ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ವೈಷ್ಣವ ಜನುಮ ಸಫಲವಿಂದು | ಈ ಉಡುಪಿ ಯಾತ್ರಿಗಭಿಮುಖವಾದುದು ಪ ಮನೋವಾಕ್ಕಾಯ ಕರ್ಮಗಳು ಬಲುಪರಿ ಇರಲು | ಮನುಜ ಪೋಗುವೆನೆಂದು ಒಮ್ಮೆ | ನೆನೆಸಿದ ಕ್ಷಣದಲ್ಲಿ ನಾಕವಾಗೋವು ಸು ಭವ ವನಧಿಗೆ ಇದೇ ಮೂಲ 1 ದೇಶದೊಳಗುಳ್ಳ ನಾನಾ ಯಾತ್ರೆ ತೀರಥಾ | ಏಸುಬಾರಿ ಪೋಗಿ ಬರಲಿ ಉಂಟೆ | ಈ ಸುಲಭ ಯಾತ್ರೆ ಕಂಡವರಿಗೆ ದೊರಿಯದು | ಲೇಸಾಗಿ ಕೇಳುವದು ಕುತ್ಸಿತ ಭಾವನೆ ಬಿಟ್ಟು 2 ಕೃಷ್ಣರಾಯನ ದರುಶನಕೆ ಮನಮಾಡಿದ | ಶಿಷ್ಟಾಚಾರಗೆ ಲಿಂಗಕಾಯ ಭಂಗಾ | ದಿಟ್ಟ ಮೂರುತಿ ವಿಜಯವಿಠ್ಠಲ ಕರುಣಿ ಜ್ಞಾನ | ಕೊಟ್ಟುಪಾಲಿಸುವ ಬಲು ಮೂರ್ಖರಾದರೂ ಸಿದ್ಧ3
--------------
ವಿಜಯದಾಸ
ಸುತ್ತಲು ಕಾಣೆನು ಪಿರಿಯ ಸುಖಮುನಿಗೆ ಸರಿಯನೋಡಿವನ ಪರಿಯ ಚಿತ್ತಜನ ಪೆತ್ತ ಹರಿಯಭಕ್ತನಿವನತಿ ಶಕ್ತನರಿಯ ಪ . ವಿಷಯಂಗಳ ತೊರೆದ ವಿಮಲ ಶಾಸ್ತ್ರದಿ ಮೆರೆದಅಸದುಕ್ತಿಯ ಜರೆದ ಅಹಿತರೆಲ್ಲರ ಮುರಿದಋಷಿ ಇವ ನಮ್ಮ ಪೊರೆದ ರಸಿಕರರ್ಥಿಯ ಕರೆದಹೃಷೀಕೇಶಗೆ ವರದ ಪಿರಿಯ ದೈವನೆಂದೊರೆದ1 ಹಿಂದೆ ಹನುಮಂತನಾದ ಹೀನರಾವಣನ್ನ ಪುರದಮಂದಿಯನೆಲ್ಲರ ಸದೆದ ಮನೆಯ ತನ್ನ ಬಾಲದಮಂದ ವಹ್ನಿಯಿಂದುರುಪಿದÀ ಮರಗಳ ಚೆಂದದಿ ಕೆಡಹಿದಇಂದಿರೆಗೆ ರಾಮನುಡಿದ ಇಷ್ಟವಾರ್ತೆಯ ಪೇಳಿದ 2 ಭೀಮನಾಗಿ ಕಲಿಯ ಗೆದ್ದ ಭೀತ ದುಃಶ್ಯಾಸನ್ನನೊದ್ದತಾಮಸ ಮಾಗಧನ ಸೀಳ್ದ ತನ್ನ ನಂಬಿದವರನಾಳ್ದಸ್ವಾಮಿ ಹಯವದನನಿರ್ದ ಸೀಮೆಯರ್ತಿಯ ಬಿಡಿಸಿಬಾಳ್ದಆ ಮಹಾ ಭುಜಬಲನೆ ಮಧ್ವಾಚಾರ್ಯನೆಂಬುದು ನಿಗಮಸಿದ್ಧ3
--------------
ವಾದಿರಾಜ