ಒಟ್ಟು 9 ಕಡೆಗಳಲ್ಲಿ , 5 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಂತಗಿರಿವಿಠಲ | ಪಾಲಿಸೋ ಇವಳಾ ಪ ಗುಣಪೂರ್ಣ ಶ್ರೀಹರಿಯೆ | ಬೇಡುವೆನು ಧೊರೆಯೇ ಅ.ಪ. ಸಿದ್ಧಿಸುತ ಶಿಷ್ಯತ್ವ | ಶುದ್ಧ ಸ್ವಪ್ನದೊಳೀಕೆಉದ್ಧಾರಕೆಂದೆನುತ | ಪ್ರಾರ್ಥಿಸುತ್ತಿಹಳೋ |ಮಧ್ವರಮಣನೆ ದೇವ | ಸಿದ್ದಾಂತ ಸಾರವನುಬುದ್ದಿಗೇ ನಿಲುಕಿಸೋ | ಭದ್ರಮೂರುತಿಯೆ 1 ಪ್ರಾಚೀನ ದುಷ್ಕರ್ಮ | ಮೋಚನೆಗೆ ಮನಮಾಡೋವಾಚಾಮ ಗೋಚರನೆ | ಖಚರಾರಿ ವಂದ್ಯನೀಚೊಚ್ಚ ತರತಮವ | ವಾಚಿಸುತ ಕರ್ಮಗಳಪಾಚಿಯನೆ ಕಳೆಸವ್ಯ | ಸಾಚಿ ಸಖದೇವಾ 2 ಹರಿಪಾದ ರತಿ ಕೊಟ್ಟು | ಹರಿ ಗುರು ಸೇವೆಗಳನಿರುತಗೈಯುವ ಮನವೆ | ಪರಿಪಾಲಿಸ್ಹರಿಯೇಅರವಿಂದನಾಭಹರಿ ಸರ್ವ ಸತ್ಸಾಧನವನೆರವೇರಿಸೆಂದೆನುತ | ಪ್ರಾರ್ಥಿಸುವೆ ಹರಿಯೇ 3 ಜ್ಞಾನಾನು ಸಂಧಾನ | ಮಾಣದಲೆ ಇತ್ತಿವಳಧ್ಯಾನ ಮಾರ್ಗಕೆ ತಂದು | ಮೌನಿ ಜನ ವಂದ್ಯಾಸಾನುರಾಗದಿ ನಿನ್ನ | ಹೃದಯ ಗಹ್ವರದಲ್ಲಿಕಾಣುವ ಸುಸಾಧನವ | ನೀನೇ ಮಾಡಿಸೊ ಹರಿಯೇ 4 ಸರ್ವಾಂತರಾತ್ಮಕನೆ | ದುರ್ವಿ ಭಾವ್ಯನೆ ದೇವಸರ್ವಕರ್ಮದಿ ನಿನ್ನ | ಸಂಸ್ಕøತಿಯ ನಿತ್ತುದರ್ವಿಜೀವಿಯ ಕಾಯೋ ಸರ್ವೇಶ ಶ್ರೀಹರಿಯೆಶರ್ವನೊಡೆಯನೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಇದೇ ಸುಪಥನೋಡಿ ಸ್ವಹಿತ ಸಾಧು ಜನರ ಸುಸನ್ಮತ ವೇದಾಂತದ ಸುಸಾರಬೋಧವ್ಹೇಳಿದ ವಸ್ತು ಭಗವದ್ಗೀತಾ ಸಂದಿಸೀಹ್ಯದÀು ಸದೋದಿತ ಭೇದಿಸಿ ನೋಡಲು ತನ್ನೊಳಗ ತಾಂ ದೋರುತಿದೆ ಸಿದ್ದಾಂತ 1 ಮಮೈವಾಂಶೋ ಜೀವಲೋಕೇ ಜೀವಭೂತ ಸನಾತನ ಃ ಸ್ವಾಮಿ ಹೇಳಿದ್ದ ತಿಳಿಯಲಿಕ್ಕೆ ಆತ್ಮಾನುಸಂಧಾನದ ಖೂನ ನೇಮದಿಂದಲಿ ಹೇಳಿದ ಮಾತಿಗೆ ಮುಟ್ಟಿದನೊಬ್ಬರ್ಜುನ ತುಂಬೇದ ವಿಶ್ವದಿ ಪರಿಪೂರ್ಣ 2 ಏಕಾಂಶೇನ ಸ್ಥಿತೋ ಜಗತ ವೆಂಬ ವಾಕ್ಯದನುಭವ ಸೇವಿಸಿದೊಬ್ಬ ಶುಕದೇವ ನಾಲ್ಕುಶೂನ್ಯವು ಮೆಟ್ಟಿನೋಡಲು ಭಾಸುತಿದೆ ಸುಮನದೈವ ತಾನಾಗೀ ಹ್ಯದು ಜೀವ 3 ಜಾನಾತಿ ಪುರುಷೋತ್ತಮಂ ಮನುಷ್ಯರೊಳಗಧಮಾಧಮಾ ಕ್ರಮತಿಳಿದವನೆ ಪರಮಯೋಗಿ ಆತನೇ ಉತ್ತಮೋತ್ತಮಾ ತಾಂ ಕೇಳಿ ನಿಜಾಧ್ಯಾತ್ಮಾ 4 ` ಹರಿ ಃ ಓಂ ತತ್ಸದಿತಿ ' ವೆಂಬ ನಿಜ ತಿಳಯಬೇಕಿದೆ ಮುಖ್ಯ ಏಳುನೂರು ಶ್ಲೋಕದವಾಕ್ಯ ತ್ವರ ತಾಂ ತಿಳಿಯದು ಒಂದೇ ಮಾತಿನ ಬ್ರಹ್ಮಾದಿಕರಿಗಾಟಕ್ಯ ತರಳಮಹಿಪತಿಗಿದೆ ಸೌಖ್ಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪುಂಡರೀಕ ವರದ ವಿಠಲ | ಪೊರೆಯಿವನಾ ಪ ತೊಂಡ ವತ್ಸಲನೆ ಬ್ರಂ | ಹ್ಮಾಂಡಗಳ ಒಡೆಯಾ ಅ.ಪ. ಅನುವಂಶಿಕವಾಗಿ | ಆಧ್ಯಾತ್ಮ ಪರಿನಿಷ್ಠಧಾನವಾಂತಕ ಕೃಷ್ಣ | ಧೀನವತ್ಸಲನೇ |ನೀನೇಗತಿ ಎಂದೆಂಬ | ಸ್ವಾನುಭಾವದಿಇವಗೆಮಾನನಿಧಿ ತವದಾಸ್ಯ | ಧಾನಮಾಡುವುದೋ 1 ಪವನವಂದಿತದೇವ | ಕವನಶಕ್ತಿಯು ಇವಗೆದಿವಸದಿವಸಕ್ಕೆ ವೃದ್ಧಿ | ಭಾವವನೆ ಪೊಂದೀ |ಧೃವವರದ ನಿನ್ನಂಘ್ರಿ | ಸ್ತವನಮಾಳ್ವಂತೆಸಗಿಭವವನಿಧಿ ಉತ್ತರಿಸೊ | ಶರ್ವದೇವೇಡ್ಯಾ 2 ಮಧ್ವಮತ ದೀಕ್ಷೆಯಲಿ | ಶ್ರದ್ಧಾಳು ಎಂದೆನಿಸಿಸಿದ್ದಾಂತ ಪದ್ಧತಿಯ | ಶುದ್ಧಮತಿಯಿತ್ತೂಅಧ್ವೈತತ್ರಯ ತಿಳಿಸಿ | ಉದ್ದಾರ ಗೈಯುವುದೂಕೃದ್ಧಕಶ ಸಂಹಾರಿ | ಮಧ್ವವಲ್ಲಭನೇ 3 ಕರ್ಮ ಅಕರ್ಮಗಳ | ಮರ್ಮಗಳ ತಿಳಿಸುತ್ತನಿರ್ಮಲನು ಎಂದೆನಿಸೊ | ಪೇರ್ಮೆಯಲಿ ಇವನಾ |ಭರ್ಮಗರ್ಭನನಯ್ಯ | ನಿರ್ಮಮತೆ ವೃದ್ಧಿಸುತಪ್ರಮ್ಮೆಯಂಗಳ ತಿಳಿಸಿ | ಹಮ್ರ್ಯದೊಳು ತೋರೀ 4 ಭಾವಙ್ಞ ತೈಜಸನೆ | ನೀವೊಲಿದು ಪೇಳ್ದಂತೆಭಾವುಕಗೆ ಇತ್ತಿಪೆನೊ | ಈ ವಿಧಾಂಕಿತವಾ |ನೀವೊಲಿಯದಿನ್ನಿಲ್ಲ | ದೇವದೇವೋತ್ತಮನೆಕಾವಕರುಣೆಯೆಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಪ್ರಭು ಪಾಂಡುರಂಗ ವಿಠಲ | ಅಭಯಪ್ರದಾತಾ ಪ ಇಭವರದ ನೀನಾಗಿ | ಪೊರೆಯ ಬೇಕಿವನಾ ಅ.ಪ. ಮರ್ಮಗಳ ನರಿಯದಲೆ | ಕರ್ಮೂನುಭವದೊಳಗೆಪೇರ್ಮೆಯಲಿ ಸಿಲ್ಕಿ ಬಲು | ನೊಂದಿಹನೊ ಬಹಳಾಧರ್ಮಕೃದ್ಧರ್ಮಿ ಹರಿ | ಧರ್ಮಸೂಕ್ಷ್ಮವ ತಿಳಿಸಿನಿರ್ಮಮನ ಮಾಡಿವನ | ಕರ್ಮನಾಮಕನೇ 1 ಮಧ್ವರಾಯರ ಕರುಣ | ಬದ್ಧ ನಿರುವನು ಈತಸಿದ್ದಾಂತ ತತ್ವಗಳು | ಬುದ್ದಿಗೇ ನಿಲುಕೀಅದ್ವಯನು ನೀನೆಂಬ | ಶುದ್ಧಬುದ್ಧಿಯನಿತ್ತುಉದ್ಧಾರಮಾಡೊ ಹರಿ | ಕೃದ್ಧಖಳಹಾರೀ 2 ನಾನು ನನ್ನದು ಎಂಬ | ಹೀನಮತಿಯನು ಕಳೆದುನೀನು ನೀನೇ ಎಂಬ | ಸುಜ್ಞಾನವಿತ್ತುದಾನವಾರಣ್ಯ ಕೃ | ಶಾನು ಶ್ರೀ ಹರಿಯೇಸಾನುರಾಗದಿ ಪೊರೆಯೊ | ದೀನವತ್ಸಲ್ಲಾ 3 ಹರಿ ನಾಮ ವೆಂತೆಂಬೊ | ವಜ್ರಕವಚವತೊಡಿಸಿದುರಿತಾಳಿ ಅಟ್ಟುಳಿಯ | ದೂರಗೈ ಹರಿಯೇಸರುವ ಕಾರ್ಯಗಳಲ್ಲಿ | ಹರಿಯು ಓತಪ್ರೋತನಿರುವ ನೆಂಬುದ ತಿಳಿಸಿ | ಪೊರೆಯ ಬೇಕಿವನಾ 4 ಪಾದನಾತ್ಮಕನೆನಸಿ | ಪಾವ ಮಾನಿಯ ಪ್ರೀಯಧೀವರನೆ ಶ್ರೀವರನೆ | ಕಾವ ಕರುಣಾಳುಗೋವುಗಳ ಕಾವ ಗುರು | ಗೋವಿಂದ ವಿಠಲನೆನೀವೊಲಿಯದಿನ್ನಿಲ್ಲ | ದೇವ ದೇವೇಶಾ 5
--------------
ಗುರುಗೋವಿಂದವಿಠಲರು
ಬ್ಯಾಡವೊ ಕುವಾದಿ ಬ್ಯಾಡವೊ ಪ ಬ್ಯಾಡವೊ ಕೇಳು ಕುವಾದಿ ನೀ ನಾಡುವದುಚಿತವಲ್ಲ ಧಾದಿ | ಆಹಾ | ಮೂಢ ನಿನಿಗದಾವ ಖೋಡಿ ಬೋಧಿಸಿದನೊ ನಾಡಿಗೊಡಿಯ ರಂಗಗೀಡು ನೇನೆಂಬದುಅ.ಪ ಎಲ್ಲ ಜೀವರು ದೇವವೊಂದೆ ಭೇದ ವಿಲ್ಲೆಂದಾಡುವುದು ಧಂದೆ ಯಮ ಕೊಲ್ಲದೆ ಬಿಡ ನಿನ್ನ ಮುಂದೆ ನಿನ್ನ ಹಲ್ಲು ಮುರಿವನೊಂದೊಂದೆ || ಆಹಾ || ಉಳ್ಳಿಗಡ್ಡಿಯ ಉದ್ದಿ ಬೆಳ್ಳಗೆ ತೊಳೆದರೆ ಅಲ್ಲಕ್ಕೆ ಸರಿಯೇನೊ ಬಲ್ಲವರೊಪ್ಪಾರು 1 ಇದ್ದು ನೀ ಇಲ್ಲೆಂತೆಂಬಿ ಕಾಲಿ ಲೊದ್ದರೆ ಬಲು ನೊಂದು ಕೊಂಬಿ ಇ ಲ್ಲಿದ್ದವರೆಲ್ಲ ಬ್ರಹ್ಮ ನಾನೆಂಬಿ ಆ ಪರ ಬುದ್ಧಿಯಿಂದ ಶುದ್ಧ ಎಂತೆಂಬಿ || ಆಹಾ || ಬಿದ್ದುಹೋಯಿತು ನಿನ್ನ ಸಿದ್ದಾಂತವೆಲ್ಲವು ಸದ್ದು ಎನ್ನ ಕೂಡ ಗೆದ್ದು ಹೋಗಲಾರಿ ಬ್ಯಾಡವೊ 2 ಒಬ್ಬ ಬ್ರಹ್ಮ ಎಲ್ಲಾ ಮಾಯವೊ ಇ ನ್ನೊಬ್ಬನೆ ಎಲ್ಲಿಹ ಸುಖವೊ ಕುಹಕ ಶಾಸ್ತ್ರವೆಲ್ಲ ಮೃಷವೋ ಉಬ್ಬಿ ಆಡುವುದು ನಿರಯವು || ಆಹಾ || ಈ ಬಗೆಯಾಯಿತು ನಿನಗೊಬ್ಬಗೆ ಈ ಮಾತು ಬ್ಯಾಡವೊ 3 ಒಂದೆ ಆದರೆ ನಿನಗೆಲ್ಲ ನಿನ ತಂದೆಯಿಂದ ನೀ ಪುಟ್ಟಿದ್ದೆಲ್ಲ ನಿನ್ನ ತಂದೆ ನೀನು ಒಂದೆ ಎಲ್ಲಿ ಇನ್ನು ಛಂದಾಗಿ ನೀ ತಿಳಿಯೊ ಸೊಲ್ಲ || ಆಹಾ || ಸತಿ ನಿನಗೇನಾದಳೊ ಮನುಜ ಮಂದ ಮತಿಯೆ ತಾಯಿಗಂಡ ನೀನಾದೆಲ್ಲೋ 4 ಅನ್ನಕ್ಕೆ ಪರಬ್ರಹ್ಮನೆಂಬಿ ಈಗ ಅನ್ನ ಚಲ್ಲಲು ದೋಷವೆಂಬಿ ನಿತ್ಯ ಚನ್ನಾಗಿ ಪರಿಪೂರ್ತಿಗೊಂಬಿ ಈ ಅನ್ನ ನಾನು ವೊಂದೆ ಎಂಬೀ || ಆಹಾ || ನಿನ್ನ ದೇಹಕ್ಕೆ ರೋಗವು ಬಂದರೆ ನೀನು ಅನ್ನವ ಬಿಟ್ಟಿನ್ನು ಚನ್ನಾಗಿ ಮಲುಗುವಿ 5 ಭೇದವಿಲ್ಲೆಂತೆಂದರೆ ನೀನು ಮಾದಿಗರೆಲ್ಲ ಒಂದೇನೊ ಸರಿ ಹೋದವರೆಂಜಲ ತಿನ್ನೋ ಕಹಿ ಸ್ವಾದವು ನಿನಗಿಲ್ಲವಿನ್ನು ||ಆಹಾ|| ಓದನಾದರು ವೊಂದೆ ಮೇದ್ಯವಾದರು ವಂದೇ ಭೇದವಿಲ್ಲದೆ ತಿಂದು ಹೋದಿಯೋ ನರಕಕ್ಕೆ 6 ಎಲ್ಲವೂ ಬ್ರಹ್ಮಸ್ವರೂಪಾ ಬ್ಯಾರೆ ಇಲ್ಲೆಂದು ನಿನಗೆ ರೂಪಾ ಭೇದವಿಲ್ಲೆಂತೆಂಬುವದು ನಿಶ್ಚಯವು ವಾಕು ಸಲ್ಲದೆ ಇನ್ನು ಪೋದಾವು ||ಆಹಾ || ಬಲ್ಲಿದ ಪುರುಷನು ಮೆಲ್ಲನೆ ನಿನ್ನ ಸತಿ ಯಲ್ಲಿ ಮಲಗಿದರೆ ನೆಲ್ಲಿ ನೀ ಸೈರಿಸಿ7 ನಾಶವಿಲ್ಲೆಂಬುದೆ ಸತ್ಯ ದೋಷ ಮಿಥ್ಯ ಜಗ ಭೃತ್ಯ ಬಿಡದೆ ನಿತ್ಯ ||ಆಹಾ|| ದ್ವಾಸುಪರ್ಣವೆಂಬೊ ಈ ಶ್ರುತಿಗರ್ಥವು ಲೇಸಾಗಿ ತಿಳಿಯದೆ ಘಾಶಿಪಡುವಿ ವ್ಯರ್ಥ 8 ಈಶನು ನೀನಾದರೇನು ಸರ್ವ ದೇಶ ಪೋಷಿಸದೆ ಇಪ್ಪೋರೆ ನಿನ್ನ ಸಾ ಹಸ ವ್ಯರ್ಥ ಮಾಡೋರೆ ಹರಿ ದಾಸರು ಕಂಡು ಸಹಿಸೋರೆ ||ಆಹಾ || ಸತಿ ಸುತರು ಕ್ಲೇಶ ಪಡುವುದು ಬಿಡಿಸಲಾರಿಯೊ ಲೇಶ 9 ಗುರುದೈವವಿಲ್ಲವೊ ನಿನಗೆ ಒಬ್ಬ ಸರಿಯಿಲ್ಲ ಈ ಧರೆಯೊಳಗೆ ಯಾರು ಹಿರಿಯ ಕಿರಿಯರಿಲ್ಲ ನಿನಗೆ ನೀನು ಖರ ಶಬ್ದಕಿಂತ ಹೊರಗೆ ||ಆಹಾ || ಎರಡಿಲ್ಲಾಯೆಂಬೊದೆ ಇರುಳಿಲ್ಲ ಹಗಲಿಲ್ಲಾ ನರಕ ಸ್ವರ್ಗ ವಂದೇ ಅರಿಯಾದೆ ಮುಳುಗುವಿ 10 ವಂದನೆ ನಿಂದ್ಯಗಳೊಂದೇ ನಿನಗೆ ಗಂಧ ದುರ್ಗಂಧವು ವಂದೇ ಕೆಟ್ಟ ಹಂದಿಯೆಲ್ಲ ನೀನು ವಂದೇ ನಿನ್ನ ಕೊಂದರೆ ದೋಷವಿಲ್ಲವೆಂಬೆ ||ಆಹಾ|| ಎಂದಿಗೂ ಈ ಮಾತು ನಿಂದಾವೆ ನಿನಗಿನ್ನು ಮುಂದಕ್ಕೆ ಬರಲಾರಿ ಮಂದಮತಿಯೆ ಖೋಡಿ11 ಜಗದೊಳಗೆ ನೀ ನಿಂತು ಇದು ಜಗವಲ್ಲವೆಂಬೋದಕ್ಕಿಂತು ನೋಡಿ ನಗುವರೋ ಅಶುದ್ಧ ಜಂತು ಜಿಂಹ್ವೆ ಬಿಗಿದು ಕೋಯಿಸುವ ಯಮನಿಂತು ||ಆಹಾ || ಹಗಲು ಇರುಳು ವಂದೆ ನಗುತ ನಗುತಾ ಕಂಡು ತೊಗಲು ದೇಹವು ನಿನ್ನದಗೆ ಮಾಡುವುದು ವ್ಯರ್ಥ 12 ಸ್ವಾಮಿ ನಿನಗೆ ಬ್ಯಾರಿಲ್ಲಾ ನಿತ್ಯ ನೇಮ ಕರ್ಮವು ಬ್ಯಾರೆ ಸಲ್ಲ ಒಂದು ಕಾಮಿನಿ ನಿನಗೆ ಬೇಕಲ್ಲ ಪೂರ್ಣ ಕಾಮನು ನೀನೆಂಬೆಯಲ್ಲಾ ||ಆಹಾ|| ಗ್ರಾಮ ಭೂಮಿಗಳ್ಯಾಕೊ ತಾಮಸ ನಿನಗಿನ್ನು ತಾಮಸರಿಗೆಲ್ಲ ಸ್ವಾಮಿಯಾಗಿರು ಹೋಗೋ 13 ಕಾಣದೆ ಬಗಳುವೆ ಮಾಯಿ ನಾಯಿ ನಿನಗೆ ತಂದೆ ತಾಯಿ ಇನ್ನು ಕಾಣುತ ಬೊಗಳೋದು ನಾಯಿ ಈ ನಾಯಿ ಕಚ್ಚಿ ನೀ ಸಾಯಿ ||ಆಹಾ || ಬಾಯ ಮುರಿವಾ ನಿನ್ನ ನ್ಯಾಯದಿಂದಲಿ ವಾಯು ಕಾಯ ಖಂಡ್ರಿಸುವನೊ 14 ಇಷ್ಟು ಹೇಳಿದರೆ ನೀ ಕೇಳಿ ನೀ ವ್ಯರ್ಥ ನಿಷ್ಠುರಾಡಿ ನೀ ಬಾಳೀ ನಿನ್ನ ಕಟ್ಟಿಗೆ ಮುರಿದಂತೆ ಶೀಳಿ ಬಾಯ ಕುಟ್ಟಿ ತುಂಬುವ ಯಮಧೂಳಿ ||ಆಹಾ|| ಸೃಷ್ಟಿಗೊಡಿಯ ನಮ್ಮ ವಿಜಯವಿಠ್ಠಲನ ಮುಟ್ಟಿ ಭಜಿಸದಲೆ ಭ್ರಷ್ಟ ಮನುಜ ನೀ ಅಷ್ಟವೆಂದೆಂಬೋದು ಬ್ಯಾಡವೊ 15
--------------
ವಿಜಯದಾಸ
