸು ಭವದ ಕಡಲಿನದಡ ಸೇರಿಸು ಹರಿಯೆಕಡೆ ಮೊದಲಿಲ್ಲದ ಕ್ಲೇಶದ ವಾರಿಯಕಡು ಕಾಂಕ್ಷದ ಬಲುತೆರೆಯ ಪ.ಸಾಧು ಸಮಾಗಮ ಸಚ್ಛಾಸ್ತ್ರ ಶ್ರವಣಾದಿಗಳಿಲ್ಲದೆ ಕೆಡುವೆಮೇದಿನಿಯೊಳು ಮೂಢಾತ್ಮನು ನಾ ಶ್ರೀಪಾದವ ಹೊಂದಿಸು ಹರಿಯೆ 1ಸಾಸಿರ ನಾಮದಿ ತುಲಸೀ ಕುಸುಮವಶ್ರೀಶನಿಗರ್ಪಿಸಲಿಲ್ಲಹೇಸದೆ ಬಾರದುದನ್ನೆ ಬಯಸುತವಾಸುದೇವಕೆಟ್ಟೆನಲ್ಲ2ಮನ ವಶವಾಗದು ತನು ಮಡಿಯಾಗದುಕನಸಲಿ ಧರ್ಮವನರಿಯೆಒಣಮಾತಲಿ ದಿನ ಹೋದವು ಪರಗತಿಗನುಕೂಲಲ್ಲದು ದೊರೆಯೆ 3ದುವ್ರ್ಯಸನಕೆ ಬೇಸರೆನೆಂದಿಗೆಘನಗರ್ವಿಲಿ ವರ್ತಿಪೆನಲ್ಲಪರ್ವತ ನೆಗಹುವ ನುಡಿಯನ್ನಾಡುವೆನಿರ್ವಾಹಕಡ್ಡಿಯೊಳಿಲ್ಲ4ನನ್ನ ಗುಣದ ನಂಬಿಕೆ ನನಗಿಲ್ಲನಿನ್ನಯ ನಾಮವೆ ಗತಿಯುಇನ್ನಾದರು ಕಡೆಗಣ್ಣಲೆನೋಡುಪ್ರಸನ್ವೆಂಕಟ ಸಿರಿಪತಿಯೆ 5
--------------
ಪ್ರಸನ್ನವೆಂಕಟದಾಸರು