ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಾಡಿಯೆತ್ತಲಿಂದ ಬಂದುದೆ ಮಾತ ನಾಡಲರಿಯದಿಪ್ಪ ಹೊಚ್ಚ ಹೊಸ ಹರೆಯದ ಮುಗುದೆಗೀ ಪ ಬಳುಕೆ ಸಿಂಹಮಧ್ಯ ಬಟ್ಟಮೊಲೆಗಳು ಮರೆ ತೋರವಾದ ಬಳವಿ ಮುಡಿಯೊಳಲರು ಹೊಯ್ಯನಿಳೆಯಲುದುರಲು ಜಲಜಮುಖದಿ ಬೆಮರುದೋರೆ ವಲಯಹಾರ ಉರದಿ ಘಲಿರು ಘಲಿರೆನೆ ಆವಕಡೆಯು ಕುಲುಕಿ ಕುಲುಕಿ ನಡೆವ ಈ 1 ಮಿಸುಪ ಮಂದಹಾಸ ಮುಖದಿ ಮಸಗಿದಂತ ಕಾಂತಲಜ್ಜೆ ಮುಸುಕೆ ಮಿಸುಪ ಕದಪಿನಲ್ಲಿ ಎಸೆವ ಓಲೆ ಢಾಳಿಸಿ ಸಸಿನೆ ತಿದ್ದಿ ಉರದಿ ಜರಿಯ ವಸನವನ್ನು ಸಂತವಿಸುತ ಕುಸುರಿಲಂಗ ದಂದವನ್ನು ಎಸಸಿ ಬಿಡುವ ನಡೆವ 2 ಕರವನೊಯ್ಯಗೊಲಿದು ಉರಗಗಿರಿಯ ಮೇಲೆ ಬಾಲಚಂದ್ರ ನಿರಲು ಸೆರಗ ಮರೆಯಮಾಡಿ ಮರಳಿ ಮರಳಿ ನೋಡುತಾ ಸ್ಮರನತಾತ ಸುರನಗರದೆರೆಯ ವೈಕುಂಠಲಕ್ಷ್ಮಿಯರಸನೊಡನೆ ನೆರೆದ ಪರಿಯ ಸಿರಿಯ ಗರುವ ಗಮನದಾ 3
--------------
ಬೇಲೂರು ವೈಕುಂಠದಾಸರು
ಗಾಡಿಯೆತ್ತಲಿಂದ ಬಂದುದೇ ಮಾತ ನಾಡಲರಿಯದಿಪ್ಪ ಹೊಚ್ಚಹೊಸ ಹರೆಯದ ಮುಗುದೆಗೀ ಪ ಬಳುಕೆ ಸಿಂಹಮಧ್ಯ ಬಟ್ಟ ಮೊಲೆಗಳದುರೆ ತೋರವಾದ ಬಳಲುಮುಡಿಯೊಳಲರು ಒಯ್ಯನಿಳೆಯೊಳುದುರಲೂ ಜಲಜಮುಖದಿ ಬೆವರುದೋರೆ ವಲಯತೋರಹಾರ ಉರದಿ ಘಲಿರು ಘಲಿರನುಲಿವ ಕುಲುಕಿ ಕುಲಕಿ ನಡೆವ ಯೀ 1 ಮಿಸುಪ ಮಂದಹಾಸ ಮುಖದಿ ಮಸಗಿದಂತ ಕಾಂತಿ ಲಜ್ಜೆ ಮುಸುಕೆ ಮಿಸುಪ ಕದಪಿನಲ್ಲಿ ಎಸೆವ ಓಲೆ ಢಾಳಿಸೆ ಸಸಿನೆ ತಿದ್ದಿ ಉರದಿ ಜರಿವ ವಸನವನ್ನು ಸಂತವಿಸುತ ಉಸುರಿಲಿಂದ ಗಂಧವನ್ನು ಎಸಸಿಬಿಡುವ ನಡೆವ ಯೀ 2 ಕರವನೊಯ್ಯನೊಲಿದು ರೋಜಗಿರಿಯ ಮೇಲೆ ಬಾಲಚಂದ್ರ ನಿರಲುಸೆರಗಮರೆಯಮಾಡಿ ಮರಳಿಮರಳಿನೋಡುತಾ ಸ್ಮರನತಾತ ಸುರನಗರ ದೆರೆಯ ಲಕ್ಷ್ಮಿಯರಸನೊಡನೆ ನೆರೆದಪರಿಯ ಸಿರಿಯ ಗರುವಗಮನದಾ ಯೀ 3
--------------
ಕವಿ ಲಕ್ಷ್ಮೀಶ
ನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮೀ ಪ ನಿನಗಿಂತ ಕುಂದೇನೋ ಸನಕಾದಿಗಳ ಸ್ವಾಮಿಮನಸಿಜನೊಡೆಯನೆ ಕನಕಗರ್ಭನ ಜನಕ ಅ ಮಚ್ಚ್ಯಾವತಾರ ನೀನಾದರೆ - ಆಕೆಮಚ್ಚ್ಯಗಂಗಳೆ ತಾನಾದಳೊಹೆಚ್ಚಿನ ಶಂಖವ ಪಿಡಿದರೆ - ಆಕೆನಿಚ್ಚ ಶಂಖಕಂಠಳಾದಳಯ್ಯ 1 ನೀಲವರ್ಣ ನೀನಾದರೆ - ಆಕೆನೀಲಕುಂತಳೆ ತಾನಾದಳೊಲೋಲ ಕಮಲನಾಭನಾದರೆ - ಆಕೆಬಾಲ ಕಮಲಮುಖಿಯಾದಳಯ್ಯ2 ಬೆಟ್ಟವ ನೀನೊಂದು ಪೊತ್ತರೆ - ಆಕೆಬೆಟ್ಟದಂಥ ಕುಚವೆರಡು ಪೊತ್ತಳೊಮೆಟ್ಟಿ ಶೇಷನ ನೀ ತುಳಿದರೆ - ಆಕೆಕಟ್ಟಿ ಬಾಸೆಗೆ ಶೇಷನ ನಿಲಿಸಿಹಳಯ್ಯ3 ಗಜರಾಜವರದ ನೀನಾದರೆ - ಆಕೆಗಜಗಮನೆಯು ತಾನಾದಳಯ್ಯನಿಜ ನರಸಿಂಹ ನೀನಾದರೆ - ಆಕೆಭಜಿಸಿ ಸಿಂಹಮಧ್ಯೆಯಾದಳಯ್ಯ 4 ಈ ಪರಿಯೊಳು ನೀನು ಜನಿಸಿದೆ - ಭಲೆಭಾಪುರೆ ಬಾಡದೊಳು ನೆಲೆಸಿದೆಗೋಪಿಯರ ಮೋಹ ಸಲಿಸಿದೆ - ಚೆಲುವಶ್ರೀಪತಿ ಆದಿಕೇಶವರಾಯ ಮೆರೆದೆ5
--------------
ಕನಕದಾಸ
(ಬಪ್ಪನಾಡಿನ ದೇವಿಯನ್ನು ಕುರಿತು)ದಯಮಾಡೆ ಬಾಗೆ ಶ್ರೀಪಂಚದುರ್ಗೆ ದಯಮಾಡೆ ಬಾಗೆ ಪ.ದಯಮಾಡೆ ಕೇವಲ ಭಯವಿಹ್ವಲನಲ್ಲಿದಯಸಾಗರೆ ಸೌಭಾಗ್ಯಸಂಪದವನ್ನು ಅ.ಪ.ವೇದಾಂತವೇದ್ಯೆ ನಿಖಿಳಜಗದಾದಿವಿನೋದೆಭೂಧರಾತ್ಮಜೆ ಸರ್ವಾಧಾರಶಕ್ತಿ ಕಲಾಧರೆಮಧುರಬಿಂಬಾಧರೆ ನಿನ್ನಯಪಾದವನು ಮರೆಹೊಕ್ಕೆ ಮನಸಿನ ಭೇದವನುಪರಿಹರಿಸಿ ಸರ್ವಾಪ-ರಾಧಗಳ ಕ್ಷಮಿಸಮ್ಮ ಕೈಟಭಸೂದನನ ಸೋದರಿ ಮಹೇಶ್ವರಿ 1ಅಂಬುಜಚರಣೆ ಮಾಧುರ್ಯೋರುರಂಭಾಸಮಾನೆಗಂಭೀರೆ ಮೇರು ನಿತಂಬೆಸಿಂಹಮಧ್ಯೆಲಂಬೋದರಪರಿರಂಭಕರಾಂಬುಜೆಕುಂಭಿಕುಂಭಪಯೋಜೆ ಶೋಭಿಪ ಕಂಬುಕಂಠಿಮುಖೇಂದುಪದ್ಮ ದ-ಳಾಂಬಕಿ ಎನಗಿಂಬುದೋರೆರೋಲಂಬಕುಂತಳೆಶುಂಭಮರ್ದಿನಿ2ಸಿಂಧೂರನಯನೆ ನಿಖಿಲಾಮರವಂದಿತಚರಣೆಸುಂದರಾಂಗಿ ಸುಮಗಂಧಿವಿಬುಧಮುನಿವೃಂದಸೇವಿತೆನಿತ್ಯಾನಂದಪ್ರಕಾಶಿನಿಅಂಧಕಾಸುರವೈರಿಹೃದಯಾನಂದಪಾರಾವಾರಪೂರ್ಣಮಿ-ಚಂದ್ರೆ ಸದ್ಗುಣಸಾಂದ್ರೆಸುರಥನರೇಂದ್ರವರದೆ ಮೃಗೇಂದ್ರವಾಹಿನಿ 3ರಜತಾದ್ರಿವಾಸೆ ಚಂಪಕನಾಸೆ ಸುಜದನೌಘಪೋಷೆನಿಜದಿ ನಿನ್ನಯ ಪಾದಂಬುಜವ ನಂಬಿದೆ ತ್ರಿಜಗವಂದಿತೆಮಹಾಗಜಗೌರಿ ಶಂಕರಿತ್ರಿಜಗಜ್ಜನನಿ ಭಾವನಿ ಪಾರ್ವತಿ ಭುಜಗಭೂಷಣರಾಣಿ ಕಲುಷ-ವ್ರಜವಿದಾರಿ ಮುನೀಂದ್ರ ಮನನೀರಜದಿವಾಕರೆ ಮಾನಿತೋದ್ಧರೆ 4ತಪ್ಪು ಸಹಸ್ರವಿದ್ದರು ಮನದೊಳಿಪ್ಪುದಜಸ್ರಸರ್ಪಶಯನ ಲಕ್ಷ್ಮೀನಾರಾಯಣಪ್ರೀತಿಯಪ್ಪಂತೆ ದಯೆ ಗೈಯೆಜಗದಾದಿಮಾಯೆಕಪ್ಪುಕಂಠನ ರಾಣಿ ವರಕಂದರ್ಪಧಿಕತರೂಪೆ ಸಾಧು ಪ-ದ ಪ್ರಸಾದವ ಪಾಲಿಸೆನ್ನಲಿ ಬಪ್ಪನಾಡಿನ ಭದ್ರದಾಯಕಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