ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನಾದರೂ ಮನದ ಚಂಚಲವ ನಿಲ್ಲಿಸೋ ನೆನ್ನೆ ಕಳೆಯಿತು ನಾಳೆ ಇನ್ನೇನು ಗತಿಯೋ ಪ ಗುರುಹಿರಿಯರನು ಕಂಡು ಶಿರಬಾಗಿ ವಂದಿಸಲು ಚಿರಬಾಳು ನೂರ್ವರ್ಷ ಎಂದೆಂಬರು ಧರೆಯಿಂದ ಜವನವರು ಕರೆಯ ಬರುವಾದಿನವೆ ಬರಿದಾಗುವುದು ನೂರು ವರ್ಷವದರಿಂದ 1 ಧನಕನಕ ಮನೆ ಮಾಟ ಎನಗೆ ಚಿರವೆಂದೆನುತ ಮನವಿಂದ್ರಿಯಂಗಳನು ನಡಸಿತೆಲ್ಲೆಡೆಗೆ ತನಗಾಗಿಯೇ ಸಕಲ ಜನರು ಜನಿಸಿದರೆಂದು ನೆನೆದು ಹಿಂಸಿಸಿತವರ ಓ ಮಾಂಗಿರೀಶ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಏಕಮೇವಾ | ಅದ್ವಿತೀಯನೆ ಪಾಹಿ | ಏಕಮೇವ ಪ ಏಕಮೇವ ತ್ರೈಲೋಕ ಜನಕ ಕರುಣಾಕರ ಹರಿಯೇ ಅ.ಪ. ಮಾನ್ಯ ಮಾನದ | ನಾನ್ಯಪ ಹರಿ ಸತ್‍ಶೂನ್ಯಾಭಿಧ ಸರಿ | ವಾಣ್ಯಾದಿಯ ಹರ 1 ಭವ ಸುರ | ಕರಣಶಕ್ತಿ ಹರ 2 ಉದರದೊಳಗೆ ಜಗ | ಹುದುಗಿಸಿ ಸರ್ವವಅದುಭುತ ತಮದಲಿ | ವಿಧಿಸಿದ ಹರಿಯೇ 3 ಪ್ರಲಯೋದಧಿ ಶಯ | ಚೆಲುವ ಬಾಲ ಬಲ್‍ಒಲವಿನಿಂದ ಪದ ಬೆ | ರಳನೆ ಸವಿದಾ 4 ಸೃಷ್ಟಿಗೊಡೆಯ ಲಯ | ಅಷ್ಟ ಭಾಗವಿರೆಚೇಷ್ಟಿಸಿ ದುರ್ಗೆಯ | ಹೃಷ್ಟಳ ಮಾಡಿದೆ 5 ಕರ್ಮ ತವಕೃತ್ಯವನಂತವು | ಭೃತ್ಯರ ಸುದತರು 6 ಕಮಲಾರಮಣನೆ | ಕಮಲಜಾದಿ ನುತನಿಮಿಷೋನ್ಮಿಕರ | ಸುಮನಸಕಪ್ಪುದೆ 7 ದುರ್ಗೆ ತುತಿಸೆ | ಕರ್ಗತ್ಲೆ ಕುಡಿದು ನಿಜಸರ್ಗಕೆಣಿಸಿದೇ | ದುರ್ಗಮ ಮಹಿಮ 8 ಮುಕ್ತರೊಡನೆ ಸೇ | ವ್ರ್ಯಕ್ತಿಗಳಲಿ ಅಭಿವ್ಯಕ್ತನು ಲೀಲಾ | ಸಕ್ತ ಸುಪುರುಷಾ 9 ಗೂಹಿಸಿ ಸರ್ವವ | ವ್ಯೂಹ ಚತುರಕೆಮೋಹಿಸಿ ಪುಮಜನ | ಬಾಹಿರ ತೆಗೆದ 10 ಪತಿ ತಾ ಸರ | ಸ್ವತಿ ಭಾರತಿ ಎಂಬಸುತೆಯರ ಪಡೆದು | ಸುತರೊಡನೈರಸಿದ12 ಪುಮಜಗೆ ಪ್ರಕೃತಿಯಿಂ | ಸುಮನಸ ಶೇಷನುಕ್ರಮದಿ ಸೂತ್ರನಿಂ ಜ | ನುಮವು ಕಾಲಿಗೆ 13 ಎರಡು ಒಂದು ತನು | ಹರನಿಗೆ ಬಂದವುಸರಸಿಜ ಸಂಭವ | ಮರುತೋರಗದಿಂ14 ಪತಿ ಸೇವೆಗೆ 15 ವಿಧ ವಿಧ ಜೀವರು | ಉದುಭವವಾದರುವಿಧಿ ಪಿತ ಮಹಿಮೆಯ | ಅದು ಭುತ ಕೇಳೀ 16 ಮುದದಿ ಇಟ್ಟ ತನ್ | ಉದರದೊಳೆಲ್ಲರಅದುಭುತ ಚರಿತ ಅನಿ | ರುದ್ಧ ಮೂರುತಿ 17 ಗುಣೋಪಾದಾನದಿ | ತನು ಸೂಕ್ಷ್ಮಗಳನುಅನಿರುದ್ಧನು ನಿ | ರ್ಮಾಣವ ಮಾಡಿದ 