ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧ್ಯಾನ ಮಾಡಿರೊ ರಂಗಯ್ಯನ ಪ ಗಾನ ವಿಲೋಲನ ದೀನಾರ ಪೊರೆವೊನ ಅ.ಪ. ಮೀನ ರೂಪವ ತಾಳಿ ದಾನವಾಖ್ಯನ ಸೀಳಿ ಮಾನವ ಪೊಂದಿದ ಜಾಣ ರಂಗೈಯ್ಯನ 1 ಕೂರ್ಮ ತಾನಾಗಿ ಗಿರಿಯ ಬೆನ್ನಲಿ ಪೊತ್ತು ಸುರರನ್ನೆ ಪೊರೆದ ಗಂಭೀರ ರಂಗೈಯ್ಯನ 2 ವರಾಹ ರೂಪದಿ ಕೋರೆಯ ಕೊನೆಯಲಿ ಧರಣಿಯನೆತ್ತಿದ ಶೂರ ರಂಗೈಯ್ಯನ 3 ನರಹರಿ ರೂಪದಿ ಘೋರ ದೈತ್ಯನ ಸೀಳಿ ತರಳನ ಸಲಹಿದ ಕರುಣಿ ರಂಗೈಯ್ಯನ 4 ಪುಟ್ಟ ಹಾರುವನಾಗಿ | ದಿಟ್ಟ ಬಲಿಗೆ ಒಲಿದು ಕೊಟ್ಟ ವರಗಳ ದಿಟ್ಟ ರಂಗೈಯ್ಯನ 5 ಪರಶು ಪಿಡಿದು ಭೂವರರ ಗೆಲಿದು ಭೂ ಸುರರನ್ನೆ ಸಲಹಿದ ಧೀರ ರಂಗೈಯ್ಯನ6 ಮಾನವ ರೂಪದಿ ದಾನವಾಂತಕನಾಗಿ ದೀನರ ಪೊರೆದ ಸುಜ್ಞಾನಿ ರಂಗೈಯ್ಯನ 7 ಕಂಸನ ವಂಶ ನಿರ್ವಂಶಾಕೋಸುಗ ಯದು ವಂಶದೊಳು ತಾನು ಜನಸಿದನು ಹಿಂಸೆ ಮಾಡುತಲಿರ್ದ ಹಂಸ ಡಿಬಿಕರನ್ನು ಧ್ವಂಸ ಮಾಡಿದ ಮುರಧ್ವಂಸಿ ಕೃಷ್ಣಗೆ 8 ಸತಿಯರ ವ್ರತದಿಂದ ಪತಿತರಳಿಯದಿರೆ ಗತಿ ತೋರದೆ ಭವಕಾತರಿಸೆ ಅತಿ ನಗ್ನದಿ ಬಂದು ವ್ರತಭಂಗ ಮಾಡಿದ ಸಿರಿ ಕಂಠÀನುತನಾದ ಸಿತವಾಹನ ಸಖನ 9 ವೇದ ಬಾಹಿತರನ್ನು ಭೂದೇವಿ ಧರಿಸದೆ ಮಾಧವ ಪೊರೆಯೆಂದು ಮೊರೆಯಿಡಲು ಚದುರತನದಿ ಸತಿಯ ಕುದುರೆಯ ಮಾಡಿತಾ ಕೊಂಡ ಕದನದಿ ಕೊಂದವನ 10 ಮಂಗಳ ಮಹಿಮನ ಶೃಂಗಾರ ಪ್ರಿಯನ ಅಂಗಜಾರಿಯ ಧನುರ್ಭಂಗನ ಅಂಗಳದೊಳು ಮೂರ್ಲೋಕಂಗಳ ತೋರಿದ ತುಂಗ ವಿಕ್ರಮನಾದ ರಂಗೇಶವಿಠಲನ 11
--------------
ರಂಗೇಶವಿಠಲದಾಸರು
