ಒಟ್ಟು 5 ಕಡೆಗಳಲ್ಲಿ , 1 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಡಿ ಇನಿಯನ ವಶದಿ ಮನಸಿಜನಯ್ಯನ ದಯದಿಂದ ಬಾಲೆ ಪ ಮನೆಗೆಲಸಗಳನು ದಿನಗೈಯುತ ಬಲು ವಿನಯ ಸೌಶೀಲ್ಯದಿ ವನಿತೆಯರೊಳು ನೀ 1 ಪತಿಯನು ಪರದೇವತೆಯೆಂಬುವ ಮಹಾ ಮತಿಯಲಿ ಸೇವಿಸಿ ಸುತರನು ಪಡೆದು ನೀ 2 ಗುರುಜನರಿಗೆ ಸದಾಶಿರಬಾಗುತ ಬಹು ಸರಸದಿ ಸದ್ಗುಣಾಭರಣಗಳಿಂದ ನೀ 3 ರತಿಪತಿ ಪಿತನಿಗೆ ಪ್ರತಿಮೆಗಳೆನ್ನುತ ಅತಿಥಿಗಳನು ಸಂತತ ಸತ್ಕರಿಸುತ 4 ಗಿರಿಜೆಯ ಪೂಜೆಯನು ನಿರುತದಿಗೈಯುತ ಸಿರಿಕಾರ್ಪರ ನರಹರಿಯನು ಸ್ಮರಿಸುತ 5
--------------
ಕಾರ್ಪರ ನರಹರಿದಾಸರು
ಮಂಗಲ ಮಾನವಿ ನಿಲಯ ಕವಿಗೇಯ ಗುರುರಾಯ ಗುರುರಾಯ ಪಿಡಿಕೈಯಾ ಪ ಪರಮ ಕರುಣದಲಿ ವಿರಚಿತ ಶ್ರೀ ಮ- ದ್ಹರಿಯ ಕಥಾಮೃತ ಗ್ರಂಥ ಶುಭ್ರ ಚರಿತ ಜಗನ್ನಾಥ ಜಗನ್ನಾಥ ಪ್ರಖ್ಯಾತ1 ಮೇದಿನಿ ಸುರರಿಗೆ ಮೋದಮುನಿ ಮತದ ಭೇದ ಪಂಚಕ ಸುಬೋಧ ಪ್ರದರಾದ ಸ- ಮೋದ 2 ಶರಣು ಜನಕೆ ಸುರತರುವೆಂದೆನಿಸಿದ ಸಿರಿಕಾರ್ಪರ ಶುಭನಿಲಯ ನರಹರಿಯ ಸುಪ್ರೀಯ ಸುಪ್ರೀಯ ದಾಸಾರ್ಯ 3
--------------
ಕಾರ್ಪರ ನರಹರಿದಾಸರು
ಮಂಗಳ ವೇಣು ಗೋಪಾಲಾ ಸಿರಿಲೋಲ ಗಜಪಾಲಾ ಗಜಪಾಲಾ ಶುಭಲೀಲಾ ಪ ಅಂಗುಟಾಗ್ರದಿಂ ಗಂಗೆಯ ಪಡೆದಿಹ ಮಂಗಳ ಚರಿತ ಶುಭಾಂಗ ಶ್ರೀ ರಂಗ ದಯಪಾಂಗ ದಯಪಾಂಗ ನೀಲಾಂಗ 1 ನವನೀತ ಚೋರ ವೃಂದಾವನ ಸುವಿಹಾರ ಭವದೂರ ಸುಕುಮಾರಸುಕುಮಾರ ಶರೀರ2 ಧರೆಯೊಳು ಮೆರೆಯುವ ಸಿರಿಕಾರ್ಪರ ನರಹರಿ ರೂಪನೆ ಪೊರೆಯೆನ್ನ ಅಘ ಹರಣ ತವಚರಣ ತವಚರಣಕೆರಗುವನ 3
