ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಕೋಲ ಹಾಡು) ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ ಕೋಲು ಶ್ರೀ ರಾಮನ ಬಲಗೊಂಬೆ ರನ್ನದ ಪ. ಭೂಮಿಯೊಳಗೆ ಸೀತಾರಾಮನು ಜನಿಸಲು ಸೀಮೆಯ ನಾರಿ ಜನರೆಲ್ಲ ರನ್ನದಾ ಸೀಮೆಯ ನಾರಿ ಜನರೆಲ್ಲ ನೆರೆದು ಸು ಪ್ರೇಮದಿ ಪಾಡಿ ನಲಿದರು ರನ್ನದಾ 1 ಕುಂಡಲ ಕಂಠ ಮಾಲೆಯ ನೊಸಲಾ ತಿಲಕವು ರನ್ನದ ಮಾಲೆಯ ತಿಲಕನೊಸಲೊಳಗಿರಿಸಿದ ಬಾಲೇರು ಕೂಡಿ ನಲಿವುದ ರನ್ನದ 2 ಸಾರಸಂಭವ ಕ್ಷೀರ ವಾರುಧಿ ತಡಿಯಲ್ಲಿ ಭೋರನೆ ಬಂದು ಸ್ತುತಿಸಲು ರನ್ನದ ಭೋರನೆ ಬಂದು ಸ್ತುತಿಸಲು ರಾಮವ ತಾರನಾಗುವೆನೆಂದು ನುಡಿದನು ರನ್ನದ 3 ಪೃಥಿವಿ ನಾಯಕ ದಶರಥನಲ್ಲಿ ಜನಿಸಿದ ಕಥನೀಯ ಸುಗುಣ ಸಂಭೃತ ರಾಮರನ್ನದ ಕಥನೀಯ ಸುಗುಣ ಸಂಭೃತ ರಾಮ ಕೌಸಲ್ಯ ಸುತನೆಂದು ನಗುತ ಮನ್ಮಥನ ಜನಕನಿಗೆ 4 ಕೌಶಿಕ ಮುನಿಯ ಮಹಾಶೆ ಪೂರಿಸಿ ಯಜ್ಞ ಘಾಸಿ ಮಾಡಿದ ರಾಮ ಘಾಸಿ ಮಾಡಿದ ಜಗ ದೀಶನು ಸಕಲಾಭಿಲಾಷಾ ಪೂರಿಪೆನೆಂದು 5 ಪಾದ ಪಲ್ಲವವಿರಿಸುತ ಕಲ್ಲಾದ ಶಿಲೆಯನ್ನಹಲ್ಯೆ ಮಾಡಿದ ರಾಮ ಕಲ್ಲಾದ ಶಿಲೆಯನ್ನಹಲ್ಯೆ ಮಾಡಿದ ಸಿರಿ ನಲ್ಲ ಶಿವನ ಮಹ ಬಿಲ್ಲ ಮುರಿದನು 6 ಭೂತಳಾಧಿಪಜನವ್ರಾತಮಂಡಲದೊಳು ಸೀತೆಯನೊಲಿಸಿ ಶುಭದಿಂದ ರನ್ನದಾ ಸೀತೆಯನೊಲಿಸಿ ಶುಭದಿಂದ ಸ್ವಜನ ಸ- ಮೇತಾಯೋಧ್ಯಗೆ ಬಂದ ಖ್ಯಾತ ರಾಘವನಿಗೆ 7 ಜನಕನ ವಾಕ್ಯದಿಂದ ಜನಕಾತ್ಮಜೆಯ ಕೂಡಿ ವನಕಾಗಿ ನಡೆತಂದ ವನಜಾಕ್ಷ ರನ್ನದಾ ವನಕಾಗಿ ನಡೆ ತಂದ ವನಜಾಕ್ಷನಲ್ಲಿ ಶೂ- ರ್ಪನಖಿಯ ಮಾನಭಂಗವನು ಗೈದ ರನ್ನದಾ 8 ಖರದೂಷಣಾದಿ ದೈತ್ಯರ ಕೊಂದು ಮಾರೀಚ ದುರುಳನ ಸದೆದಾ ಧುರಧೀರ ರನ್ನದ ದುರುಳನ ಸದೆದಾ ಧುರಧೀರ ಶ್ರೀ ರಾಮ ಪರಿಪಾಲಿಸೆಮ್ಮನು ಕರುಣಾಳು ರನ್ನದ 