ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರುಳೆ ಸುಖ ನೀನೆನು ಪಡೆದಿ ನರಜನುಮ ತಾಳಿ ಇಹ್ಯದಿ ಪ ಪರಿಪರಿ ಜನುಮ ತಾಳಿ ಪರಮ ಬಂಧದೊಳೊರಲ ಉರುಳಿ ವರಮುಕ್ತಿ ದೊರೆವ ಕೀಲಿ ಸ್ಮರಿಸಿ ಬಂದಿ ಹರಿಯ ಬಳಲಿ 1 ಅರಿಯದೆ ಮತ್ತು ಭವಮಾಲೆ ಕೊರಳಿಗ್ಹಾಕಿಕೊಂಡಿ ದುರುಳ ಮರೆಯಮೋಸ ಕಾಂಬೋದೆಲ್ಲ ಹರಿದು ಪೋಗ್ವುದು ಸ್ಥಿರವಲ್ಲ 2 ಸಮಯ ಮಿಂಚಿಪೋದ ಬಳಿಕ ಕ್ರಮದಿ ಮತ್ತೆ ಸಿಗುವುದೆ ಮೂರ್ಖ ವಿಮಲ ಶ್ರೀರಾಮ ಪಾದಕಮಲ ನಮಿಸಿ ಪಡಕೊ ಮುಕ್ತಿಮಾಲಾ 3
--------------
ರಾಮದಾಸರು
ರಾಮನಾಮವ ನೆನೆ ಮನವೆಪ ರಾಮ ಎಂದವನೆ ಧನ್ಯನೆಂದು ಶ್ರುತಿತತಿಗಳು ಪೊಗಳುತಿರೆ ಅ ತರುಣತನದಿ ದಿನ ದಾಟಿತು ಸುಮ್ಮನೆಶರೀರದೊಳು ಸ್ವರವಾಡುತಲೆತರುಣಿ ಸುತರು ಸಂಸಾರವೆಂಬಶರಧಿಯೊಳಗೆ ಮುಳುಗಿರದೆ ಮನವೆ 1 ಬಗೆಬಗೆ ಜನ್ಮದಿ ಜನಿಸಿದೆ ನಾಳೆಗೆಸಿಗುವುದೆ ನಿಜದಿಂ ಈ ಸಮಯಮುಗುಧನಾಗಿ ಮತ್ತೆ ಜನಿಸಿ ಬರುವುದುಸೊಗಸು ಕಾಣುವುದೆ ಛಿ ಮನವೆ 2 ಚಿಂತೆಯನೆಲ್ಲ ಒತ್ತಟ್ಟಿಗಿಟ್ಟುಅಂತರಂಗದಲಿ ಧ್ಯಾನಿಸುತಕಂತುಪಿತ ಕನಕಾದಿಕೇಶವನಎಂತಾದರೂ ನೀ ಬಿಡಬೇಡ ಮನವೆ3
--------------
ಕನಕದಾಸ