ಒಟ್ಟು 6 ಕಡೆಗಳಲ್ಲಿ , 1 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುಭವ ಸ್ವಸಿದ್ಧವೊ ಅನುದಿನ ಶ್ರುತಿ ಖೂನ ಹೇಳುವ ಙÁ್ಞನವು ಧ್ರುವ ಗುಣಗುಣಕ್ಕೆ ಅಣುರೇಣು ವ್ಯಾಪಕ್ಕೆ ಜನವನ ಸ್ಥಾನ ಸುಸ್ಥಾನಕ್ಕೆ ಮನೋನ್ಮನಕ್ಕೆ ಙÁ್ಞನ ವಿಙÁ್ಞನಕ್ಕೆ ತಾನೆ ತಾನಾಗಿಹ್ಯದಕ್ಕೆ 1 ಅಖಿಳ ಭುವನಕ್ಕೆ ಸಕಲ ಸನ್ಮತಕ್ಕೆ ಪ್ರಕಟಗುಚಿತ ಪ್ರತ್ಯಕ್ಷಕ್ಕೆ ಶುಕಾದಿ ಮುನಿಗಳ ಮುಗುಟಮಣಿಯಾಗುದಕ್ಕೆ ಭಕ್ತವತ್ಸಲಾಗಿಹುದಕ್ಕೆ 2 ಇಹಪರ ಸಾಧನಕ್ಕೆ ಬಾಹ್ಯಾಂತರ ದೊರೆವುದಕ್ಕೆ ಸಾಹ್ಯಮಾಡುವ ಸಹಕಾರಕ್ಕೆ ಮಹಿಪತ್ಯುದ್ದೇಶಕ್ಕೆ ಸ್ವಹಿತ ಸುಪಥಕೆ ಶ್ರೇಯ ಸುಖದೋರುವಾಶ್ರಯಕ್ಕೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೋಲು ಕೋಲೆನ್ನಕೋಲೆ ಕೋಲು ಕೋಲೆನ್ನಕೋಲೆ ಸದ್ವಸ್ತುವಿನ ಬಲಗೊಂಬೆಕೋಲೆ ಧ್ರುವ ಕೋಲುನಿಕ್ಕುತ ಬನ್ನಿ ಬಾಲೇರೆಲ್ಲರು ಕೂಡಿ ಮ್ಯಾಲ್ಯೆ ಮಂದಿರದ ಹಾದೀಲಿ ಕೋಲೆ ಮ್ಯಾಲೆ ಮಂದಿರದೊಳು ಬಾಲಮುಕುಂದತಾನು ಲೋಲ್ಯಾಡುತ ಒಳಗಿದ್ದಾನೆ ಕೋಲೆ 1 ಆದಿಗಿಂತಲ್ಯದೆ ಹಾದಿ ಅನಾದಿಯು ಸಾಧಿಸ ಬನ್ನಿ ಒದಗಿನ್ನು ಕೋಲೆ ಸಾಧಿಸಿ ಬರಲಿಕ್ಕೆ ಸಾಧ್ಯವಾಗುತಲ್ಯಾದೆ ಭೇದಿಸಿ ನೋಡಿ ಮನದಲಿ ಕೋಲೆ 2 ಕಣ್ಣಿನೊಳಿಹ್ಯ ಬೊಂಬೆಕಾಣಬರುತ್ತದೆ ಜಾಣ್ಯೇರು ನೀವು ತಿಳಕೊಳ್ಳಿಕೋಲೆ ಜಾಣ್ಯೇರು ನೀವು ಕಾಣದೆ ಹೋಗಬ್ಯಾಡಿ ಜಾಣ್ರಿಸುತ್ಹಾನೆ ಸದ್ಗುರು ಕೋಲೆ 3 ಸದ್ಗುರುಪಾದಕೆ ಸದ್ಭಾವವಿಟ್ಟು ನೀವು ಸದ್ಭೋಧ ಕೇಳಿ ಸಾಧಿಸಿ ಕೋಲೆ ಸಾಧಿಸಿ ಕೇಳಿ ನೀವು ಬುಧಜನರೊಡಗೂಡಿ ಚದುರತನದಲಿ ಅತಿ ಬ್ಯಾಗೆ ಕೋಲೆ 4 ಅರಹುವೆಂದ ಸೀರೆಯನುಟ್ಟು ಕುರವ್ಹೆಂಬ ಕುಪ್ಪಸಲಿ ಇರವಂತಿ ಪುಷ್ಪಲಿ ಮುಡಿದಿನ್ನು ಕೋಲೆ ಮುಡಿದು ಬರಲು ಪೂರ್ಣ ಒಡಗೂಡಿ ಬರುತಾನೆ ಬಡವನಾ ಧಾರಿ ಬಲಗೊಂಬೆ ಕೋಲೆ5 ಬಲಗೊಂಬೆ ಸಾಧನವು ನೆಲೆಗೊಂಡು ಮಾಡಬೇಕು ವಲವ್ಹಾಂಗ ತಾನೆ ಶ್ರೀಹರಿ ಕೋಲೆ ಶ್ರೀಹರಿ ಮುಂದೆ ನೀವು ಸೋಹ್ಯ ತಿಳಿದುಬನ್ನಿ ಸಾಹ್ಯಮಾಡುವ ಇಹಪರಕೆ ಕೋಲೆ 6 ದಾತ ಮಹಿಪತಿಸ್ವಾಮಿ ಸಹಕಾರನೊಬ್ಬ ಶ್ರೀಪತಿಕೋಲೆ ಶ್ರೀಪತಿಸ್ತುತಿ ಕೊಂಡಾಡಲಿಕ್ಕೆ ಪೂರ್ಣ ಭುಕ್ತಿ ಮುಕ್ತಿಯ ನೀಡು ತಾನೆ ಕೋಲೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಾಣತನದ ಮಾತು ಏನು ಕೆಲಸವಯ್ಯ ಖೂನ ನೋಡಿ ಪ್ರಾಣನಾಯಕನ ತಿಳಿವುದೊಂದೆ ಜ್ಞಾನಾಭ್ಯಾಸ ಮಾಡಿ ಧ್ರುವ ಕರಿಮಣಿ ಒಂದಿಲ್ಲದೆ ಹೆಂಗಸಿಗೆ ಸರಮುತ್ತು ಯಾಕೆ ಸಾರ ಸಂಜೀವನಿಲ್ಲದೆ ನೂರು ಗಿಡಮೂಲಿಕೆ ಯಾಕೆ ನೆರೆ ಇಲ್ಲದೆ ಸಾಧುಸಜ್ಜನರು ಸರ್ವಬಳಗವ್ಯಾಕೆ ಪರಮ ತತ್ವಜ್ಞಾನ ಒಂದಿಲ್ಲದೆ ಸುರಿಯುವ ಮಾತಿನ್ಯಾಕೆ 1 ಪ್ರಾಣವಿಲ್ಲದ ಸುಂದರವಾದ ಶರೀರ್ಯಾಕೆ ಕಾಲ ಬದಕುವುವದ್ಯಾಕೆ ಸ್ವಾನುಭವದ ಸುಖ ನೆಲೆಯುಗೊಳ್ಳದೆ ಒಣ ಡಂಭವ್ಯಾಕೆ ತಾನಾಗಿಹ್ಯ ವಸ್ತು ದೊರಕಿಲ್ಲದೆ ನಾ ನೀನೆಂಬುದ್ಯಾಕೆ 2 ಶ್ರೀ ಹರಿಮಹಿಮೆಯ ಸೋಹ್ಯ ತಿಳಿಯದೆ ದೇಹ್ಯವ್ಯಾಕೆ ಗುಹ್ಯಗುರುತವಿಲ್ಲದೆ ಸಾಯಸಬಡುವದ್ಯಾಕೆ ಸಾಹ್ಯಮಾಡುವ ಸದ್ವಸ್ತು ನೋಡದ ಕಣ್ಣು ನೋಟವ್ಯಾಕೆ ಮಹಿಪತಿಸ್ವಾಮಿ ಸದ್ಗುರುಪಾದ ಕಾಣದ ಜನ್ಮವ್ಯಾಕೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನೆ ನಮ್ಮ ಕುಲದೈವ ಅನುದಿನಾರಾಧಿಸುವ ಮುನಿಜನರೊಂದಿಸುವ ಘನಗುರು ದೇವಾದಿ ಶ್ರೀದೇವ 