ಒಟ್ಟು 17 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವಿನ ಗುಣಂಗಳ ನೆನೆವೆ ಸಿದ್ಧೇಶ ನಾನುಗುರುವಿನ ಪಾದಂಗಳ ನೆನೆವೆ ಸಿದ್ಧೇಶ ಪ ಸುಖವು ಬಂದರೆ ಹಿಗ್ಗದವರು ಸಿದ್ಧೇಶ ನಾನಾದುಃಖವು ಬಂದರೆ ಬಗ್ಗದವರು ಸಿದ್ಧೇಶ ಅಖಿಳವೆಲ್ಲವ ಬ್ರಹ್ಮವೆಂದರು ಸಿದ್ಧೇಶ ಇವರುಮುಕುತ ಗಣಂಗಳು ಈಗ ಸಿದ್ಧೇಶ 1 ಮಾನ ಹಚ್ಚಿಕೊಳ್ಳದವರು ಸಿದ್ಧೇಶ ಅಭಿಮಾನಗಳು ನೀಗಿದವರು ಸಿದ್ಧೇಶತಾನೆ ಎಂದು ತಿಳಿದವರು ಸಿದ್ಧೇಶ ಅವರುಜ್ಞಾನ ಮುಕ್ತಗಣಂಗಳು ಸಿದ್ಧೇಶ 2 ಸಂಸಾರವಿದ್ದರೆ ಬಾಧಕವಿಲ್ಲದವರು ಸಿದ್ಧೇಶಸಿದ್ಧ ಚಿದಾನಂದರಿಹರು ಸಿದ್ಧೇಶ ಇವರುಶುದ್ಧ ಮುಕ್ತ ಗಣಂಗಳು ಸಿದ್ದೇಶ3
--------------
ಚಿದಾನಂದ ಅವಧೂತರು
ಉದ್ಧಾರ ಮಾಡೆಯ್ಯಾ ಸಿದ್ಧೇಶ್ವರ | ಸದ್ಧರ್ಮದಲಿ ಸತತ ನೀಲ ಲೋಹಿತ ವಿಗತ ಚೈಲ ಭೂಷಿತ ಭನಿಸಿತ ಕಾಲಾರಿ ಶಿವ ದ್ರೌಣಿಂ ಶೂಲಪಾಣಿ ಹಾಲವಿಪುರವಾಸ | ಹಾಲಾ ಹಲವ ಮೆದ್ದು ತಾಳಲಾರದೆ ಕೊಂಡ ಮೇತೌಷಧವನಿತ್ತು 1 ವ್ಯಾಧ ರೂಪದಿ ರಣದಿ ಕಾದು ಪಾರ್ಥನೆ ಸೋತು ನೀ ದಯದಿ ದಿವ್ಯಾಸ್ತ್ರ ಪಾಲಿಸಿದೆಯೋ | ಸಾದರದಿ ನಾ ನಿನ್ನ ಪಾದಕೆರಗುವೆ | ಎನಗೆ ಮೋದದಿಂದಲಿ ಪಂಚಭೇದ ಜ್ಞಾನವನರುಹಿ 2 ಕಾಮಾರಿ ಸುಪವಿತ್ರ ಸೋಮಾರ್ಕ ಶಿಬಿನೇತ್ರ ಶಾಮಸುಂದರ ವಿಠಲಸ್ವಾಮಿ ಮಿತ್ರ | ಪ್ರೇಮಾಬ್ಧಿ ಕಳತ್ರ | ತಾಮರಸ ಭವಪುತ್ರ ಧವಳಗಾತ್ರ 3
--------------
ಶಾಮಸುಂದರ ವಿಠಲ
