ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಈ) ಮಹಾಲಕ್ಷ್ಮಿ ಇಂದೀವರನಯನ ಕೃಷ್ಣಾನಂದಕಾರಿಣಿ ಪ ಎಂದೆಂದಿಗು ಹೊಂದಿ ನೀನಾನಂದ ಕೊಡುವ ಕಾರಣದಿಂದ ಅ.ಪ. ಕಾಲ ಜನಿಸಿ ಸಿಂಧುರಾಜಗೆ ಪುತ್ರಿ ಎನಿಸಿ ಚಂದಿರನಗ್ರಜೆ ಎನಿಸಿ ಸಿಂಧುಶಾಯಿ ಮಂದಿರಳೆನಿಸಿ 1 ಕಮಲ ಚರಣೆ ಕಮಲಗಂಧೆ ಕಮಲವಾಸನೆ ಕಮಲಾಕ್ಷಣೆ ಕಮಲಾಂಗಿಯೆ 2 ನರಸಿಂಹವಿಠಲನ ಹೊಂದಿದೆ ಪರಮಭಕ್ತರಘ ಕಳೆದು ಹರಿಯ ನಾಮ ಜಿಹ್ವೆಗಿತ್ತು ನಿರುತದಿ ಯುದ್ಧ... ದೇವಿ 3
--------------
ನರಸಿಂಹವಿಠಲರು
ಎಂದು ಕಾಣ್ವೆನೊ ಇಂದಿರೇಶನ ದಿವ್ಯಚರಣ ಎಂದು ಕಾಣ್ವೆನು ಪ ಎಂದು ಕಂಡಾನಂದಿಸುವೆನು ಮಂದರೋದ್ಧರ ಸಿಂಧುಶಾಯಿಯ ಸುಂದರ ಪಾದಾರವಿದಂಗಳನು ನಿಂದು ಮನದಣಿ ನೇತ್ರದಿಂದ ಅ.ಪ ದನುಜಾರಿಯ ಘನಮಹಿಮೆ ಜನಕಜೆಯ ಪ್ರಾಣಪ್ರಿಯನ ಮಿನುಗುವ ದಿನಮಣಿಕೋಟಿತೇಜೋಮಯನ ಘನಕೋಮಲ ನಿಜರೂಪ ಕಣ್ಣಿಲಿಂ ನೋಡ್ಹಿಗ್ಗುವ ದಿನ 1 ಕರಿಯ ಕಾಯ್ದನ ಕರುಣದಿಂದ ತರುಣಿಗ್ವಂದನ ಶರಣೆನುತ ಮರೆಬಿದ್ದವಗೆ ಸ್ಥಿರಪಟ್ಟವ ಕರುಣಿಸಿದನ ಕಾಲ 2 ಪಕ್ಷಿಗಮನನ ಲಕ್ಷ್ಮೀನಾಥ ಸಹಸ್ರಾಕ್ಷಶಯನನ ಲಕ್ಷವಿಟ್ಟು ಭಕ್ತರನ್ನು ರಕ್ಷಿಸಿ ಭಕ್ತವತ್ಸಲನೆಂಬ ನೋಡುವ ಪದವಿ 3
--------------
ರಾಮದಾಸರು
ಕಂತುಪಿತನೆ ನಿನ್ನ ಎಂತು ವರ್ಣಿಪೆ ಲಕ್ಷ್ಮೀ -ಕಾಂತ ಪಾಲಿಸೆನ್ನನು ನಿರಂತರದಲಿ ಪ ಕುಂತಿಪುತ್ರಗೆ ನೀನತ್ಯಂತ ಸಾರಥಿತ್ವವ ಮಾಡಿನಿಂತು ದುರ್ಯೋಧನನ ಶಿರವ ಅಂತಕನಿಗೊಪ್ಪಸಿದ ಧೀರ ಅ.ಪ ಸುಂದರವದನ ನಿನ್ನ ಕಂದ ಭಜಿಸಲು ಮುದದಿಂದ ಕಂಬದೊಳ್ಬಂದೆ ಮಂದರೋದ್ಧರಸಿಂಧುಶಾಯಿ ರಕ್ಕಸನ ಕೊಂದು ಕರುಳ ಮಾಲೆಯನ್ನುಚೆಂದದಿಂ ಕಂಧರದೊಳ್ಧರಿಸಿದಾನಂದಮೂರ್ತಿ ಇಂದಿರೇಶ1 ಕದಂಬ ಪೂಜಿತಾಂಘ್ರಿಯುಗಳನಂಬಿದ ಭಕ್ತರ ಕಾಯ್ವ ಅಂಬುಜನೇತ್ರಅಂಬರೀಷ ದ್ವಾದಶಿ ವ್ರತವ ಸಂಭ್ರಮದಿ ಮಾಡುತಿರೆಡೊಂಬಿಯಿಂ ದೂರ್ವಾಸ ಶಪಿಸೆ ಬೆಂಬಿಡದೆ ಚಕ್ರದಿ ಸಲಹಿದ2 ಗಂಗೆಯ ಜನಕ ನಿನ್ನ ಅಂಗನೆ ದ್ರೌಪದಿದೇವಿಭಂಗಬಿಡಿಸೆಂದು ಕೂಗೆ ಮಂಗಳಾಂಗನೆಸಾಂಗದಿಂದ ವಸ್ತ್ರಂಗಳ ಹಿಂಗದೆ ಪಾಲಿಸಿದಂಥರಂಗವಿಠಲ ಪಾಲಿಸೀಗ ತುಂಗ ವಿಕ್ರಮ ಎನ್ನ ಮಾತ 3