1 ಮಾಡಲರಿಯೆ ನಿಮ್ಮ ನಿಜಭಕ್ತಿ ಕೂಡಿಕೊಳ್ಳಯ್ಯ ಸೇವೆ ಶ್ರೀಪತಿ 2 ಮಾತಿಗಿಲ್ಲವೊ ಅನ್ಯಥಾ ಸ್ವಾಮಿ ನೀನೆವೆ ನಮ್ಮ ದೈವತ ಬ್ರಹ್ಮಾದಿಗಳಿಗೆ ಸನ್ನತ 3 ಅಯ್ಯ ನಿಜಬಾಲಕ ನಾ ನಿಮ್ಮ ತಾಯಿತಂದೆಯು ನೀನೆ ನಮ್ಮ ಸಾಹ್ಯಮಾಡುವ ಸರ್ವೋತ್ತಮ 4 ದೈವ ನೀನಹುದೊ ಸಾಕ್ಷಾತ ಕೈವಲ್ಯನಿಧಿಯು ಶ್ರೀನಾಥ ಭಾವಿಸುವರ ಭಾವಪೂರಿತ ಮಹಿಪತಿಯ ಪ್ರಾಣನಾಥ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧಿಸಿ ನೋಡಿ ನಿಜ ಖೂನ ಸದ್ಗುರು ಕೃಪೆಯಿಂದ ಸ್ವಸುಖದ ನಿಧಾನ ಧ್ರುವ ಸಹಜಾವಸ್ಥೆಗೆ ಬಂದು ನೋಡಿ ಸಹಜ ಸದ್ವಸ್ತು ಬಾಹುದು ತಾನೆ ಕೈಗೂಡಿ ದೇಹ ದಂಡನೆಂಬುದು ಬ್ಯಾಡಿ ಸಾಹ್ಯಮಾಡುವ ಗುರುಸೇವೆ ಪೂರ್ಣಮಾಡಿ 1 ಸಾಧನವೆಂಬುದೆ ಸಾಕ್ಷೇಪ ಭೇದಿಸಿ ನೋಡಲಿಕ್ಕಿದುವೆ ವಸ್ತು ತಾಂ ಸಮೀಪ ಆದಿ ಅನಾದಿ ಸ್ವರೂಪ ಸಾಧಿಸಿದವನೆ ತಾ ಮೂರುಲೋಕ ಆಪ 2 ಎಲ್ಲಕ್ಕೆ ಮೇಲು ಗುರುಭಕ್ತಿ ಅಲ್ಲೆಸಲ್ಲದು ಮತ್ತೆ ಮುಂದೆ ಬೇಕೆಂಬ ಉಕ್ತಿ ಇಲ್ಲೆ ತಿಳಿಕೋ ನೀ ಮಹಿಪತಿ ಸುಲಭದಿಂದ ಸಾಧಿಸಿಕೊಂಡು ನಿಜಯುಕ್ತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ಸದ್ಗುರುವೆ ನಿಮ್ಮ ದಯದಕ್ಷಿ ಸುಭಿಕ್ಷ ದ್ರುವ ನಿಮ್ಮ ಅಭಯ ಹಸ್ತ ಬ್ರಹ್ಮಾನಂದದ ಸುಪ್ರಸ್ತ ನಮ್ಮ ಜೀವಕೆ ಪ್ರಶಸ್ತ ನಿಮ್ಮಿಂದೆ ಸ್ವಸ್ತ 1 ನಿಮ್ಮ ದಯಕರುಣ ಸಮ್ಯಙÁ್ಞನದ ಸ್ಫುರಣ ನಮ್ಮ ಜನ್ಮದುದ್ಧರಣ ನಿಮ್ಮಿಂದ ಪೂರ್ಣ 2 ಸಾಹ್ಯಮಾಡುವ ನಿಮ್ಮ ಬಾಹ್ಯಾಂತ್ರದಲಿ ಸಂಭ್ರಮ ಮಹಿಪತಿಗಾನಂದೋ ಬ್ರಹ್ಮ ಇಹಪರ ಸುಪ್ರೇಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು