ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೀಗೆ ಮೊರೆ ಇಡಲೋ | ನಿನ್ಹೊರತಿನ್‍ಆರೀಗೆ ಮೊರೆ ಇಡಲೋ ಪ ಮಾರ ಜನಕೆ ಹರೇ ಅ.ಪ. ಭಾರ ಬೆನ್ನಿಲಿ ಪೊತ್ತುಧಾರುಣಿಯನೆ ಚಿಮ್ಮಿ | ದುರುಳನ ತಂದೆಯೋ 1 ಕರವ ಚಾಚಿದೆ ದೇವಾ 2 ಪರಶುವ ಸಿಡಿದು ನೀ | ತರಿದೆಯೊ ತಾಯ್ ಕೊರಳಶರದಿಯ ಬಂಧಿಸಿ | ದುರುಳರ ತರಿದೆಯೋ 3 ಪೂಥಣಿ ಶಕಟ ಧೇನುಕ ವತ್ಸ ಭಂಜನಮಥಿಸಿ ಕಂಸನ ನಿನ್ನ ಮಾತಾಪಿತರ ಕಾಯ್ದೆ 4 ಬೆತ್ತಲೆ ತಿರುಗಿ ನೀ | ಉತ್ತಮ ಹಯವೇರಿವತ್ತಿ ದುರುಳನ ಶಿರ | ಕತ್ತರಿಸಿದೆ ದೇವಾ 5 ಆರತ ಜನ ನಿನ್ನ | ಈ ರೀತಿ ಪೇಳ್ವರುವಾರುತೆ ಕೇಳಿ ನಾ | ಮೊರೆಯಿಟ್ಟು ಅರುಹುವೆ 6 ಮುರಹರ ಶ್ರೀಕೃಷ್ಣ | ಗುರು ಗೋವಿಂದ ವಿಠಲಸರುವ ದೇವೋತ್ತಮ | ಕರುಣದಿ ಸಲಹೆನ್ನ 7
--------------
ಗುರುಗೋವಿಂದವಿಠಲರು
ಗೋಪಿ ನೋಡಮ್ಮಾ ಪ ಗೋಪಿ ನೋಡಮ್ಮಾ ದೇವ ದೇವೋತ್ತಮನಾದ ಕೇವಲ ಪರಬ್ರಹ್ಮ| ದೇವಿಮಗನಾಗಿ ಬಂದಿಹನೆ ನರರಂದದಿ ನಮ್ಮಾ ಭಾವಿಸಿ ಬ್ರಹ್ಮನ ಜನಕನ ಶಿಶುವೆಂದು ಮುದ್ದಾಡಿಸುವಾ ಸಂಭ್ರಮಾ1 ಮುಖಸಾರಭೋಕ್ತನಿಗೆ ಮೊಲೆ ಹಾಲನುಣಿಸಿ| ಮಜ್ಜನ ಗೈಸಿ| ಪ್ರಕಟಿದಿ ಶೇಷಶಾಯಿಗೆ ತೊಟ್ಟಿಲದಿ ಮಲಗಿಸಿ| ಸುಖಯೋಗ ನಿದ್ರೆಯುಳ್ಳಂಗೆ ಮಲಗೆಂದು ಜೋ ಜೋ ಎಂಬಳಾಕೆ 2 ಆವ ಯೋಗ ಮಾಯದಲಿ ಮೂಜಗವಾಡಿಸುವ| ಆವ ಮುಂಜರಗ ಸಿಡಿದು ಬೆಣ್ಣೆ ಬೇಡುತ ಕುಣಿವಾ| ಗೋಪಿ ಕೈಯೊಳಾಡುವಾ| ಆವನಲಿ ಮಹಿಪತಿ-ಸುತ ಪ್ರಭು ಲೀಲೆಯ ಕಣ್ಣಲಿ ನೋಡಿ ಸುಖಿಸುವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದಾರೇನೆಂಬುರೈ|ಹರಿ ಭಕ್ತರಿಗೆ|ದಾರಲ್ಲವೆಂಬುರೈ ಪ ಗುರುವಿನಂಘ್ರಿವಿಡಿದು|ಗುರುತುಕೀಲವರಿತು ನಿಜಾ| ಪರಮಾನಂದ ಸುಖಾ|ಸುರಸನುಂಬುವರಿಗೇ 1 ಕುತ್ಸಿತ ಮಾರ್ಗವನೆಲ್ಲಾ|ಕೊಚ್ಚಿಜರಿದು ಧರಿಯೊಳು| ಅಚ್ಯುತ ಪರದೈವನೆಂದು|ನೆಚ್ಚಿದ ಮಹಿಮೆಗೆ 2 ಮಾಧವ ಮುದ್ರೆಯಿಂದ|ದ್ವಾದಶ ನಾಮವನಿಟ್ಟು| ಪದುಮಾ ತುಳಸೀಸರ|ಹೃದಯದಲ್ಲಿ ಮೆರೆವಂಗೆ 3 ನಷ್ಟನೃಪರಾ ಮನೆಯಾ|ತನಿಷ್ಟೆಯೊಳು ಲೆಕ್ಕಿಸದೆ| ಹುಟ್ಟಿದ ಲಾಭದಲ್ಲಿ|ತುಷ್ಟಿ ಬಟ್ಟಿರುವಂಗೆ 4 ಅವರವರಂತೆ ಲೋಕ|ದವರಿಗೆ ತೋರುತಾ| ವಿವರಿಸಿ ವಿವೇಕ ಹಾದಿ|ಭವದಾ ಬೇರಿಳಿದಂಗೆ 5 ತಾಳದಂಗಡಿಗೆಯ ಸಿಡಿದು|ಮೇಳ ಭಾಗವತರೊಳು| ಶ್ರೀಲೋಲನನು ಪಾಡಿ|ನಲಿದಾಡುತಿಹರಿಂಗೆ 6 ತಂದೆ ಮಹಿಪತಿ ನಿಜಾ|ನಂದನ ಸಾರಿದ ನುಡಿ| ಹೊಂದಿ ಭಾವಭಕ್ತಿಯಿಂದ|ಛಂದವಾಗಿಪ್ಪರಿಂಗೆ7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮುಳ್ಳು ಮೊನಿಯ ಮ್ಯಾಲ ಮೂರು ಕೆರಿಯ ಕಟ್ಟಿಎರಡು ಹೂಳು, ಒಂದು ತುಂಬಲೆ ಇಲ್ಲ 1 ತುಂಬದ ಕೆರೆಗೆ ಮೇಯಾಕ ಬಂದವು ಮೂರು ಎಮ್ಮಿಎರಡು ಗೊಡ್ಡು ಒಂದು ಕಂದು ಹಾಕಿ ಕರುವೇ ಇಲ್ಲ 2 ಕರುವಿಲ್ಲದ ಎಮ್ಮಿಯ ಕೂಡಿದರ ಮೂವರು ಹೆಣ್ಮಕ್ಕಳಾಇಬ್ಬರು ಬಂಜಿಯರು, ಒಬ್ಬಾಕಿ ಹಡೆದೇ ಇಲ್ಲ 3 ಹಡೆಯದ ಹೆಣ್ಣ ಕೂಡಿಕೊಂಡರು ಮೂವರು ಕುಂಬಾರರುಇಬ್ಬರು ಚೊಂಚರು, ಒಬ್ಬಗೆ ಕೈಯೇ ಇಲ್ಲ 4 ಕೈಯಿಲ್ಲದ ಕುಂಬಾರ ಮಾಡಿಕೊಟ್ಟ ಮೂರು ಮಡಿಕಿಗಳಎರಡು ದದ್ದು, ಒಂದಕೆ ತಳವೆ ಇಲ್ಲ5 ತಳವಿಲ್ಲದ ಮಡಕಿಗಿ ಕೊಟ್ಟಾರ ಮೂರು ರೊಕ್ಕಎರಡು ನಕಲು, ಒಂದು ಸವಕಲು 6 ಸವಕಲು ರೊಕ್ಕದಾಗ ಕುಚ್ಚಲಿಕೆ ತಂದಾರ ಮೂರ ಕಡುಬಎರಡು ಕುದಿಯಲಿಲ್ಲ ಒಂದು ಬೇಯಲಿಲ್ಲ 7 ಬೇಯದ ಕಡುಬಿಗಿ ಬಂದಾರ ಮೂವರು ಬೀಗರಇಬ್ಬರು ಬೊಚ್ಚರು, ಒಬ್ಬಗೆ ಹಲ್ಲೇ ಇಲ್ಲ 8 ಹಲ್ಲಿಲ್ಲದ ಬೀಗನಿಗೆ ಕೊಟ್ಟಾರ ಮೂರು ಚಿಕಣಿ ಅಡಕಿಎರಡು ಗೋಟು, ಒಂದು ಸಿಡಿದು ಕಾಣೆಯಾಯಿತು 9 ಕಾಣೆಯಾದ ಅಡಿಕಿಯ ನೋಡಾಕಂತ ಹೋಗ್ಯಾರ ಮೂರ ಮಂದಿಇಬ್ಬರು ಒಂಚೊರಿ, ಒಬ್ಬಗೆ ಕಣ್ಣೇ ಇಲ್ಲ10 ಕಣ್ಣಿಲ್ಲದವನ ಕರೆತರಬೇಕಂತ ಹೋಗ್ಯಾರ ಮೂರ ಮಂದಿಇಬ್ಬರು ಕುಂಟರು, ಒಬ್ಬಗೆ ಕಾಲೇ ಇಲ್ಲ 11 ಕಾಲಿಲ್ಲದವನ ಹೊತ್ತು ತರಬೇಕಂತ ಹೋಗ್ಯಾರ ಮೂರು ಮಂದಿ ಇಬ್ಬರು ಲಂಡರು, ಒಬ್ಬ ಮೊಂಡ 12 ಕಾಗಿನೆಲೆ ಕನಕದಾಸ ಹಾಕಿದ ಮುಂಡಗಿಇದ ತಿಳಿದವ ಜಾಣ. ಒಡೆದು ಹೇಳಿದವ ಕೋಣ13
--------------
ಕನಕದಾಸ
ರುದ್ರಕುಮಾರನ ಚರಣಕ್ವಂದನೆ ಮಾಡಿ ವಿದ್ಯಾಭಿಮಾನಿ ವಾಣಿಯ ಸು - ಪದ್ಮ ಪಾದಗಳಿಗೆ ಎರಗಿ ನಾ ಪೇಳುವೆ ಶುದ್ಧವಾಗಿ ಕೊಡು ಮತಿಯ 1 ಶ್ರಾವಣಮಾಸ ಶುಕ್ಕುರುವಾರ ಶುಭಮೂರ್ತೆ (ಮುಹೂರ್ತೆ?) ಕಾಲದಿ ಕಮಲಾಕ್ಷಿಯನು ಆಲಯದೊಳಗಿಟ್ಟಾದರದಿಂದ ಪೂಜಿಸೆ ಬೇಡಿದಭೀಷ್ಟ ನೀಡುವಳು 2 ಇರುತಿರಲೊಂದು ಪಟ್ಟಣದಲ್ಲಿ ರಾಜನು ತನಯರಿಲ್ಲದ ಕಾರಣವು ವಿವಹದುತ್ಸವಕೆಂದು ತೆರಳೋ ಪತಿಯ ಕಂಡು ತೆಗೆದಿಟ್ಟಳಾತನಾಯುಧವ 3 ಪಟ್ಟದ ಕತ್ತಿಯ ಬಿಟ್ಟು ಬಂದೆನೆಂದು ಅಟ್ಟಿಹ ತನ್ನ ದೂತರನು ನೆಟ್ಟನೆರಡು ಕಾಲು ಚಾಚಿ ಕುಳ್ಳಿರಲಾಗ ತಟ್ಟನೆ ದಾಟಿ ನಡೆದನು 4 ಮೂರು ತಿಂಗಳು ಗರ್ಭಸಾಕ್ಯಾ (ವಾಸಕ್ಕಾ?)ಗಿ ಬಂದಿತು ನೀನೀಗ ದಾಟಿ ಪೋಗುವರೆ ಕೇಳಿ ಸಂಭ್ರಮದಿಂದ ಹೇಳೆ ರಾಜಗೆ ಬಂದು ತಾಳಿದ ಪರಮ ಹರುಷವನು 5 ಸದ್ದು ಮಾಡದೆ ಸೂಲಗಿತ್ತಿ ಕರೆಸಿ ತಾ- ನಿದ್ದ ವಾರ್ತೆಗಳ ಹೇಳಿದಳು ಮುತ್ತಿಲು ತುಂಬ್ಹೊನ್ನು ಕೊಡುವೆ 6 ಹುಡುಕುತ ಬಂದಳು ಕಡೆಯ ಬಜಾರಕ್ಕೆ ಬಡವ ಬ್ರಾಹ್ಮಣನ ಮಂದಿರದಿ ಮಡದಿಗೆ ಮೂರು ತಿಂಗಳು ಗರ್ಭವಾಗಿದೆ ಕÀಡೆಹಾಯ್ಸಲೆನ್ನ ಕರೆಸೆಂದ್ಲು 7 ಮೂರು ತಿಂಗಳ ರಾಜನರಸಿಗೆ ಮೊಗ್ಗೆಯು ಏಳು ತಿಂಗಳು ಹೂವ ಮುಡಿಸಿ ಎಂಟು ತಿಂಗಳಿಗೆ ಶ್ರೀಮಂತದುತ್ಸವ ಮಾಡಿ ಬಂತಾಗ ನವಮಾಸಗಳು 8 ವಿಪ್ರನ ಮಡದಿಗೆ ಒತ್ತಿ ಬಂದವು ಬ್ಯಾನೆ ಕಟ್ಟಿ ಕಣ್ಣುಗಳ ನಿಚ್ಚಣಿಕೆ ಹತ್ತಿ ಇಳಿದು ಹಡೆದಳ ಗಂಡುಕುಮಾರನ ಎತ್ತಿಕೊಂಡೊಯ್ದಳಾಕ್ಷಣವೆ 9 ಕಲ್ಲು ಗುಂಡನೆ ಹಡೆದಿಯೆ ನೀನೆಂಬಂಥ ಸೊಲ್ಲು ಕೇಳುತಲೆ ತಲ್ಲಣಿಸಿ ಎಲ್ಲಿದ್ದರೆನ್ನ ಕುಮಾರನು ಸುಖಬಾಳಲೆಂ- ದಲ್ಲಿ ನೇಮವ ನಡೆಸಿದಳು 10 ಜಾತಕ ಬರೆಸಿ ಸಕ್ಕರೆ ಸಗಟದಿಂದ್ಹಂಚಿ ದಕ್ಷಿಣೆ ತಾಂಬೂಲ ಸಹಿತ ಬ್ರಾಂಬರಿಗೆಲ್ಲ ಇಟ್ಟು ಭೋಜನವ ಮಾಡಿಸಿದ 11 ನಾಮಕರಣ ಜಾವಳ ಜುಟ್ಟು ಉಪÀನಯನ ಪ್ರೇಮದಿಂದ್ವಿದ್ಯವ ಕಲಿಸಿ ಸೋಮನಂದದಿ ಹೊರಗ್ಹೊರಟು ತ- ಮ್ಮಮ್ಮನ ನೋಡಿ ಮೋಹಿಸಿದÀನಾಕ್ಷಣದಿ 12 ಕತ್ತಲೊಳಗೆ ಬರುತಿರಲು ಬಾಗಿಲ ಮುಂದೆ ಕಟ್ಟಿದ ಗೋವು ಕಾಣದಲೆ ವತ್ಸದ ಕಾಲು ತುಳಿಯಲಾಗ ಅದು ಬಾಯಿ ಬಿಟ್ಟೊದರಿತು ಭಯದಿಂದ 13 ಅಮ್ಮ ನೀ ಬಾರೆ ತಮ್ಮಮ್ಮನರಿಯದವ ನಮ್ಮನು ಬಲ್ಲನೆ ಒಮ್ಮ್ಯಲ್ಲದೆರಡುಬಾರ್ಯಾಲಿಸ್ಯದರ ಮಾತು ತಮ್ಮಿ ್ಹರಿಯರನು ಕೇಳಿದನು 14 ಮಂದಾಕಿನಿಯ ಸ್ನಾನವ ಮಾಡಿ ಬಂದರೆ ಸಂದೇಹ ಪರಿಹಾರವಾಗುವುದು ಹಾ- ಗೆಂದು ಹೇಳಿದ ಹಿರಿಯರ ವಾಕ್ಯವ ಕೇಳಿ ಗಂಗಾಯಾತ್ರೆಗೆ ತೆರಳಿದನು 15 ನಡೆದು ಬಂದನು ನಡುಮಾರ್ಗದಿ ಪಟ್ಟಣ ಹಡೆದ ಮನೆಯ ಬಾಗಿಲಲ್ಲಿ ಕೊಡಬೇಕು ನಮಗಿಷ್ಟು ಸ್ಥಳಗಳೆಂದೆನುತಲಿ ನುಡಿದು ಪವಡಿಸಿದ ತಾನಲ್ಲಿ 16 ಹೊರಗಿಂದ ಶೆಟವಿ ಬಂದಳು ಮಹಾಲಕ್ಷುಮಿ ಒಳಗಿಂದ ಬಂದಳು ಎನ್ನ ವರಪುತ್ರ ಇವನ ದಾಟಲು ನಿನ್ನ ಶಿರವು ಸಿಡಿದು ಸಾ(ಸಹ?)ಸ್ರೊ ್ಹೀಳಾಗೋದೆನಲು17 ಅದು ಕೇಳಿ ಶೆಟವಿ ತಾ ತಿರುಗಿ ಪೋಗುತಲಿರೆ ಬದಿಯಲ್ಲಿ ಬದುಕಿದ್ದ ಶಿಶುವು ಇದು ನಿನ್ನ ಪುಣ್ಯದಿಂದುಳಿದಿತೆಂದೆನುತಿರೆ ಅಧಿಕ ಸಂತೋಷವಾಗಿ ಹೊರಟು 18 ಭಾಗೀರಥಿಯ ಸ್ನಾನವಮಾಡಿ ತಾನು ಪ್ರ- ಯಾಗಕೆ ನಡೆತರಲು ಬ್ಯಾಗ ಮಾಡಿದ ದಾನಧರ್ಮಕಾರ್ಯಗಳ ತಾ- ನಾಗ ಕಂಡನು ಚತುರ್ಹಸ್ತ 19 ನಾಲ್ಕು ಹಸ್ತಗಳ ಕಂಡಕಾರಣೇನೆಂದು ವ್ಯಾ- ಕುಲದಿಂದ ಕೇಳಿದನು ಸಾಕಿದವರು ಹಡೆದವರುಂಟು ನಿನಗೆಂದ್ವಿ- ವೇಕಬುದ್ಧಿ ಅವರು ಹೇಳಿದರು 20 ಗೊತ್ತಿಲೆ ಬಂದನು ಪಟ್ಟಣದೊಳಗೊಂಡು ಹೆತ್ತರಂದಿನದ (?) ಮಂದಿರದಿ ಹೊಸ್ತಿಲೊಳಗೆ ಅಡ್ಡಮಲಗಿದ್ದ ಕಾಲಕ್ಕೆ ಮತ್ತಾಗ ಬಂದಳು ಶೆಟವಿ 21 ಚೊಚ್ಚಿಲ ಮಗನ ದಾಟಲು ನಿನ್ನ ಶಿರವು ಬಿಚ್ಚಿ ಸಾಸ್ರೊ ್ಹೀಳಾಗೋದೆನಲು ಲಕ್ಷ್ಮಿ ಮಾತಿಗೆ ತಿರುಗಿದಳೆನ್ನ ತುತ್ತಿಗೆ ಮಿತ್ರ್ಯಾದ ಪಾಪಿ ಎಂದೆನುತ 22 ಸತ್ಯವಂತನೆ ನಿನ್ನ ಪುಣ್ಯದಿಂದಿಬ್ಬರು ಪುತ್ರರು ಉಳುದÀರಂತಿಹರು
--------------