9 ಪಾತಕಿ ದಶಕಂಠ ಸೀತೆಯನೊಯ್ದನೆಂದು ಕಾತರಗೊಂಡಂತೆ ಜನಕೆಲ್ಲ ರನ್ನದಾ ಕಾತರಗೊಂಡಂತೆ ಜನಕೆಲ್ಲ ತೋರ್ದ ರಘು ನಾಥನ ಮೊಖಲೀಲೆ ಖ್ಯಾತಿಯ ಪೊಗಳುತ10 ಮಂದರಾವಣ ಮೋಸದಿಂದ ಕೆಡಹಿದಂಥ ತಂದೆಯ ಸಖನಿಗಾನಂದ ಪದವನಿತ್ತ ತಂದೆಯ ಸಖನಿಗಾನಂದವ ಸಲಿಸಿ ಕ- ಬಂಧನ ದೈತ್ಯಯೋನಿ ಇಂದ ಬಿಡಿಸಿದಗೆ 11 ಬೇಡತಿ ಶಬರಿಯನ್ನು ನೋಡಿ ರಕ್ಷಣೆ ಮಾಡಿ ಪ್ರೌಢ ಮಾರುತಿಯಿಂದ ಕೂಡಿದ ರನ್ನದಾ ಪ್ರೌಢ ಮಾರುತಿಯನ್ನು ಕೂಡಿ ರವಿಜನ ಕಾ ಪಾಡಿ ವಾಲಿಯ ವಧೆ ಮಾಡಿದ ರನ್ನದಾ 12 ಪ್ರಾಣಾತ್ಮಜನು ನಾಗವೇಣಿಯ ವಾರ್ತೆಯ ತಾರೆ ಜಾಣತನದಲಿದ ಕ್ಷೀಣಾಂಬುಧಿಯೊಳಂದು ಜಾಣತನದಲಿದ ಕ್ಷೀಣಾಂಬುಧಿಯೊಳು- ಪ್ರ ವೀಣತನದಿ ಸೇತು ಕಾಣಿಸಿದವನಿಗೆ 13 ದೋಷಿ ರಾವಣನನು ನಾಶಗೈದಸುರಾರಿ ನೀಶ ನೀನೆನುತ ವಿಭೀಷಣಗೊರವಿತ್ತಾ ಈಶ ನೀನೆನುತಲಿವಿಭೀಷಣಗೊರವಿತ್ತ ವೈರಿ ಜಗದೀಶ ರಾಮನಿಗೆ 14 ಸೃಷ್ಟಿಜಾತೆಯ ಕೂಡಿ ಪಟ್ಟಾಭಿಷೇಕಗೊಂಡು ಶಿಷ್ಟ ರಕ್ಷಕನಾದ ಸಿರಿನಾಥ ರನ್ನದಾ ಶಿಷ್ಟ ರಕ್ಷಕನಾದ ಸಿರಿನಾಥ ವೆಂಕಟ ಬೆಟ್ಟದೊಡೆಯ ನಮ್ಮಭೀಷ್ಟವ ಕೊಡುವನ 15
--------------
ತುಪಾಕಿ ವೆಂಕಟರಮಣಾಚಾರ್ಯ
ಡಂಭಕ ಹರಿದೂರ ಪ್ರಾಣೀ ಪ ಅಂಬುಜನಾಭನ ಇಂಬನ ಪಡಿಯದೇ| ಡೊಂಬನ ಪರಿಯಾಚಾರ ಪ್ರಾಣೀ ಅ.ಪ ಅಬ್ಧಿಶಯನ ಸಿರಿನಾಥನ ಒಲುಮೆಯ| ಲಬ್ಧ ದೊರೆಯದೆ ವಿಚಾರಾ|| ಲಬ್ಧನಾಗಿ ಧನ ಮಾನಕಬಿಟ್ಟಿನೀ| ಶಬ್ದದಂಗಡಿ ಪ್ರಸರಾ|ಪ್ರಾಣೀ 1 ಪೊಡವಿಯೊಳಗ ಉಗ್ರಸಾಧನದಿಂದಲಿ| ಬಿಡದೆವೆ ತವಶರೀರಾ||ಒಡನೆ ಮರೆದು ರಿಧ್ಧಿಸಿಧ್ಧಿಯ ಬಲದಲಿ| ಹಿಡದಿ ಮನದಿ ಅಹಂಕಾರ|ಪ್ರಾಣೀ 2 ಅದಿತತ್ವದಾಗಲೆ ಸಾಧಿಸೇನೆಂದರೆ| ಸಾಧನ ಕೇಳು ಸುಸಾರಾ|| ಭೇದಿಸು ಮಹಿಪತಿ ನಂದನ ಸಾರಿದ| ಸಾಧು ರಾಶ್ರಯ ಮನೋಹರ|ಪ್ರಾಣೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಕ್ಷಿಸು ಗುರುನಾಥಾ ಕೇಶವ ನೀನೇ ರಕ್ಷಿಸು ಸಿರಿನಾಥಾ ಪ ಅಕ್ಷಯ ದ್ರೌಪದಿಗಿತ್ತ ಶ್ರೀಕಾಂತನೇ ಶಿಕ್ಷಕ ನೀನೇ ಕನಕ ವಂದಿತನೇ ಅ.