ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವಪರಿಯಲಿ ನಿನ್ನನು ವೊಲಿಸುವೆ ದೇವ ಎನ್ನೊಳಗೆ ಒಂದಾದರೂ ಗುಣವಿಲ್ಲಾ ಪ ಅರಿಯೆ ಧರ್ಮವ ಪಾಪ | ಮರಿಯೆ ಉತ್ತಮರನ್ನ ಕರಿಯೆ ನಾಮಕೆ ಬಾಯಿ | ತೆರಿಯೆ ಸುರಿಯೆ ಜರಿಯೆ ಮೋºಕೆ ಮನ | ಮುರಿಯೆ ವ್ಯಾಕುಲ ಜ್ಞಾನಾಂ | ಕುರಿಯ ನಿನ್ನವರೊಳು | ಬೆರಿಯೆನರಿಯೆ ಸರಿಯೆ ದುಸ್ಸಂಗ ಕಥಾ | ಬರಿಯೆ ಕರದಿ ಯಾತ್ರಿಗೆ ಹರಿಯೆ ಪುಣ್ಯ ತೀರ್ಥ | ವರಿಯೆ ಮೊರಿಯೆ ಹರಿಯೆ ಜಗದೊರೆಯೆ | ಸಿರಿದೊರೆಯೆ ಅಘ ಕರಿಗೆ ಕೇಸರಿಯೆ ಮತ್ತಾ | ರರಿಯೆ ನಿನ್ನವರ ಮರಿಯೆ1 ನಡಿಯೆ ಸುಮಾರ್ಗ ವ್ರತವಿಡಿಯೆ ಮುಡಿದ ಪೂವು ಮುಡಿಯೆ ಕಾಮದ ಮರ್ಮ | ತಡಿಯೆ ಕಡಿಯೇ ಕುಡಿಯೆ ಪಾಪೋದಕವ ನುಡಿಯೆ ಮಂಗಳ ವಾರ್ತಿ ಪಿಡಿಯೆ ಭಕುತಿ ನೀತಿ ಪಿಡಿಯೆ ಗುಡಿಯೇ ಸುಕೃತಿ ಕಾಳ | ಗೆಡಿಯೆ ಪರರೊಸ್ತಕ್ಕೆ ತೊಡಿಯೆ ಚಿಂತಾತುರವ | ವುಧಿಯೆ ಹೊಡಿಯೆ ಕೊಡಿಯೆ ಎನ್ನಗೊಡಿಯೆ ನೆಂ | ದೆಡೆಯಲ್ಲಿ ಸೂಸಿದಾ ಪುಡಿಯಲ್ಲಿ ವೊಡಬೆರಸೆ | ಅಡಿಗಡಿಗೆ ಎನ್ನ ಕಡಿಗೆ 2 ಸುಳಿಯೆ ಕೀರ್ತನಿಗೆ ಮದ | ವಳಿಯೆ ಗುರುನಿಂದಕರ ಹಳಿಯೆ ಕಾಮದ ಕುಪ್ಪೆ | ಕಳಿಯೆ ಬಳಿಯೆ ತೊಳಿಯೆ ಮನನ ನರಕಕ್ಕೆ | ಮುಳಿಯೆ ಸುಮತಿಮಾರ್ಗ ತಿಳಿಯೆ ಪದವಿಗೆ ಪೋಗಿ | ಇಳಿಯೆ ಬೆಳಿಯೆ ಛಳಿಯೆ ಮುಂದಿನ ಜನನ | ಹೊಳೆಯೆಂಬೋದು ಅರಿದು ಸಂಚಿತ ಕರ್ಮ | ವಳಿಯೆ ತುಳಿಯೆ ವುಳಿಯೆ ಬೊಬ್ಬುಳಿಯೆ ಈ | ಕಳೆಯೇನುವಲ್ಲನಭ ಸುಳಿ ಹೃದಯಾವಳಿಯಲ್ಲಿ | ವಿಜಯವಿಠ್ಠಲವೊಳಿಯೆ3
--------------
ವಿಜಯದಾಸ
ಜೋಜೋ ಶ್ರೀ ಗೋಪಾಲಕೃಷ್ಣ ಮೂರುತಿಯೆ ಪತಿ ಲೋಕ ದೊರೆಯೆ ಜೋಜೋ ಈ ಲೋಕದೊಳು ನಿನಗಿನ್ನು ಸರಿಯೆ ಜೋಜೋ ಶ್ರೀ ಗುರುಕರಾರ್ಚಿತದಿ ಬಂದ್ಹರಿಯೆ ಪ. ತಂದೆ ಮುದ್ದುಮೋಹನರು ಕೊಟ್ಟ ಅಂಕಿತದಿ ಪೊಂದಿದ್ದ ರೂಪ ಗ್ರಹದಲ್ಲಿ ಹೊಂದಿ ಮುಂದೆಂಟು ವತ್ಸರಕೆ ಎನ್ನೊಡನೆ ಬಂದಿ ತಂದೆ ಮುದ್ದುಮೋಹನರ ಕರಸ್ಪರ್ಶ ಪೊಂದಿ 1 ನಮ್ಮ ಹಿರಿಯರ ಪೂಜೆ ಒಮ್ಮೊಮ್ಮೆ ಎಂದು ಒಮ್ಮೆ ದುರುಳನು ಮುಟ್ಟೆ ಮಲಿನಾದೆನೆಂದು ನಮ್ಮ ಗುರು ಕರಸ್ಪರ್ಶದಿಂ ಪುನಃ ಬಂದು ಪತಿ ಎನ್ನ ಕರಪೂಜೆ ಬೇಕೆಂದು 2 ಘನ್ನ ಗುಣರು ನಿನ್ನ ಪೂಜಿಸಿ ಪೋಗಲಂದು ಮನೆ ಪೆಟ್ಟಿಗೆಯೊಳ್ ಸುಮ್ಮನಿರಲಾರೆನೆಂದು ಮನಕೆ ಪ್ರೇರಿಸೆ ದುರುಳರಿಗೆ ಕದ್ದು ಒಯ್ದು ಘನ ಮೂರ್ತಿಗಳು ಪೋಗೆ ನೀನೊಬ್ಬ ಬಂದು 3 ಬಹುದಿವಸ ಮಲಿನವಾಗಿರುತಿರಲು ನೀನು ಮಹಮಹಿಮೆ ಅರಿಯಲಿಲ್ಲಾಗ ನಾನಿನ್ನು ಅಹಹ ನಮ್ಮ ಗುರುಗಳೆರೆಯಲು ಜ್ಞಾನವನ್ನು ಮಹಿಯೊಳೆನ್ನ ಪೂಜೆಯನು ಬಯಸಿದೆಯೊ ನೀನು 4 ಮನದಲ್ಲಿ ಪ್ರೇರಿಸಲು ಘನವಲ್ಲವೆಂದು ಕನಸಿನಲಿ ಎನ್ನ ಹಸ್ತದೊಳ್ ಬಂದು ನಿಂದು ಸನುಮತದಿ ಹರುಷದಲಿ ನಿನ್ನ ನಾ ತಂದು ಘನ ಮಹಿಮ ಗುರುಗಳಿಗೆ ಒಪ್ಪಿಸಲು ಅಂದು 5 ಅಂತರಾತ್ಮನ ಗುರುವು ವಿಗ್ರಹದೊಳಿಟ್ಟು ಸಂತೋಷದಿಂದ ಮನಮುಟ್ಟಿ ಕೊಡಲಷ್ಟು ಅಂತಾಯ್ತು ಮಲಿನ ಕುಂದಿತು ತೇಜವೆಷ್ಟು ನಿಂತೆನ್ನ ಕೈಲಿ ಪೂಜೆಯಗೊಂಬ ಗುಟ್ಟು 6 ದಿನದಿನಕೆ ಭಜನೆ ಪೂಜೆಯನೆಗೊಂಬ ಚಂದ ಘನಭಕ್ತರನು ಪೊರೆವ ಬಿರುದು ಆನಂದ ಮುನಿಜನರ ಮೋಹಕನೆ ಸಚ್ಚಿದಾನಂದ ಎನಗೊಲಿದೆ ಗೋಪಾಲಕೃಷ್ಣ ಗೋವಿಂದ 7 ರಮೆ ಬ್ರಹ್ಮ ಸುರರಿಗೆ ಸರಿ ಪೂಜಿಸುವೆನೆ ಕಮಲಾಕ್ಷ ಅಣು ನಾನು ನಿನ್ನ ಒಲಿಸುವೆನೆ ರಮಣೀಯವಾದ ವಸ್ತುಗಳ ನಾ ತಹೆನೆ ಕ್ಷಮಿಸು ನಿನ್ನ ದಾಸಿ ನನ್ನಪರಾಧಗಳನೆ 8 ಅಂತರಂಗದಲಿಪ್ಪ ಬಿಂಬ ಮೂರುತಿಯೆ ನಿಂತು ಈ ವಿಗ್ರಹದಿ ಈ ರೀತಿ ಮೆರೆಯೆ ಸಂತೋಷ ನೋಳ್ಪರಿಗೆ ಕೊಡು ಭಕ್ತಿ ಹರಿಯೆ ಕಂತುಪಿತ ಕಮಲಾಕ್ಷ ಕಾಯೊ ಸಿರಿದೊರೆಯೆ 9 ಪೂಜ್ಯಪೂಜಕನೆಂದು ಪೂಜೆ ಮಾಡುವೆನೊ ಮೂರ್ಜಗತ್ಪತಿ ನಿನ್ನ ಲಾಲಿ ಪಾಡುವೆನೊ ಪೂಜ್ಯ ಶ್ರೀ ಗೋಪಾಲಕೃಷ್ಣವಿಠ್ಠಲ ನೀನು ಗೋಜು ಬೇಡನ್ಯರದು ಪೊರೆಯೊ ದಾಸರನು 10
