ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗತಿ ಯಾವುದೆನಗೆ ಶ್ರೀಪತಿಯೆ ಪೇಳೊ ಪ ಪರ ಸತಿಯರನು ಬಯಸುವೆನೊ ಅ.ಪ. ಕರ ಸೂಚನೆಯ ಮಾಡಿ ತರುಣಿಯರ ತಕ್ಕೈಸಿ ಸರಸವಾಡಿ ಇರುಳು ಹಗಲು ಹೀಗೆ ದುರುಳತನದಲಿ ತಿರುಗಿ ಧರೆಯೊಳಗೆ ನಾನೊಬ್ಬ ಹರಿದಾಸನೆನಿಸಿದೆನು 1 ನಾಚಿಕಿಲ್ಲದಲೆ ಬಲು ನೀಚರಲ್ಲಿಗೆ ಪೋಗಿ ಯೂಚಿಸುವೆ ಸನ್ಮಾರ್ಗ ಯೋಚಿಸದಲೆ ಆ ಚತುರ್ದಶ ವರುಷರಾರಭ್ಯ ಈ ವಿಧದಿ ಅಚರಿಪೆನೈ ಸವ್ಯ ಸಾಚಿಸಖ ಶ್ರೀ ಕೃಷ್ಣ 2 ನಾನು ನನ್ನದು ಎಂಬ ಹೀನ ಬುದ್ಧಿಗಳಿಂದ ಜ್ಞಾನ ಶೂನ್ಯನು ಆದೆ ದೀನ ಬಂಧು ಸಾನುರಾಗದಿ ಒಲಿದು ನಾನಾ ಪ್ರಕಾರದಲಿ ನೀನೆ ಕರುಣಿಸು ಹರಿಯೆ ಜ್ಞಾನಗುಣ ಪರಿಪೂರ್ಣ 3 ಅಂಬುಜಾಕ್ಷನೆ ನಿನ್ನ ನಂಬಿ ಭಜಿಸುವರ ಪಾ ದಾಂಬುಜಕ್ಕೆರಗದಲೆ ಸಂಭ್ರಮದಲಿ ತಂಬೂರಿಯನು ಪಿಡಿದು ಡಂಭತನದಲಿ ನಾನು ಶಂಬರಾರಿಗೆ ಸಿಲುಕಿ ಬೆಂಬಿಡದೆ ಚಾಲ್ವರಿದೆ 4 ಪರಮೇಷ್ಟಿಯಾರಭ್ಯ ತ್ರಣಜೀವ ಪರ್ಯಂತ ತರತಮವ ತಿಳಿಸಿ ತರುವಾಯದಲ್ಲಿ ಗುರುಹಿರಿಯರಲಿ ಭಕುತಿ ವೈರಾಗ್ಯವನೆ ಕೊಟ್ಟು ಸಿರಿಜಗನ್ನಾಥ ವಿಠಲ ನಿರುತ ನೀ ಪೊರೆಯದಿರೆ 5
--------------
ಜಗನ್ನಾಥದಾಸರು
ಜೋ ಜೋ ಜೋ ಜೋ ಸಹ್ಲಾದರಾಜ ಜೋ ಜೋ ಜೋ ಜೋ ಪ್ರಹ್ಲಾದನನುಜ ಜೋ ಜೋ ಜೋ ಜೋ ಜಾತರೂಪ ಶಯ್ಯಜ ಜೋ ಜೋ ಜೋ ಜೋ ಭಕ್ತಸುರ ಕಲ್ಪಭೂಜ ಪ ಮನುಜ ಮೃಗಾರ್ಯರ ಸುತನೆನಿಸಿಸುತ ಅಣುಗ್ರಾಮ ಬ್ಯಾಗವಾಟದಿ ಜನಿಸುತ ಮುನಿ ವರದೇಂದ್ರತೀರ್ಥರ ಸೇವಿಸುತ ಅನಿಲ ಸುಶಾಸ್ತ್ರವನರಿತ ಸುದಾತ 1 ಗುರುಧೇನುಪಾಲ ದಾಸಾರ್ಯರ ಮಮತ ಪರಿಪೂರ್ಣದಿಂದ ನೀ ಪರಮ ಪುನೀತ ಸಿರಿಜಗನ್ನಾಥವಿಠಲಾಂಕಿತ ಶರಧಿಜ ಭಾಗದಿ ಪಡೆದ ಪ್ರಖ್ಯಾತ 2 ಸರಸಿಜ ತುಲಸಿ ಸುಮಾಲೆ ಶೋಭಿತ ವರದಿ ಸ್ವಾದಿ ರಾಜೇಂದ್ರಾರ್ಯರ ಪ್ರೀತ ಹರಿಕಥಾಮೃತ ಗ್ರಂಥ ವಿರಚಿತ ಪುರುಹೂತರಾರ್ಯರ ಪ್ರೇಮದ ಪೋತ 3 ಗುಣನಿಧಿ ದ್ವಾಪರದಲ್ಲಿ ಪುಟ್ಟುತ ಫಣಿವರ ಕೇತನ ಮೊರೆ ಲಾಲಿಸುತ ದಿನಮಣಿ ಜಾತನ ದಿವ್ಯ ವರೂಥ ಮಾನಿತ ಮಾನವಿ ಕ್ಷೇತ್ರ ನಿವಾಸ4 ಶ್ರೀ ನಿಧಿ ಶಾಮಸುಂದರ ದಾಸ ದುರಿತ ವಿನಾಶ ಹೀನ ಮತಾಖ್ಯ ಪನ್ನಗಕುಲವೀಶ 5
--------------
ಶಾಮಸುಂದರ ವಿಠಲ