ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದ್ಧಾರ ಮಾಡೆಯ್ಯಾ ಸಿದ್ಧೇಶ್ವರ | ಸದ್ಧರ್ಮದಲಿ ಸತತ ನೀಲ ಲೋಹಿತ ವಿಗತ ಚೈಲ ಭೂಷಿತ ಭನಿಸಿತ ಕಾಲಾರಿ ಶಿವ ದ್ರೌಣಿಂ ಶೂಲಪಾಣಿ ಹಾಲವಿಪುರವಾಸ | ಹಾಲಾ ಹಲವ ಮೆದ್ದು ತಾಳಲಾರದೆ ಕೊಂಡ ಮೇತೌಷಧವನಿತ್ತು 1 ವ್ಯಾಧ ರೂಪದಿ ರಣದಿ ಕಾದು ಪಾರ್ಥನೆ ಸೋತು ನೀ ದಯದಿ ದಿವ್ಯಾಸ್ತ್ರ ಪಾಲಿಸಿದೆಯೋ | ಸಾದರದಿ ನಾ ನಿನ್ನ ಪಾದಕೆರಗುವೆ | ಎನಗೆ ಮೋದದಿಂದಲಿ ಪಂಚಭೇದ ಜ್ಞಾನವನರುಹಿ 2 ಕಾಮಾರಿ ಸುಪವಿತ್ರ ಸೋಮಾರ್ಕ ಶಿಬಿನೇತ್ರ ಶಾಮಸುಂದರ ವಿಠಲಸ್ವಾಮಿ ಮಿತ್ರ | ಪ್ರೇಮಾಬ್ಧಿ ಕಳತ್ರ | ತಾಮರಸ ಭವಪುತ್ರ ಧವಳಗಾತ್ರ 3
--------------
ಶಾಮಸುಂದರ ವಿಠಲ
ಗುರುವೆನ್ನ ತಾಯಿ ಸದ್ಗುರುವೆನ್ನ ತಂದೆ ಗುರುಕೃಪೆ ಪಡೆದು ನಾ ಹೆಸರಿಗೆ ಬಂದೆ ಪ ಗುರುವೆನ್ನ ಪ್ರಾಣಲಿಂಗಾ ಗುರುವೆನ್ನ ಇಷ್ಟಲಿಂಗಾ ಗುರುಪ್ರಕಾಶವು ಬೆಳಗುತಿರೆ ಸರ್ವಾಂಗಾ ಗುರುಸ್ಮರಣೆ ಸುಖರಂಗಾ ಗುರುಕರುಣಾ ಕೃಪಾಂಗಾ ಗುರುವಿಂದಧಿಕ ಕಾಣೆ ಶಿವನಾಣೆ ಗುರುವೆನ್ನ 1 ಗುರುವೆ ಈ ಪೃಥವಿಯು ಗುರುವೆ ಆಕಾಶವು ಗುರುವೆ ಸ್ಥಾವರ ಜಂಗಮವೆಲ್ಲವು ಗುರುರೂಪವೆಂದು ಶ್ರೀ ಗುರು ಕರುಣದಂದರಿತು ಗುರು ಸರ್ವರಿಗೆ ಸರಿಯಲ್ಲಾ ಶಿವಬಲ್ಲ 2 ಗುರುವೆ ದೇವಾಂಗಾ ಶ್ರೀ ಗುರುವೆ ಬಸವಲಿಂಗಾ ಗುರು ಬ್ರಹ್ಮವಿಷ್ಣುರುದ್ರ ಸ್ವರೂಪ ಗುರು ಧರಣಿಪಾಲಾ ಗುರು ವಿಮಲಾನಂದ ಲೋಲಾ ಗುರು ಸಿದ್ಧೇಶ್ವರಸ್ವಾಮಿ ಭಕ್ತ ಪ್ರೇಮಿ 3
--------------
ಭಟಕಳ ಅಪ್ಪಯ್ಯ
ಲೋಕೇಶನೆನಿಪ ಶ್ರೀಗುರು ಸಿದ್ಧೇಶ್ವರಗೆ ಪ ನೀ ಕಮಲಮುಖಿ ಆಋವೈರಿಯ ನೇಕ ಮೈಯ್ಯಾಳು ಸುತ್ತಿಕೊಂಡು ವಿ ವೇಕವಿಲ್ಲದೆ ವಿಷವನುಂಡ ಪಿನಾಕಧರÀನಿಗೆ ಸೋಲುವರೆ ನೀ ಜಗವ ಮೋಹಿಪ ಮಾನಿನೀ ಮಣಿಯೇ ಅ.ಪ. ಶಿರದೊಳು ಶಶಿಯ ಕೆಂಜೆಡೆ ಇಹ ಜೋಗಿ ಸ್ಮರನ ದಹಿಸಿ ಭಸ್ಮ ಹಣೆಗಿಟ್ಟ ಯೋಗಿ ಇರುವರೆ ಸ್ಥಳವಿಲ್ಲದಂತೆ ತಾ ಪೋಗಿ ಮೆರೆವ ಸ್ಮಶಾನ ಮಂದಿರಕನುವಾಗಿ ಮರುಲು ಭೂತ ಪಿಶಾಚ ಯಕ್ಷರ ನೆರವಿಯಲಿ ಕುಣಿಕುಣಿದು ಬ್ರಹ್ಮನ ಶಿರವಿಡಿದು ತಿರಿದುಂಬ ಗೊರವಗೆ ಬರಿದೆ ತಿಳಿಯದೆ ಜಗವ ಮೋಹಿಪ ಮಾನಿನೀ ಮಣಿಯೇ 1 ಮಂಡೆಯೋಳ್ ಜಾನ್ಹವಿ ಶಶಿಯನ್ನೆ ಸೂಡಿ ರುಂಡಮಾಲೆಯ ಕೊರಳೊಳಗಿಟ್ಟಪಚಾಡಿ ಕುಂಡಲಿಗಳಾ ಧರಿಸಿರುವನ ನೋಡಿ ಖಂಡ ಪರಶುವೆಂದು ಅವನ ಕೊಂಡಾಡಿ ಧಿಂಡೆಯಾಗಿಹ ಪ್ರಾಯದವಳು ನೀ ನೀನವನನೊಲಿದೆ ಪ್ರ ಚಂಡೆ ಪಾರ್ವತಿ ಜಗವ ಮೋಹಿಪ ಮಾನಿನೀ ಮಣಿಯೇ 2 ಕರದಿ ತ್ರಿಶೂಲ ಧಮರುಗಳ ಧರಿಸಿರುವಾ ಕಂಚರ್ಮಾಂಬಕ ಪುಲಿದೊಗಲುಟ್ಟು ಮೆರೆವಾ ಹಿರಿಯತನಕೆ ವೃಷಭವನೇರಿ ಬರುವಾ ಶಿರಿಯ ಹೊಗಾಡಿ ಫಕೀರನಂತಿರುವಾ ವಿರಚಿಸಿದ ಲೀಲಾವಿನೋದದ ಪರತರ ಶ್ರೀ ಪ್ರಣವರೂಪನ ಗುರುವಿಮಲಾನಂದ ತೊಟ್ಟಿದ ಗುರು ಸಿದ್ಧೇ ಶ್ವರನೆಂದು ತಿಳಿಯದೆ ಜಗವ ಮೋಹಿಪ ಮಾನಿನೀಮಣಿಯೇ 3
--------------
ಭಟಕಳ ಅಪ್ಪಯ್ಯ