ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯತೀರ್ಥ ಮುನಿವರ್ಯ ಪ ದಯತೋರಿ ಪೊರೆಯಯ್ಯ ವಿಜಯಸಾರಥಿಪ್ರಿಯ ಅ.ಪ ಶ್ರೀಶಶಯನಾವೇಶ ಮಹೇಶ ಪ್ರತಿಬಿಂಬ ಸು ರೇಶ ಯತಿಕುಲಾಧೀಶ ಪಾಲಿಸಯ್ಯ ಏಸು ನಿನ್ನಯ ಕರುಣರಾಶಿ ಎಂತಿಹುದಯ್ಯ ಆಸೆ ಸಲಿಸಲು ಮನೆಗೆ ಲೇಸಾಗಿ ನೀ ಬಂದೆ 1 ಪಶುಪತಿಯ ಮತ ದಹಿಸಿ ಅಸುಪತಿಯ ಮತ ಮೆರೆದೆ ವಸುಮತಿಯ ಸುರನಾಗಿ ಬಂದು ನಿಂದೆ ಪಶುಪ್ರಾಯನೆಂದೆನ್ನ ಉದ್ಧರಿಸಲೋಸುಗದಿ ಬಿಸಜತವಪಾದ ಪಾಂಸವನಿತ್ತೆ 2 ಜಯಗುರುವೆ ಶ್ರೀ ವಿಜಯದಾಸರಲ್ಲೆನ್ನ ಮನೋ ಜಯವು ಪುಟ್ಟಿಸಿದ ನಿನ್ನ ಕರುಣವೆಂತೊ ಸೃಜಿಸಿ ತೋರಿದ ಸ್ವಪ್ನ ನಿಜವು ಆಗಲಿ ಎಂದು ಬಿಜಯ ಮಾಡಿದೆ ನಿನ್ನ ನಿಜದಾಸರೊಡನೆ 3 ಜಯಗುರುವೆ ನಿಮ್ಮ ಹುದ್ಗುಹದಲಿ ನಲಿಯುತಿಹ ವಾಯುವಂತರ್ಗತ ಕೃಷ್ಣನ ತೋರೋ ಜಯತು ಶ್ರೀ ವೇಣುಗೋಪಾಲ ಮೂರ್ತೇ ಜಯತು ಶ್ರೀ ವೇಣುಗೋಪಾಲನೆಂದೆನಿಸಿಯ್ಯ 4 ಸೃಷ್ಟಿಗೆ ಬಂದು ನಾನೆಷ್ಟು ಜನ್ಮವ ಕಳೆದೆ ಪುಟ್ಟಿದೆನೋ ನಾನೀಗ ಈ ಜನ್ಮದಿ ಪುಟ್ಟಲಿಲ್ಲವೋ ಜ್ಞಾನ ಹರಿ ಗುರುಸ್ಮರಣೆಗೆ ಇಟ್ಟಕಡೆಗಣ್ಣÂನೋಳಿಷ್ಟು ನೋಡಯ್ಯ5 ವಾದಿಮಸ್ತಕ ಭೇದಿ ಮೋದತೀರ್ಥರ ತತ್ತ್ವ ಛೇದಿಸಿ ವಾಕ್ ಯುದ್ದ ಯೂಥಪಗಳನೆಲ್ಲ ಗೆದ್ದು ಸತ್ತತ್ತ್ವದಾ ಸಿಂಹನಾದವ ಮಾಡ್ದೆ 6 ಮಧ್ವರಾಯರಿಗೆ ನೀ ಮುದ್ದುಮೊಮ್ಮಗನಯ್ಯ ಸದ್ವಿದ್ವದ್ಗ್ರಂಥ ಭಾರವನೆ ವಹಿಸಿ ಮುದ್ದು ತೊತ್ತೆನಿಸಿ ಎತ್ತಾಗಿ ಸೇವಿಸಿ ಯತಿಯಾಗಿ ನಿಂದ ತತ್ತ್ವಮುತ್ತಿನ ಖಣಿಯೆ 7 ಇಳೆಯೊಳಗೆ ನಿನ್ನಂಥ ಕರುಣಾಳುಗಳ ಕಾಣೆ ಅಳವಲ್ಲ ವರ್ಣಿಸಲು ನಿನ್ನ ಗುಣಗಳನು ಮಳಖೇಡವಾಸ ಯತಿಕುಲಾಧೀಶಾ 8 ಗುರುವೆ ನಿನ್ನಯ ಕರುಣಕವಚ ತೊಟ್ಟವರ ಚರಣಕಮಲದೊಳಿಹ ಮಧುಪನೆಂದೆನಿಸೋ ನಿರುತ ದೃಢಭಕುತಿ ಶ್ರೀ ವೇಂಕಟೇಶನೊಳಿಟ್ಟುಪೊರೆಯೊ ಶ್ರೀ ಗುರುವರಾಗ್ರಣಿಯೆ ನಮೋ ಎಂಬೆ9
--------------
ಉರಗಾದ್ರಿವಾಸವಿಠಲದಾಸರು
ಪಾಲಯ ನರಕೇಸರಿ ಸತತಂ ಪರಿಪೂರ್ಣ ಗುಣಾಕರ ಪ ವಿನುತ ಸಂಜೀವ ದೇವ ಲೀಲಾ ಖೇಲನ ಸ್ತಂಭ ವಿದಾರಣ 1 ರಾಕ್ಷಸ ಗರ್ಭ ನಿರ್ಭೇದನ ನಿಪುಣ ಸಿಂಹನಾದ ಶ್ರೀದ ದಕ್ಷೀ ವಿಪಕ್ಷಸು ಶಿಕ್ಷಣ ದಕ್ಷನೆ 2 ಶೂರ ಹಿರಣ್ಯಕ ಹೃದಯ ದಳನಸಂಹಾರ ವೀರ ಸಾರ ಪೊರ ಹರೆ 3 ಕಾಲ ಲೋಲ ಭಂಜನ ರಂಜನ 4 ಶ್ರೀ ಲಕ್ಷ್ಮೀ ಕುಚ ಕುಂಕುಮ ಪಂಕಿಲ ದೇಹ ದೇವ ನೀಲ ನಿಭಾಕೃತಿ ಧೇನುನಗರ ಪತೇ 5
--------------
ಬೇಟೆರಾಯ ದೀಕ್ಷಿತರು