ಹರೇ ಹರೇ ಕೃಷ್ಣ ಹರೇ ಕೃಷ ಹರೇ ಹರೇ ಹರೇ ಪ ಕೌಸಲ್ಯ ವರವಂಶೋದ್ಭವ ಸುರ ಸಂಸೇವಿತ ಪದರಾಮ ಹರೇ ವಂಶೋದ್ಭವ ಶ್ರೀ ಕೃಷ್ಣಹರೇ 1 ಮುನಿಮಖರಕ್ಷಕ ದನುಜರಶಿಕ್ಷಕÀ ಘಣಿಧರ ಸನ್ನುತರಾಮಹರೇ ಘನವರ್ಣಾಂಗ ಸುಮನಸರೊಡೆಯ ಶ್ರೀ - ವನಜಾಸನ ಪಿತ ಕೃಷ್ಣ ಹರೇ 2 ಶಿಲೆಯ ಪಾದರಜದಲಿ ಸ್ತ್ರೀ ಮಾಡಿದ ಸುಲಲಿತ ಗುಣನಿಧಿ ರಾಮ ಹರೇ ಬಲುವಕ್ರಾಗಿದ್ದ ಬಲೆಯ ಕ್ಷಣದಲಿ ಚಲುವೆಯ ಮಾಡಿದ ಕೃಷ್ಣ ಹರೇ 3 ಹರಧನುಭಂಗಿಸಿ ಹರುಷದಿಜಾನಕಿ ಕರವಪಿಡಿದ ಶ್ರೀರಾಮ ಹರೇ ಸಿರಿ ರುಕ್ಮಿಣಿಯನು ತ್ವರದಲಿ ವರಿಸಿದ ಶರಣರ ಪಾಲಕ ಕೃಷ್ಣ ಹರೇ 4 ಜನಕ ಪೇಳೆ ಲಕ್ಷ್ಮಣ ಸೀತಾ ಸಹ ವನಕೆ ತೆರಳಿದ ರಾಮ ಹರೇ ವನಕೆ ಪೋಗಿ ತನ್ನಣುಗರೊಡನೆ ಗೋ - ವನು ಪಾಲಿಪ ಶ್ರೀ ಕೃಷ್ಣ ಹರೇ5 ತಾಟಕೆ ಖರಮಧು ಕೈಟಭಾರಿಪಾ ಪಾಟವಿ ಸುರಮಖ ರಾಮಹರೇ ಆಟದಿ ಫಣಿಮೇಲ್ ನಾಟ್ಯವನಾಡಿದ ಖೇಟವಾಹ ಶ್ರೀ ಕೃಷ್ಣ ಹರೇ 6 ಚದುರೆ ಶಬರಿಯಿತ್ತ ಬದರಿಯ ಫಲವನು ಮುದದಿ ಸೇವಿಸಿದ ರಾಮ ಹರೇ ವಿದುರನ ಕ್ಷೀರಕೆ ವದಗಿ ಪೋದ ಶ್ರೀ ಪದುಮನಾಭ ಜಯ ಕೃಷ್ಣ ಹರೇ 7 ಸೇವಿತ ಹನುಮ ಸುಗ್ರೀವನ ಸಖಜಗ - ತ್ಪಾವನ ಪರತರ ರಾಮಹರೇ ದೇವ ದೇವ ಶ್ರೀ ಕೃಷ್ಣ ಹರೇ 8 ಗಿರಿಗಳಿಂದ ವರಶರಧಿ ಬಂಧಿಸಿದ ಪರಮ ಸಮರ್ಥ ಶ್ರೀರಾಮ ಹರೇ ಗಿರಿಯ ತನ್ನ ಕಿರಿ ಬೆರಳಿಲೆತ್ತಿ ಗೋ - ಪರನ ಕಾಯ್ದ ಶ್ರೀ ಕೃಷ್ಣ ಹರೇ 9 ಖಂಡಿಸಿದಶಶಿರ ಚಂಡಾಡಿದ ಕೋ - ದಂಡಪಾಣಿ ಶ್ರೀ ರಾಮ ಹರೇ ಪಾಂಡುತನಯರಿಂ ಚಂಡಕೌರವರ ದಿಂಡುಗೆಡಹಿಸಿದ ಕೃಷ್ಣ ಹರೇ 10 ತವಕದಯೋಧ್ಯಾ ಪುರಕೈದಿದ ತ - ನ್ಯುವತಿಯೊಡನೆ ಶ್ರೀ ರಾಮ ಹರೇ ರವಿಸುತ ತನಯಗೆ ಪಟ್ಟವಗಟ್ಟಿದ ಭವತಾರಕ ಶ್ರೀ ಕೃಷ್ಣ ಹರೇ 