ಮೋಡಿಯ ಅಸಗೊಳದೈ ಪ ಮೋಡಿಯ ಅಸಗೊಳದೈ | ಕುಳಿತರು ಕೈದೆಗೆದೈ 1 ಸಿಹಿಮಾಡಲು ಬಹುದೈ | ಸೆಣಸುತ ಗೆಲಬಹುದೈ 2 ಮದದಾನೆಯ ಭೇದಿಸಬಹುದೈ | ಸಿರಸಿನ ಹೂವಿನ ಯಸಳದಿ ವಜ್ರವನೆರೆ ಛೇದಿಬಹುದೈ 3 ಮುನ್ನ ಸುತ್ತಿರಬಹುದೈ | ಹೋದರು ಜನವಹುದೈ 4 ಕರಿಕಂಬಳಿ ಬಿಳಿದಾಗುವದೆಂಬುದ ಮರಳವನಲ್ಲೈ | ನುಡಿ ಸಿದ್ದಾಂತಹುದೈ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸರ್ವಾಧಾರ ವಿಠಲ | ಶರ್ವ ನೊಡೆಯ ಪ ಸರ್ವವಿಧದಲ್ಲಿವನ | ಪೊರೆಯ ಬೇಕಯ್ಯ ಅ.ಪ. ಮಧ್ವಸಿದ್ದಾಂತದಲಿ | ಅಂಕುರವ ಪುಟ್ಟಿಹುದುಶುದ್ಧಭಾವದಲದನ | ವೃದ್ಧಿಗೈಸುತಲೀಮಧ್ವಸನ್ಮಾರ್ಗದಲಿ | ಪದ್ಮನಾಭನ ಪಾದಪದ್ಮವನೆ ಭಜಿಪಂಥ | ಅಧ್ಯಾನ ತೋರೋ 1 ಲೇಸು ಸಾಧನ ಹರಿಯ | ದಾಸ್ಯದಲಿ ಮನವಿರಿಸಿಆಶೆ ಪೂರೈಸಲ್ಕೆ | ಆಶಿಸುತ್ತಿಹನೋ |ವಸುದೇವಭಿದ ತೈ | ಜಸನ ರೂಪದಲಿ ಉಪದೇಶವಿತ್ತಂತೆ ಉಪ | ದೇಶವಿತ್ತಿಹೆನೋ 2 ಹರಿಗುರು ಸದ್ಭಕ್ತಿ | ವೈರಾಗ್ಯ ವಿಷಯದಲಿಕರುಣಿಸಿ ಪೊರೆಯೊ ಹರಿ | ಮರುತಂತರಾತ್ಮನಿರುತ ಸಜ್ಜನ ಸೇವೆ | ದೊರಕಿಸುತ ಸಾಧನವಪರಿಪರಿಯಲಿಂಗೈಸಿ | ಪೊರೆಯೊ ಸರ್ವೇಶಾ 3 ಕಂಸಾರಿ ಮನಮಾಡಿವಂಶ ಉದ್ದರಿಸಿವಗೆ | ಹಂಸಜನ ವಂದ್ಯಹಂಸೋಪಸನೆ ಮಾಳ್ವ | ಶ್ವಾಸ ಮಾನೀ ವಾಯುಶಂಸನವ ಕೈಗೊಂಡು | ಜೀವರೋದ್ಧಾರೀ 4 ಕ್ಲೇಶಮೋದದಿ ಸಮತೆ | ಲೇಸಾಗಿ ಕೊಟ್ಟಿವಗೆಪೋಷಿಸೋ ಹಯವದನ | ಬಾಸುರಾಂಗ ಹರೀಮೇಶ ಮಧ್ವೇಶ ಉಪ | ದೇಶ ಸಾರ್ಥಕ್ಯವನುಆಶಿಸುವೆ ಕರುಣಿ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಇಷ್ಟುಪಾಪವನು