ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಡು ಬಿಡು ಮಾಯವನು ಕೆಡದಿರು ಕಪಟದಲಿ | ನಡಿ ನಡಿ ಸುಪಥವ ಜಗದೊಡಿಯೆನ ನೆನೆ ಮನವೆ ಪ ನಾನು ನನ್ನದು ಎಂಬೊ ಹೀನ ವಚನ ಸಲ್ಲ ಗೇಣುದರವಲ್ಲದೆ ಪೊರೆವದು ಮತ್ತೇನಾದರು ಉಂಟೆ 1 ಮಡದಿ ಮಕ್ಕಳ ನೋಡಿ ಕಡು ಹಿಗ್ಗಿ ಕೆಡಬೇಡ | ಕಡು ಮುನಿದೆಮನಾಳುಗಳು ಪಿಡಿದೆಳೆದೊಯ್ವಾಗ 2 ಇರುಳು-ಹಗಲು ನೀನು ಹರಿಸ್ಮರಣೆ ಚಿತ್ತದಲಿ | ಜನ್ಮಾಂತರ ಪಾಪ ಪೋಗುವುದು 3 ಜ್ಞಾನ ಮಾರ್ಗವಿಡಿದು ಆನಂದ ಮೂರುತಿಯ ಧ್ಯಾನದಿಂದಲಿ ಕಾಣ್ಯ ದೈನ್ಯವೃತ್ತಿಯ ಬಿಟ್ಟು ಹಾನಿ ವೃದ್ಧಿಯ ಜರಿದು4 ಅತಿ ಕಾಮಾತುರನಾಗಿ ರತಿಯಲ್ಲಿ ಸಿಗದಿರು | ಕರ್ಮ ವ್ಯಾಳೆವ್ಯಾಳೆಗೆ ಶ್ರೀಪತಿಗರ್ಪಿತವೆನ್ನು5 ಸಂತೋಷಗಳು ಬರಲಿ ಸಂತಾಪಗಳು ಇರಲಿ | ಇಂತು ಇವರಿಗೆಲ್ಲ ಪ್ರೇರಕ ಹರಿ ಜಗದಂತರ್ಯಾಮಿ 6 ಮಾನಿನಿ ನಂದನರು ಆರು ? | ತನುವೆ ನಿನ್ನದಲ್ಲ ತಿಳಿದುಕೊ ಗತಿ ಸಾಧನಕೆ ವಿಜಯವಿಠ್ಠಲ7
--------------
ವಿಜಯದಾಸ
ಯಾವಲ್ಲಿ ಅಡಗಿರುವಿ ಯಾವಲ್ಲಿ ಹುಡುಕಲಿಭಾವದ ಮೂಲೆಯ ರಾವನು ಬಿಟ್ಟು ಅ.ಪ. ಕಣ್ಣುಮುಚ್ಚಾಲೆಯಾಟ ಬೇಡಯ್ಯ ಈಬಣ್ಣದ ನುಡಿಯ ಬೇಟಕಣ್ಣು ಮುಚ್ಚಲು ಕೊಟ್ಟಿ ಟಣ್ಣನೆ ಜಿಗಿದೋಟಅಣ್ಣಾ ಹುಡುಕಿ ಹುಡುಕಿ ಹಣ್ಣಾಗಿ ಹೋದೆನೋ 1 ಎಲ್ಲೆಲ್ಲೂ ತುಂಬಿರುವೆ ಹುಡುಕಲು ನೀನೆಲ್ಲೆಲ್ಲ್ಯೂ ಸಿಗದಿರುವೆಕ್ಷುಲ್ಲಕನೆನ್ನನ್ನು ಚಲ್ಲದೆ ನನ್ನೆದುರುಚೆಲ್ವರೂಪದೆ ಬಂದು ನಿಲ್ವುದನ್ನು ಬಿಟ್ಟು 2 ಕಡುಕಷ್ಟ ಹುಡುಕುವದು ಹಿಡಿದು ಹಿಡಿದು ತಂದುಒಡಲಲ್ಲಿಡಲು ಮತ್ತೇಒಡನೆ ನುಸುಳಿಕೊಂಡುಬಿಡವಲೋಡೋಡಿ 3 ಇದೀಗ ನಡೆದು ತಂದು ನೆನೆಯಲು ನಿನ್ನಸದಾವಕಾಲಕೆಂದು ಹೃದಯದ ಗವಿಯೊಳುಮುದದಿ ಕೂಡಿಸಿ ಮೇಲೆಬದಿಗೆ ಕಾವಲವಿಟ್ಟು ಮನವ ಟೊಣೆದು ನೀ 4 ಬದರಿ ಕಾಶಿ ಕಂಚಿಯೋ ನೀನಿರುವುದುಮಥುರೆ ಪಂಢರಪುರವೊಪದುಮಾವತಿ ಗಿರಿಯೋ ಉಡುಪಿ ದ್ವಾರಕೆಯೊಗದುಗೋ ನೀ ಹೇಳಯ್ಯ ವೀರನಾರಾಯಣ 5
--------------
ವೀರನಾರಾಯಣ
ಸುಳ್ಳು ಸುಳ್ಳು ಸುಳ್ಳು ಪೊಳ್ಳು ಜಗ ತಿಳಿಯಲೆ ಮಳ್ಳು ಮರುಳು ಪ ಸುಳ್ಳು ಬಂಗಾಲಿ ಕಂಡು ಮಳ್ಳಾಗ ಬೇಡೆಲೆ ಲೊಳ್ಳಟ್ಟಿಯಿದೆಲ್ಲ ಅ.ಪ ಕಾಜಿನ ಬುರುಡೆಯೊಳ್ ತೇಜಿಪದೀಪಕ್ಕೆ ಸೋಜಿಗಗಂಡು ಮತಿಮಾಜುವುದರಲವ ಮೋಜಿನ ಆಟಕ್ಕೆ 1 ನಾಶವಾಗುವುದೊಂದೇ ತಾಸು ತೋರೆಲ್ಲನು ಈಷಣ ಸಂಸಾರದಾಸೆಗೆ ಸಿಗದಿರು ಮೋಸವಿದೆಲ್ಲವು 2 ಮೋಹದಾಕಾರಕ್ಕೆ ಮೋಹಿಸಿ ಕೆಡದೆ ನೀ ಮೋಹಿಸಿ ಸ್ಥಿರಸುಖದೇಹವ ನೀಡೆಲೊ ಮಹ ಶ್ರೀರಾಮನೆ 3
--------------
ರಾಮದಾಸರು