ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳುಪೀಠಕೆ ನಳಿನಸಂಭವೆ ಜಗನ್ನುತೆ ಪ ಬಾಲೇಂದು ನಿಭಫಾಲೆ ಶ್ರೀತಪರಿಪಾಲೆ ಕೋಮಲೆ ಅ.ಪ. ಸಿಂಧುನಂದನೆ ಇಂದುಸೋದರಿ ಕುಂದರದನೆ ಮಂದಗಾಮಿನಿ ವಂದಿತಾಖಿಲವೃಂದಾರಕ ವೃಂದಾನಂದಪ್ರದೆ 1 ತೋರಮುತ್ತಿನ ಚಾರುಪೀಠಕೆ ಸಾರುಬೇಗನೆ ಸಾರಸಾನನೆ ನಾರೀರನ್ನೆಯರು ಸಾರಿಕರೆವರು ಮೀರದಾನಂದದಿಂ 2 ಶೇಷಶೈಲನಿವಾಸಿನೀ ನತಪೋಷದಾಯಿನಿ ಶ್ರೀರಮಾಮಣಿ ಯಾಸಾಸಾರಸನೇತ್ರೆ ಕಮಲಾವಾಸೇ ದಯೆತೋರಿಸೆ 3
--------------
ನಂಜನಗೂಡು ತಿರುಮಲಾಂಬಾ
ಕುಂದಣಾರುತಿ ತಾರೆ ಸಖಿ | ಸಿಂಧುನಂದನೆಗಿಂದು ಮುಖಿ ಪ ವಿಧಿ ಮಾತೆಗೆ ವರದಾತೆಗೆ | ಕೃತಿಲೀಲೆ ನುತಿನೀಲೆ ರುಕ್ಮಿಣಿಗೆ 1 ಜಂಭಾರಿ ವಂದಿತೆ ಶ್ರೀರಂಬೆಗೆ ಜಗದಂಬೆಗೆ | ಸುನೀತಾಂಬೆಗೆ | ಅಂಬುಜ ಮಂದಿರ ಅಂಭ್ರಣಿಗೆ 2 ಶ್ರೀ ಶಾಮಸುಂದರನರ್ಧಾಂಗಿಗೆ ಶುಭಾಂಗಿಗೆ | ದಯಾಪಾಂಗೆಗೆ | ಭೂಸುರ ಸುಚರಿತ ಭಾರ್ಗವಿಗೆ 3
--------------
ಶಾಮಸುಂದರ ವಿಠಲ
ನಲಿದೈತಾರೆಂಬೆ ಹೇ ಜಗದಂಬೆ ನಾಂ ಬೇಡಿಕೊಂಬೆ ಪ. ಒಲಿದೈತರೆ ನೀ ನಲವೇರುತ ನಾ ನಲಿದಾರಾಧಿಪೆ ಎನ್ನೊಲಿದಂಬೇ ಅ.ಪ. ಸಿಂಧುನಂದನೆ ಅರವಿಂದನಯನೆ ಇಂದುಸೋದರಿ ಸಿಂಧುರಗಮನೆ ಸುಗುಣಾಭರಣೆ ವಂದಿಪೆ ಶರದಿಂದುವದನೆ ಸುರ ವಂದಿತಚರಣೆ 1 ಅಂದಿಗೆ ಕಾಲುಂಗುರ ಘಲಿರೆನೆ ಇಂದಿರೆ ತವಪದದ್ವಂದ್ವವ ತೋರಿ ವಂದಿಸುವೆನ್ನೀಮಂದಿರ ಮಧ್ಯದಿ ಎಂದೆಂದಿಗು ನೆಲೆಸಿರು ನಂದಿನೀ ಜನನೀ 2 ಕ್ಷೀರಾಂಬುಧಿ ತನಯೆ ಸೌಭಾಗ್ಯದ ನಿಧಿಯೆ ಕ್ಷೀರಾಬ್ಧಿಶಯನನ ಜಾಯೆ ಸಾರಸನಿಲಯೆ ವಂದಿಪೆ ತಾಯೆ ಬಾರೆಂದು ಕೈಪಿಡಿದೆಮ್ಮನು ಕಾಯಿ 3 ಸರಸಿಜಾಸನೆ ಸ್ಮರಮುಖ ಜನನಿಯೆ ಸುರನರಪೂಜಿತೆ ನಾರದ ಗೇಯೆ ಸಾರಗುಣಭರಿತೆ ಸರಸಿಜಪಾಣಿಯೆ ಶ್ರೀರಮಣೀ ಪರಿಪಾಲಿಸು ಜನನಿ 4 ಸೆರಗೊಡ್ಡಿ ಬೇಡುವೆ ಶ್ರೀನಾರೀ ನಿನ್ನೆಡೆ ಸಾರೀ ಪರತರ ಸುಖ ಸಂಪದವನು ಕೋರೀ ಪೊರೆ ಮೈದೋರಿ 5 ಪರಿಪರಿ ವಿಧದಾ ಸಿರಿಸಂಪತ್ತಿಯೋಳ್ ಗುರುದೈವಂಗಳ ಸೇವಾವೃತ್ತಿಯೋಳಿರೆ ಕರುಣಿಸು ದೃಢತರ ಭಕ್ತಿಯನೆಮಗೀಗಳ್ ವರಶೇಷಗಿರೀಶನ ಮಡದಿಯೆ ಮುದದೋಳ್ 6
--------------
ನಂಜನಗೂಡು ತಿರುಮಲಾಂಬಾ
ಮಂಗಳವೆನ್ನಿ ಮಾಲಕ್ಷುಮಿಗೀಗ ಶ್ರೀ- ರಂಗನರಸಿ ರಮಾದೇವಿಗೆ ಬ್ಯಾಗ ಪ ಸಿಂಧುನಂದನೆ ನಂದನಂದನನೆದೆಯಲ್ಲಿ ಹೊಂದಿಕೊಂಡಿರುವಂಥ ಸುಂದರ ಸಿರಿಗೆ 1 ವೈಜಯಂತಿ ಹರಿಯ ಶ್ರೀವತ್ಸದಲ್ಲಿ ಸರಸವಾಗಿರುವಂಥ ವರಮಹಾಲಕ್ಷುಮಿಗೆ 2 ಹೆರಳು ಬಂಗಾರ ರಾಗಟೆ ಗೊಂಡ್ಯ ಕ್ಯಾದಿಗೆ ಅರಳು ಮಲ್ಲಿಗೆಮೊಗ್ಗು ವರವ ಕೊಡೆನಗೆ 3 ರಂಗನರಸಿ ಬೆಳ್ಳಿ ಬಂಗಾರವೆನಗಿತ್ತು ಕಂಗಳಿಂದಲಿ ನೋಡಿ ಮಂಗಳ ನೀಡೆ 4 ಆದಿನಾರಾಯಣನಾನಂತಗುಣ ಪರಿಪೂರ್ಣ- ನಾದ ಭೀಮೇಶಕೃಷ್ಣನರಸಿ ಲಕ್ಷುಮಿಗೆ5
--------------
ಹರಪನಹಳ್ಳಿಭೀಮವ್ವ