18 ಪರಿ ಬಹು ಲಿಂ | ಗೋಪ ಚಯಿವಗೈದಾಪರ ಬೊಮ್ಮನು | ಸ್ಥಾಪಿಸಿದನು ಜಗ 19 ಪದುಮ ಕಲ್ಪ ಮುನ್ | ಉದುಭವಿಸಿತು ಮತ್‍ತದನನು ಸಿತವರ | ಹದ ಕಲ್ಪೋದಯ 20 ಸರಸಿಜ ಭವನಿಂ | ವಿರಚಿಸಿದನು ಜಗವೈಡೇಳ್ಭುವನವು | ಭರಿತವು ಜೀವರಿಂ 21 ಈ ವಿಚಿತ್ರ ಸ | ರ್ಗಾವವ ತಿಳಿಯಲುಸೇವಿಸುವುದು ಸತ್ | ಕೋವಿದ ಜನಪದ 22 ಪಾವಮಾನಿ ನಿಜ | ಭಾವಕೆ ಸರಿಯಾಹಸೇವೆಗೊಲಿದ ಗುರು | ಗೋವಿಂದ ವಿಠ್ಠಲ 23
--------------
ಗುರುಗೋವಿಂದವಿಠಲರು
ಪೋದರಯ್ಯ ತೆರಳಿ ಪೋದರು | ಸಾಧುನರಸಿಂಹಾರ್ಯರು ಮಾಧವನ ಮಂದಿರಕೆ ಪ ಶ್ರೀಕರ ಕೃಷ್ಣಾತಟದಿ ಐಕೂರು ಗ್ರಾಮದಿ ನೆಲೆಸಿ | ಏಕೋ ಭಾವದಿಂ ಸದಾ ಶ್ರೀಕಾಂತನ್ನ ಧ್ಯಾನಂಗತರು 1 ಭಾಗವತ ಸಾರೋದ್ಧಾರ ಸತ್‍ಶಿಷ್ಯರಿಗೆ ಸಾರುತ ಸದ್ಭಕ್ತಿಜ್ಞಾನ | ವೈರಾಗ್ಯಮಾರ್ಗವ ತೋರಿ 2 ಮಧ್ವಮತದಿ ಸಿದ್ಧಾಂತ ಪದ್ಧತಿಯನುಸರಿಸಿ | ಸದ್ಧರ್ಮದಿ ನಡೆಸುವ ಪ್ರಸಿದ್ಧ ವಿದ್ವಾಂಸರು 3 ವ್ಯಾಸದಾಸಕೂಟ ಮರ್ಮಲೇಸಾಗಿ ಸಜ್ಜನ ತತಿಗೆ ಬ್ಯಾಸರಿಲ್ಲದಲೆ ಪ್ರತಿವಾಸರುಪದೇಶಿಸುವರು 4 ನಿತ್ಯಗೈವ ಕೃತ್ಯಂಗಳು | ತತ್ವೇಶ್ವರ ದ್ವಾರಾ ಹರಿಗೆ ಚಿತ್ತಪೂರ್ವಕರ್ಪಿಸುವ ಸೋತ್ತುಮರೋತ್ತುಮರು ಲೋಕಕೆ 5 ಅಂತರಂಗದಲ್ಲಿ ಲಯದ ಚಿಂತನೆಯಗೈದು ಮುಕ್ತಿ ಪಂಥವನ್ನೆ ಪಿಡಿದು | ಜ್ಞಾನ ಸಂತತಿಯ ಜಗದಿ ನೆಲೆಸಿ 6 ಯಾವ ಸಂಶಯವ್ಯಾಕೆ ಕೋವಿದವರ್ಯರಾದ | ಭಾವಜ್ಷರ ಮುಖದಿಂದ ದೇವಾಂಶರೆನಿಸಿಕೊಂಡವರು 7 ವ್ಯಯ ಸಂವತ್ಸರಂತ್ಯಮಾಸ | ದ್ವಯತಿಥಿ ಸಿತವರ್ಷ ಹಯಸಪ್ರಸುತನ ವಾರದಿ ತ್ರಯ ಝಾವ ರಜನಿಯಲ್ಲಿ 8 ಆಸನಸ್ಥರರಾಗಿ ನಾಸಿಕಾಗ್ರದಲಿಟ್ಟು ಶ್ವಾಸಮಂತ್ರ ಜ ಪಿಸಿ ಬಿಂಬೋಪಾಸನಗೈವ ಬುಧರು 9 ಸಾಗರಶಯನನ ಧ್ಯಾನ ಯೋಗ ಬಲದಿ ತಿಳಿದು ಭುವಿ ಭೋಗ ತೀರಿತೆಂದು ಕೊಯಿಲು ತಾಗಿದ್ದೊಂದೆ ನೆವನದಿಂದ 10 ಆಶೆಕ್ರೋಧಂಗಳನಳಿದು | ಕ್ಲೇಶಮೋದ ಸಮ ತಿಳಿದು | ಭೂಸುರ ವೃಂದಕೆ ಸುಗ್ರಾಸವಿತ್ತು ತೋಷಿಸುವರು 11 ಹರಿಯಪುರಕೆ ಪೋಪ ಸಮಯ ಹರಿಸು ಬಂದು ಕೃಪ್ಣೆ ಇವರ ಚರಿಯ ನರೆÉದ ಜನಕೆ ತೋರಿ 12 ಸ್ವಾಮಿಶಾಮಸುಂದರನ | ನಾಮದ ಸನ್ಮಹಿಮ ಸತತ | ಪಾಮರ ಜನಕೆ ಪೇಳಿ ಪ್ರೇಮದಿಂ ಸಲಹಿದವರು 13
--------------
ಶಾಮಸುಂದರ ವಿಠಲ