ಹರಪನಹಳ್ಳಿಭೀಮವ್ವ
ವೃಂದಾವನದ ಸೇವೆಯ ಪ. ವೃಂದಾವನದ ಸೇವೆಮಾಡಿದವರಿಗೆ ಭೂ-ಬಂಧನ ಬಿಡುಗಡೆಯಾಗುವುದು ಅ.ಪ. ಕರವ ಮುಗಿದು ಬೇಗೀ-ರೇಳು ಲೋಕದ ಮಾತೆಗೆ ನಮೋಯೆಂಬೋದಲ್ಲದೆಏಳು ಪರದಕ್ಷಿಣೆಯನು ಮಾಡಿದವರಿಗೆಏಳು ಜನಮದ ಪಾಪ ಹಿಂಗುವುದು1 ಸಾರಿಸಿ ರಂಗವಲ್ಲಿಯನಿಟ್ಟು ಮೇಲೆ ಪ-ನ್ನೀರನೆರೆದು ಪ್ರತಿದಿವಸದಲ್ಲಿಸಾರಿ ಸೇವೆಯ ಮಾಡಿದವರಿಗೊಲಿದು ಮುನ್ನಸೇರಿಸುವಳು ತನ್ನ ಪದವಿಯನು 2 ಒಡೆಯನ ಮನೆಗೆ ನೀರುತರುತಲೊಬ್ಬಳುಎಡಹಿ ಬಿದ್ದಳು ತನ್ನ ಕೊಡನೊಡೆಯೆಸಿಡಿದು ಶ್ರೀತುಳಸಿಗೆ ತಂಪಾಗಲು ಮುನ್ನಕೊಡಳೆ ಅವಳಿಗೆ ಮೋಕ್ಷಪದವಿಯನು 3 ಕೇಶವ ಎಂಬ ಭೂಸುರಗೆ ಶುಕಯೋಗಿ ಉಪ-ದೇಶಿಸಿದನು ತನ್ನ ಭಾಗವತದಲ್ಲಿಕಾಸುವೀಸ ಹೊನ್ನು ಹಣ ಸವೆಯದಾಮುನ್ನ ನಿ-ರಾಶೆಯಿಂದಲಿ ಮುಕ್ತಿ ದೊರಕುವುದು 4 ಪೊಡವಿಗಧಿಕವಾದ ಸೋದೆ ಪುರದ ತ್ರಿವಿಕ್ರಮಎಡಭಾಗದಲಿ ಲಕ್ಷ್ಮಿದೇವಿಯ ಸಹಿತಸಡಗರದಿಂದಲಿ ಹಯವದನನ ಪಾದಬಿಡದೆ ಪೂಜಿಸಿ ಭಕ್ತಿ ಪಡೆಯಿರಯ್ಯ 5
--------------
ವಾದಿರಾಜ
ಹರಿ ಹರಿ ಯನ್ನಿರೋ | ಹರಿ ಹರಿಯಂದು ಸ್ಮರಣಗೆ | ತಂದು ಪರಗತಿ ಪಡೆಯಿರೋ ಪ ಸಾಧಾಕಗೆರಗೀ ಬೋಧಕವದಗೀ ಭೇದಿಸಿ ನಿಮ್ಮೊಳು ತಿರುಗಿ | ಸಾಧಕನಾಗಿ ಕ್ರೋಧಕ ಬಾಗಿ ವಾದ ವಿವಾದವ ನೀಗಿ 1 ಎಚ್ಚರ ವಿಡಿದು ಮತ್ಸರ ಕಡಿದು ತುಚ್ಛರ ಸಂಗದಿ ಸಿಡಿದು | ನಿಚ್ಚಟ ಜಡಿದು ಮೆಚ್ಚಿನ ಭಕ್ತಿಯ ಪಡೆದು 2 ಮಹಿಪತಿಸುತ ಪ್ರಭುಕೂಡಿ | ಇಹಪರಿ ಸುಖವ ಸೂರ್ಯಾಡಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು