ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅತ್ತಿಗೇ ನಿನ್ನ ಹಾಡಿಗೆ ನಾ ಪ್ರತ್ಯುತ್ತರ ಕೊಡುತಿಹೆನೆ ಪ ನೀವ್ ಕತ್ತೆ ಸಮಾನರು ಅ.ಪ ಎಣ್ಣೆ ಸಾಸುವೆ ಅರದಿಟ್ಟಿಹ ಚಿತ್ರಾನ್ನದ ರಾಶಿಗಳು ಪಲ್ಯ ಹಲಸಿನ ಕಾಯ್ ಪಲ್ಯ ಸಣ್ಣ ಗೆಣಸು ಗೆಡ್ಡೆಯ ಪಲ್ಯಗಳ ಸಾಸುವೆ ಹುಳಿ ಪಳಿದ್ಯಾ ಮಾಡಿಸಿ ಹಾಕುವೆನೂ 1 ನೇಮವಾದ ನೆಲಗಡಲೆ ಕಾಯೆಣ್ಣೆಯ ಕರಿಗಡುಬುಗಳೂ ತರಿಸಿ ಹಾಕುವೆ 2 ಫಲವು ಮುಲ್ಲಂಗೀ ಕಡು ಹರುಷದಿ ಕೊಂಬೀ ಇಂಥಾ ಶತವರಟಾದ ಬೀಗರ ನಾನೆಲ್ಲೂ ಕಾಣಲಿಲ್ಲಾ ಮಾಡದವರಿಗೆ ಇವು ಬಲು ಪ್ರಿಯ್ಯಾ 3
--------------
ಗುರುರಾಮವಿಠಲ
ತೆರಳಿ ಪೋದರಿಂದು ಪರಮ ಪದವನರಸುತ ಪ ಸಿರಿ ಶೇಷದಾಸಾರ್ಯರು ಅ.ಪ. ಸಿರಿಯುಕ್ತ ರಕಾಕ್ಷಿ ವರುಷ ಭಾದ್ರಪದಸಿತ ವರಪೌರ್ಣಿಮಾ ಸಹಿತವಾದ ಕವಿವಾರದಿ ಸರು ನಿಶಿಯೊಳು ಶತತಾರ ನಕ್ಷತ್ರ ಬರುತಿರೆ ನರಹರಿಯ ಚರಣಕಾಂಬ ಕಡು ತವಕದಿಂದ 1 ತಂದೆ ಮುದ್ದುಮೋಹನ ದಾಸವರ್ಯರಿಂದ ಕುಂದುರಹಿತನಾದ ಪ್ರಾಣನಾಥವಿಠಲ- ನೆಂದು ಅಂಕಿತೋಪದೇಶವನು ಕೈಕೊಂಡು ಬಂಧುರವಾದನೇಕ ಪದಗಳನು ರಚಿಸಿ 2 ದಾಸವೃತ್ತಿಯ ಕಂಡು ದೇಶ ದೇಶವ ಸುತ್ತಿ ಕರವ ನೀಡದೆ ಲೇಸು ಮಾಡುತಲಿ ಸಚ್ಛಿಷ್ಯರಿಗೆ ತತ್ತ್ವೋಪ- ದೇಶವನು ಪರಮ ಸಂತೋಷದಿಂದಗೈದು 3 ಆಶಪಾಶವ ತೊರೆದು ಮೀಸಲು ಮನರಾಗಿ ವಾಸುದೇವನ ನಾಮ ಸೋಸಿನಿಂದ ಭಜಿಸಿ ಸಾಸುವೆಯಷ್ಟಾದರಾಯಾಸವನುಪಡದೆ ಈ ಶರೀರ ವಿಶ್ವೇಶನಾಧೀನವೆಂದು 4 ಅಂಗೋಪಾಂಗವ ಮರೆದು ನಿಸ್ಸಂಗಯುತರಾಗಿ ಕಂಗಳನು ಮುಚ್ಚುತ ಭಂಗವಿಲ್ಲದ ಸುಖವ ಹಿಂಗದೆ ಕೊಡುವಂಥ ಮಂಗಳನ ಶ್ರೀ ರಂಗೇಶವಿಠಲನಂತರಂಗದಿ ನೋಡುತ5
--------------
ರಂಗೇಶವಿಠಲದಾಸರು
ಸಹಿಸಲಾರೆನೊ ವ್ಯಥೆಯ ಪವಮಾನ ವಂದಿತನೆ ಪ. ಅಹೋರಾತ್ರಿಲಿ ಮನ ಕಳವಳ ಪಡುವದೊ ಆಹಾರ ನಿದ್ರೆಗಳು ತೊಲಗಿ ಪೋದವು ದೇವಾ ಸಹಿತಾಗಿ ತಾಯಿಯ ಸರ್ವಬಾಂಧವರೆಲ್ಲಾ ಸ ನ್ನಿಹಿತರಾಗಿ ಎನ್ನ ಬಳಗ ಇದ್ದರೂ ಕೂಡ ಅ ಸಹ್ಯವಾದ ದುಃಖ ದೂರಾಗಲಿಲ್ಲವೊ ಆಹಾ ಇರಲಾರೆ ಇರಲಾರೆ ಭಕ್ತ ಜನರ ಬಿಟ್ಟು ಮಹಿದಾಸ ಮೂರ್ತಿಯ ನಿನ್ನ ಭಕ್ತರ ಪಾದ ಸಹವಾಸ ಸುಧೆಯ ಸುರಿಸಿ ಬಲುಪರಿ ಅಹಿಭೂಷಣ ತಾತ ಕಾಳಿಮರ್ಧನಕೃಷ್ಣಾ 1 ಕರ್ಮ ಅಡ್ಡಬಂದು ಎನ್ನ ಘಾಸಿ ಮಾಡುತಲಿದೆ ಅರಿಯದಾದೆನೊ ದೇವಾ ಬ್ಯಾಸರವಾಗಿದೆ ಜನ್ಮವು ಮಹಿಯೊಳು ಸಾಸುವೆ ಮಾತ್ರವು ಸ್ವತಂತ್ರವಿಲ್ಲದಿಹ ದೋಷಿಜೀವನ ತಾನೇನು ಮಾಡಬಲ್ಲ ಸಾಸಿರನಾಮಗುರು ಕಾಳೀಮರ್ಧನಕೃಷ್ಣ2 ಜಲದ ಮಧ್ಯದಿ ಇರುವ ಮೀನವನು ಕಾವ ಮಳಲಿನೊಳಗೆ ತೆಗೆದು ಬಿಸುಟಿದಂತಾಯಿತು ಹೊಳೆಯ ಈಜುವೆನೆಂದು ಬಲು ಹೆಮ್ಮೆಯಿಂದಲಿ ಸೆಳೆವಿಗೆ ಸಿಕ್ಕು ಬಿದ್ದ ಮನುಜನ ತೆರನಾಯ್ತು ಬಲವಾಗಿ ಘಾಯವ ಪೊಂದಿದ ಸ್ಥಾನದಲ್ಲಿ ಸಲೆ ಕಾದ ಆಯಸ ಸೆಳೆಯನೆಳೆದಂತಾಯ್ತು ಅಳಲನು ನಿನಗಲ್ಲದೆ ಇನ್ನಾರಿಗೆ ಪೇಳಲೋ ಕೊಳಲಧರನೆ ಗುರು ಕಾಳಿಮರ್ಧನಕೃಷ್ಣಾ 3 ನಿನ್ನ ಭಕ್ತರಾ ಮಾತು ಯನಗದು ಮನ್ನಣೆ ನಿನ್ನ ಭಕ್ತರ ಕಥಾಶ್ರವಣ ಯನ್ನ ಕರಣಾಭರಣ ನಿನ್ನ ಭಕ್ತರ ಸಮೂಹ ಎನ್ನಯ ಕಣ್ಬೆಳಕು ನಿನ್ನ ಭಕ್ತರ ಪಾದದೂಳಿಯೆ ಶಿರೋಭೂಷಣವೆನೆಗೆ ನಿನ್ನ ಭಕ್ತರ ಆಶೀರ್ವಾದವೇ ಸರ್ವ ಬಲವೈ ಇನ್ನು ಈ ಬುದ್ಧಿಯು ಎಂದಿಗೂ ಕೆಡೆದಂತೆ ಚೆನ್ನಾಗಿ ರಕ್ಷಿಸೊ ಗುರು ಕಾಳಿಮರ್ಧನಕೃಷ್ಣಾ 4 ಪರಾಧೀನನೆಂದು ಪರಿಪರಿಯಿಂದಲಿ ಕೊರಗಿಸುವುದು ನಿನಗೆ ಎಂದಿಗೂ ಸರಿ ಅಲ್ಲ ಪರಾಧೀನನು ಅಹುದು ಪರತಂತ್ರನಾನಹುದು ಸರ್ವತಂತ್ರ ಸ್ವತಂತ್ರ ನೀನೆಂಬುದು ಸಿದ್ಧ ಶರಣಾಕರ ಆದರಿಷ್ಟು ಮಾತ್ರ ಕೇಳೋ ಸತಿ ತನ್ನಧೀನಳೆಂದು ಶಿರಶಿಡಿಯುವ ಊರಿ ಬಿಸಿಲಿನೊಳು ನಿಲ್ದಪನೆ ಸರಿಬಂದಿದ್ದು ಮಾಡೋ ಇದರ ಮೇಲಿನ್ನು ದೇವಾ ಉರಗಶಯನ ಗುರು ಕಾಳೀಮರ್ಧನಕೃಷ್ಣಾ 5 ನೀನು ನುಡಿಸಿದಂತೆ ನುಡಿದು ನುಡಿವೆನಯ್ಯ ನಿನ್ನ ಚಿತ್ತವು ಗುರು ಕಾಳೀಮರ್ಧನಕೃಷ್ಣಾ
--------------
ಕಳಸದ ಸುಂದರಮ್ಮ