11 ಭರತನು ಪ್ರಾರ್ಥಿಸಲರಸತ್ವವ ಸ್ವೀ - ಕರಿಸಿದತ್ವರದಲಿ ರಾಮ ಹರೇ ವರಧರ್ಮಾದ್ಯರ ಧರಿಯೊಳು ಮೆರೆಸಿದ ಪರಮಕೃಪಾಕರ ಕೃಷ್ಣ ಹರೇ 12 ಧರೆಯೊಳಜ್ಞಜನರನು ಮೋಹಿಪುದಕೆ ಹರನ ಪೂಜಿಸಿದರಾಮ ಹರೇ ಹರನ ಪ್ರಾರ್ಥಿಸಿವರವನು ಪಡೆದಾ ಚರಿತೆಯಗಾಧವು ಕೃಷ್ಣ ಹರೇ 13 ಅತುಳಮಹಿಮ ಸದ್ಯತಿಗಳ ಹೃದಯದಿ ಸತತ ವಿರಾಜಿಪÀರಾಮಹರೇ ಸಿತವಾಹನ ಸಾರಥಿಯೆನಿಸಿದ ಸುರತತಿ ಪೂಜಿತ ಪದ ಕೃಷ್ಣ ಹರೇ 14 ರಾಮ ರಾಮ ಯಂದ್ನೇಮದಿ ಭಜಿಪರ ಕಾಮಿತ ಫಲದ ಶ್ರೀ ರಾಮಹರೇ ಪ್ರೇಮದಿ ಭಕ್ತರ ಪಾಲಿಪ ಶ್ರೀ ವರ - ದೇಶವಿಠಲ ಶ್ರೀ ಕೃಷ್ಣ ಹರೇ 15
--------------
ವರದೇಶವಿಠಲ
(ಈ) ಶಾಂತಭಾವ81ಆವ ನರನ ಬಂಡಿಯ ಬೋವನುದೇವ ಬಿಡದೆ ನಮ್ಮನು ಕಾವನು ಪ.ನಾಕಪತಿಯ ಮುದವಳಿಯಲು ಕೋಪದಿನಾಕು ಮೂರುದಿನ ಮಳೆಗರೆಯಲುಆ ಕಮಲಾಕ್ಷ ಕರುಣದಿ ಗಿರಿಯನೆತ್ತಿಗೋಕುಲವಿಸರ ಭಯವ ಕಳೆದಹರಿ1ದುಷ್ಟ ಸುಯೋಧನನನುಜ ಸಭೆಯೊಳು ಯುಧಿಷ್ಠಿರ ಸತಿಯ ಲಜ್ಜೆಯಕೆಡಿಸೆಕಷ್ಟಿಸಿ ದ್ವಾರಕೆಕೃಷ್ಣ ಪೊರೆಯೆನಲುಶಿಷ್ಟಳಿಗಂಬರವಿತ್ತಭಿಮಾನಿ 2ಅಹ:ಪತಿಯ ಸುತ ಬವರದೊಳಗೆ ಸಿತವಾಹನನ ಶಿರ ಕೆಡೆಯೆಸೆಯೆಮಹಾಮಹಿಮ ರಥವಿಳೆಗೊತ್ತಿ ಭಕ್ತನಸ್ನೇಹದಿ ತಲೆಯನುಳುಹಿದ ದಯಾನಿಧಿ 3ಕಲಶಜಭವ ವೈರಾಟೆಯ ಬಸುರಿಗೆನಳಿನಭವಾಸ್ತ್ತ್ರವ ಬಿಡೆ ಕಂಡುಅಳುಕದವೋಲರಿಯಿಂದ ನಿವಾರಿಸಿಸುಲಭದಿ ಮಗುವ ಸಲಹಿದ ಸರ್ವೋತ್ತಮ 4ತನ್ನ ನಂಬಿದರಿಗಿನಿತು ಕುಂದಾದರೆತನ್ನದೆಂದರಿದಾವ ಕಾಲದಲಿಮನ್ನಿಸಿ ಪೊರೆಉರಗಾದ್ರಿಯೊಳೆಸೆವ ಪ್ರಸನ್ನ ವೆಂಕಟ ಭೂವರಾಹಾನಂತರೂಪ 5
--------------
ಪ್ರಸನ್ನವೆಂಕಟದಾಸರು