ಮಾಡಿದುದೆ ಸಾಕೊ |ಸೃಷ್ಟಿಗೀಶನೆ ಎನ್ನನುದ್ಧರಿಸಬೇಕೊ ಪಒಡಲಕಿಚ್ಚಿಗೆ ಪರರ ಕಡು ನೋಯಿಸಿದೆ ಕೃಷ್ಣ |ಕೊಡದೆ ಅನ್ಯರ ಋಣವನಪಹರಿಸಿದೆ |ಮಡದಿಯ ನುಡಿಕೇಳಿಒಡಹುಟ್ಟಿದವರೊಡನೆ |ಹಡೆದ ತಾಯಿಯ ಕೂಡಹಗೆಮಾಡಿದೆ1ಸ್ನಾನಸಂಧ್ಯಾನಜಪ ಮಾಡದಲೆ ಮೈಗೆಟ್ಟೆ |ಜ್ಞಾನಮಾರ್ಗವನಂತು ಮೊದಲೆ ಬಿಟ್ಟೆ ||ಏನ ಹೇಳಲಿ ಪರರ ಮಾನಿನಿಗೆ ಮನಸಿಟ್ಟೆ |ಶ್ವಾನ- ಸೂಕರನಂತೆ ಹೊರೆದೆ ಹೊಟ್ಟೆ2ವ್ರತ ನೇಮ ಉಪವಾಸ ಒಂದು ದಿನ ಮಾಡಲಿಲ್ಲ |ಅತಿಥಿಗಳಿಗನ್ನವನು ನೀಡಲಿಲ್ಲ |ಶೃತಿ ಶಾಸ್ತ್ರ ಪುರಾಣ ಕಥೆಗಳನು ಕೇಳಲಿಲ್ಲ |ವೃಥವಾಗಿ ಬಹುಕಾಲ ಕಳೆದನಲ್ಲ 3ಶುದ್ಧ ವೈಷ್ಣವ ಕುಲದಿ ಉದ್ಭವಿಸಿದೆನೋ ನಾನು |ಮಧ್ವ ಮತಸಿದ್ದಾಂತ ಪದ್ಧತಿಗಳ ||ಬುದ್ಧಿಪೂರ್ವಕ ತಿಳಿದು ಪದ್ಮನಾಭನು ದಿನದಿ |ಕದ್ದುಂಡು ಕಾಯವನು ವೃದ್ಧಿಮಾಡಿದನಯ್ಯ 4ತಂದೆ - ತಾಯ್ಗಳ ಸೇವೆ ಒಂದು ದಿನ ಮಾಡಲಿಲ್ಲ |ಮಂದಭಾಗ್ಯದಬವಣೆತಪ್ಪಲಿಲ್ಲ ||ಹಿಂದೆ ಮಾಡಿದ ದೋಷ ಬಂದುಳಿಯದರುಹಿದೆನು |ತಂದೆ ಪುರಂದರವಿಠಲ ಮುಂದೆನ್ನ ಕಾಯೊ 5
--------------
ಪುರಂದರದಾಸರು
ಮಧ್ವಮತದ ಸಿದ್ದಾಂತದ ಪದ್ಧತಿ |ಬಿಡಬೇಡಿ ಬಿಡಬೇಡಿ ಪ.ಹರಿ ಸರ್ವೊತ್ತಮನಹುದೆಂಬ ಙ್ಞÕನವ |ತಾರತಮ್ಯದಲಿ ತಿಳಿವ ಮಾರ್ಗವಿದು 1ಘೋರ ಯಮನ ಬಾಧೆ ದೂರಕೆ ಮಾಡಿ ಮು -ರಾರಿಯ ಚರಣವ ಸೇರುವ ಮಾರ್ಗವು 2ಭಾರತೀಶ ಮುಖ್ಯ ಪ್ರಾಣಾಂತರ್ಗತ |ನೀರಜಾಕ್ಷನಮ್ಮ ಪುರಂದರವಿಠಲನ3
--------------
ಪುರಂದರದಾಸರು