--------------
ಅಂಬಾಬಾಯಿ
ಭಿಡೆ ಇನ್ನ್ಯಾತಕೆ ಹೊಡಿ ಹೊಡಿ ಡಂಗುರ ಪೊಡವಿ ತ್ರಯದಿ ಹರಿ ಅಧಿಕೆಂದು ಪ ಅಡಿಯ ದಾಸರ ಕರದ್ಹಿಡಿದು ಬಿಡದೆ ಬಲು ಸಡಗರದಾಳುವ ನಿಜಧಣಿಯೆಂದು ಅ.ಪ ನಂದಕಂದ ಗೋವಿಂದ ಮುಕ್ಕುಂದ ಭಕ್ತ ಬಂಧು ಎಂದು ಕೈತಾಳವಿಕ್ಕುತ ತಂದೆ ತನ್ನ ಪಾದನ್ಹೊಂದಿ ಭಜಿಪರ ಬಂಧ ಛಿಂದಿಪ ಪರದೈವವೆಂದು ನಲಿಯುತ 1 ಸ್ಮರಿಪ ಜನರ ಮಹದುರಿತಪರ್ವತವ ತರಿದು ಪೊರೆವ ಸಿರಿದೊರೆಯೆಂದೊದರುತ ನೆರಳುಯೆಂದು ಮೈಮರೆದು ಕೂಗುತ 2 ಶರಣಾಗತರ ತನ್ನ ಹರಣದಂತೆ ಕಾಯ್ವ ಕರ ಮೇಲಕೆತ್ತಿ ಮರೆಯ ಬಿದ್ದವರ ಪರಮ ಬಡತನವ ಭರದಿ ಕಳೆದನೆಂದು ಒರೆದು ಸಾರುತ 3 ಸಾಗರಶಾಯಿ ತನ್ನ ಬಾಗಿ ಬೇಡುವರ ಬೇಗ ಕ್ಷೇಮನೀಯ್ವ ಭಾಗ್ಯದರಸನೆಂದು ನೀಗದ ಕಷ್ಟದಿ ಕೂಗಲು ತಡೆಯದೆ ಸಾಗಿ ಬರುವ ಭವರೋಗವೈದ್ಯನೆಂದು 4 ಅಚ್ಯುತಗಿಂ ಭಕ್ತರಿಚ್ಛೆ ಪೂರೈಸಲು ಹೆಚ್ಚಿನವಿರಲ್ಲೆಂದು ಬಿಚ್ಚಿ ಹೇಳುತ ಇಚ್ಛಜಪಿತ ಮಹಸಚ್ಚಿದಾನಂದ ಸರ್ವಕ್ಹೆಚ್ಚು ಹೆಚ್ಚು ಶ್ರೀರಾಮನೆ ಎನ್ನುತ 5
--------------
ರಾಮದಾಸರು
ಹರಿಯೆ ಸಿರಿದೊರೆಯೆ ಅರಿಯೆ ನಿನ್ಹೊರತನ್ಯರ ಪ ಮೊರೆ ಹೊಕ್ಕಿರುವರ ದುರಿತಗಳ ಕಳೆವ ಅ.ಪ ಸೂರ್ಯ ಪ್ರಕಾಶ ಕುಮುದಾಪ್ತಮಿತ ಭಾಸ ನಾಟಕಾಧಾರ ಶ್ರೀಶ ಹಾಟಕ ಗರ್ಭತಾತ ಅಖಿಲ ಸದ್ಗುಣೋಪೇತ 1 ಮರಳಿ ಮರಳಿ ಜನನ ಮರಣಗಳೈದುತ ನರಕ ಸ್ವರ್ಗ ಭೂಲೋಕ ತಿರುಗಿ ಬಳಲುವವೋ 2 ಹಟದಿ ದುರ್ಮತಿಗಳಾರ್ಭಟಿಸುತಜ್ಞಾನದಿ ಮಟ ಮಾಯದಿ ಚರಿಸಿ ಘಟಿಪುದೇ ಗುರುರಾಮವಿಠಲ ನಿನ್ನಯ ಕರುಣ 3
