ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಇ) ಆತ್ಮನಿವೇದನೆ ಎಷ್ಟು ಪ್ರೇಮಿಯೋ ಗುರುವು ಎಷ್ಟು ಪ್ರೇಮಿಯೋ ಪ ಎಷ್ಟು ಪ್ರೇಮಿ ಎನ್ನ ಬಿಡದೆ | ಸೃಷ್ಟಿಯಲ್ಲಿ ಕೈಯಪಿಡಿದ ಅ.ಪ ಭಾನುಕೋಟಿ ತೇಜ ವರದ ಸಾನುರಾಗದಿಂದ ಕರೆದು ಜ್ಞಾನ ಶಾಸ್ತ್ರ ಬೋಧಿಸುತ್ತ ಹೀನ ವೃತ್ತಿ ದೂರಿ ಪೊರೆದ 1 ನೀಲವರ್ಣ ಕಂಜನಯನ ನೀಲಕಂಠಮಿತ್ರ ಭಕ್ತ ಪಾಲ ಭೂರಿದುಃಖಭವವ ಧೂಳಿಮಾಡಿ ಬಾಲಗೊಲಿದ 2 ಶ್ರೇಷ್ಠ ಸುಮಹದೇವಪುರದೊಳಿಷ್ಟರಂಗನಾಥ ಭರದಿ ಮುಟ್ಟಿ ಮುಕ್ತಿಯಿತ್ತು ಪುನಃ ಹುಟ್ಟು ಸಾವುಗಳನು ಕಳದ 3
--------------
ರಂಗದಾಸರು
ಈ ಸೊಬಗನಿನ್ನ್ಯಾವ ದೇವರೊಳು ಕಾಣೆ ಈಶ ಪರಮೇಶ ಜಗದೀಶ ಶ್ರೀ ಶಿವನ ಪ ಸುಂದರತ್ವದಿ ನೋಡೆ ತ್ರಿಪುರಸುಂದರಿಯರಸ ಬಂಧುತ್ವದಲಿ ವಿಷ್ಣು ಸೋದರಿಯ ರಮಣ ಅಂದ ಚಂದದಿ ನೋಡೆ ಸುಂದರೇಶ್ವರನಿವನು ಚಂದ್ರ ನಾಗಾಭರಣ ಲೋಕ ಶಂಕರನು 1 ಭೋಗದಲಿ ನೋಡೆ ತಾಂ ಮೋಹಿನಿಯನಾಳ್ದವನು ಯೋಗದಲಿ ಯೋಗೇಶ ಯೋಗ ಭಾವಿತನು ತ್ಯಾಗದಲಿ ನೋಡೆ ತಾಂ ಸರ್ವಸಂಗ ತ್ಯಾಗಿ ನಿಗಮ ಗೋಚರನು 2 ವೀರತನದೊಳಗಿವನು ತ್ರಿಪುರ ಸಂಹಾರಕನು ಧೀರತನದೊಳಗಿವನು ಮದನವಿಧ್ವಂಸಿ ಸಾರತನದೊಳಗಿವನು ಶ್ರೀ ಮಹಾದೇವನು ಕಾರಣಕೆ ಕಾರಣನು ಜಗದಾದಿ ಗುರುವು 3 ಹುಟ್ಟು ಸಾವುಗಳೆಲ್ಲ ಎಷ್ಟಾರ್ಥದಾಯಕನು ಪಟ್ಟಣವು ರತ್ನ ರಜತಾದ್ರಿಯಾಗಿಹುದು ಪುಟ್ಟ ಬಾಲನಿಗೊಲಿದು ಕಟ್ಟು ಮಾಡಿದ ಯಮನ ಅಷ್ಟ ಮೂರ್ತಿಯು ಲೋಕ ಸೃಷ್ಟಿ ಕಾರಣನು 4 ಎಲ್ಲಿ ನೋಡಿದರಲ್ಲಿ ವಿಶ್ವರೂಪದೊಳಿಹನು ಎಲ್ಲಿ ನೋಡಿದರಲ್ಲಿ ಸೂಕ್ಷ್ಮದಿಂದಿಹನು ಎಲ್ಲಿ ನೋಡಿದರಲ್ಲಿ ಸರ್ವಾತ್ಮನಾಗಿಹನು ಎಲ್ಲಿ ನೋಡಲು ಧೇನುಪುರನಾಥ ಶಿವನು 5
--------------
ಬೇಟೆರಾಯ ದೀಕ್ಷಿತರು
ಪಾದ 1ಹುಟ್ಟುಸಾವುಗಳ ಸುಳಿಯಲಿ ಸಿಕ್ಕಿಕಷ್ಟದಿಂದ ದುಃಖಪಡುತಿರುವರಕಷ್ಟವನು ಹೋಗಲಾಡಿಸುವಸ್ಟೃಗೆಲ್ಲ ಮುಖ್ಯದೈವವಾದ ನಿನ್ನ 2ಹೊಟ್ಟೆಬಟ್ಟೆಗಾಗಿ ನಾ ಮಾಡಿದಕೆಟ್ಟಜನಗಳ ಸೇವೆ ಸಾಕುಮಾಡಿಇಷ್ಟದೈವದ ಚಿದ್ರೂಪವ ನೆಟ್ಟನರಿಯುವ ದ್ಟೃುಂದ ನಿನ್ನ 3