ಗುರುವೆನ್ನ ತಾಯಿ ಸದ್ಗುರುವೆನ್ನ ತಂದೆ ಗುರುಕೃಪೆ ಪಡೆದು ನಾ ಹೆಸರಿಗೆ ಬಂದೆ ಪ ಗುರುವೆನ್ನ ಪ್ರಾಣಲಿಂಗಾ ಗುರುವೆನ್ನ ಇಷ್ಟಲಿಂಗಾ ಗುರುಪ್ರಕಾಶವು ಬೆಳಗುತಿರೆ ಸರ್ವಾಂಗಾ ಗುರುಸ್ಮರಣೆ ಸುಖರಂಗಾ ಗುರುಕರುಣಾ ಕೃಪಾಂಗಾ ಗುರುವಿಂದಧಿಕ ಕಾಣೆ ಶಿವನಾಣೆ ಗುರುವೆನ್ನ 1 ಗುರುವೆ ಈ ಪೃಥವಿಯು ಗುರುವೆ ಆಕಾಶವು ಗುರುವೆ ಸ್ಥಾವರ ಜಂಗಮವೆಲ್ಲವು ಗುರುರೂಪವೆಂದು ಶ್ರೀ ಗುರು ಕರುಣದಂದರಿತು ಗುರು ಸರ್ವರಿಗೆ ಸರಿಯಲ್ಲಾ ಶಿವಬಲ್ಲ 2 ಗುರುವೆ ದೇವಾಂಗಾ ಶ್ರೀ ಗುರುವೆ ಬಸವಲಿಂಗಾ ಗುರು ಬ್ರಹ್ಮವಿಷ್ಣುರುದ್ರ ಸ್ವರೂಪ ಗುರು ಧರಣಿಪಾಲಾ ಗುರು ವಿಮಲಾನಂದ ಲೋಲಾ ಗುರು ಸಿದ್ಧೇಶ್ವರಸ್ವಾಮಿ ಭಕ್ತ ಪ್ರೇಮಿ 3
--------------
ಭಟಕಳ ಅಪ್ಪಯ್ಯ
ಜಯ ಜಯ ಭೀಮಸೇನ ಪ. ಜಯ ಭೀಮಸೇನ ದುರ್ಜಯ ಪರಾಕ್ರಮ ಧೀರಾದಯಾಪಯೋನಿಧಿಯೆ ನಿರ್ಭಯ ವೈಷ್ಣವಾಗ್ರಣಿಅ.ಪ. ಅಂಬ ಪಾವಕ ದೀನೋದ್ಧಾರಿ1 ವೃಕೋದರ ವಿಷ್ಣುಸೇವಕ ವಿಜ್ಞಾನಾಂಬುಧಿಬಕಮದಧ್ವಂಸಿ ಜಟಾಸುರಾಂತಕ ಹಿಡಿಂ-ಬಕಾಸುರಗರ್ವಪರ್ವತ ಪವಿಧರ ಹಿಡಿಂಬಕಿ ಚಿತ್ತಕುಮುದಕೋರಕ ಪೂರ್ಣೋಡುಪರಾಜಅಕಳಂಕ ಧನುರಾಗಮಾಚಾರ್ಯ ನಿಪುಣ ಕೀ-ಚಕ ಬಲ ನಿರ್ಮೂಲನ ದ್ರೋಣಾದಿ ಸೈ-ನ್ಯ ಕುಮನ ಅಸುಹರಣ ಧಾರ್ತರಾಷ್ಟ್ರನಿಕರವಾರಣ ವಿದಾರಣ ಪಂಚವದನಾ 2 ಮಣಿಮಯರಥವೇರಿ ಫಣಿಕೇತನನನುಜನುನೆಣನು ದುರ್ಗುಣನು ಮಾರ್ಗಣಗಣದಿಂದಲಿರಣಾಂಗಣದಿ ನಿನ್ನ ಸೆಣಸಲಾಕ್ಷಣ ನೋಡಿತೃಣಮಾಡಿ ಗದೆಯಿಂದ ಹಣಿದು ಹಣೆಯ ಮೆಟ್ಟಿಪಣದಿ ನುಡಿದವರ ರಣವ ತಿದ್ದಿ ಅತ್ಯು-ಲ್ಬಣದಿಂದವಗೆ ಲಂಘಿಸಿ ವಕ್ಷದಿ ರಕ್ತಕೊಣನ ಶಸ್ತ್ರದಿ ನಿರ್ಮಿಸಿ ಕದಡಿಗೂಡಿರಣದೊಳೊಪ್ಪಿದ್ಯೊ ನಿನಗೆಣೆಯಿಲ್ಲವೆನಿಸಿ 3 ಮದ್ದಾನೆ ರೂಪ ಧರಿಸಿ ಮಾಯದಲಿ ಬಂದಾರುದ್ರಾನ ಯುದ್ಧದಿ ಗೆದ್ದುವೋಡಿಸಲಾಗಕೃದ್ಧನಾಗಿ ವ್ಯಾಘ್ರಸಿಂಹರೂಪದಿ ಬರೆಗುದ್ದಿ ಕೆಡಹಿ ವೇಗಕೆ ದಾರಿ ಕಟ್ಟಿದೆಯಿದ್ಧರೆಯೊಳು ನಿಮಗೆಣೆಯಾರು ಮಹಾಬಲಿಮದ್ರಾಧಿಪತಿಯ ಅಂಬರಕಟ್ಟಿ ರಾಜಸೂ-ಯಾಧ್ವರದಲಿ ಮಾಗಧನ ಸಂಹರಿಸಿದತಿಶುದ್ಧ ಸ್ವಭಾವ ಶೂರ ಸತತ ಸಾಧ್ಯಸಿದ್ಧೇಶನಿಲ ಕುಮಾರ ನಮಿಪೆಯೆನ್ನಉದ್ಧರಿಸುವುದಯ್ಯ ಶುದ್ಧ ಮನೋಹರ 4 ಸೂತ್ರ ಅಮಿತ ರೂಪ ಸದ್ಗುಣಗಣಧಾಮ ವೀರಪ್ರತಾಪ ಭಕುತಿ ಜ್ಞಾನಕಾಮಿತಾರ್ಥಗಳಿತ್ತು ಪೊರೆಯಯ್ಯ ಅಸುವ 5
--------------
ಗೋಪಾಲದಾಸರು
ಲೋಕೇಶನೆನಿಪ ಶ್ರೀಗುರು ಸಿದ್ಧೇಶ್ವರಗೆ ಪ ನೀ ಕಮಲಮುಖಿ ಆಋವೈರಿಯ ನೇಕ ಮೈಯ್ಯಾಳು ಸುತ್ತಿಕೊಂಡು ವಿ ವೇಕವಿಲ್ಲದೆ ವಿಷವನುಂಡ ಪಿನಾಕಧರÀನಿಗೆ ಸೋಲುವರೆ ನೀ ಜಗವ ಮೋಹಿಪ ಮಾನಿನೀ ಮಣಿಯೇ ಅ.ಪ. ಶಿರದೊಳು ಶಶಿಯ ಕೆಂಜೆಡೆ ಇಹ ಜೋಗಿ ಸ್ಮರನ ದಹಿಸಿ ಭಸ್ಮ ಹಣೆಗಿಟ್ಟ ಯೋಗಿ ಇರುವರೆ ಸ್ಥಳವಿಲ್ಲದಂತೆ ತಾ ಪೋಗಿ ಮೆರೆವ ಸ್ಮಶಾನ ಮಂದಿರಕನುವಾಗಿ ಮರುಲು ಭೂತ ಪಿಶಾಚ ಯಕ್ಷರ ನೆರವಿಯಲಿ ಕುಣಿಕುಣಿದು ಬ್ರಹ್ಮನ ಶಿರವಿಡಿದು ತಿರಿದುಂಬ ಗೊರವಗೆ ಬರಿದೆ ತಿಳಿಯದೆ ಜಗವ ಮೋಹಿಪ ಮಾನಿನೀ ಮಣಿಯೇ 1 ಮಂಡೆಯೋಳ್ ಜಾನ್ಹವಿ ಶಶಿಯನ್ನೆ ಸೂಡಿ ರುಂಡಮಾಲೆಯ ಕೊರಳೊಳಗಿಟ್ಟಪಚಾಡಿ ಕುಂಡಲಿಗಳಾ ಧರಿಸಿರುವನ ನೋಡಿ ಖಂಡ ಪರಶುವೆಂದು ಅವನ ಕೊಂಡಾಡಿ ಧಿಂಡೆಯಾಗಿಹ ಪ್ರಾಯದವಳು ನೀ ನೀನವನನೊಲಿದೆ ಪ್ರ ಚಂಡೆ ಪಾರ್ವತಿ ಜಗವ ಮೋಹಿಪ ಮಾನಿನೀ ಮಣಿಯೇ 2 ಕರದಿ ತ್ರಿಶೂಲ ಧಮರುಗಳ ಧರಿಸಿರುವಾ ಕಂಚರ್ಮಾಂಬಕ ಪುಲಿದೊಗಲುಟ್ಟು ಮೆರೆವಾ ಹಿರಿಯತನಕೆ ವೃಷಭವನೇರಿ ಬರುವಾ ಶಿರಿಯ ಹೊಗಾಡಿ ಫಕೀರನಂತಿರುವಾ ವಿರಚಿಸಿದ ಲೀಲಾವಿನೋದದ ಪರತರ ಶ್ರೀ ಪ್ರಣವರೂಪನ ಗುರುವಿಮಲಾನಂದ ತೊಟ್ಟಿದ ಗುರು ಸಿದ್ಧೇ ಶ್ವರನೆಂದು ತಿಳಿಯದೆ ಜಗವ ಮೋಹಿಪ ಮಾನಿನೀಮಣಿಯೇ 3
--------------
ಭಟಕಳ ಅಪ್ಪಯ್ಯ