--------------
ಕಾರ್ಪರ ನರಹರಿದಾಸರು
ರಥವೇರಿ ಬರುತಿಹ ಗುರುವರನ್ಯಾರೆ ಪೇಳಮ್ಮಯ್ಯಾ ಪ ಟೀಕಾಕೃಧ್ಯ ತಿವರನಮ್ಮ ಅ.ಪ ಸ್ವೀಕರಿಸಿ ಮಾರುತನವತರಿಸಿ ಶೃತಿಸಮ್ಮತ ಶ್ರೀಮಧ್ಭಾಷ್ಯವತಾರಚಿಸಿ ಛಾತ್ರರಿಗೆ ವಿವರಿಸೆ ಕೇಳುತಲನುದಿನದಿ ಮಹಿಮ ಸುರಪತಿಯು ಕಾಣಮ್ಮ 1 ದೇಶಪಾಂಡ್ಯರಕುವರ ಕೇಳಲು ಗುರುವಚನ ಸಂಸಾರ ಸುಖವನ ಜಯ ತೀರಥರಮ್ಮ 2 ಸ್ಥಾಪಿಸಿದರು ಮುದದಿ ಶುದ್ಧಮಾಯಿ ಸುಭಟಧ್ವಜನಿಯ ಓಡಿಸಿದ ವಾಕ್ಸಾಯಕದಿಂದ ಮಧ್ವರಾಜಕೃತ ಸದ್ಗ್ರಂಥಗಳ ವಿಸ್ತಾರ ಮಾಡಿದ ಯತಿಧೀರಾ ಗೆಲಿದ ಪ್ರಸಿದ್ಧ ಕಾಣಮ್ಮ 3 ಚಾಮೀಕರಕೃತ ಚಾಮರ ಛತ್ರಗಳಿಂದ ಸೇವಿಪದ್ವಿಜರಿಂದ ಶ್ರವಣಕೆ ಪೀಯೂಷ ಭವಬಾಧೆ ಬಿಡಿಸಿದ ಶ್ರೀಮಳಖೇಡ ಸುಧಾಮ ಕಣಮ್ಮ4 ತೋಷಿತ ಬುಧನಿಕರ ಪಾವನತರಚರಿಯ ಶರಣುಜನಕೆ ಸುರತರುವೆನಿಸಿದ ಜಯರಾಯಾ ವಿದ್ವಜ್ಜನಗೇಯಾ ಧರೆಯೊಳು ಸಿರಿಕಾರ್ಪರ ನರಸಿಂಹನೆ ಪರನೆಂದರುಹಿದ ಗುರುವರನಮ್ಮ5
--------------
ಕಾರ್ಪರ ನರಹರಿದಾಸರು
ವರ ಹಳ್ಳೇರಾಯಾ ಮಾಂಪಾಲಯ ಪ ಕರ ಮುಗಿವೆನು ದುಮ್ಮದ್ರಿನಿಲಯ ಅ.ಪ ತರಣಿ ಕುಲತಿಲಕ ಸಿರಿರಾಮನ ಪದ ಸರಸಿಜ ಮಧುಕರ ಸುರಗಣ ಸೇವ್ಯಾ 1 ಸೋಮ ಕುಲಜ ಬಲರಾಮನನುಜನ ಪ್ರೇಮಪಾತ್ರ ಬಲಭೀಮನೆ ಕೃಪಯಾ2 ಸಿರಿಕೃಷ್ಣನೆ ಪರತರನೆಂದರುಹಲು ವಿರಚಿತ ಶಾಸ್ತ್ರ ಶ್ರೀ ಗುರು ಮಧ್ವಾರ್ಯ 3 ಯವನ ಕುಲದಿ ಭಜಿಸುವರಿಗೊಲಿದೆಯಾ ಅವನಿಸುರಾರ್ಚಿತ ಶ್ರೀ ಪವಮಾನತನಯಾ4 ಶರಣು ಜನಕೆ ಸುರತರುವೆಂದೆನಿಸಿದ ಸಿರಿಕಾರ್ಪರ ನÀರಹರಿಗತಿ ಪ್ರೀಯಾ 5
--------------
ಕಾರ್ಪರ ನರಹರಿದಾಸರು