ಪ. ತರಳ ಪ್ರಲ್ಹಾದನಿಗೊಲಿದು ಧಾರುಣಿಯಲ್ಲಿ ಮೆರೆದ ಕಶ್ಯಪುವನ್ನು ಕೆಡಹಿದ ಹರಿಯೇ ದುರುಳ ಕಂಸನು ತನ್ನ ಪ್ರಜೆಗಳ ಹಿಂಸಿಸೆ ತರಿದು ಸಜ್ಜನರನ್ನು ಪೊರೆದ ಶ್ರೀಧರನೇ 1 ಭಜಿಸಲು ಕನಕನು ಉಡುಪಿ ಗ್ರಾಮದಲಾಗ ರಜನಿ ಮಧ್ಯದಿ ದಾಸಗೊಲಿದ ಶ್ರೀ ಹರಿಯೇ ಗಜವನ್ನು ರಕ್ಷಿಸಿ ಬಿರುದನು ತೋರಿದ ಭಜಕರ ಲೋಲನೆ ನೆರೆ ನಾರಾಯಣನೇ2 ಕಷ್ಟವ ನೀಗಿ ತಾ ಶಿಷ್ಟರ ಸಲಹಲು ಶ್ರೇಷ್ಠ ಮೂರುತಿ ರಂಗ ಬಹರೂಪವೆತ್ತೀ ಶಿಷ್ಟರ ರಕ್ಷಿಸಿ ಭ್ರಷ್ಟರ ಕೆಡಹಿದ ಸೃಷ್ಟಿಗೀಶನೆ ರಂಗ ಚನ್ನಕೇಶವನೇ 3
--------------
ಕರ್ಕಿ ಕೇಶವದಾಸ
ಎಚ್ಚರ ಮನವೇ ಯದುಪತಿಯನೆಚ್ಚದಿರು ಚೋಹದನಿಕೆ ತನುವ ಪ.ವೇಳ ವೇಳಾಯು ವೃಥಾ ಹೋಯಿತೆಚ್ಚರಕಾಲಪಮೃತಿ ವೃಕ ಕೊಲುವೆಚ್ಚರಕೋಳು ಹೋಗುತದಲ್ಪ ಕೃತ ಪುಣ್ಯವೆಚ್ಚರನಾಲಿಗೆಯಲಿ ಸಿರಿನಾಥನೆಚ್ಚರ 1ಸತಿಸದನಾತ್ಮಜಸ್ಥಿರವ್ಯರ ವೆಚ್ಚರತಿಥಿ ಪೂಜೆಗಳಲಿ ಸತ್ವರ ಎಚ್ಚರಪ್ರತಿದಿನ ತತ್ವದಿ ಪ್ರವೀಣನಾಗೆಚ್ಚರಾಹಿತಲ್ಪನ ಕೀರುತಿ ಹೊಗಳೆಚ್ಚರ 2ಹರಿಭಟರೌಘದಿ ಹಿಂಗದಿರೆಚ್ಚರದುರಿತಭಯ ದಂದುಗದೆಚ್ಚರಪರಾಪರದ ವಚನವಟ್ಟಿಸದಿರೆಚ್ಚರಪರಿಪರಿ ಸದ್ವ್ವ್ರತ ಪಿಡಿದೆಚ್ಚರ 3ಸಂತವರಿಯರನುಸರಣಿಗಳೆಚ್ಚರೇಕಾಂತ ಬೀರುವ ಗುರುಕೃಪೆಯೆಚ್ಚರಸಂತ್ಯಿರಲಾಗಿ ಶಾಂತಸರಕುಕೊಳ್ಳೆಚ್ಚರಕಂತುಪಿತನ ನಾಮ ಕಡೆಗೆಚ್ಚರ 4ವಿಷಯಗತೇಂದ್ರಿಯವಿಡಿದಾಳುವೆಚ್ಚರಮೀಸಲು ವೈರಾಗ್ಯ ಮುರಿಯದೆಚ್ಚರಬಿಸಜನಾಭನ ಭಕ್ತಿ ಬಲಿದಿರುವೆಚ್ಚರಪ್ರಸನ್ನವೆಂಕಟಪತಿ ಪದದೆಚ್ಚರ 5
--------------
ಪ್ರಸನ್ನವೆಂಕಟದಾಸರು