--------------
ಹೊಸಕೆರೆ ಚಿದಂಬರಯ್ಯನವರು
ಬೇಡಿದರೆ ನೀಡುವುದೇನು ಹಿರಿದೆ ಗೋವಿಂದ ಬೇಡದೆ ನೀಡೆ ನಿನ್ನಂತಸ್ತಿಗತಿಚೆಂದ ಪ ನೀಡುವನು ನೀನಿರಲು ಬೇಡಿಕೆಗೆ ಕೊನೆಯುಂಟೆ ಬೇಡಿ ಬೇಸತ್ತರೂ ಆಸೆಯಿಂಗುವುದುಂಟೆ ಬೇಡಿದಮಣಿ ನೂರುಜನುಮ ಸಾಕಹುದುಂಟೆ ಬೇಡದೇ ಭಜಿಪವಗೆ ಹುಟ್ಟು ಸಾವುಗಳುಂಟೆ 1 ಹಿಂದೆ ನೀನಿತ್ತುದನು ಇಂದುಣುತಲಿಹೆವಯ್ಯ ಮುಂದೆ ನಾನುಣಲೇನು ಬೇಡವಯ್ಯ ಸಂದಿರ್ಪುವೈ ಸಾಲಸೋಲಂಗಳೇನಯ್ಯ ಮುಂದೇನು ಬೇಡ ಮಾಂಗಿರಿವಾಸ ರಂಗಯ್ಯ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೇಡೆಲೊ ಜೀವಾ ಜನಿಸಲೆ ಬೇಡೋ ಪ ಬೇಡ ನಿಜಸುಖ ದೊರೆಯದು ನೋಡೋ ಅ.ಪ ಹೆಣ್ಣೋ ಗಂಡೋ ಆಗಿ ಮೆರೆಯುವೆಮಣ್ಣು ಹೊನ್ನಿಗೆ ನೀ ಹಾತೊರೆಯುವೆಉಣ್ಣುತ ಪ್ರಾರಬ್ಧವ ಬಾಯ್ದೆರೆಯುವೆಹಣ್ಣಾಗುವೆ ನೀ ಪರೀಕ್ಷೆ ಮಾಡೊ 1 ಆರು ಹಗೆಗಳು ಗಡ ಮುತ್ತುವವೊಮೂರು ತಾಪಗಳು ಕಡು ಹೊತ್ತುವವೊನೂರೊಂದೊಗಟಗಳಿರದೊತ್ತುವವೊಪಾರಾಗಲು ಬಿಡವೆಂದಿಗು ಕೇಡೋ 2 ಹುಟ್ಟು ಸಾವುಗಳ ಸುಳಿಯಲಿ ಸುತ್ತುವೆಒಟ್ಟು ಮರಳಿ ಸಂಚಿತವನು ಬಿತ್ತುವೆ ಗಟ್ಟಿಸಿ ಗದುಗಿನ ವೀರನಾರಾಯಣನೆಹುಟ್ಟಿಸಬೇಡೆಂದಿಚ್ಛಿಸಿ ಬೇಡೋ 3
--------------
ವೀರನಾರಾಯಣ
ವಂದನೆಯು ವಂದನೆಯು ವಂದನೆಗಳು ನಂದಕುಮಾರ ಗೋವಿಂದನ ಚರಣಕೆ ಪ ವಂದನೆ ಇಂದಿನ ಬಂಧನ ನಾಶಕೆ ಮುಂದಿನ ಭವಗಳ ಮುಂದಿನ ಹರಣಕೆ ಅ.ಪ ಹುಟ್ಟು ಸಾವುಗಳ ಕಟ್ಟಳೆ ಅವನದು ಕೊಟ್ಟುದನು ಪಡೆಯುವದೃಷ್ಟ ನನ್ನದು ಬೆಟ್ಟದ ಗಾತ್ರದ ಪಾಪವು ನನ್ನದು ಇಷ್ಟನು ಕ್ಷಮಿಸುವ ದೃಷ್ಟಿ ಅವನದು 1 ಶರಣರ ಪೊರೆಯುವ ಬಲವಾತನದು ಪರಿಪರಿ ಪಾಪವ ಗಳಿಸುವುದೆನ್ನದು ಕರುಣೆಯ ತೋರುವ ಮನವಾತನದು ವರದ ಮಾಂಗಿರಿರಂಗ ನೀ ಶರಣೆಂಬುದು ನನ್ನದು2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್