ಒಟ್ಟು 4 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಣೇಶ ಪ್ರಾರ್ಥನೆ ಸಿಂದೂರ ವದನ ಕೊಡುವರ ಸಿಂದೂರ ವದನ ಪ ಇಂದುಧರಾತ್ಮಜ ವಂದಿಸುವೆನಾ ಅ.ಪ ಮುದಮುನಿ ಮತಾಂಬುಧಿಚಂದಿರ ಬುಧಜನ ಪ್ರಸಂಗದಿ ಭವಹರ ಮಧು ವಿರೋಧಿಯ ಕಥಾಮೃತಶ್ರವಣದಿ ಒದಗಿಸು ಮಮ ಸುಜ್ಞಾನ ಮಾನಸದಿ 1 ಭಜಕರ ಮನೋರಥ ಪೂರಕ ಸುಜನರ ಭವಾಂಬುದಿ ತಾರಕ ವಿಜಯ ಸಾರಥಿಯ ಭಜನೆಯ ಮಾಡಿಸೋ ವಾರಿಧಿ ಕುಂಭ ಸಂಭವ 2 ಗಿರಿಜೆಯ ಕುಮಾರ ಕೃಪಾಕರ ಶರಧಿಜೆ ಮನೋಹರ ಕಾರ್ಪರ ನರಮೃಗೇಂದ್ರ ಚರಣಾಂಬುಜ ಮಧುಕರ ಕರುಣೆಸೆನಗೆ ಸಿದ್ಧಿಯನು ಕಾರ್ಯದಲಿ 3
--------------
ಕಾರ್ಪರ ನರಹರಿದಾಸರು
ಲೋಕನೀತಿಯ ಪದಗಳು ಚರಣಕಮಲ ಭಜಿಸೋ ಗೋಪಾಲಕೃಷ್ಣನ ಪ ತರುಣಿಯರ ಮನವನು ಮರುಳುಗೊಳಿಸಿದ ಪರಮ ಸುಂದರನ ಧರಿಯೊಳಗೆ ಭಾಸ್ಕರಪುರ ಸುಮಂದಿರನೆಂದು ಕರೆಸುವನ ಕರಿರಾಜವರದನ ಅ.ಪ ಕ್ಷೋಣೆ ಗೀರ್ವಾಣರಿಂದಲಿ ಪೂಜೆಗೊಂಬುವನಾ ಮಾನಸದಿ ತನ್ನನು ಧೇನಿಪರ ಸುರಧೇನು ಎನಿಸುವನಾ ಗಾನವನು ಕೇಳುವ ಧೇನು ವತ್ಸಗಳಿಂದ ಶೋಭಿತನಾ ವೇಣುಗೋಪಾಲನ 1 ವಂದನೆಯ ಮಾಳ್ಪರ ಬಂಧ ಬಿಡಿಶ್ಯಾನಂದ ನೀಡುವನಾ ಮಂದರದಿ ಗಣಪತಿ ಗಂಧವಾಹನರಿಂದ ವಂದಿತನಾ ಮಂದಜಾಸನ ಮುಖ್ಯ ಸುರಗಣದಿಂದ ಸೇವಿತನಾ ಸಿಂದೂರವರದನ 2 ಕೃಷ್ಣಾ ಅಷ್ಟಮಿಯ ಉತ್ಸವ ಮಾಳ್ಪ ಭಕುತರನಾ ಸೃಷ್ಟೀಶನಿವನೆಂದರಿಂದ ಮಹಿಮೆಯ ಪಾಡಿಪೊಗಳುವನಾ ಕಷ್ಟವನು ಪರಿಹರಿಸ್ಯವರ ಸಕಲಾಭೀಷ್ಠಗರಿಯುವನಾ ಪರಮೇಷ್ಠಿ ಜನಕನ 3 ಗರಿಯೆ ಗೋಗಳನಾ ಗಿರಿಯ ಧರಿಸಿದನಾ ಇದ ಕೃಷ್ಣನ್ನ ಪೂಜಿಸಲು ಒಲಿದನ 4 ಶರಣಾಗತ ಜನರ ಪೊರೆಯಲು ಬಂದುನಿಂತಿಹನಾ ಕಾ ರ್ಪರ ಕ್ಷೇತ್ರದಿ ಮೆರಿವ ತರುಪಿಪ್ಪಲ ಸುಮಂದಿರನ ಸುರವಿನುತ ಸಿರಿನರಹರಿಯ ರೂಪಾತ್ಮಕನು ಎನಿಸುವನು ತುರುಪಾಲ ಕೃಷ್ಣನ 5
--------------
ಕಾರ್ಪರ ನರಹರಿದಾಸರು
ಸಿಂದೂರಗಮನೆ ಸಾರೆ ಮಲಗಿರುವನ್ಯಾರೆ ಪ ಸಂದರೀ ಮಂದಿರದೊಳಿವನ್ಯಾರೆ ಸೌಂದರ್ಯದ ಮ್ಯಾರೆ ಛಂದದಲಿ ನೀ ಸಾರೆ ಇಂದು ನಭದಲಿ ಚರಿಸುತಲಿ ಮನ ನೊಂದು ಬೇಸರದಿಂದ ಇಲ್ಲಿಗೆ ಬಂದು ಮಲಗಿಹನೇನೆ ಸುಖದಿ 1 ಶೀಲೆ ನೋಡಿವನ ಮುಖಕಮಲ ಸಂಗರದೊಳತಿ ಚಟುಲ ಸುವಿಶಾಲ ಭುಜಯುಗಲ ಶ್ರೀ ಲಕುಮಿವರ ಪಾಲ ನಯನ ಮರಾಳ ಧ್ವಜರೊಳ ಗಾವನೊ ಇವ ಪೇಳುವದು ಕೀಲಾಲಜಾಂಬಕಿ2 ನಾರಿ ಮಾತನಾಡಿಸೇ ಇವನ ಮನ ಮೋಹದವರನ ಕಮನೀಯ ಗುಣಯುತನ ವಾರಿಜಾಸನ ಮುಖ್ಯ ಸುರಪರಿವಾರ ಸೇವಿಯ ಕೊಳುವ ಕಾರ್ಪರನಾರಸಿಂಹನೆ ಪವಡಿಸಿಹನೆ 3
--------------
ಕಾರ್ಪರ ನರಹರಿದಾಸರು