--------------
ಗುರುರಾಮವಿಠಲ
ಹಿತವಾವುದದೆ ಪಥದಿ ಸತತದೆನ್ನಿರಿಸೊ ಮತಿಹೀನನ್ಹಿತದ ಪಥವರಿಯೆ ಹರಿಯೆ ಪ ಅರಿವಿಗರಿವು ನೀನು ಮರೆಯಮಾನವ ನಾನು ಹರಿದಾಸರರಸ ನೀ ಚರಣದಾಸನು ನಾನು ದುರಿತ ಪರಿಹರ ನೀನು ದುರಿತಕಾರಿಯು ನಾನು ದುರಿತ ಪರಿಹರಿಸೆನ್ನ ಪೊರೆಯೊ ಸಿರಿದೊರೆಯೆ 1 ಜೀವಜೀವೇಶ ನೀ ಜೀವನಾಧಾರ ನೀ ಪಾವನೇಶ್ವರ ನೀ ಭಾವಿ ಭಕ್ತನು ನಾ ಭವರೋಗದ್ವೈದ್ಯ ನೀ ಭವದ ರೋಗಿಯು ನಾನು ಭವರೋಗ ಪರಿಹರಿಸಿ ಪಾವನನೆನಿಸಭವ 2 ನಾಶರಹಿತನು ನೀನು ನಾಶಕಾರಿಯು ನಾನು ನಾಶನದಿಂದುಳಿಸೆನ್ನ ಪೋಷಿಸಲಿ ಬೇಕೊ ಅನುದಿನ ಮೀಸಲಮನದಿಂದ ಶ್ರೀಶ ಶ್ರೀರಾಮ ನಿಮ್ಮ ದಾಸನೈ ನಾನು 3
--------------
ರಾಮದಾಸರು
ಅಳದಿರೊ ಸುಮ್ಮನಿರಮ್ಮ ನೀಅಳದಿರೊ ಬವ್ವ ಬಂದಾವಮ್ಮ ಕೃಷ್ಣಮ್ಮ ಪ.ನಾಲ್ಕು ಮೊಗವುಳ್ಳ ಬವ್ವ ಹದಿನಾಲ್ಕು ಜಗವ ಜೋಳಿಯಲ್ಲಿಟ್ಟ ಬವ್ವಗೋಳಿಟ್ಟಿಸುತಿದೆ ಬವ್ವ ನಿನ್ನಕಾಲು ಕಂಡರೆ ಕಚ್ಚಿ ಕೊಂಡೊಯ್ವ ಬವ್ವ 1ಗಗನ ತುಂಬ್ಯಾಡುವ ಬವ್ವ ಪ್ರಾಣಿಗಳ ದೇಹವ ಪೊಕ್ಕು ಚೇಷ್ಟಿಪ ಬವ್ವಜಗವನಲ್ಲಾಡಿಪ ಬವ್ವ ನಿನ್ನಮೊಗವರಿತು ದೂರಲಿ ದಿ? ನಿಂತಿಪ್ಪ ಬವ್ವ 2ಮೊಗವೈದು ಪಣೆಗಣ್ಣ ಬವ್ವ ಪುಲಿದೊಗಲು ಕೆಂಜೆಡೆ ರುಂಡಮಾಲೆಯ ಬವ್ವಬಗೆಯಿಂದ ಪೆಣ್ಣೆತ್ತಿ ಬವ್ವ ತಾಸೊಗಸಿಲೆ ರಾಮರಾಮೆನುತಿದೆ ಬವ್ವ 3ಮೈಯೆಲ್ಲ ಕಣ್ಣಿನ ಬವ್ವÀ ತನ್ನಕೈಯಲ್ಲಿ ವಜ್ರವ ಬೀಸುವ ಬವ್ವಉಯ್ಯಲಾಡುತಲಿದೆ ಬವ್ವ ನಿನ್ನಒಯ್ವೆನೆನುತ ಬಂತು ಹಲಕಾಲ ಬವ್ವ 4ಒಂದಲ್ಲ ನೂರಲ್ಲ ಬವ್ವ ನಿನ್ನಮಂದಿರ ಸುತ್ತುತವನಂತ ಬವ್ವಪೊಂದೊಟ್ಟಿಲೊಳು ನಿದ್ರೆಗೆಯ್ಯೈ ಎನ್ನತಂದೆ ಪ್ರಸನ್ವೆಂಕಟ ಸಿರಿದೊರೆಯೆ 5
--------------
ಪ್ರಸನ್ನವೆಂಕಟದಾಸರು