--------------
ಶ್ರೀಪಾದರಾಜರು
ಕವಿ ಅಭಯ ಬೇಡೋ ಸುಮನ ಸುಂದರ ಶ್ರೀ ಹರಿಯ ಪ್ರಿಯ | ಅಭಯ ಬೇಡೋ ಸುಮನ ಸುಂದರ ಪ ಅಭಯ ಬೇಡೋ ಪ್ರಿಯ ರಮಾವಿಭು ಜಗನ್ನಿವಾಸನೊಡನೆ ಉಭಯ ಸುಖವ ನೀವ ಚೆಲ್ವ ಅಂಬುಜನೇತ್ರ ಸೊಬಗನೆಂದು ಅ.ಪ ಚಾರು ಮಾರ ಪಿತನ 1 ನೊಂದು ವಾರಣೇಂದ್ರ ತನ್ನ ದಂದುಗದಲಿ ನುತಿಸಲು | ಬಂದು ರಕ್ಷಿಸಿದ ಮುಕುಂದ ಸಿಂಧುಶಾಯಿಯೆಂದು ಹರಿಯ 2 ಪರಾಕು ಎನುತ 3 ಕಿಂಕರೌಘ ಸುಪ್ರಸನ್ನ ಸಂಕಟೌಘಧ್ವಂಸನ ವೆಂಕಟೇಶವರದ ಒಳಲಂಕೆಯಧಿಪ ಗುರು ನೃಹರಿಯ 4
--------------
ಅನ್ಯದಾಸರು
ಭೇದವ ಮರೆಸಿದ ನಮ್ಮಯ್ಯ ಸು ಸಾಧನ ತಿಳಿಸಿದ ಪ ಭೇದ ಮರೆಸುತ ವಾದನೀಗಿಸಿ ಪರ ಸಾಧನದ ನಿಜಹಾದಿಗೆ ಹಚ್ಚಿದ ಅ.ಪ ಮಂದಮತಿಯ ತರಿದ ಎನ್ನಯ ಭವ ಬಂಧ ಪರಿಹರಿಸಿದ ಕುಂದುವ ಜಗಮಾಯದಂದುಗ ಗೆಲಿಸಿದ ಕಂದನೆಂದುದ್ಧಾರಗೈದ ತಂದೆ ಸಿಂಧುಶಾಯಿ 1 ಜ್ಞಾನಕೆ ಹಚ್ಚಿದ ಎನ್ನದೆ ನಿಜ ಧ್ಯಾನವ ಪಾಲಿಸಿದ ನಾನಾಯೋನಿಯೊಳು ಜನಿಸಿ ಜನಿಸಿ ಬಹ ಹಾನಿಯಿಂದುಳಿಸಿದ ದಾನವಕುಲಹರ 2 ಏನೆಂದು ಬಣ್ಣಿಸಲಿ ನಮ್ಮಯ್ಯನ ಆನಂದದ ಕೀಲಿ ತಾನೆ ಒಲಿದಿತ್ತೆನ್ನಗಾನಂದಮಯಾಂಬುಧಿ ದೀನಜನಾಪ್ತ ಮಮಪ್ರಾಣ ಶ್ರೀರಾಮಯ್ಯ 3
--------------
ರಾಮದಾಸರು
ಶ್ರೀ ಮನೋಹರ ಸಲಹೋ ಎನ್ನ ಕಾಮಿತ ಫಲವಿತ್ತು ಸಾಮಜಪತಿ ಪರಿಪಾಲಕ ನಂಬಿದೆ ಪ ಅಂಡಜಗಮನ ದಶರುಂಡವೈರಿ ರಾಜೀವಾಕ್ಷ ಕುಂಡಲಿಶಯನ ಕೋದಂಡ ಪಾಣಿಯ ತೋಂಡಮಾನಗೊಲಿದ ಮಾರ್ತಂಡ ತೇಜ ಪಾದ ಪುಂಡರೀಕ ಸೇವಿಸುವ ತೋಂಡರೊಳಿಡು ಪಾಂಡವಪಕ್ಷ1 ನಾಳಿತ ಸಂಭವಪಿತ ಶೈಲಜಾವಲ್ಲಭನುತ ಭಂಜನ ವನಮಾಲಿ ಭೂಲೋಲ ಕಾಲ ಕೋಲರೂಪಿ ಕೋಮಲಾಂಗ ತಾಲ ಕೇತನನುಜ ಕೀಲಾಲಜ ಬಾಂಧವ ಬಾಲಕ ಪೋಷಕ 2 ಇಂದು ಕೋಟಿ ನಿಭ ನರಸಿಂಧುರಾರಿ ಸಿಂಧುಶಾಯಿ ದಾತ ನಂದಕ ಹಸ್ತ ನಂದಮುನಿವಂದಿತ ಸಂಕ್ರಂದನ ನಂದನವರದ ಬಂಧನ ಬಿಡಿಸೋ ಶಾಮಸುಂದರವಿಠಲ ಬಂಧುರ ಮಹಿಮ 3
--------------
ಶಾಮಸುಂದರ ವಿಠಲ